ಬೆಂಗಳೂರು: ಬಿಗ್ ಬಾಸ್ ಹತ್ತನೇ (Bigg Boss Kannada 10) ಸೀಸನ್ ಗ್ರ್ಯಾಂಡ್ ಪ್ರೀಮಿಯರ್ ಅಕ್ಟೋಬರ್ 8ರ ಸಂಜೆ 6ಕ್ಕೆ ನಡೆಯಲಿದೆ. 100 ದಿನದ ಬಿಗ್ ಬಾಸ್ ಹತ್ತನೇ ಸೀಸನ್ ಆಟವು ಅ.9 ರಿಂದ ಪ್ರತಿ ರಾತ್ರಿ 9:30ಕ್ಕೆ ನಡೆಯಲಿದೆ. ಈ ಬಾರಿ ಯಾರೆಲ್ಲಾ ಸ್ಪರ್ಧಿಗಳು (bigg boss kannada contestants) ಬರಬಹುದು ಎಂಬ ಕುತೂಹಲ ಮನೆ ಮಾಡಿದೆ. ಬಿಗ್ ಬಾಸ್ (BBK Season 10) ಶುರುವಾದ ಕೂಡಲೇ ಸೋಷಿಯಲ್ ಮೀಡಿಯಾದಲ್ಲಿ ಕೆಲವೊಂದು ವರ್ಗ ಬೇಗ ಶುರು ಮಾಡಿ ಎಂದರೆ ಇನ್ನೊಂದು ವರ್ಗ ಯಾಕೆ ಬೇಕಿತ್ತು ಬಿಗ್ ಬಾಸ್? ಯಾಕಾದ್ರೂ ಶುರು ಮಾಡಿದ್ರೋ! ಎಂದು ಕಮೆಂಟ್ ಮಾಡಿದವರೇ ಹೆಚ್ಚು. ಕಿಚ್ಚ ಸುದೀಪ್ (kannada reality show) ನೇತೃತ್ವದಲ್ಲಿ ಸುದ್ದಿಗೋಷ್ಟಿಯೂ ನಡೆದಿದ್ದು, ಸುದೀಪ್ ಕೂಡ ಈ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ʻಸೀಸನ್ 6 ಮುಗಿದ ಬಳಿಕ ಬಿಗ್ ಬಾಸ್ ನನಗೆ (bigg boss kannada 2023) ಸಾಕಾಯ್ತು ಎಂದು ನಾನೇ ಖುದ್ದಾಗಿ ಹೇಳಿದ್ದುಂಟುʼʼ ಎಂದು ನೇರವಾಗಿ ಮಾಧ್ಯಮದ ಮುಂದೆ ಹೇಳಿಕೊಂಡರು.
ಬಿಗ್ ಬಾಸ್ ಸೀಸನ್ 10 ಈಗಾಗಲೇ ಕ್ಷಣ ಗಣನೆ ಶುರುವಾಗಿದೆ, ಈ ಬಗ್ಗೆ ಕಿಚ್ಚ ಸುದೀಪ್ಗೆ ʻʻಸೀಸನ್ 10ವರೆಗೆ ಹೋಸ್ಟ್ ಮಾಡುತ್ತಲೇ ಇದ್ದೀರಿ. ಸಾಕಾಯ್ತು ಎಂದು ಅನ್ನಿಸಿಲ್ಲವಾ?ʼʼ ಎಂಬ ಪ್ರಶ್ನೆ ಎದುರಾಯ್ತು. ಆಗ ಕಿಚ್ಚ ಸುದೀಪ್ ಮಾತನಾಡಿ ʻʻಸೀಸನ್ 6 ಮುಗಿದ ಬಳಿಕ ನನಗೆ ಬಿಗ್ ಬಾಸ್ ಸಾಕು ಎಂದು ನಾನೇ ಖುದ್ದಾಗಿ ಹೇಳಿದ್ದುಂಟು. ಇದನ್ನು ನಾನು ನೇರವಾಗಿಯೇ ಹೇಳುತ್ತಿದ್ದೇನೆ . ಇದರ ಅರ್ಥ ಸೀಸನ್ 6ರಲ್ಲಿಯ ಸ್ಪರ್ಧಿಗಳ ಮೇಲೆ ಕೆಟ್ಟ ಅಭಿಪ್ರಾಯ ಇದೆ ಅಂತಲ್ಲ. ಆ ಸೀಸನ್ ತುಂಬ ಸ್ಟ್ರೆಸ್ ಮಾಡಿತು. ಗಲಾಟೆ ಇರುಬಹುದು, ಎಲ್ಲವೂ ಇರಬಹುದು. ಸೀಸನ್ 7ಗೆ ಬರಲು ನಾನು ತುಂಬಾ ಸಮಯ ತೆಗೆದುಕೊಂಡೆ. ಆಯೋಜರು ಕನ್ವಿನ್ಸ್ ಮಾಡಲು ತುಂಬಾ ಸಮಯ ತೆಗೆದುಕೊಂಡರು. ಆದರೆ ಅಲ್ಲಿಂದ ಇಲ್ಲಿಯವರೆಗೆ ತುಂಬ ವಿಭಿನ್ನತೆ ಇದೆ. ನನ್ನ ಕೆಲಸದಿಂದ ಸುಸ್ತಾಯಿತು ಅಂತಲ್ಲ. ನನಗೆ ಸುಸ್ತಾಗುವುದು ತುಂಬ ಇಷ್ಟ. ನನ್ನನ್ನು ಗುರುತಿಸುವುದು ತುಂಬ ಇಷ್ಟʼʼಎಂದರು.
ಇದನ್ನೂ ಓದಿ: BBK Season 10 : ಅಕ್ಟೋಬರ್ 8 ರಿಂದ ಬಿಗ್ ಬಾಸ್ ಆಟ; ಚಾರ್ಲಿ ಎಂಟ್ರಿ ಕನ್ಫರ್ಮ್, ಉಳಿದವರು ಯಾರು ?
ಒಳ್ಳೆ ಉಡುಗೊರೆಗಳು ಸಿಗುತ್ತವೆ
ಬಿಗ್ ಬಾಸ್ನಲ್ಲಿ ಈ ಬಾರಿ ಊಹೆಗೂ ಮೀರಿದ ವಿಶೇಷತೆಗಳು ಇದೆ. ಕಿಚ್ಚ ಸುದೀಪ್ ನೇತೃತ್ವದಲ್ಲಿ ಸುದ್ದಿಗೋಷ್ಠಿಯೂ ನಡೆದಿದ್ದು, ವಿಶೇಷತೆಗಳನ್ನೆಲ್ಲಾ ಹೇಳಿ ಆಗಿದೆ. ಬಿಗ್ಬಾಸ್ನಲ್ಲಿ ಯಾವುದೇ ಮುಚ್ಚು ಮರೆ ಇರುವುದಿಲ್ಲ. ಎಲ್ಲವನ್ನು ಲೈವ್ನಲ್ಲಿಯೇ ನೋಡಬಹುದಾಗಿದೆ. ಅದರಲ್ಲೂ ಎಷ್ಟೋ ಮಿಸ್ಸಾಗುವಂತಹ ಕಂಟೆಂಟ್ಗಳು ಜಿಯೋ ಸಿನಿಮಾದಲ್ಲಿ ಸಿಗಲಿದೆ.
ಇದರ ಜತೆಗೆಉಡುಗೊರೆಗಳು ಸಿಗುತ್ತವೆ. ಟಿವಿಯಲ್ಲಿ ನಡೆಯುವ ಬಿಗ್ ಬಾಸ್ ಶೋ ನೋಡಿ, ಜಿಯೋ ಸಿನಿಮಾದಲ್ಲಿ ಕೇಳುವ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿದವರಿಗೆ ಬಹುಮಾನಗಳು ಇರಲಿವೆ. ಅದರಲ್ಲೂ ಪ್ರತಿ ದಿನ ಕೂಡ ಬಹುಮಾನ ಸಿಗಲಿದೆ.