ಬೆಂಗಳೂರು: ಬಿಗ್‌ಬಾಸ್ ಸೀಸನ್ 10ರ ರನ್ನರ್ ಅಪ್ ಆಗಿರುವ ಡ್ರೋನ್ ಪ್ರತಾಪ್ (Drone Prathap) ವಿರುದ್ಧ ಸಾಲು ಸಾಲು ದೂರುಗಳು ದಾಖಲಾಗಿವೆ. ಆದರೆ ದೂರಿನ ಸಂಬಂಧ ಯಾವುದೇ ಎಫ್‌ಐಆರ್ ಮತ್ತು ಹೇಳಿಕೆಯನ್ನು ಪೊಲೀಸರು (Police) ದಾಖಲಿಸಿಲ್ಲ ಎಂಬುದು ಬೆಳಕಿಗೆ ಬಂದಿತ್ತು. ಈಗ ದಾಖಲಾದ ಎರಡು ದೂರುಗಳ ತನಿಖೆಯನ್ನು ಆರ್ ಆರ್ ನಗರ ಪೊಲೀಸರು ಕೈಗೊಂಡಿದ್ದಾರೆ. ಒಂದು ಡ್ರೋನ್ ಪ್ರತಾಪ್ ಅವರ ಬ್ಯುಸಿನೆಸ್ ಪಾರ್ಟನರ್ ಸಾರಂಗ್ ಮಾನೆಗೆ ಮೋಸ ಮಾಡಿರುವ ಬಗ್ಗೆ, ಇನ್ನೊಂದು ಬಿಎಂಪಿ ಅಧಿಕಾರಿ (BBMP Officer) ಪ್ರಯಾಗ್ ಮಾನನಷ್ಟ ಮೊಕದ್ದಮೆ ಹೂಡಿರುವ ಬಗ್ಗೆ. ಪೊಲೀಸ್ ತನಿಖೆಯ ಮೊದಲ ಹಂತವಾಗಿ ಡ್ರೋನ್ ಪ್ರತಾಪ್ ಸ್ಟಾರ್ಟಪ್ ಕಂಪನಿ ನೈಜ್ಯತೆ ಪತ್ತೆ ಕಾರ್ಯ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ.
ಈಗಾಗಲೇ ಪ್ರತಾಪ್ ವಿರುದ್ಧ ಬಿಬಿಎಂಪಿ ಅಧಿಕಾರಿ (BBMP Officer) ಪ್ರಯಾಗ್ ಅವರು ಮಾನನಷ್ಟ ಮೊಕದ್ದಮೆ ಹೂಡಿದ್ದರು. ನಂತರ ಡ್ರೋನ್ ಪ್ರತಾಪ್ ಅವರ ಬ್ಯುಸಿನೆಸ್ ಪಾರ್ಟನರ್ ಸಾರಂಗ್ ಮಾನೆಗೆ ಮೋಸ ಮಾಡಿರುವ ಸುದ್ದಿಯು ಬೆಳಕಿಗೆ ಬಂದಿತ್ತು. ಇದಾದ ಮೇಲೆ ಬನಶಂಕರಿಯ ಪರಮೇಶ್ವರ್ ಎಂಬುವವರು ಡ್ರೋನ್ ಪ್ರತಾಪ್ ವಿರುದ್ಧ ದೂರು ದಾಖಲಿಸಿದ್ದರು. ಲೈಸೆನ್ಸ್ ಪಡೆಯದೇ ಡ್ರೋನ್ ಹಾರಿಸುವುದು ಹಾಗೂ ಪರವಾನಗಿ ಇಲ್ಲದ ಡ್ರೋನ್‌ಗಳನ್ನು ಜನರಿಗೆ ಮಾರಾಟ ಮಾಡುವ ಮೂಲಕ ಡ್ರೋನ್ ಪ್ರತಾಪ್ ವಂಚಿಸುತ್ತಿದ್ದಾರೆ ಎಂದಿದ್ದರು. ಇಷ್ಟೆಲ್ಲ ದೂರುಗಳು ಡ್ರೋನ್ ಪ್ರತಾಪ್ ವಿರುದ್ಧ ಇದ್ದರೂ ದಾಖಲಾಗಿರುವ ದೂರುಗಳ ಪ್ರಕರಣದಲ್ಲಿ ಪ್ರತಾಪ್ ವಿರುದ್ಧ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ. ಪ್ರಕರಣ ಸಂಬಂಧ ಯಾವುದೇ ನೋಟಿಸ್ ಸಹ ಕೊಟ್ಟಿಲ್ಲ. ಇದೀಗ ದಾಖಲಾದ ಎರಡು ದೂರುಗಳ ತನಿಖೆಯನ್ನು ಆರ್ ಆರ್ ನಗರ ಪೊಲೀಸರು ಕೈಗೆತ್ತುಕೊಂಡಿದ್ದಾರೆ.
ಇದನ್ನೂ ಓದಿ: Drone Prathap: ಪ್ರೀತಿಯ ʻಪ್ರತುʼ ಕಾಮಿಡಿಗೆ ಮಹಿಳಾ ಮಣಿಗಳು ಫಿದಾ; ಡೈಲಾಗ್ ಹೇಳಲು ಹರಸಾಹಸ!
ತನಿಖೆಯ ಮೊದಲ ಹಂತವಾಗಿ ಪೊಲೀಸರು ಡ್ರೋನ್ ಪ್ರತಾಪ್ ಸ್ಟಾರ್ಟಪ್ ಕಂಪನಿ `ಡ್ರೋನಾರ್ಕ್ ಏರೋಸ್ಪೇಸ್ ಪ್ರೈ.ಲಿ. ನೈಜ್ಯತೆ ಪತ್ತೆ ಕಾರ್ಯ ಮಾಡಲಿದ್ದಾರೆ. ರಿಜಿಸ್ಟರ್ ಆಫ್ ಕಂಪನೀಸ್ ಸಂಸ್ಥೆಗೆ ಪೊಲೀಸರು ಪತ್ರ ಬರೆದಿದ್ದಾರೆ. ಕಂಪನಿ ಮೂಲಕ ರೈತರಿಗೆ ವಂಚನ ಮಾಡುತ್ತಿರುವ ಆರೋಪ ಕೇಳಿ ಬಂದಿತ್ತು. ಡ್ರೋನ್ ಮಾರಾಟ ಮಾಡುವುದಾಗಿ ಹಣ ಪಡೆದು ವಂಚನೆ ಆರೋಪ ಕೇಳಿ ಬಂದಿತ್ತು. ಒಂದು ವೇಳೆ ಡ್ರೋನ್ ಪ್ರತಾಪ್ ನಡೆಸುತ್ತಿರುವ ಸ್ಟಾರ್ಟ್ ಅಪ್ ಕಂಪನಿ ನಕಲಿ ಎಂದು ಬೆಳಕಿಗೆ ಬಂದರೆ ವಂಚನೆ ಆರೋಪದಲ್ಲಿ ಎಫ್ಐಆರ್ ಮಾಡಲು ಚಿಂತನೆ ನಡೆಸಲಾಗಿದೆ ಎನ್ನಲಾಗಿದೆ. ಇನ್ನೊಂದು ಕಡೆ ಬಿಬಿಎಂಪಿ ಅಧಿಕಾರಿ (BBMP Officer) ಪ್ರಯಾಗ್ ಮಾನನಷ್ಟ ಮೊಕದ್ದಮೆ ಹೂಡಿದ್ದರು.
ಇದನ್ನೂ ಓದಿ: Drone Prathap: ಮಲೆ ಮಹದೇಶ್ವರ ಬೆಟ್ಟದಲ್ಲಿ ಡ್ರೋನ್ ಪ್ರತಾಪ್ ನೋಡಲು ಮುಗಿಬಿದ್ದ ಫ್ಯಾನ್ಸ್!
ಇನ್ನು ಪ್ರತಾಪ್ ವಿರುದ್ಧ ಮಂಡ್ಯ ಮೂಲದ ಚಂದನ್ ಕುಮಾರ್ ಗೌಡ ಜೆಡಿಎಸ್‌ಯಿಂದ ಜಿಲ್ಲಾ ಪಂಚಾಯತ್ ಟಿಕೆಟ್ ಕೊಡಿಸುವುದಾಗಿ 2 ಲಕ್ಷ ರೂ. ಹಣ ಪಡೆದಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡದ್ದರು.