Site icon Vistara News

Bigg Boss Tamil: ಬಿಗ್‌ ಬಾಸ್‌ ತಮಿಳಿನಲ್ಲಿ ಕಿರಿಯ ಸ್ಪರ್ಧಿ ಜೋವಿಕಾ ಭಾರಿ ಸಂಚಲನ; ಯಾರೀಕೆ?

jovika vijaykumar

ಈಗಾಗಲೇ ಬಿಗ್‌ ಬಾಸ್‌ ತಮಿಳು (Bigg Boss Tamil) ಸೀಸನ್‌ 7 ಶುರುವಾಗಿದೆ. ಸ್ಪರ್ಧಿಗಳ ಮಧ್ಯೆ ವೈಮನಸ್ಸು ಪ್ರಾರಂಭವಾಗಿದೆ. ತಮಿಳು ಬಿಗ್‌ ಬಾಸ್‌ ಶುರುವಾದಾಗಿನಿಂದಲೂ ಹೆಚ್ಚಾಗಿ ಸುದ್ದಿಯಲ್ಲಿರುವುದು ಜೋವಿಕಾ. ಜೋವಿಕಾ ಯಾರು?ಹಿನ್ನೆಲೆ ಏನು?

ಈ ಬಾರಿ ಬಿಗ್‌ ಬಾಸ್‌ ತಮಿಳಿನಲ್ಲಿ ಕೂಲ್ ಸುರೇಶ್, ಪೂರ್ಣಿಮಾ ರವಿ, ರವೀನಾ ದಹಾ, ಪ್ರದೀಪ್ ಆಂಟೋನಿ, ನಿಕ್ಸೆನ್, ವಿನುಶಾ ದೇವಿ, ಮಣಿಚಂದ್ರ, ಅಕ್ಷಯ ಉದಯಕುಮಾರ್, ಜೋವಿಕಾ, ಐಶ್ವರ್ಯಾ, ವಿಷ್ಣು ವಿಜಯ್, ಮಾಯಾ ಕೃಷ್ಣನ್, ಸರವಣನ್ ವಿಕ್ರಮ್, ಯುಗೇಂದ್ರನ್, ವಿಚಿತ್ರ, ಬಾವ ಚೆಲ್ಲದುರೈ, ಅನನ್ಯ ರಾವ್ ಮತ್ತು ವಿಜಯ್ ವರ್ಮಾ ಸ್ಪರ್ಧಿಸಿದ್ದಾರೆ.

ತಮಿಳು ನಟಿ ವನಿತಾ ವಿಜಯಕುಮಾರ್ ಪುತ್ರಿ ಜೋವಿಕಾ. ಓದಿನಲ್ಲಿ ಹಿಂದಿರುವ ಜೋವಿಕಾ ಶಾಲೆ ಬಿಟ್ಟು, ನಟನೆಯಲ್ಲಿ ಡಿಪ್ಲೊಮಾ ಮಾಡಿದ್ದಾರೆ. ವನಿತಾ ವಿಜಯಕುಮಾರ್ ಕೂಡ ಬಿಗ್‌ ಬಾಸ್‌ ಮಾಜಿ ಸ್ಪರ್ಧಿ. ಇದೀಗ ಮಗಳು ಕೂಡ ಆಟವನ್ನು ಚೆನ್ನಾಗಿ ಆಡುತ್ತಿದ್ದಾರೆ. ವಿಶೇಷ ಅಂದರೆ ಈ ಬಿಗ್‌ ಬಾಸ್‌ ಕಿರಿಯ ಸ್ಪರ್ಧಿ ಎಂದರೆ ಜೋವಿಕಾ.

ಪ್ರಬುದ್ಧ ಮಾತುಗಳನ್ನು ಆಡುವ ಮೂಲಕ ಜೋವಿಕಾ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ತಾಯಿ ವನಿತಾ ವಿಜಯಕುಮಾರ್ ಅವರ ಯೂಟ್ಯೂಬ್‌ ಚಾನೆಲ್‌ ಮೂಲಕವೂ ಜ್ಯೋವಿಕಾ ಹೆಚ್ಚು ಸದ್ದು ಮಾಡಿದ್ದರು.

ಯೂಟ್ಯೂಬ್‌ ಚಾನೆಲ್‌ನಲ್ಲಿ ‘ಕುಕ್ ವಿತ್ ಜೋವಿಕಾ’ ಮತ್ತು ‘ಜೋವಿಕಾಸ್ ಕಿಚನ್’ ಎಂಬ ಸ್ಪೆಷಲ್‌ ಸೀರೀಸ್‌ ಮೂಲಕ ಫ್ಯಾನ್ಸ್‌ ಹೊಂದಿದ್ದಾರೆ. ಹಿಂದಿನ ವಾರ ಜೋವಿಕಾ ಹಾಗೂ ಸ್ಪರ್ಧಿ ವಿಚಿತ್ರ ಶಿಕ್ಷಣ ಕುರಿತಾಗಿ ವಾರ್‌ ನಡೆದಿತ್ತು. ಎಷ್ಟೋ ಟ್ರೋಲಿಗರು ಜೋವಿಕಾ ಅವರನ್ನೇ ಬೆಂಬಲಸಿದ್ದರು.

ಇದನ್ನೂ ಓದಿ: Bigg Boss Tamil 7: ಶುರುವಾಯ್ತು ತಮಿಳು ಬಿಗ್‌ ಬಾಸ್‌; ಸ್ಪರ್ಧಿಗಳ ಕಂಪ್ಲೀಟ್‌ ಲಿಸ್ಟ್‌ ಔಟ್‌!

ಬಿಗ್‌ ಬಾಸ್‌ ವೇದಿಕೆಯಲ್ಲಿ ನಿರೂಪಕ ಕಮಲ್‌ ಹಾಸನ್‌ ಈ ಗಲಾಟೆಯ ಬಗ್ಗೆ ಸ್ಪಷ್ಟನೆ ಕೂಡ ನೀಡಿದ್ದರು. ಕಮಲ್‌ ಹಾಸನ್‌ ಮಾತನಾಡಿ ʻʻಶಿಕ್ಷಣ ಮುಖ್ಯವಲ್ಲ ಎಂದು ಜೋವಿಕಾ ಎಂದಿಗೂ ಹೇಳಿಲ್ಲ. ಅದೇ ರೀತಿ ವಿಚಿತ್ರ ಉದ್ದೇಶ ಕೂಡ ತಪ್ಪಲ್ಲ. ಇದೆಲ್ಲ ಜನರೇಶನ್‌ ಗ್ಯಾಪ್‌ನಿಂದ ಈ ಸಂಘರ್ಷ ಉಂಟಾಗಿದೆʼʼಎಂದಿದ್ದರು.

Exit mobile version