Site icon Vistara News

BBK SEASON 10: ʻಕ್ಯಾಪ್ಟನ್ಸಿʼ ವಿಚಾರಕ್ಕೆ ಸಂಗೀತಾ, ತನಿಷಾ ನಡುವೆ ವಾರ್‌; ರೇಸ್‌ನಲ್ಲಿ ಉಳಿದಿದ್ದು ಯಾರು?

Sangeetha Tanisha

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10 (BBK SEASON 10) ಹದಿಮೂರನೇ ವಾರಕ್ಕೆ ಕಾಲಿಟ್ಟಿದೆ. ಮನೆಯಲ್ಲಿ ಕ್ಯಾಪ್ಟನ್ಸಿ ಹುದ್ದೆಗೆ ಭಾರಿ ಪೈಪೋಟಿಗಳು ಆಗುತ್ತಿವೆ. ಕ್ಯಾಪ್ಟನ್‌ ಆದರೆ ಒಂದು ಸಪರೇಟ್‌ ರೂಮ್‌, ಇಡೀ ವಾರ ನಿಯಮಗಳನ್ನು ಜಾರಿಗೊಳಿಸುವ ಅಧಿಕಾರದ ಜತೆಗೆ ಒಂದು ವಾರ ನಾಮಿನೇಷನ್​ನಿಂದ ಬಚಾವಾಗುವ ಸೌಕರ್ಯ ಸಿಗುತ್ತದೆ. ಹಾಗಾಗಿ ಕ್ಯಾಪ್ಟನ್ ಆಗಲು ಎಲ್ಲರೂ ಪ್ರಯತ್ನಿಸುತ್ತಿದ್ದಾರೆ. ತನಿಷಾ ಕ್ಯಾಪ್ಟನ್ ಆಗಿದ್ದರು. ವಾರದ ಮೊದಲ ಟಾಸ್ಕ್‌ನಲ್ಲಿ ಆಡಲು ಸಂಗೀತಾಗೆ ತನಿಷಾ ಅವಕಾಶ ಕೊಡಲಿಲ್ಲ. ಎರಡನೇ ಟಾಸ್ಕ್‌ನಲ್ಲಿ ಚಾನ್ಸ್ ಕೊಟ್ಟರು. ಮೂರನೇ ಟಾಸ್ಕ್‌ನಲ್ಲಿ ಭಾಗವಹಿಸಲು ಕೂಡ ನಿರಾಕರಿಸಿದರು. ಈ ವಿಚಾರ ಇಬ್ಬರ ನಡುವೆ ವಾಗ್ವಾದ ನಡೆದಿದೆ.

ಈ ಮನೆಯಲ್ಲಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಅರ್ಹತೆ ಇರುವ ಇಬ್ಬರು ಯಾರೆಂದು ಬಿಗ್‌ ಬಾಸ್‌ ತಿಳಿಸಲು ಹೇಳಿದ್ದರು. ಎಲ್ಲರೂ ಹೆಚ್ಚಾಗಿ ಸಂಗೀತಾ, ನಮ್ರತಾ ಹೆಸರನ್ನು ತೆಗೆದುಕೊಂಡರು. ಬಹುಮತದ ಅನುಸಾರ ನಮ್ರತಾ, ಸಂಗೀತಾ ಆಯ್ಕೆಯಾದರು. ಇದಾದ ಬಳಿಕ ಟಾಸ್ಕ್‌ವನ್ನು ನಿಭಾಯಿಸಲು ಬಿಗ್‌ ಬಾಸ್‌ ಸಂಗೀತಾ, ನಮ್ರತಾಗೆ ಸೂಚಿಸಿದರು. ಅದರಂತೆ ಇವರಿಬ್ಬರು ಸೇರಿ ನಿರ್ಧಾರಗಳನ್ನು ತೆಗೆದುಕೊಂಡರು. ಮುಂದಿನ ಟಾಸ್ಕ್‌ಗೆ ವಿನಯ್‌, ಮೈಕಲ್‌, ಕಾರ್ತಿಕ್‌, ನಮ್ರತಾ, ತುಕಾಲಿ ಅವರನ್ನು ಟಾಸ್ಕ್‌ಗೆ ಆಡಲು ಅನುಮತಿ ಕೊಟ್ಟರು. ಟಾಸ್ಕ್‌ನಿಂದ ಡ್ರೋನ್ ಪ್ರತಾಪ್, ವರ್ತೂರು ಸಂತೋಷ್ ಹಾಗೂ ತನಿಷಾರನ್ನ ಸಂಗೀತಾ, ನಮ್ರತಾ ಹೊರಗಿಟ್ಟರು. ಇದು ತನಿಷಾ ಹಾಗೂ ಸಂಗೀತಾ ನಡುವೆ ವಾರ್‌ ಆಗಲು ಕಾರಣವಾಯ್ತು.

ಸಂಗೀತಾ-ತನಿಷಾ ವಾಗ್ವಾದ

ʻʻನಿಮ್ಮ ಕಾಲಿಗೆ ಪ್ರಾಬ್ಲಂ ಇದೆ. ನಡೆಯೋಕೆ ಆಗಲ್ಲ ಅಂತ ಅನಿಸ್ತು. ಅಲ್ಲಿ ಓಡಬೇಕಾಗಬಹುದು. ಏನೇ ಇರಬಹುದು. ನನಗೆ ಗೊತ್ತಿಲ್ಲ. ನನ್ನ ನಿರ್ಧಾರ ನಾನು ತೆಗೆದುಕೊಂಡಿದ್ದೇನೆ. ನೀವು ನನ್ನನ್ನ ಆಯ್ಕೆ ಮಾಡಲಿಲ್ಲ. ನನಗೆ ಸರಿ ಎನಿಸಿದ ನಿರ್ಧಾರವನ್ನ ನಾನು ತಗೊಂಡಿದ್ದೇನೆʼʼಎಂದರು ಸಂಗೀತಾ . ತನಿಷಾ ಈ ಬಗ್ಗೆ ʻʻನಾನು ನಿಮ್ಮನ್ನ ಆಯ್ಮೆ ಮಾಡಲಿಲ್ಲ ಅಂತ ನೀವು ನನ್ನನ್ನ ಮಾಡಲಿಲ್ವಾ? ಇದೇ ತರಹದ ನಿರ್ಧಾರ ತಗೊಳ್ತೀರಾ ಅಲ್ವಾ? ನೀವೀಗ ಮಹಿಳೆಗೆ ಪ್ರಾಮುಖ್ಯತೆ ಕೊಡ್ತಾ ಇಲ್ಲ ಅಂತ ನಾನೂ ಅಂದುಕೊಳ್ಳಬಹುದುʼʼಎಂದು ಗರಂ ಆಗಿಯೇ ಉತ್ತರ ಕೊಟ್ಟರು.

ಇದನ್ನೂ ಓದಿ: BBK SEASON 10: ಕ್ಯಾಪ್ಟನ್ಸಿ ಓಟದಲ್ಲಿ ತನಿಷಾ ವಿರುದ್ಧವೇ ತಿರುಗಿ ಬಿದ್ದ ಕಾರ್ತಿಕ್‌!

ಪ್ಯಾನಿಕ್‌ ಆಗ್ತೀನಿ ಬಿಡಿ

ಇದಾದ ಬಳಿಕ ಡ್ರೋನ್‌ ಪ್ರತಾಪ್‌ ಹಾಗೂ ಸಂಗೀತಾ ನಡುವೆ ಕೂಡ ಮಾತಿನ ಚಕಮಕಿ ನಡೆಯಿತು. ಡ್ರೋನ್‌ ಕೂಡ ನನ್ನನ್ನು ಯಾಕೆ ಹೊರಗಿಟ್ರಿ ಎಂದು ಸಂಗೀತಾರನ್ನು ಪ್ರಶ್ನಿಸಿದ್ದಾರೆ. ಅದಕ್ಕೆ ಸಂಗೀತಾ ಕೂಡ ʻʻನಾನು ನಿರ್ಧಾರ ಸರಿಯಾಗಿ ಮಾಡ್ತೀನಿ ಅಂತ ನೀನು ಹೇಗೂ ಹೇಳಲಿಲ್ಲ ಅಲ್ವಾ? ನನ್ನ ನಿರ್ಧಾರ ಹೀಗೇ ಇರುತ್ತೆ. ನಿನಗೆ ಇಷ್ಟ ಆಗಲ್ಲ. ನಿನ್ನ ಹೆಸರನ್ನ ಹೇಳಿದ್ದೆ. ಆದರೆ, ಟಾಸ್ಕ್‌ ಪ್ರಕಾರ ಚೂಸ್ ಮಾಡಿದ್ವಿ.ʼʼಎಂದರು. ಪ್ರತಾಪ್‌ ಕೂಡ ʻʻಸರಿ ಬಿಡಿ ನಾನು ಪ್ಯಾನಿಕ್‌ ಆಗ್ತೀನಿʼʼಎಂದು ವ್ಯಂಗ್ಯವಾಗಿ ಹೇಳಿದ್ದಾರೆ.

ಇನ್ನು ಟಾಸ್ಕ್‌ನಲ್ಲಿ ಮೊದಲು ಹೋದ ಮೈಕಲ್ ಹಾಗೂ ವಿನಯ್​ರಲ್ಲಿ ಮನೆ ಸದಸ್ಯರು ವಿನಯ್​ರನ್ನು ಆರಿಸಿದರು. ಬಳಿಕ ತುಕಾಲಿ ಸಂತು ಹಾಗೂ ವರ್ತೂರು ಸಂತು ಅವರಲ್ಲಿ ತುಕಾಲಿ ಸಂತು ಆಯ್ಕೆಯಾದರು. ಅದಾದ ಬಳಿಕ ಬಂದ ನಮ್ರತಾ ಹಾಗೂ ಕಾರ್ತಿಕ್ ಅವರನ್ನು ಕಾರ್ತಿಕ್ ಅವರನ್ನು ಹೆಚ್ಚು ಮಂದಿ ಆಯ್ಕೆ ಮಾಡಿದರು. ಆದರೆ ಸಂಗೀತಾ ಮಾತ್ರ ನಮ್ರತಾಗೆ ಮತ ಹಾಕಿದರು. ಅಲ್ಲಿಗೆ ವಿನಯ್, ಕಾರ್ತಿಕ್, ತುಕಾಲಿ ಸಂತು ಹಾಗೂ ಸಂಗೀತಾ ಅವರುಗಳು ಕ್ಯಾಪ್ಟನ್ಸಿ ರೇಸ್​ನಲ್ಲಿ ಉಳಿದರು.

ಇದನ್ನೂ ಓದಿ: BBK SEASON 10: ಬಿಗ್‌ಬಾಸ್ ಮನೆಯಲ್ಲಿ ಮಹಿಳೆಯರಿಗೆ ಅವಕಾಶ ಸಿಕ್ತಿಲ್ವಾ? ಧ್ವನಿ ಎತ್ತಿದ ಸಂಗೀತಾ!

ಮತ್ತೊಂದು ಅವಕಾಶವನ್ನು ಬಿಗ್‌ ಬಾಸ್‌ ಸಂಗೀತಾ ಅವರಿಗೆ ನೀಡಿದರು. ಸಂಗೀತಾ ಅವರು ತಮಗೆ ಪ್ರಬಲ ಎದುರಾಳಿ ಆಗಬಹುದಾಗಿದ್ದ ಕಾರ್ತಿಕ್ ಹಾಗೂ ವಿನಯ್ ಇಬ್ಬರನ್ನೂ ಸಹ ಹೊರಗೆ ಇಟ್ಟರು. ಕೊನೆಗೆ ತುಕಾಲಿ ಸಂತು ಹಾಗೂ ಸಂಗೀತಾ ಮಾತ್ರವೇ ಕ್ಯಾಪ್ಟನ್ಸಿ ರೇಸ್​ನಲ್ಲಿ ಉಳಿದರು. ಇಂದಿನ ಸಂಚಿಕೆಯಲ್ಲಿ ಯಾರು ಕ್ಯಾಪ್ಟನ್‌ ಆಗಲಿದ್ದಾರೆ ಎಂಬುದು ಗೊತ್ತಾಗಲಿದೆ.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version