Site icon Vistara News

BBK SEASON 10: ಕ್ಯಾಪ್ಟನ್‌ ನೀವಾ ನಮ್ರತಾನಾ? ʻಬಯಾಸ್ಡ್ʼ​ ಆಗಿದ್ರಿ ಯಾಕೆ?ಸ್ನೇಹಿತ್‌ಗೆ ಕಿಚ್ಚನ ಕ್ಲಾಸ್‌

snehith Gowda bbk 10

ಬೆಂಗಳೂರು; ಸ್ನೇಹಿತ್‌ ಅವರು ಈ ವಾರ ತಮ್ಮಲ್ಲಿ ಇದ್ದ ಅಧಿಕಾರವನ್ನು (BBK SEASON 10) ʻಬಯಾಸ್ಡ್‌ʼ ಆಗಿ ಆಟ ಆಡಿ ಸಂಗೀತಾ ಟೀಂ ಕೆಂಗಣ್ಣಿಗೆ ಗುರಿಯಾದರು. ತಾವು ‘ಫೀಲಿಂಗ್ಸ್’ ಇಟ್ಟಿರುವ ನಮ್ರತಾರನ್ನ ಸ್ನೇಹಿತ್‌ ಸೇಫ್ ಮಾಡಿದರು. ಈ ರೀತಿಯ ನಿರ್ಧಾರಗಳಿಗೆ ಸ್ನೇಹಿತ್‌ ಅವರನ್ನು ಸುದೀಪ್‌ ಕ್ಲಾಸ್‌ ತೆಗೆದುಕೊಳ್ಳಬಹುದು ಎಂದು ವೀಕ್ಷಕರು ಊಹಿಸಿದ್ದರು. ಅದರಂತೆ ಆಗಿದೆ. ಕಿಚ್ಚ ವೇದಿಕೆಯಲ್ಲಿ ಯಾಕೆ ನೀವು ಈ ವಾರ ಬಯಾಸ್ಡ್‌ ಆಗಿದ್ರಿ?ಎಂದು ನೇರವಾಗಿ ಪ್ರಶ್ನೆ ಕೇಳಿದ್ದಾರೆ. ಸ್ನೇಹಿತ್‌ ಕೂಡ ಏನನ್ನೂ ಮಾತನಾಡಲು ತೋಚದೆ ಕೆಲವು ಸಮಯಗಳ ಕಾಲ ಮೌನವಾದರು. ಬಳಿಕ ‘ವಿನಯ್, ನಮ್ರತಾ ಅಥವಾ ಮೈಕಲ್ ಕ್ಯಾಪ್ಟನ್ ಆಗಬೇಕು ಎನ್ನುವುದು ನನ್ನ ಆಸೆ ಆಗಿತ್ತು’ ಎಂದು ನೇರವಾಗಿಯೇ ಹೇಳಿದ್ದಾರೆ.

ಈ ವಾರ ಸ್ನೇಹಿತ್‌ ಅವರು ಅಗ್ರೆಸಿವ್‌ ಆಟದ ಮಧ್ಯೆಯೂ ಕೂಡ ಸ್ನೇಹಿತ್‌ ಅವರು ನಮ್ರತಾ ಪರವಾಗಿಯೇ ಇದ್ದರು. ಕೊನೆಗೆ ವಿನಯ್‌ ಮತ್ತು ನಮ್ರತಾ ಅವರನ್ನು ಕ್ಯಾಪ್ಟನ್ಸಿ ರೇಸ್‌ನಿಂದ ಹೊರಗೆ ಇಟ್ಟರು. ಕ್ಯಾಪ್ಟನ್‌ ಆಗಬೇಕು ಎಂದು ಕನಸು ಹೊತ್ತಿದ್ದ ನಮ್ರತಾ ಪಾಲಿಗೆ ಮಣ್ಣು ಎರಚಿದರು. ಸ್ನೇಹಿತ್‌ ಅವರ ಈ ನಿರ್ಧಾರಕ್ಕೆ ನಮ್ರತಾ ಕೆಂಡವಾಗಿ ಕಣ್ಣೀರು ಹಾಕಿದರು. ಮೊದಲ ವಾರವೇ ತಂಡ ರಚಿಸುವಾಗ ಸರಿಯಾಗಿ ಬ್ಯಾಲೆನ್ಸ್‌ ಸ್ನೇಹಿತ್‌ ಮಾಡಲಿಲ್ಲ. ಈ ಬಗ್ಗೆ ಸಂಗೀತಾ ಅವರು ಭಾರಿ ಆಕ್ರೋಶ ಹೊರ ಹಾಕಿದ್ದರು. ಇದೀಗ ಈ ಬಗ್ಗೆ ಸುದೀಪ್‌ ಅವರು ಪ್ರಶ್ನೆ ಇಟ್ಟಿದ್ದಾರೆ.

ನೀವು ಮಾಡಿದ್ದು ಏನು ಸ್ನೇಹಿತ್‌?

‘ಈ ವಾರ ಬ್ಯಾಲೆನ್ಸ್​ ಟೀಂ ಮಾಡೋ ಅವಕಾಶವನ್ನು ಬಿಗ್ ಬಾಸ್ ನೀಡಿದ್ದರು. ಆದರೆ, ನೀವು ಮಾಡಿದ್ದು ಏನು? ಡಿಸ್ಕಷನ್​ ಮಾಡಿ ಟೀಂ ಮಾಡಿ ಎಂದು ಬಿಗ್ ಬಾಸ್ ನಿಮಗೆ ಯಾವಾಗ ಹೇಳಿದ್ದರು ಹೇಳಿ’ ಎಂದು ಸುದೀಪ್ ಕೇಳಿದರು. ‘ನೀವು ಮಾಡಿರುವ ಕ್ಯಾಪ್ಟನ್ಸಿಗೆ ಇಂಗ್ಲಿಷ್​ನಲ್ಲಿ ಬಯಾಸ್ಡ್​ ಎನ್ನುತ್ತಾರೆ. ಇಂಥವರು ಲೀಡರ್ ಆಗೋಕೆ ಹೇಗೆ ಸಾಧ್ಯ? ಬಯಾಸ್ಡ್​ ಆಗಿದ್ರಿ ಯಾಕೆ’ ಎಂದು ಸುದೀಪ್ ಕೇಳಿದರು.

ಇದನ್ನೂ ಓದಿ: BBK SEASON 10: ಜೈಲು ಸೇರಿದ್ದ ಕಾರ್ತಿಕ್‌ಗೆ ʻಕಿಚ್ಚನ ಚಪ್ಪಾಳೆʼ; ನಮ್ರತಾ, ವಿನಯ್‌ಗೆ ಮುಖಭಂಗ!

ವಿನಯ್, ನಮ್ರತಾ ಅಥವಾ ಮೈಕಲ್ ಕ್ಯಾಪ್ಟನ್ ಆಗಬೇಕು

ಇದಕ್ಕೆ ಸ್ನೇಹಿತ್ ನೇರವಾಗಿ ಉತ್ತರಿಸಿದ್ದಾರೆ. ‘ವಿನಯ್, ನಮ್ರತಾ ಅಥವಾ ಮೈಕಲ್ ಕ್ಯಾಪ್ಟನ್ ಆಗಬೇಕು ಎನ್ನುವುದು ನನ್ನ ಆಸೆ ಆಗಿತ್ತು’ ಎಂದರು ಸ್ನೇಹಿತ್. ಹಾಗೇ ʻʻನನ್ನ ಯಾರನ್ನು ಸೇವ್‌ ಮಾಡಿದ್ರೋ ಅವರನ್ನು ನಾನು ಸೇವ್‌ ಮಾಡಿದೆ. ʼʼಎಂದೂ ಹೇಳಿದರು ಸ್ನೇಹಿತ್‌.

ಇದಾದ ಬಳಿಕ ಸುದೀಪ್‌ ಅವರು ಎಳೆ ಎಳೆಯಾಗಿ ಮನೆಯ ಸಮಸ್ಯೆಗಳನ್ನು ಕುರಿತು ಮಾತನಾಡಿದರು. ಸುದೀಪ್‌ ಮಾತನಾಡಿ ʻʻಬಯಾಸ್ಡ್‌ ಆಗಿ ಯಾವಾಗ ನೀವು (ಸ್ನೇಹಿತ್‌) ನಿರ್ಧಾರವನ್ನು ತೆಗೆದುಕೊಳ್ಳಲು ಶುರು ಮಾಡಿದರೋ ಅಲ್ಲೇ ಮನೆಯಲ್ಲಿ ಫೌಂಡೇಶನ್‌ ಹೋಯ್ತು. ಎಡವೋಕೆ ಶುರುವಾಯ್ತು. ಮೊದಲ ಕಾರಣ ನೀವೇ ಇದಕ್ಕೆ. ಎರಡನೇಯದು ಎರಡೂ ತಂಡ ಭಾಗ ಆದಾಗ. ಸಂಗೀತಾ ಅವರೇ! ಎರಡು ತಂಡ ರಚನೆ ಆದಾಗ ಅದರೊಟ್ಟಿಗೆ ಹೋಗಬೇಕಾದದ್ದು, ಲೀಡರ್‌ ಕರ್ತವ್ಯ. ಬಿಟ್ಟು ಬಿಡಬೇಕು ಅಲ್ಲಿಗೆ. ಸ್ನೇಹಿತ್‌ ಅವರಿಗೆ ಎಲ್ಲಿ ಅವಕಾಶ ಸಿಗುತ್ತೋ ಅಲ್ಲಿ ಅವಮಾನ ಆಗುತ್ತಲೇ ಇತ್ತು. ಸಂಗೀತಾ ಅವರೇ ತಮ್ಮ ಟೀಂಗೆ ನ್ಯಾಯ ಸಿಕ್ಕಿಲ್ಲ, ಬಯಾಸ್ಡ್‌ ಆಗಿದೆ ಎಂದು ನೀವು ಅಲ್ಲೇ ಗಮನ ಕೊಟ್ಟಿದ್ದಕೆ ಆಟ ಸರಿಯಾಗಿ ಆಗಿಲ್ಲ. ಆಟದ ಬದಲಿಗೆ ಬಯಾಸ್ಡ್‌ ಬಗ್ಗೆಯೇ ನಿಮ್ಮ ಗಮನ ಇತ್ತು. ಇದರಿಂದ ನಿಮಲ್ಲಿ ಆ್ಯಂಗರ್ ಕೂರುತ್ತದೆ, ಹಳೆಯದು ನೆನಪಾಗುತ್ತೆʼಎಂದರು ಸುದೀಪ್.

ತುಕಾಲಿ ಅವರಿಗೂ ಸುದೀಪ್‌ ಅವರು ಕ್ಲಾಸ್‌ ತೆಗೆದುಕೊಂಡಿದ್ದು, ಬಳಿಕ ಸ್ನೇಹಿತ್‌ ಅವರಿಗೆ ಕ್ಯಾಪ್ಟನ್‌ ನೀವಾ, ನಮ್ರತಾನಾ ಎಂದು ನೇರವಾಗಿ ಪ್ರಶ್ನೆ ಇಟ್ಟರು ಸುದೀಪ್‌. ʻʻವಿನಯ್‌ ಟೀಂನಲ್ಲಿಯೇ ಎರಡೂ ತಂಡಗಳು ಕಂಡಿದ್ದವುʼʼಎಂದರು ಸುದೀಪ್‌. ಬಳಿಕ ವರ್ತೂರ್‌ ಕೂಡ ಮಾತನಾಡಿʻ ನಮ್ರತಾ ಹಾಗೂ ವಿನಯ್‌ ಅವರು ಮೆಜಾರಿಟಿ ಡಿಸಿಷನ್‌ ತೆಗೆದುಕೊಳ್ಳುತ್ತಿದ್ದರುʼʼ ಎಂದು ಹೇಳಿದರು.

ಇದನ್ನೂ ಓದಿ: BBK SEASON 10: ‘ಬಿಗ್ ಬಾಸ್‌’ ಮನೆಯಲ್ಲಿ ಇನ್ನು ಕ್ಯಾಪ್ಟನ್ ಇರಲ್ಲ; ರೂಮ್‌ಗೆ ಬೀಗ ಬಿದ್ದಾಯ್ತು!

ಸುದೀಪ್‌ ಅವರು ವರ್ತೂರ್‌ ಅವರಿಗೆ ನಾಯಕತ್ವದ ಬಗ್ಗೆ ಮಾತನಾಡಿ ʻ ಲೀಡರ್‌ ಎಂದರೆ, ಬೋಲ್ಡ್‌ ಆಗಿ ತೆಗೋಬೇಕು. ಆದರೆ ನೀವು ಹಾಗೇ ಮಾಡಿಲ್ಲ. ವಿನಯ್‌, ಮೈಕಲ್‌, ನಮ್ರತಾ ಮಾತ್ರ ಕ್ಯಾಪ್ಟನ್‌ ಆಗಬೇಕು ಸ್ನೇಹಿತ್‌ ಹೇಳಿದ್ದು ಸರಿ ಇದೆ. ನೀವು ಹಾಗೂ ತುಕಾಲಿ ಬಿನ್‌ ಬ್ಯಾಗ್‌ನಲ್ಲಿ ಕುಳಿತು ನಿಮ್ಮಷ್ಟಕ್ಕೆ ಲೀಡರ್‌ ಆಗಲು ಬಿಡುವುದಿಲ್ಲ ಎಂದು ಎಷ್ಟೋ ಸಲ ಮಾತನಾಡಿದ್ದೀರಾ. ಅಲ್ಲಿ ಕುತ್ಕೊಂಡು ಸಜೇಶನ್‌ ಕೊಡ್ತೀರಾ. ಇಲ್ಲಿ ಹೇಳಬಹುದಿತ್ತುʼʼಎಂದರು.

ಬಿಗ್ ಬಾಸ್ ಮನೆಯ ದಿಕ್ಕು ತಪ್ಪಲು ಪ್ರತಿ ಹಂತದಲ್ಲೂ ಸ್ನೇಹಿತ್ ಅವರು ಕಾರಣ ಆಗುತ್ತಾ ಬಂದರು. ಸ್ನೇಹಿತ್ ಅವರು ಇದನ್ನು ಒಪ್ಪಿಕೊಂಡಿದ್ದಾರೆ. ಹಾಗೇ ಮನೆಯಲ್ಲಿ ಪ್ರತಿ ಸದಸ್ಯರ ತಪ್ಪುಗಳನ್ನು ಸುದೀಪ್‌ ಅವರು ಎತ್ತಿ ತೋರಿಸಿದ್ದಾರೆ.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version