Site icon Vistara News

Bobby Deol: ಮೂವರು ಪತ್ನಿಯರನ್ನು ಹೊಂದಿದ ಅಬ್ರಾರ್ ರೊಮ್ಯಾಂಟಿಕ್, ವಿಲನ್‌ ಅಲ್ಲ; ಬಾಬಿ ಡಿಯೋಲ್!

Bobby Deol

ಬೆಂಗಳೂರು: ಇತ್ತೀಚೆಗೆ ಬಿಡುಗಡೆಯಾದ ಅನಿಮಲ್‌ ಸಿನಿಮಾದಲ್ಲಿ ನಟ ಬಾಬಿ ಡಿಯೋಲ್ (Bobby Deol) ಪಾತ್ರ ನೋಡುಗರನ್ನು ಹೆಚ್ಚು ಸೆಳೆದಿದೆ. ಚಿತ್ರದಲ್ಲಿ ʻಅಬ್ರಾರ್ ಹಕ್ʼ ಎಂಬ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ ಬಾಬಿ ಡಿಯೋಲ್. ‘ಮೂವರು ಪತ್ನಿಯರನ್ನು ಹೊಂದಿದ ಅಬ್ರಾರ್​ ವಿಲನ್​ ಅಲ್ಲ, ಆತ ರೊಮ್ಯಾಂಟಿಕ್​’ ಎಂದು ನಟ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ನಾಲ್ಕು ವರ್ಷಗಳ ನಂತರ ಅನಿಮಲ್ ಚಿತ್ರದ ಮೂಲಕ ದೊಡ್ಡ ಪರದೆಗೆ ಮರಳಿದ ಡಿಯೋಲ್, ಅಬ್ರಾರ್ ಪಾತ್ರವನ್ನು ಕೌಟುಂಬಿಕ ವ್ಯಕ್ತಿ ಎಂದು ಬಣ್ಣಿಸಿದರು. “ನನ್ನ ಪಾತ್ರವನ್ನು ವಿಲನ್‌ ಎಂದು ಭಾವಿಸಿರಲಿಲ್ಲ. ಅಜ್ಜ ಆತ್ಮಹತ್ಯೆ ಮಾಡಿಕೊಂಡದ್ದನ್ನು ಕಂಡು ಆಘಾತಕ್ಕೊಳಗಾದ ಮಗು (ಅಬ್ರಾರ್) ಮಾತು ಕಳೆದುಕೊಳ್ಳುತ್ತದೆ. ಅಜ್ಜನ ಸಾವಿಗೆ ಸೇಡು ತೀರಿಸಿಕೊಳ್ಳಲು ಆತ ಕಾದಿರುತ್ತಾನೆ. ಅವನು ಫ್ಯಾಮಿಲಿ ಮ್ಯಾನ್​. ಆತನಿಗೆ ಮೂವರು ಹೆಂಡತಿಯರು. ಹಾಗಾಗಿ ಅವನು ರೊಮ್ಯಾಂಟಿಕ್​ ವ್ಯಕ್ತಿ. ಕುಟುಂಬಕ್ಕಾಗಿ ಅವನು ಪ್ರಾಣ ತೆಗೆಯಬಲ್ಲ ಮತ್ತು ಪ್ರಾಣ ಕೊಡಬಲ್ಲ’ ಎಂದು ನಟ ಹೇಳಿಕೊಂಡಿದ್ದಾರೆ.

ಬಾಬಿ ಡಿಯೋಲ್ ಎಂಟ್ರಿ ಸಾಂಗ್‌ ʻಜಮಾಲ್ ಕುಡುʼ ಔಟ್‌!

ಬಾಲಿವುಡ್‌ `ಅನಿಮಲ್’ (animal Movie) ಚಿತ್ರದ ಜಮಾಲ್ ಕುಡು (Jamal Kudu) ಹಾಡು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಚಿತ್ರ ನೋಡಿದವರು ಇದನ್ನ ಬಹುವಾಗಿಯೇ ಮೆಚ್ಚಿಕೊಂಡಿದ್ದರು. ಟಿ ಸಿರೀಸ್‌ ಬುಧವಾರ (wi. 13) ಪೂರ್ಣ ವಿಡಿಯೊವನ್ನು ಬಿಡುಗಡೆ ಮಾಡಿದೆ. ಬಾಬಿ ಡಿಯೋಲ್ ಪಾತ್ರದ ಅಬ್ರಾರ್‌ನ ಎಂಟ್ರಿ ಸಾಂಗ್‌ ಇದಾಗಿತ್ತು. ಎರಡು ನಿಮಿಷಗಳ ಅವಧಿಯ ಹಾಡನ್ನು ಟಿ ಸಿರೀಸ್‌ ಪೋಸ್ಟ್ ಮಾಡಿತ್ತು.

ಜಮಾಲ್ ಕುಡು ಅನ್ನೋದು ಒಂದು ಇರಾನಿಯನ್‌ ಹಾಡಾಗಿದೆ. ಇದನ್ನು ಈ ಚಿತ್ರಕ್ಕೆ ಮರು ಬಳಕೆ ಮಾಡಲಾಗಿದೆ. ಹರ್ಷರ್ಧನ್ ರಾಮೇಶ್ವರನ್ ಇದನ್ನ ಮರುಸೃಷ್ಟಿಸಿದ್ದಾರೆ. ಈ ಮ್ಯೂಸಿಕ್ ವಿಡಿಯೊ ಮೂರು ಗಂಟೆಗಳಲ್ಲಿ 1.9 ಮಿಲಿಯನ್ ವೀಕ್ಷಣೆಗಳನ್ನು ಕಂಡಿದೆ. ವಿಡಿಯೊಗೆ ಪ್ರತಿಕ್ರಿಯಿಸಿದ ನೆಟ್ಟಿಗರೊಬ್ಬರು, “ಬಾಬಿ ಡಿಯೋಲ್ ಈ ಎಂಟ್ರಿ ಮನಸ್ಸಿನಲ್ಲಿ ಸದಾ ಇರುತ್ತದೆ” ಎಂದು ಎಂದು ಕಮೆಂಟ್‌ ಮಾಡಿದ್ದಾರೆ. ಅಬ್ರಾರ್ ಹಕ್ ಪಾತ್ರವನ್ನ ಡೈರೆಕ್ಟರ್ ಸಂದೀಪ್ ರೆಡ್ಡಿ ಇಂಟ್ರಸ್ಟಿಂಗ್ ಆಗಿಯೇ ಪ್ಲಾನ್ ಮಾಡಿದ್ದಾರೆ.

ಇದನ್ನೂ ಓದಿ: Bobby Deol: ಜನರ ಬಹು ಬೇಡಿಕೆಯ ಬಾಬಿ ಡಿಯೋಲ್ ಎಂಟ್ರಿ ಸಾಂಗ್‌ ʻಜಮಾಲ್ ಕುಡುʼ ಔಟ್‌!

ರಣಬೀರ್ ಜತೆಗೆ ʼಅನಿಮಲ್ʼ ಚಿತ್ರದಲ್ಲಿ ಅನಿಲ್ ಕಪೂರ್, ರಶ್ಮಿಕಾ ಮಂದಣ್ಣ, ಬಾಬಿ ಡಿಯೋಲ್, ತೃಪ್ತಿ ಡಿಮ್ರಿ, ಶಕ್ತಿ ಕಪೂರ್ ಮತ್ತು ಪ್ರೇಮ್ ಚೋಪ್ರಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ʼಅನಿಮಲ್ʼ 3 ಗಂಟೆ 21 ನಿಮಿಷಗಳ ಅವಧಿಯ ಚಲನಚಿತ್ರವಾಗಿದೆ. ಹಿಂದಿ, ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಸಿನಿಮಾ ಮೂಡಿ ಬಂದಿದೆ.ʼಅನಿಮಲ್‌’ ಚಿತ್ರ 3 ಗಂಟೆ 21 ನಿಮಿಷಗಳಷ್ಟು ದೀರ್ಘವಾಗಿದೆ. ಅಲ್ಲದೆ ಹಿಂಸಾತ್ಮಕ, ಬೋಲ್ಡ್‌ ದೃಶ್ಯಗಳಿಂದಾಗಿ ಎ ಸರ್ಟಿಫಿಕೇಟ್ ಪಡೆದುಕೊಂಡಿದೆ. ಇವುಗಳ ಹೊರತಾಗಿಯೂ ಚಿತ್ರವು ಭರ್ಜರಿ ಯಶಸ್ಸು ದಾಖಲಿಸಿದ್ದು, ರಣಬೀರ್‌ ಕಪೂರ್‌ ವೃತ್ತಿ ಜೀವನದಲ್ಲಿ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾವಾಗಿ ಹೊರ ಹೊಮ್ಮಿದೆ. ಈ ಹಿಂದೆ ʼಸಂಜುʼ ರಣಬೀರ್‌ ಕಪೂರ್‌ ನಟನೆಯ ಅತೀ ಹೆಚ್ಚು ಕಲೆಕ್ಷನ್‌ ಮಾಡಿದ ಚಿತ್ರವಾಗಿತ್ತು. ಕೇವಲ 8 ದಿನಗಳಲ್ಲಿಯೇ ಇದನ್ನು ʼಅನಿಮಲ್‌ʼ ಹಿಂದಿಕ್ಕಿದೆ. ʼಸಂಜುʼ ಸಿನಿಮಾ ಭಾರತದಲ್ಲಿ 342 ಕೋಟಿ ರೂ. ಗಳಿಸಿತ್ತು.

ಜವಾನ್’, ‘ಪಠಾಣ್‌’ ಮತ್ತು ‘ಗದರ್ 2’ ನಂತರ ‘ಅನಿಮಲ್’ ಈಗ ವರ್ಷದ ನಾಲ್ಕನೇ ಅತಿ ಹೆಚ್ಚು ಗಳಿಕೆಯ ಚಿತ್ರವಾಗಿ ಹೊರ ಹೊಮ್ಮಿದೆ. ಶಾರುಖ್ ಖಾನ್ ಅವರ ‘ಜವಾನ್’ ಭಾರತದಲ್ಲಿ 643.87 ಕೋಟಿ ರೂ. ಗಳಿಸಿದರೆ, ‘ಪಠಾಣ್’ 543.05 ಕೋಟಿ ರೂ. ಕಲೆಕ್ಷನ್‌ ಮಾಡಿದೆ. ಸನ್ನಿ ಡಿಯೋಲ್ ಅವರ ‘ಗದರ್ 2’ 525.45 ಕೋಟಿ ರೂ. ಗಳಿಸಿತ್ತು. ಇತ್ತ ರಶ್ಮಿಕಾ ಮಂದಣ್ಣ ಬಾಲಿವುಡ್‌ನಲ್ಲಿ ಗಟ್ಟಿಯಾಗಿ ನೆಲೆಯೂರುವ ಸಾಧ್ಯತೆ ಇದೆ. ಅವರ ಈ ಹಿಂದಿನ ಎರಡು ಬಾಲಿವುಡ್‌ ಚಿತ್ರಗಳು ಹೇಳುವಷ್ಟು ಕಲೆಕ್ಷನ್‌ ಮಾಡಿರಲಿಲ್ಲ. ʼಮಿಷನ್‌ ಮಜ್ನುʼ ಒಟಿಟಿ ಮೂಲಕ ತೆರೆ ಕಂಡಿದ್ದರೆ, ʼಗುಡ್‌ಬೈʼ ಬಾಕ್ಸ್‌ ಆಫೀಸ್‌ನಲ್ಲಿ ಮ್ಯಾಜಿಕ್‌ ಮಾಡಿರಲಿಲ್ಲ. ಇದೀಗ ಮೂರನೇ ಚಿತ್ರ ಭರ್ಜರಿ ಕಲೆಕ್ಷನ್‌ ಮಾಡುವ ಮೂಲಕ ದಕ್ಷಿಣ ಭಾರತದಂತೆ ಬಾಲಿವುಡ್‌ ಚಿತ್ರರಂಗದಲ್ಲೂ ಛಾಪು ಮೂಡಿಸಿದ್ದಾರೆ.

Exit mobile version