ಬೆಂಗಳೂರು: ಬಿಗ್ ಬಾಸ್ ತೆಲುಗು ಸೀಸನ್-7 (Bigg Boss Telugu 7) ವಿಜೇತ ಪಲ್ಲವಿ ಪ್ರಶಾಂತ್ ಅರೆಸ್ಟ್ ಆಗಿದ್ದಾರೆ. ಶಾಂತಿ ಕದಡುವ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಎಎನ್‌ಐ ವರದಿ ಮಾಡಿದೆ. ಪ್ರಶಾಂತ್ ಅವರನ್ನು ಸಿದ್ದಿಪೇಟೆಯ ಗಜ್ವೇಲ್‌ನಲ್ಲಿರುವ ನಿವಾಸದಲ್ಲಿ ಬಂಧಿಸಲಾಗಿದೆ. ಫಿನಾಲೆ ದಿನ ಅನ್ನಪೂರ್ಣ ಸ್ಟುಡಿಯೊ ಬಳಿ ನಡೆದ ಹೊಡೆದಾಟದ ಹಿನ್ನೆಲೆಯಲ್ಲಿ ಪೊಲೀಸರು ಆತನನ್ನು ಬಂಧಿಸಿದ್ದಾರೆ ಎನ್ನಲಾಗುತ್ತಿದೆ. ಪಲ್ಲವಿ ಪ್ರಶಾಂತ್ ಅವರನ್ನು ಠಾಣೆಗೆ ಕರೆದೊಯ್ಯುವ ಬದಲು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿದ್ದು, 14 ದಿನಗಳ ಕಾಲ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಪಲ್ಲವಿ ಪ್ರಶಾಂತ್ ವಿರುದ್ಧ 9 ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರಶಾಂತ್ ಸಹೋದರ ರವಿರಾಜು ಅವರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಅನ್ನಪೂರ್ಣ ಸ್ಟುಡಿಯೊ ಬಳಿ ನಡೆದ ಜಗಳದ ಹಿನ್ನೆಲೆಯಲ್ಲಿ ಬಿಗ್ ಬಾಸ್ ಸ್ಪರ್ಧಿ ಪಲ್ಲವಿ ಪ್ರಶಾಂತ್ ವಿರುದ್ಧ ಸುಮೋಟೋ ಕೇಸ್ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ. ಪೊಲೀಸರ ಮಾತಿಗೆ ಕಿವಿಗೊಡದೆ ದೊಡ್ಡ ಮಟ್ಟದ ರ್‍ಯಾಲಿಗಳನ್ನು ಪಲ್ಲವಿ ಪ್ರಶಾಂತ್ ನಡೆಸಿದರು ಎಂದಿದ್ದಾರೆ. ಮೊದಲು ಪಲ್ಲವಿ ಪ್ರಶಾಂತ್ ಕಾರು ಚಾಲಕರಾದ ಸಾಯಿಕಿರಣ್ ಮತ್ತು ರಾಜು ಅವರನ್ನು ಬಂಧಿಸಲಾಯಿತು. ಬಳಿಕ ಪಲ್ಲವಿ ಪ್ರಶಾಂತ್ ಹಾಗೂ ಆತನ ಸಹೋದರ ಮಹಾವೀರನ್‌ನನ್ನು ವಶಕ್ಕೆ ಪಡೆಯಲಾಯಿತು.ಪ್ರಕರಣದ ತನಿಖೆ ನಡೆಸಿ ಹೆಚ್ಚಿನ ವಿವರಗಳನ್ನು ಶೀಘ್ರದಲ್ಲೇ ಬಹಿರಂಗಪಡಿಸಲಾಗುವುದು ಎಂದು ಎಸಿಪಿ ಹರಿ ಪ್ರಸಾದ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.
ಆಗಿದ್ದೇನು?
ಪಲ್ಲವಿ ಪ್ರಶಾಂತ್ ಮತ್ತು ಅಮರದೀಪ್ ಅಭಿಮಾನಿಗಳು ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ ಚಿತ್ರೀಕರಣ ನಡೆಯುತ್ತಿದ್ದ ಅನ್ನಪೂರ್ಣ ಸ್ಟುಡಿಯೊಗೆ ಆಗಮಿಸಿದ್ದರು. ಪ್ರಶಾಂತ್ ಅವರು ಬಿಗ್ ಬಾಸ್ ವಿಜೇತ ಎಂದು ಘೋಷಿಸಿದಾಗ, ಅವರ ಅಭಿಮಾನಿಗಳು ಸಂಭ್ರಮಾಚರಣೆ ಮಾಡಿದರು. ಆದರೆ ಅಮರ್‌ದೀಪ್ ಅಭಿಮಾನಿಗಳು ತಾಳ್ಮೆ ಕಳೆದುಕೊಂಡು ಗಲಾಟೆಯನ್ನು ಮಾಡಿದ್ದರು. ಈ ವೇಳೆ ಇಬ್ಬರ ಅಭಿಮಾನಿಗಳ ನಡುವೆ ಮಾರಾಮಾರಿ ಆಗಿತ್ತು.
ಇದನ್ನೂ ಓದಿ: Bigg Boss Telugu 7: ಬಿಗ್ ಬಾಸ್ ವಿನ್ನರ್-ರನ್ನರ್ ಫ್ಯಾನ್ಸ್ ನಡುವೆ ಹೊಡೆದಾಟ!
Winner of #BiggBossTelugu Season 7, #PallaviPrashanth , arrested from his residence in Gajwel, after his fans vandalised other contestants cars, after the grand finale.#PallaviPrasanth and his brother, shifted to Chanchalguda jail, after the Court orders 14-day Judicial remand. https://t.co/l2PDx4U0Hg pic.twitter.com/XHPy5vodQs
— Surya Reddy (@jsuryareddy) December 21, 2023
ಇಬ್ಬರ ಅಭಿಮಾನಿಗಳು ಪರಸ್ಪರ ತಳ್ಳಾಡಿ, ಗುದ್ದಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿಕೊಂಡಿದ್ದರು. ಅದೇ ವೇಳೆ ಆರ್‌ಟಿಸಿ ಬಸ್ ಮೇಲೆ ದಾಳಿ ಮಾಡಿ ಗಾಜು ಒಡೆದಿದ್ದರು. ಅಭಿಮಾನಿಗಳ ಅತಿರೇಕದ ಈ ವರ್ತನೆಯಿಂದ ಅನ್ನಪೂರ್ಣ ಸ್ಟುಡಿಯೋ ಮೂಲಕ ಸಾಗುತ್ತಿದ್ದ ವಾಹನ ಸವಾರರು ಪರದಾಡುವಂತಾಗಿತ್ತು. ಕಾರಿನ ಗಾಜುಗಳನ್ನು ಒಡೆದು ಅಮರ್‌ದೀಪ್ ಅವರನ್ನು ಹೊರಹೋಗುವಂತೆ ಘೋಷಣೆ ಕೂಗಿದ್ದರು. ಕಾರಿನ ಗಾಜುಗಳನ್ನು ಒಡೆದು ಹೊರಗೆ ಬರುವಂತೆ ಹೇಳಿದ್ದಕ್ಕೆ ಅಮರ್‌ದೀಪ್ ಅವರ ತಾಯಿ ಮತ್ತು ಪತ್ನಿ ಗಾಬರಿಗೊಂಡಿದ್ದರು. ಭದ್ರತೆಯ ನಡುವೆ ಅಮರ್‌ದೀಪ್ ಕುಟುಂಬ ಸದಸ್ಯರನ್ನು ಅಲ್ಲಿಂದ ಕರೆದೊಯ್ಯಲಾಯಿತ್ತು. ಇದಕ್ಕೆ ಸಂಬಂಧಿಸಿದ ಫೋಟೊಗಳು ಮತ್ತು ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಗ್ರ್ಯಾಂಡ್ ಫಿನಾಲೆಗೆ ಬೇರೆ ಸ್ಪರ್ಧಿಗಳು ಕೂಡ ಆಗಮಿಸಿದ್ದರು. ಪ್ರಶಾಂತ್ ಹಾಗೂ ಅಮರ್ ಅಭಿಮಾನಿಗಳು ಗಲಾಟೆಯಲ್ಲಿ ಇತರೆ ಸ್ಪರ್ಧಿಗಳ ವಾಹನಗಳ ಗಾಜು ಪುಡಿಪುಡಿಯಾಗಿತ್ತು.
ಇದನ್ನೂ ಓದಿ: Bigg Boss Telugu 7: ಬಿಗ್ ಬಾಸ್ ಟ್ರೋಫಿಗೆ ಮುತಿಟ್ಟ ʻರೈತರ ಮಗʼ; ಪಲ್ಲವಿ ಪ್ರಶಾಂತ್ ವಿನ್ನರ್!
ಕೃಷಿ ಹಿನ್ನೆಲೆಯಿಂದ ಬಂದಿರುವ ಪಲ್ಲವಿ ಪ್ರಶಾಂತ್ ಯೂಟ್ಯೂಬರ್ ಆಗಿ ಸಾಕಷ್ಟು ಜನಪ್ರಿಯರಾಗಿದ್ದರು. ನಂತರ ಅವರು ಬಿಗ್ ಬಾಸ್ ಮನೆಗೆ ಪ್ರವೇಶಿಸಿದರು.ಸೆಪ್ಟೆಂಬರ್ 3 ರಂದು ತೆಲುಗು ಬಿಗ್ಬಾಸ್ ಸೀಸನ್ 7 ಆರಂಭವಾಗಿತ್ತು. 19 ಮಂದಿ ಸ್ಪರ್ಧಿಗಳು ಶೋನಲ್ಲಿ ಭಾಗಿಯಾಗಿದ್ದರು. ಅವರಲ್ಲೇ ಇಬ್ಬರು ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಮತ್ತೆ ಮನೆಗೆ ಬಂದಿದ್ದರು. ಅಲ್ಲಿಗೆ ಒಟ್ಟು 21 ಸ್ಪರ್ಧಿಗಳು ಈ ಬಾರಿಯ ಬಿಗ್ಬಾಸ್ ತೆಲುಗು ಸೀಸನ್ 7ರಲ್ಲಿ ಆಡಿದರುಪಲ್ಲವಿ ಪ್ರಶಾಂತ್ ವಿನ್ನರ್ ಆಗಿದ್ದು, ಹಲವರಿಗೆ ಖುಷಿ ನೀಡಿದೆ. ಆದರೆ ಮೊದಲಿನಿಂದಲೂ ಶಿವಾಜಿ ವಿನ್ನರ್ ಎಂದುಕೊಂಡಿದ್ದ ಹಲವರಿಗೆ ಬೇಸರವಾಗಿದೆ.