Site icon Vistara News

BBK SEASON 10: ವಿನಯ್‌-ಕಾರ್ತಿಕ್‌ ನಡುವೆ ಫಿಸಿಕಲ್‌ ಅಟ್ಯಾಕ್‌; ಯಾವ ಸೀಮೆ ಕ್ಯಾಪ್ಟನ್ ಸ್ನೇಹಿತ್‌ ನೀನು?

Captain Snehith Gowda Not Bother To Stop Physical Fight Between vinay and Karthik

ಬೆಂಗಳೂರು; ಬಿಗ್‌ ಬಾಸ್‌ ಸೀಸನ್‌ 10ರ (BBK SEASON 10) 9ನೇ ವಾರ ಮನೆಯಲ್ಲಿ ಕಾಲ್ಪನಿಕ ಜಗತ್ತಾಗಿ ಬದಲಾಗಿದೆ. ಈ ಲೋಕದಲ್ಲಿ ಗಂಧರ್ವರು ಹಾಗೂ ರಾಕ್ಷಸರು ಎಂಬ ಎರಡು ಗುಂಪುಗಳಿವೆ. ಸಂಗೀತಾ ನೇತೃತ್ವದ ತಂಡ ರಾಕ್ಷಸರಾಗಿದ್ದಾರೆ. ವರ್ತೂರು ಸಂತೋಷ್‌ ನೇತೃತ್ವದ ತಂಡ ಗಂಧರ್ವರಾಗಿದ್ದಾರೆ. ಇದಕ್ಕೆಲ್ಲ ಒಡೆಯ ಎಂದರೆ ಸ್ನೇಹಿತ್‌. ಆದರೆ ಸ್ನೇಹಿತ್‌ ಅವರು ವಿನಯ್‌ – ಕಾರ್ತಿಕ್‌ ಮಧ್ಯೆ ತಳ್ಳಾಟಗಳಾದರೂ ಸ್ನೇಹಿತ್‌ ಸುಮ್ಮನೆ ನೋಡಿಕೊಂಡು ನಿಂತಿದ್ದರು. ಜಗಳ ನಿಲ್ಲಿಸಲು ಸ್ನೇಹಿತ್ ಪ್ರಯತ್ನಿಸಲೇ ಇಲ್ಲ. ಇದು ಸ್ಪರ್ಧಿಗಳಿಗೆ ಕೋಪ ತರಿಸಿದೆ. ಯಾವ ಸೀಮೆ ಉಸ್ತುವಾರಿ ನೀವು? ಎಂದು ಕಾರ್ತಿಕ್‌ ಅವರು ಜೋರಾಗಿಯೇ ಸ್ನೇಹಿತ್‌ಗೆ ಅವಾಜ್‌ ಹಾಕಿದ್ದಾರೆ. ತನಿಷಾ ಕೂಡ ಸ್ನೇಹಿತ್‌ ಕ್ಯಾಪ್ಟನ್ ಆಗೋಕೆ ಲಾಯಕ್ಕಿಲ್ಲ ಎಂದಿದ್ದಾರೆ.

ಏನದು ಟಾಸ್ಕ್‌?

ಮನೆಯಲ್ಲಿ ಎರಡು ತಂಡಗಳನ್ನಾಗಿ ಮಾಡಲಾಗಿದೆ. ಒಂದು ರಾಕ್ಷಸರು. ಇನ್ನೊಂದು ಗಂಧರ್ವರು. ಈ ಕಾಲ್ಪನಿಕ ‘ಬಿಗ್ ಬಾಸ್‌’ ಲೋಕಕ್ಕೆ ಕ್ಯಾಪ್ಟನ್ ಸ್ನೇಹಿತ್ ಒಡೆಯ. ಸಂಗೀತಾ ನೇತೃತ್ವದ ತಂಡ ರಾಕ್ಷಸರಾಗಿದ್ದಾರೆ. ವರ್ತೂರು ಸಂತೋಷ್‌ ನೇತೃತ್ವದ ತಂಡ ಗಂಧರ್ವರಾಗಿದ್ದಾರೆ. ಸಂಗೀತಾ ತಂಡವನ್ನು ರಾಕ್ಷಸರ ತಂಡವೆಂದು, ವರ್ತೂರು ತಂಡವನ್ನು ಗಂಧರ್ವರ ತಂಡವೆಂದು ಕರೆಯಲಾಗಿದ್ದು, ಎರಡೂ ತಂಡಗಳ ನಡುವೆ ಟಾಸ್ಕ್ ಆಡಿಸಲಾಗುತ್ತಿದೆ. ವರ್ತೂರು ತಂಡದಲ್ಲಿ ವಿನಯ್ ಇದ್ದರೆ, ಸಂಗೀತಾ ತಂಡದಲ್ಲಿ ಕಾರ್ತಿಕ್ ಇದ್ದಾರೆ.

ರಾಕ್ಷಸರು ಹಾಗೂ ಗಂಧರ್ವರಿಗೆ ಬಾವುಟದ ಚಟುವಟಿಕೆಯನ್ನ ‘ಬಿಗ್ ಬಾಸ್‌’ ನೀಡಿದ್ದರು. ಟಾಸ್ಕ್ ಮುಗಿಯುವ ಹೊತ್ತಿಗೆ ಯಾರ ಬಾವುಟ ಹೆಚ್ಚು ಇರುತ್ತದೆಯೋ ಅವರು ವಿನ್‌ ಆದಂತೆ. ರಾಕ್ಷಸರ ಗುಂಪಿನವರು ಕೆಂಪು ಧ್ವಜ ನೆಡಬೇಕು, ಗಂಧರ್ವರು ಬಿಳಿ ಧ್ವಜ ನೆಟ್ಟು ಅದನ್ನು ಎದುರಾಳಿಗಳ ಕೈಗೆ ಸಿಗದಂತೆ ಬಾವುಟಗಳನ್ನು ಕಾಪಾಡಿಕೊಳ್ಳಬೇಕು. ಈ ವೇಳೆ ವಿನಯ್‌ ಹಾಗೂ ಕಾರ್ತಿಕ್‌ ನಡುವೆ ಮಾರಾಮಾರಿಯಾಗಿದೆ.

ಇದನ್ನೂ ಓದಿ: BBK SEASON 10: ಬಿಗ್‌ ಬಾಸ್‌ ಮನೆಯೊಳಗೆ ಹೊಸ ಲೋಕ; ಗಂಧರ್ವರು-ರಕ್ಕಸರು ಎಂಟ್ರಿ!

ಈ ಟಾಸ್ಕ್​ ಆಡುವಾಗ ವಿನಯ್ ಹಾಗೂ ಕಾರ್ತಿಕ್ ಪರಸ್ಪರ ಮೈ ಮೇಲೆ ಏರಗಿಕೊಂಡರು. ತಳ್ಳಾಡಿಕೊಂಡರು, ಎಳೆದಾಡಿದರು. ಕಾರ್ತಿಕ್ ಒಮ್ಮೆಯಂತೂ ವಿನಯ್ ಅನ್ನು ಎತ್ತಿಕೊಂಡು ಹೋಗಿ ದೂರ ಒಗೆದರು, ವಿನಯ್ ಸಹ ಕಾರ್ತಿಕ್ ಅವರನ್ನು ಎಳೆದಾಡಿದರು. ಈ ಹಂತದಲ್ಲಿ ಇಬ್ಬರಿಗೂ ಏಟು ತಗುಲಿತು. ‘’ಕಾಲುಗಳನ್ನ ಲಾಕ್‌ ಮಾಡಿಟ್ಟುಕೋ.. ಉಸಿರಾಡೋಕೆ ಆಗಬಾರದು. ಎಷ್ಟು ಗಟ್ಟಿಯಾಗುತ್ತೋ, ಅಷ್ಟು ಗಟ್ಟಿಯಾಗಿ ಹಿಡಿದಿಟ್ಟುಕೋ 30 ಸೆಕೆಂಡ್ಸ್‌’’ ಎಂದು ನಮ್ರತಾಗೆ ವಿನಯ್ ಹೇಳಿಕೊಟ್ಟರು. ಇದು ವಿನಯ್‌ ಅವರ ಸ್ಟ್ರ್ಯಾಟಜಿ. ಅತ್ತ ನಮ್ರತಾ – ಸಂಗೀತಾ ಮಧ್ಯೆಯೂ ಫಿಸಿಕಲ್ ಅಟ್ಯಾಕ್ ಆಯ್ತು.

ಕ್ಯಾಪ್ಟನ್ ಆಗೋಕೆ ಲಾಯಕ್ಕಿಲ್ಲ!

‘’ಉಸ್ತುವಾರಿಯಾಗಿ ನೀವು ಏನಾದರೂ ನಿರ್ಧಾರ ತಗೊಳ್ಳಿ..’’ ಎಂದು ತನಿಷಾ ಹೇಳುತ್ತಲೇ ಇದ್ದರು. ಆಗ, ‘’ಕುಸ್ತಿ ಮಾಡಬೇಡಿ. ಬಾವುಟಗಳನ್ನ ಕಿತ್ತುಕೊಳ್ಳಿ’’ ಎಂದರು ಸ್ನೇಹಿತ್. ಕಾರ್ತಿಕ್‌ ಹಾಗೂ ವಿನಯ್‌ ಅವರ ಕುಸ್ತಿ ತಾರರಕ್ಕೇರಿದಾಗ ʻʻಏನಾದರೂ ನಿರ್ಧಾರ ಮಾಡಿ ಇಲ್ಲಾಂದರೆ ಇದು ದೊಡ್ಡದಾಗುತ್ತೆ’’ ಎಂದು ತನಿಷಾ ಹೇಳಿದಾಗ ಸ್ನೇಹಿತ್‌ ಸುಮ್ಮನೆ ಇದ್ದರು. ತನಿಷಾ, ಸಿರಿ ಅವರುಗಳು ಬೇಡ, ಇಷ್ಟೊಂದು ದೈಹಿಕವಾಗಿ ಆಡುವುದು ಬೇಡ ಎಂದು ಕಿರುಚಿ, ಕ್ಯಾಪ್ಟನ್ ಸ್ನೇಹಿತ್​ರನ್ನು ಆಟ ನಿಲ್ಲಿಸುವಂತೆ ಹೇಳುವಂತೆ ಬೇಡಿದರೂ ಸ್ನೇಹಿತ್ ಆಟ ನಿಲ್ಲಿಸಲಿಲ್ಲ. ಬಳಿಕ ಬಿಗ್‌ ಬಾಸ್‌ ಮಧ್ಯ ಪ್ರವೇಶಿಸಿ ಆಟ ನಿಲ್ಲಿಸಿ ಎಂದು ಘೋಷಿಸಿದರು.

ಇತ್ತ ಕಾರ್ತಿಕ್‌ ಕೂಡ ಸ್ನೇಹಿತ್‌ಗೆ ʻʻನನ್ನ ಕುತ್ತಿಗೆ ಹಿಡಿದಿದ್ದ. ಉಸ್ತುವಾರಿಯಾಗಿ ಏನ್ಮಾಡ್ತಿದ್ದೀರಾ? ಯಾವ ಸೀಮೆ ಉಸ್ತುವಾರಿ ನೀವು?” ಎಂದು ಜೋರಾಗಿಯೇ ಕೂಗಿದರು.

ಅತ್ತ ತನಿಷಾ ಕೂಡ ಸ್ನೇಹಿತ್‌ಗೆ “ಫಿಸಿಕಲ್ ಅಟ್ಯಾಕ್ ಆಗ್ತಿರೋವಾಗ ನಿಲ್ಲಿಸಬೇಕಿತ್ತು. ಒಬ್ಬರಿಗೆ ನೋವು ಆಗ್ತಿರೋವಾಗ ಹೇಗೆ ನೋಡಿಕೊಂಡು ಸುಮ್ಮನೆ ಇರ್ತೀರಾ? ಕ್ಯಾಪ್ಟನ್ ಆಗೋಕೆ ಲಾಯಕ್ಕಿಲ್ಲ.!ʼʼ ಎಂದರು. ಸ್ನೇಹಿತ್‌ ಕೂಡ ʻʻಇಬ್ಬರೂ ಅಗ್ರೆಸ್ಸಿವ್ ಆಗಿ ಆಡಿದ್ರಿ. ಒಬ್ಬರು ಮಾತ್ರ ಅಲ್ಲʼʼ ಎಂದಿದ್ದಾರೆ.

ಇದನ್ನೂ ಓದಿ: BBK SEASON 10: ಮತ್ತೆ ಕಿತ್ತಾಡಿಕೊಂಡ ವಿನಯ್‌-ಸಂಗೀತಾ; ಇವರ ಜಗಳ ಮುಗಿಯೋದೇ ಇಲ್ವಾ?

ರಕ್ಕಸರ ತೆಕ್ಕೆಗೆ ಸಿಕ್ಕ ಗಂಧರ್ವರ ಪಾಡೇನು? ಅವರು ಹೇಗೆ ಪಾರಾಗುತ್ತಾರೆ? ಈ ಆಟಕ್ಕೆ ಇನ್ನೊಂದು ಆಯಾಮವೂ ಇದೆಯಾ? ಈ ಎಲ್ಲ ಪ್ರಶ್ನೆಗೆ ಉತ್ತರ ಸಂಚಿಕೆಯಲ್ಲಿ ಗೊತ್ತಾಗಲಿದೆ.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version