ಬೆಂಗಳೂರು: ಬಿಗ್ ಬಾಸ್ ಸೀಸನ್ 10ರ 16 (BBK Season 10) ವಾರಗಳ ಹಬ್ಬದ ಗ್ರಾಂಡ್ ಫಿನಾಲೆ ಜ.27 ಹಾಗೂ ಜ.29ರಂದು ಅಂದರೆ ನಾಳೆ ಮತ್ತು ಭಾನುವಾರ ರಾತ್ರಿ 7.30ಕ್ಕೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದೆ. ಈ ಬಿಗ್ ಬಾಸ್‌ನಲ್ಲಿ ಸ್ಪರ್ಧಿಗಳು ಆಟದ ಜತೆಗೆ ವಿವಾದಳಿಗೂ ಸಾಕಷ್ಟು ಚರ್ಚೆಯಾಗಿದ್ದರು. ಬಿಗ್ ಬಾಸ್ ಮನೆಯಲ್ಲಿ ನಡೆದ ಪ್ರಮುಖ ವಿವಾದಗಳ ಬಗ್ಗೆ ಇಲ್ಲಿದೆ.
ಬಿಗ್‌ಬಾಸ್ ಮನೆಯಲ್ಲಿ ಡ್ರೋನ್ ಪ್ರತಾಪ್ ಆತ್ಮಹತ್ಯೆಗೆ ಯತ್ನ?
ʻಬಿಗ್ ಬಾಸ್ʼ ಮನೆಯಲ್ಲಿ ಪ್ರತಾಪ್ (Prathap) ಅವರು ಆಗಾಗ ಸೈಲೆಂಟ್ ಆಗುತ್ತಾರೆ. ಕಷ್ಟದ ಸಂದರ್ಭದಲ್ಲಿ ಪ್ಯಾನಿಕ್ ಆಗುತ್ತಾರೆ ಎನ್ನುವ ಅಭಿಪ್ರಾಯವೂ ಅನೇಕರದ್ದು. ಇದೇ ವಿಚಾರ ಇಟ್ಟುಕೊಂಡು ಮನೆಯಲ್ಲಿ ಟಾಸ್ಕ್ನಿಂದ ಹೊರಗೆ ಇಡಲಾಗಿತ್ತು. ಏಕಾಏಕಿ ಪ್ರತಾಪ್ ಅವರು ಆಸ್ಪತ್ರೆಗೆ ದಾಖಲಾದರು. ಇದಾದ ಬಳಿಕ ಪ್ರತಾಪ್ ಅವರು ಆತ್ಮಹತ್ಯೆ ಯತ್ನಿಸಿದ್ದಾರೆ ಎಂಬ ವದಂತಿ ವೈರಲ್ ಆಗಿತ್ತು. ವಾಹಿನಿ ಈ ಬಗ್ಗೆ ಸ್ಪಷ್ಟನೆ ನೀಡಿತು. ʻʻಡ್ರೋನ್ ಪ್ರತಾಪ್ ಅವರದ್ದು ಸೂಸೈಡ್ ಅಟೆಂಪ್ಟ್ ಅಲ್ಲ. ಪ್ರತಾಪ್ ಅವರು ಎರಡು ದಿನದಿಂದ ಊಟ ಮಾಡಿರಲಿಲ್ಲ. ಹಾಗಾಗಿ ಫುಡ್ ಪಾಯಿಸನ್ ಆಗಿ ರಾತ್ರಿ ಆಸ್ಪತ್ರೆಗೆ ದಾಖಲಿಸಿದ್ದೆವುʼʼಎಂದು ಹೇಳಿಕೆ ನೀಡಿದರು.
ಡ್ರೋನ್ ಪ್ರತಾಪ್‌ಗೆ ಲೀಗಲ್ ನೋಟಿಸ್ ಕಳುಹಿಸಿದ ಡಾ. ಪ್ರಯಾಗ್!
ಬಿಗ್‌ಬಾಸ್ ಕನ್ನಡದ 10ನೇ ಆವೃತ್ತಿಯಲ್ಲಿರುವ ಪ್ರಬಲ ಸ್ಪರ್ಧಿ ಡ್ರೋನ್ ಪ್ರತಾಪ್‌ಗೆ (Drone Prathap) ಸಂಕಷ್ಟವೊಂದು ಎದುರಾಗಿತ್ತು. ಬಿಬಿಎಂಪಿ ಅಧಿಕಾರಿಯಾಗಿರುವ ಪಶುವೈದ್ಯ ಡಾ. ಪ್ರಯಾಗ್ ಎಚ್ ಎಸ್ ಅವರು ಕಾನೂನು ನೋಟಿಸ್ ಕಳುಹಿಸಿದ್ದರು. ತಮ್ಮ ಬಗ್ಗೆ ಅನಗತ್ಯ ಆರೋಪಗಳನ್ನು ಮಾಡಿರುವ ಡ್ರೋನ್ ಪ್ರತಾಪ್ ನೋಟಿಸ್ ತಲುಪಿದ ಒಂದು ತಿಂಗಳ ಒಳಗೆ ಬಹಿರಂಗ ಹಾಗೂ ಲಿಖಿತ ಕ್ಷಮೆ ಕೋರದೆ ಹೋದರೆ ಮಾನನಷ್ಟ ಮೊಕದ್ದಮೆಯನ್ನು ಹೂಡುವುದಾಗಿ ಅವರು ವಕೀಲರ ಮೂಲಕ ನೋಟಿಸ್ ಕಳುಹಿಸಿದ್ದರು.
ಇದನ್ನೂ ಓದಿ: BBK SEASON 10: ಪ್ರತಾಪ್ ಕಂಪನಿಯ ʻಡ್ರೋಣ್ʼ ಬಿಗ್ ಬಾಸ್ ಮನೆಯಲ್ಲಿ ಲ್ಯಾಂಡ್!
ವಿವಾದಿತ ಕನ್ನಡ ರಿಯಾಲಿಟಿ ಶೋ ಬಿಗ್ಬಾಸ್ನ ಸ್ಪರ್ಧಿಯಾಗಿರುವ ನೀವು, ಜನರ ಅನುಕಂಪ ಗಳಿಸುವ ಹಾಗೂ ಪ್ರಚಾರ ಪಡೆಯುವ ಉದ್ದೇಶದಿಂದ ನನ್ನ ಮೇಲೆ ಅನಗತ್ಯ ಆರೋಪಗಳನ್ನು ಮಾಡಿದ್ದೀರಿ. ಕೊರೊನಾ ಕಾಲದಲ್ಲಿ ನೋಡಲ್ ಅಧಿಕಾರಿಯಾಗಿ ಕೆಲಸ ಮಾಡಿದ್ದ ನನ್ನ ಮೇಲೆ, ಹಲ್ಲೆ ಮಾಡಿರುವ ಆರೋಪ ಮಾಡಿದ್ದೀರಿ. ಎಲ್ಲವೂ ಸತ್ಯಕ್ಕೆ ದೂರವಾಗಿರುವ ವಿಚಾರ. ವಾಸ್ತವದಲ್ಲಿ ಕ್ವಾರಂಟೈನ್ ನಿಯಮಗಳನ್ನು ನೀವು ಉಲ್ಲಂಘಿಸಿರುವ ಬಗ್ಗೆ ನಮ್ಮ ಬಳಿಕ ಸೂಕ್ತ ದಾಖಲೆಗಳು ಇವೆ. ಇಂಥದ್ದರಲ್ಲಿ ನನ್ನ ಮೇಲೇಯೇ ಆರೋಪ ಮಾಡಿರುವ ನಿಮ್ಮ ಬಗ್ಗೆ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದ್ದೇನೆ. ಕ್ಷಮೆ ಕೋರದ ಹೊರತು ಮುಂದಿನ ಕ್ರಮ ಕೈಗೊಳ್ಳುತ್ತೇನೆ ಎಂದು ಡಾ. ಪ್ರಯಾಗ್ ಅವರು ನೋಟಿಸ್ನಲ್ಲಿ ತಿಳಿದ್ದರು.
ಡ್ರೋನ್ ಪ್ರತಾಪ್ ಮತ್ತೊಂದು ‘ದೋಖಾ’
ಬ್ಯೂಸಿನೆಸ್ ಪಾರ್ಟನರ್ ʻಸಾರಂಗ್ ಮಾನೆಗೆʼ ಪ್ರತಾಪ್ ಮೋಸ ಮಾಡಿರುವ ಸುದ್ದಿ ಇದೀಗ ಬೆಳಕಿಗೆ ಬಂದಿತ್ತು. ಪುಣೆಯ ಕ್ಯಾಸ್ಪರ್ ಡ್ರೊನೊಟಿಕ್ಸ್ ಹೆಸರಿನ ಸಂಸ್ಥೆಯ ಸಿಇಒ ಸಾರಂಗ್ ಮಾನೆ ಎಂಬುವರು ಕೆಲ ತಿಂಗಳ ಹಿಂದೆ ಡ್ರೋನ್ ಪ್ರತಾಪ್ ಅವರಿಗೆ ಎಂಟು ಡ್ರೋನ್‌ಗಳನ್ನು ನೀಡುವಂತೆ ಒಪ್ಪಂದ ಮಾಡಿಕೊಂಡು ಅಡ್ವಾನ್ಸ್ ನೀಡಿದ್ದರು. ಪ್ರತಾಪ್ ಅವರ ಕಂಪನಿ ʻಡ್ರೋನಾರ್ಕ್ ಏರೋಸ್ಪೇಸ್ ಪ್ರೈವೇಟ್ ಲಿಮಿಟೆಡ್ʼ ಜತೆ ಬ್ಯುಸಿನೆಸ್ ಪಾರ್ಟನರ್ ಆಗಿದ್ದರು ಸಾರಂಗ್. ಎಂಟು ತಿಂಗಳ ಹಿಂದೆ ಡ್ರೋನ್ ಪ್ರತಾಪ್ ಅವರು ಬ್ಯೂಸಿನೆಸ್ ಪಾರ್ಟನರ್ ಸಾರಂಗ್ ಅವರನ್ನು ಮಹಾರಾಷ್ಟ್ರದ ದುಲೇನಲ್ಲಿ ಭೇಟಿ ಮಾಡಿದ್ದರು. ಪ್ರತಾಪ್ ಅವರು ಸಾರಂಗ್ ಅವರಿಗೆ ಒಂಬತ್ತು ಡ್ರೋನ್ ನೀಡಬೇಕಿತ್ತು. ಹೀಗಾಗಿ ಸಾರಂಗ್ ಅವರು ಪ್ರತಾಪ್‌ಗೆ 35 ಲಕ್ಷದ 75 ಸಾವಿರ ನೀಡಿದ್ದರು. ಆದರೆ ಡ್ರೋನ್ ನೀಡಲು ಪ್ರತಾಪ್ ಎರಡುವರೆ ತಿಂಗಳು ಸಮಯ ತೆಗೆದುಕೊಂಡಿದ್ದರು. ಇದಾದ ಬಳಿಕ ಎರಡು ಡ್ರೋನ್ ಅನ್ನು ಸಾರಂಗ್ ಅವರಿಗೆ ಪ್ರತಾಪ್ ನೀಡಿದ್ದರು. ಇದಾದ ಮೇಲೆ ಇನ್ನರೆಡು ಡ್ರೋನ್‌ಗಳನ್ನು ಸಾರಂಗ್‌ಗೆ ಕಳುಹಿಸಿಕೊಟ್ಟಿದ್ದರು. ಆದರೀಗ ಸಾರಂಗ್ ಈ ಬಗ್ಗೆ ಧ್ವನಿ ಎತ್ತಿದ್ದು, ನಾಲ್ಕು ಡ್ರೋನ್‌ಗಳು ಈಗ ಕೆಲಸ ಮಾಡುತ್ತಿಲ್ಲ ಬ್ಯಾಟರಿಗಳ ಕ್ಯಾಲಿಟಿ ಸರಿಯಿಲ್ಲ. ಮತ್ತೊಂದು ಹಾರಬೇಕಾದರೆ, ಕೆಳಗಡೆ ಬಿದ್ದು ಹೋಯಿತು. ನಾವೀಗ ತುಂಬಾ ಲಾಸ್ ನಲ್ಲಿದ್ದೀವಿ ಎಂದು ಆಕ್ರೋಶ ಹೊರಹಾಕಿದ್ದರು.
ಪ್ರತಾಪ್ ಬಗ್ಗೆ ಇಶಾನಿ ‘ಕೀಳು’ ಮಾತು
ಇಶಾನಿ ಮನೆಯೊಳಗೆ ಡ್ರೋನ್ ಪ್ರತಾಪ್ ಜತೆ ವೈಲೆಂಟ್ ಆಗಿ ವರ್ತಿಸಿದ್ದರು. ಡ್ರೋನ್ ಪ್ರತಾಪ್ ಮಾತನಾಡುತ್ತಿದ್ದಾಗ, ‘’ಕಾಗೆ ಕಾ.. ಕಾ.. ಅಂತಿದೆ’’ ಎಂದು ಚುಚ್ಚು ಮಾತನ್ನಾಡಿದ್ದಾರೆ ಇಶಾನಿ. ಇನ್ನೂ ಕಾರ್ತಿಕ್ ಬಂದಾಗಲೂ ಒರಟಾಗಿ ಮಾತನಾಡಿದ್ದರು. ಸಂಗೀತಾ ಹಾಗೂ ವಿನಯ್ ಜತೆಗೆ ಇಶಾನಿ ಮಾತನಾಡುವಾಗ, ‘’ಕಾಗೆ ಗೊತ್ತಿಲ್ವಾ? ಕಾಗೆ ಕಕ್ಕಾ ಮಾಡಿಬಿಟ್ಟು.. ಎಲ್ಲಾ ಕಡೆ ಹೋಗ್ತಾನೇ ಇದೆ. ಸಿಂಪಥಿ ಕಾರ್ಡ್ ಯೂಸ್ ಮಾಡಿ.. ಉಳ್ಕೊಂಡಿದ್ದಾರೆ ಅದರಿಂದ. ಅಲ್ವಾ?’’ ಎಂದಿದ್ದಾರೆ ಇಶಾನಿ. ಈ ಮಧ್ಯೆ ಡ್ರೋನ್ ಪ್ರತಾಪ್ ಮಾತನಾಡಿದಾಗ, ‘’ಕಾಗೆ ಕಾ.. ಕಾ.. ಅಂತಿದೆ’’ ಎಂದು ಇಶಾನಿ ಹೇಳಿದದ್ದರು. ಇಶಾನಿ ಅವರು ಈ ರೀತಿ ಮಾತನಾಡಬಾರದಿತ್ತು ಎಂದು ಅನೇಕರು ಟ್ವೀಟ್ ಮೂಲಕ ಅಭಿಪ್ರಾಯ ಹಂಚಿಕೊಂಡಿದ್ದರು. ಕಿಚ್ಚ ಕೂಡ ಇಸಾನಿಗೆ ಗರಂ ಆಗಿ ಕ್ಲಾಸ್ ತೆಗೆದುಕೊಂಡಿದ್ದರು.
ಇದನ್ನೂ ಓದಿ: BBK SEASON 10: ಪ್ರತಾಪ್ ʻಔಟ್ʼ ಆಗಿಲ್ಲ; ಗ್ರ್ಯಾಂಡ್ ಫಿನಾಲೆ ತಲುಪಲಿದ್ದಾರೆ ಟಾಪ್ 6 ಸ್ಪರ್ಧಿಗಳು!
ಹಲವು ವಿವಾದದಲ್ಲಿ ವರ್ತೂರ್ ಸಂತೋಷ್
ಹುಲಿ ಉಗುರು ಪ್ರಕರಣಕ್ಕೆ ಸಂಬಂಧಿಸದಂತೆ ವರ್ತೂರ್ ಸಂತೋಷ್ (Varthur Santhosh) ಅವರು ಸಾಕಷ್ಟು ವಿವಾದಕ್ಕೆ ಗುರಿಯಾಗಿದ್ದರು. ವೈಯಕ್ತಿಕ ಕಾರಣದಿಂದ ಬಿಗ್ ಬಾಸ್ ಮನೆಯಿಂದ ಹೊರ ಹೋಗುವುದಾಗಿ ಹಠ ಹಿಡಿದಿದ್ದ ಕೃಷಿಕ ವರ್ತೂರು ಸಂತೋಷ್ (Varthur Santhosh) ಮದುವೆಯ ವಿಚಾರಕ್ಕೂ ಸುದ್ದಿಯಲ್ಲಿದ್ದರು. ಹುಲಿ ಉಗುರು ಹೊಂದಿರುವ ಆರೋಪ ಬಂತು. ಅವರನ್ನು ಬಂಧಿಸಲಾಯಿತು. ಆ ಬಳಿಕ ಅವರು ದೊಡ್ಮನೆಗೆ ಮರಳಿದ್ದರು. ಡ್ರಗ್ಸ್ ಕೂಡ ಸೇವನೆ ಮಾಡುತ್ತಿದ್ದರು ಎಂದು ಅವರ ಮಾವ ಸೋಮನಾಥ್ ಆರೋಪಿಸಿದ್ದರು. ಆದರೀಗ ವರ್ತೂರ್ ಫಿನಾಲೆ ವರೆಗೆ ಬಂದು ನಿಂತಿದ್ದಾರೆ.
ತನಿಷಾ ವಿರುದ್ಧ ಜಾತಿ ನಿಂದನೆ ಕೇಸ್
ಭೋವಿ ಸಮಾಜದ ವಿರುದ್ಧ ಆಕ್ಷೇಪಾರ್ಹ ಪದ ಬಳಕೆ ಮಾಡಿದ ಹಿನ್ನೆಲೆಯಲ್ಲಿ ಅಖಿಲ ಕರ್ನಾಟಕ ಭೋವಿ ಸಮಾಜದ ರಾಜ್ಯಾಧ್ಯಕ್ಷೆ ಪಿ. ಪದ್ಮಾ ಅವರು ಕುಂಬಳಗೋಡು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದಾದ ಮೇಲೆ ಆಕ್ಷೇಪಾರ್ಹ ಪದ ಬಳಸಿರುವ ತನಿಷಾ ಕುಪ್ಪಂಡ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಬಹುಜನ ದಲಿತ ಸಂಘರ್ಷ ಸಮಿತಿಯಿಂದ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ವಡ್ಡ ಎಂಬ ಪದ ಬಳಕೆ ಮಾಡಿ ಭೋವಿ ಜನಾಂಗಕ್ಕೆ ಅವಮಾನ ಮಾಡಿದ್ದಾರೆ. ಹೀಗಾಗಿ ತನಿಷಾ ಕುಪ್ಪಂಡರನ್ನು ಬಿಗ್ ಬಾಸ್ ಮನೆಯಿಂದ ಹೊರ ಹಾಕಬೇಕು. ಎಸ್‌ಸಿ ಎಸ್‌ಟಿ ಕಾಯ್ದೆ ಅಡಿ ಕ್ರಮ ಕೈಗೊಳ್ಳಬೇಕು ಎಂದು ಬೋವಿ ಸಮಾಜ ಹಾಗೂ ದಲಿತ ಸಂಘರ್ಷ ಸಮಿತಿ ಆಗ್ರಹಿಸಿದ್ದವು.
‘ಬಳೆ ಬಲಹೀನತೆಯ ಸಂಕೇತ ಅಲ್ಲ, ಅದು ಬಲಶಾಲಿ ಬಳೆ’!
ಬಳೆ ಹಾಕ್ಕೊಂಡು ಆಡು, ಬಳೆಗಳ ರಾಜ ಎಂದೆಲ್ಲ ವಿನಯ್ ಅವರು ಕಾರ್ತಿಕ್ ಅವರಿಗೆ ಟಾಸ್ಕ್ ಸಂದರ್ಭದಲ್ಲಿ ಹೇಳಿದ್ದರು. ಇದು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿತ್ತು. ಇದನ್ನು ಸಂಗೀತಾ ಮಾತ್ರ ವಿರೋಧಿಸಿದ್ದರು, ಮತ್ಯಾರೂ ಧ್ವನಿ ಎತ್ತಿರಲಿಲ್ಲ. ಆ ಮೂಲಕ ಬಳೆ ತೊಡುವವರೆಂದರೆ ಅಸಮರ್ಥರು, ಬಲಹೀನರು ಎಂಬರ್ಥದ ಮಾತುಗಳನ್ನು ಆಡಿದ್ದರು. ಬಳೆ ವಿಷಯದಲ್ಲಿ ವಿನಯ್‌ಗೆ ಸಂಗೀತಾ ತಿರುಗೇಟು ಕೊಟ್ಟಿದ್ದರು. ‘ಬಳೆ ಹಾಕೊಂಡಿದ್ದೀನಿ ನೋಡು.. ಬಳೆ.. ಬಳೆ’ ಎಂದಿದ್ದರು ಸಂಗೀತಾ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಚರ್ಚೆಯಾಯಿತು. ಸುದೀಪ್ ಅವರು ಬಗ್ಗೆ ಕೂಡ ಪ್ರೇಕ್ಷಕರು ಅಸಮಾಧಾನಗೊಂಡಿದ್ದರು. ಕಿಚ್ಚ ಬಳೆಗೆ ಒಂದು ವಿಶೇಷ ಗೌರವವನ್ನು ಸಹ ಕೊಟ್ಟಿದ್ದರು. ‘ಬಳೆ ಬಲಹೀನತೆಯ ಸಂಕೇತ ಅಲ್ಲ, ಅದು ಬಲಶಾಲಿ ಬಳೆ’ ಎಂದು ಕಿಚ್ಚ ಸುದೀಪ್ ಚಪ್ಪಾಳೆ ತಟ್ಟಿದ್ದರು. ಆ ಮೂಲಕ ವಿನಯ್ ಗೌಡಗೆ ಕಿಚ್ಚ ಸುದೀಪ್ ಸರಿಯಾಗಿ ತಿರುಗೇಟು ಕೊಟ್ಟಿದ್ದರು.
ಸಂಗೀತಾ, ಪ್ರತಾಪ್‌ಗೆ ಗಾಯ ಆಗಿ ಆಸ್ಪತ್ರೆಗೆ ದಾಖಲು
ಬಿಗ್ ಬಾಸ್ ಸೀಸನ್ 10ರ (BBK SEASON 10) ಒಂಬತ್ತನೇ ವಾರ ಟಾಸ್ಕ್ ಆಡುವ ವೇಳೆ ಸಂಗೀತಾ ಹಾಗೂ ಪ್ರತಾಪ್ ಅವರಿಗೆ ಗಾಯ ಆಗಿ ಆಸ್ಪತ್ರೆ ಸೇರಿದ್ದರು. ಬಿಗ್‌ಬಾಸ್ ಮನೆಯೊಳಗೆ ಬಿಗ್‌ಬಾಸ್ ಲೋಕ ಆಟದಲ್ಲಿ ಗಂಧರ್ವರು ಮತ್ತು ರಾಕ್ಷಸರು ಎಂದು ಎರಡು ಗುಂಪುಗಳಾನ್ನಾಗಿ ಮಾಡಿ, ಹಲವು ಟಾಸ್ಕ್ ಗಳನ್ನು ನೀಡಲಾಗಿತ್ತು. ಟಾಸ್ಕ್ ವೇಳೆ ರಾಕ್ಷಸರು ಮತ್ತು ಗಂಧರ್ವರ ಗುಂಪುಗಳ ನಡುವೆ ಭಾರೀ ಕದನವೇ ನಡೆದು ಹೋಯ್ತು. ಈ ಟಾಸ್ಕ್‌ನಲ್ಲಿ ಒಬ್ಬರಿಗೊಬ್ಬರು ಕೆಣಕಿಕೊಳ್ಳುತ್ತಿದ್ದು, ಇದರಿಂದ ಮನೆಯಲ್ಲಿ ಅನಾಹುತ ಆಗಬಹುದು ಎಂದು ಅಂದಾಜಿಸಲಾಗಿತ್ತು. ಅದೇ ರೀತಿಯೇ ಆಯಿತು.ಟಾಸ್ಕ್ ವೊಂದರಲ್ಲಿ ಅವರ ಸಂಗೀತಾ ಹಾಗೂ ಡ್ರೋಣ್ ಪ್ರತಾಪ್ ಅವರ ಮುಖಕ್ಕೆ ಅತಿಯಾಗಿ ಕೆಮಿಕಲ್ ನೀರು ಹಾಕಿದ ಪರಿಣಾಮ ಇಬ್ಬರೂ ಅಸ್ವಸ್ಥಗೊಂಡು, ಚಿಕಿತ್ಸೆ ಪಡೆದು ಬಿಗ್ ಬಾಸ್ ಮನೆಗೆ ಬಂದಿದ್ದರು.
ಈ ಬಗ್ಗೆ ಸಂಗೀತಾ ಸಹೋದರ ಬೇಸರ ವ್ಯಕ್ತಪಡಿಸಿದ್ದಾರೆ. ಕಿಚ್ಚ ಸುದೀಪ್ ಅವರಿಗೆ ಬಿಗ್‌ಬಾಸ್ ಮನೆ ಎಷ್ಟು ಸುರಕ್ಷಿತ? ಎಂದು ಪ್ರಶ್ನೆ ಇಟ್ಟಿದ್ದರು. ಸಂಗೀತಾ ಸಹೋದರ ಸಂತೋಷ್ ಕುಮಾರ್ ಅವರು ಪೋಸ್ಟ್‌ನಲ್ಲಿ “ಸುದೀಪ್ ಸರ್, ನೀವು ಹೇಳಿದ್ದಿರಿ. ಬಿಗ್‌ಬಾಸ್ ಮನೆ ಸುರಕ್ಷಿತ ಎಂದು. ಏನು ಆಗುವುದಿಲ್ಲ ಎಂದು. ಆದರೆ ಈಗ ನೋಡಿದರೆ, ಇದು ಹಾಗಿಲ್ಲ. ಇದು ಕುಟುಂಬದ ಶೋ ಎಂದು ಕಾಣಲ್ಲ. ಕೇವಲ ಹಿಂಸೆಯೇ ಕಾಣುತ್ತಿದೆ. ಕುಟುಂಬದವರು ಈ ರೀತಿಯ ಆಕ್ರಮಣಕಾರಿ ವರ್ತನೆಯನ್ನು ಹೇಗೆ ನೋಡ್ತಾರೆ” ಎಂದು ಪ್ರಶ್ನಿಸಿದ್ದರು.
ʻʻಸುದೀಪ್ ಸರ್ ಈ ಬಗ್ಗೆ ಸರಿ ಮಾಡುವವರೆಗೂ ನಾವು ಯಾಕೆ ಕಾಯಬೇಕು?. ಬಿಗ್‌ಬಾಸ್ ಇರುವುದು ಜನರ ತಪ್ಪುಗಳನ್ನು ತಕ್ಷಣ ಅವರಿಗೆ ಅರ್ಥ ಮಾಡಿಸಲು ಅಲ್ಲವೇ? ಎಂದು ಬರೆದುಕೊಂಡಿದ್ದಾರೆ. ಸದ್ಯ ಈ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ವೀಕ್ಷಕರು ಕೂಡ ಈ ಬಗ್ಗೆ ಬೇಸರ ಹೊರ ಹಾಕಿದ್ದರು.
`ರಕ್ಷಕ್ ಬುಲೆಟ್’ ಸಂದರ್ಶನದ ವಿವಾದ
‘ಬಿಗ್ ಬಾಸ್’ (BBK SEASON 10) ಮನೆಯಿಂದ ಹೊರಗೆ ಬಂದಮೇಲೆ `ರಕ್ಷಕ್ ಬುಲೆಟ್’ ಅನೇಕ ಸಂದರ್ಶನಗಳನ್ನು ನೀಡಿದ್ದರು. ಅದರಲ್ಲಿ ಅವರು ಹೇಳಿದ ಕೆಲವೊಂದು ವಿಚಾರಗಳು ನಟ ಕಿಚ್ಚ ಸುದೀಪ್ ಅವರ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದ್ದವು. ಆ ಸಂಬಂಧ ರಕ್ಷಕ್, ಕ್ಷಮೆ ಕೋರಿ ಅದರ ವಿಡಿಯೋವನ್ನು ಕೂಡ ಹಂಚಿಕೊಂಡಿದ್ದರು. ಇದೀಗ ಮತ್ತೆ ರಕ್ಷಕ್ ಹೊಸ ಪೋಸ್ಟ್ ಹಂಚಿಕೊಂಡು ಕ್ಷಮೆ ಕೇಳಿದ್ದರು.
ಇದನ್ನೂ ಓದಿ: BBK SEASON 10: ವೈಮನಸ್ಸಿಗೆ ಅಂತ್ಯ ಹಾಡಿದ ಕಾರ್ತಿಕ್-ಸಂಗೀತಾ! ಈ ಸ್ನೇಹ ಚಿರಕಾಲ ಹೀಗೇ ಇರಲಿ ಅಂದ್ರು ಫ್ಯಾನ್ಸ್!
ರಕ್ಷಕ್-ಪ್ರತಾಪ್ ವಾರ್
ಬಿಗ್‌ಬಾಸ್ (BBK SEASON 10) ಮನೆಯಿಂದ ಹೊರಹೋದ ಸ್ಪರ್ಧಿಗಳೆಲ್ಲ ಮತ್ತೆ ಮನೆಯೊಳಗೆ ಎಂಟ್ರಿ ಕೊಟ್ಟಿದ್ದರು. ಕೆಲವು ಮಾಜಿ ಸ್ಪರ್ಧಿಗಳು ಉಳಿದ ಸದಸ್ಯರಿಗೆ ಹೊರಗಡೆ ನಡೆಯುತ್ತಿರುವ ವಿಚಾರಗಳನ್ನು ತಿಳಿಸುತ್ತಿದ್ದರೆ, ಇನ್ನು ಕೆಲವು ಸ್ಪರ್ಧಿಗಳು ಟಾರ್ಗೆಟ್ ಕೂಡ ಮಾಡುತ್ತಿದ್ದರು. ರಕ್ಷಕ್ ಬುಲೆಟ್ ಮುಂಚಿನಿಂದಲೂ ಪ್ರತಾಪ್ ಅವರನ್ನು ಟಾರ್ಗೆಟ್ ಮಾಡುತ್ತಲೇ ಇದ್ದರು. ಮನೆಯೊಳಗೆ ಬಂದ ಕೂಡಲೇ ಪ್ರತಾಪ್ ಅವರಿಗೆ ಟಾರ್ಚರ್ ಕೊಟ್ಟಿದ್ದರು. ರಾತ್ರಿ ಎಲ್ಲರೂ ಮಲಗುವರಿದ್ದರು. ಈ ವೇಳೆ ಪ್ರತಾಪ್ ಅವರ ಬಳಿ ಬಂದ ರಕ್ಷಕ್, ‘ನನ್ನ ಬೆಡ್ಶೀಟ್ ನೀಡಿ, ನನ್ನ ಬೆಡ್ಶೀಟ್ ನೀಡಿ’ ಎಂದು ಕಾಡಿಸೋಕೆ ಶುರು ಮಾಡಿದರು. ಆಗ ಪ್ರತಾಪ್ ಅವರು ಕೂಲ್ ಆಗಿಯೇ ‘ಯಾವ ಬೆಡ್ಶೀಟ್’ ಎಂದು ಪ್ರತಾಪ್ ಪ್ರಶ್ನೆ ಮಾಡಿದ್ದರು. ‘ಹೇಳಿಕೆ ನೀಡೋ ಮೊದಲು ಯೋಚನೆ ಮಾಡಬೇಕು’ ಎಂದು ರಕ್ಷಕ್ ಕೂಗಿದ್ದರು. ಆಗ ಪ್ರತಾಪ್ ಕೂಡ ರಕ್ಷಕ್‌ಗೆ ʻಮಕ್ಕಳ ತರ ಆಡಬೇಡಿ. ಹೋಗಿ ಸುಮ್ಮನೆ ಮಲಗಿಕೊಳ್ಳಿʼ ಎಂದು ಹೇಳಿದ್ದರು. ಇದಾದ ಮೇಲೆ ಸುದೀಪ್ ವೇದಿಕೆಯಲ್ಲಿ ಈ ವಿಚಾರದ ಬಗ್ಗೆ ಮಾತನಾಡಿ ರಕ್ಷಕ್‌ಗೆ ತಿರುಗೇಟು ಕೊಟ್ಟಿದ್ದರು.