Site icon Vistara News

BBK SEASON 10: ʻಬಿಗ್‌ ಬಾಸ್‌ʼ ಕೋಳಿ ತರ ಕಾಣ್ತಾರಂತೆ; ತುಕಾಲಿ ಚಿತ್ರಕ್ಕೆ ಬಿದ್ದುಬಿದ್ದು ನಕ್ಕರು!

Bigg Boss Try To Ran Away for tukali santosh drawing

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10ರ (BBK SEASON 10) ವಾರ ವೀಕೇಂಡ್‌ ಪಂಚಾಯತಿಯಲ್ಲಿ ಸುದೀಪ್‌ ಅವರು ಗರಂ ಆಗಿದ್ದು ಮಾತ್ರವಲ್ಲ, ತುಕಾಲಿ ಅವರು ಬರೆದ ಚಿತ್ರದ ಕುರಿತು ಅಚ್ಚರಿಯ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಈ ವಾರ ಬಿಗ್ ಬಾಸ್ ಓಡಿ ಹೋಗೋದಕ್ಕೆ ನಿರ್ಧಾರ ಮಾಡಿದ್ದರು ಎಂದು ಸುದೀಪ್‌ ಹೇಳಿದರು. ಕಾರಣ ಕೇಳಿ ಸ್ಪರ್ಧಿಗಳು ನಕ್ಕು ನಕ್ಕು ಸುಸ್ತಾದರು.

ಈ ವಾರ ಬಿಗ್‌ ಬಾಸ್‌ ಮನೆಯಲ್ಲಿ ಸ್ಕೂಲ್‌ ಟಾಸ್ಕ್‌ ನಡೆದಿತ್ತು. ಹೀಗಾಗಿ ಬಿಗ್‌ ಬಾಸ್‌ ಸ್ಪರ್ಧಿಗಳಿಗೆ ಒಂದು ಟಾಸ್ಕ್‌ ನೀಡಿದ್ದರು. ಬಿಗ್​ ಬಾಸ್​ ಹೇಗಿರಬಹುದು ಎಂಬದನ್ನು ಕಲ್ಪಿಸಿಕೊಂಡು ಚಿತ್ರ ಬಿಡಿಸಲು ಅವಕಾಶ ನೀಡಲಾಯಿತು. ಒಬ್ಬೊಬ್ಬರು ಒಂದೊಂದು ರೀತಿಯ ಕಲ್ಪನೆ ಮಾಡಿಕೊಂಡರು. ತುಕಾಲಿ ಸಂತೋಷ್ ಮೊಟ್ಟೆ ಇಡುವ ಕೋಳಿಯನ್ನು ಬಿಡಿಸಿದ್ದರು, ಅದರಲ್ಲಿಯೂ ಆ ದಿನ ಪ್ರತಾಪ್‌ ಅವರ ಚಿತ್ರ ಸಖತ್‌ ಹೈಲೈಟ್‌ ಆಗಿತ್ತು. ಆದರೆ ತುಕಾಲಿ ಮಾತ್ರ ಮೊಟ್ಟೆ ಇಡುವ ಫೋಟೊವನ್ನು ಹಂಚಿಕೊಂಡು ʻʻ‘ಬಿಗ್ ಬಾಸ್​ 17 ಮೊಟ್ಟೆಗಳನ್ನು ಇಟ್ಟು, ಕಾವುಕೊಟ್ಟು ಮರಿ ಮಾಡಿ ಅವುಗಳನ್ನು ಬೆಳೆಸುವ ಕೆಲಸ ಮಾಡುತ್ತಾರೆ. ಹಾಗೆಯೇ ಕೋಳಿ ತನ್ನ ಮರಿಗಳನ್ನು ಜೋಪಾನವಾಗಿ ಸಾಕುತ್ತೆ. ಹಾಗೇ ಬಿಗ್‌ ಬಾಸ್‌ ತನ್ನ ಮಕ್ಕಳನ್ನ ಜೋಪಾನವಾಗಿ ಸಾಕುತ್ತಾರೆʼʼಎಂದರು. ಇದಕ್ಕೆ ಕಿಚ್ಚ ಅವರು ʻʻಹಸು ಕರು ಸಾಕಲ್ವಾ?ಹುಲಿ ಸಿಂಹ ಸಾಕಲ್ವಾ?ಕೋಳಿನೇ ಯಾಕೆ? ಎಂದು ಪ್ರಶ್ನೆ ಇಟ್ಟರು.

“ನೀವು ಈ ವಾರ ಬಿಗ್ ಬಾಸ್ ಹೇಗಿರುತ್ತಾರೆ ಎಂಬುದನ್ನು ಬಿಡಿಸಿದ್ದನ್ನು ನೋಡಿ ಸ್ವತಃ ಬಿಗ್ ಬಾಸ್ ಕಂಗಾಲಾದರು. ಅವರು ಕಂಪೌಡ್ ಹಾರಿ ಜಿಗಿದು ಹೋಗುವವರಿದ್ದರು. ನಾವು ಅವರನ್ನು ತಡೆ ಹಿಡಿದು ಸಮಾಧಾನ ಮಾಡಿದೆವು. ಏನೋ ತಪ್ಪಾಗಿದೆ ಕ್ಷಮಿಸಿ ಎಂದು ಕೇಳಿಕೊಂಡೆವು’ ಎಂದು ಸುದೀಪ್ ಹೇಳಿದರು. ಇದನ್ನು ಕೇಳಿ ಎಲ್ಲರೂ ಜೋರಾಗಿ ನಕ್ಕಿದ್ದಾರೆ.

ಇದನ್ನೂ ಓದಿ: BBK SEASON 10: ಕ್ಯಾಪ್ಟನ್ ಟಾಸ್ಕ್ ಯಾರಿಗೂ ಭಿಕ್ಷೆ ಇಲ್ಲ; ಸಂಗೀತಾಗೆ ತಿರುಗೇಟು ಕೊಟ್ಟ ಕಿಚ್ಚ!

ತುಕಾಲಿಗೆ ಕಿಚ್ಚನ ಚಪ್ಪಾಳೆ

ಸ್ಕೂಲ್‌ ಟಾಸ್ಕ್ ವೇಳೆ ಹೆಚ್ಚು ಕಾಮಿಡಿ ಮಾಡಿದ ತುಕಾಲಿ ಸಂತು ಈ ವಾರ ‘ಬೆಸ್ಟ್ ಪರ್ಫಾಮೆನ್ಸ್’ ಮೆಡಲ್ ಪಡೆದಿದ್ದರು. ಜತೆಗೆ ʻಕಿಚ್ಚನ ಚಪ್ಪಾಳೆʼಯನ್ನು ಗಿಟ್ಟಿಸಿಕೊಂಡಿದ್ದಾರೆ. ಸ್ಕೂಲ್‌ ಟಾಸ್ಕ್‌ನಲ್ಲಿ ವಿದ್ಯಾರ್ಥಿಯಾಗಿ ತುಕಾಲಿ ಸಂತು ಎಲ್ಲರನ್ನೂ ನಕ್ಕಿ ನಲಿಸಿದ್ದರು. ಆಂಗ್ಲ ಭಾಷೆಯ ಶಿಕ್ಷಕರಾಗಿ ತುಕಾಲಿ ಸಂತು ಎಲ್ಲರನ್ನೂ ಎಂಟರ್‌ಟೇನ್‌ ಮಾಡಿದ್ದರು. ಹೀಗಾಗಿ ಈ ವಾರ ಉತ್ತಮರಾಗಿ ಹೊರಹೊಮ್ಮಿದ್ದರು. ಎರಡನೇ ಬಾರಿ ಮನೆಯಲ್ಲಿ ತುಕಾಲಿ ಅವರು ಉತ್ತಮರಾಗಿದ್ದಾರೆ. ಆದರೆ ಈ ವಾರ ಪವಿ ಪೂವಪ್ಪ ಮಾತ್ರ ತುಂಬ ಸೈಲೆಂಟ್‌ ಆಗಿದ್ದರು. ಹಿಂದಿನ ವಾರ ವೈಲ್ಡ್‌ ಕಾರ್ಡ್‌ ಎಂಟ್ರಿ ಮೂಲಕ ಮನೆಗೆ ಪ್ರವೇಶಿಸಿದ್ದ ಪವಿ ಪೂವಪ್ಪ ಹಾಗೂ ಅವಿನಾಶ್‌ ಶೆಟ್ಟಿ ಉತ್ತಮ ಆಟಗಾರರಾಗಿ ಹೊರಹೊಮ್ಮಿದ್ದರು. ಈ ವಾರ ಮನರಂಜನೆ ಹಾಗೂ ಕ್ರಿಯಾತ್ಮಕತೆಯಿಂದ ಕೂಡಿದ್ದ ವಿದ್ಯಾರ್ಥಿಯಾಗಿ ವಿಶೇಷವಾದ ಸವಲತ್ತುಗಳನ್ನು ತುಕಾಲಿ ಸಂತೋಷ್‌ ಪಡೆದಿದ್ದರು.

Exit mobile version