Site icon Vistara News

BBK SEASON 10: ಕಾರ್ತಿಕ್‌ನಂತಹ ಬಾಯ್‌ಫ್ರೆಂಡ್ ಬೇಡ, ವಿನಯ್‌ ಸ್ವೀಟ್‌ ಎಂದ ಸಂಗೀತಾ!

Don't want a boyfriend like Karthik Vinay is sweet says Sangeetha

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10 (BBK SEASON 10 ) ಏಳನೇ ವಾರಕ್ಕೆ ಕಾಲಿಟ್ಟಿದೆ. ಕೆಲವು ದಿನಗಳಿಂದ ಸಂಗೀತಾ ಹಾಗೂ ಕಾರ್ತಿಕ್‌ ಅವರ ಬಾಂಡಿಂಗ್‌ ಅಷ್ಟೇನೂ ಸರಿಯಾಗಿಲ್ಲ. ಇಬ್ಬರ ಮಧ್ಯೆ ವೈಮನಸ್ಸು ಹೆಚ್ಚಾಗುತ್ತಿದೆ. ಸಂಗೀತಾ ಅವರು ಜಗಳವಾಡಿಕೊಂಡು ಮನೆಯಿಂದ ಹೊರಗೆ ಬರುವ ಮಟ್ಟಿಗೆ ಅವರಿಬ್ಬರ ಜಗಳ ತಾರಕಕ್ಕೇರಿತ್ತು. ‘ಬಿಗ್ ಬಾಸ್‌ ಕನ್ನಡ 10’ ಕಾರ್ಯಕ್ರಮದ ಆರಂಭದಲ್ಲಿ ಕಾರ್ತಿಕ್ – ಸಂಗೀತಾ – ತನಿಷಾ ಮಧ್ಯೆ ಒಳ್ಳೆಯ ಸ್ನೇಹ, ಬಾಂಡಿಂಗ್ ಇತ್ತು. ಇದೀಗ ಮೂವರ ನಡುವಿನ ಗೆಳೆತನ ಮುರಿದುಬಿದ್ದಿದೆ.

ಇದೀಗ ಸಂಗೀತಾ ಅವರು ನಮ್ರತಾ ಹಾಗೂ ಸ್ನೇಹಿತ್‌ ಮುಂದೆ, ಕಾರ್ತಿಕ್‌ನಂಥ ಬಾಯ್‌ಫ್ರೆಂಡ್ ಇರುವ ಬಗ್ಗೆ ನಾನು ಎಂದಿಗೂ ಯೋಚಿಸುವುದಿಲ್ಲ ಎಂದು ಹೇಳಿದ್ದಾರೆ. ನಮ್ರತಾ ಹಾಗೂ ಸ್ನೇಹಿತ್‌ ಜತೆ ಮಾತನಾಡುವಾಗ ತನಿಷಾ ತುಂಬಾ ಇರಿಟೇಟಿಂಗ್‌ ಎಂದು ಹೇಳಿದ್ದಾರೆ.

ಸಂಗೀತಾ ಮಾತನಾಡಿ ʻʻನಾನು ನಿಜ ಹೇಳಬೇಕು ಅಂದರೆ, ನನಗೆ ತನಿಷಾ ತುಂಬಾ ಇರಿಟೇಟಿಂಗ್ ಅನ್ಸುತ್ತೆ. ಅವರು ಬೇರೆಯವರ ಜತೆ ಜಗಳ ಆಡುವಾಗಲೂ ನನಗೆ ಅಗ್ಲಿ ಅನ್ಸುತ್ತೆ. ನಮ್ರತಾ – ತನಿಷಾ ನೀವು ಅವತ್ತು ಜಗಳ ಆಡಿದ್ದು ನನಗೆ ಅಗ್ಲಿ ಅನ್ಸಿತ್ತು. ಅದು ಬಿಟ್ಟು ಬೇರೆ ಯಾವುದೂ ನಿಮ್ಮದು ಅಗ್ಲಿ ಅನಿಸಲಿಲ್ಲ. ನಮ್ರತಾ ಬೇರೆ ಕಡೆಯೆಲ್ಲಾ ಸ್ವಲ್ಪ ಸ್ಟ್ಯಾಂಡರ್ಡ್‌ ಆಗಿ ಫೈಟ್ ಮಾಡಿದ್ದೀರಾʼʼಎಂದರು. ʻʻಕಾರ್ತಿಕ್‌ದು ತೀರಾ ಅಗ್ಲಿ ಅನ್ಸುತ್ತೆ. ಹಾಗೇ ತನಿಷಾದೂ ಕೂಡ ’ಜಗಳ ಮಾಡುವಾಗ ನೀವು ತುಂಬಾ ಅಗ್ಲಿ ಕಾಣಿಸ್ತೀರಾ’’ ಅಂತ. 100 ವರ್ಷ ಆದ್ಮೇಲೂ ಅವರು ನನಗೆ ಬಾಯ್‌ಫ್ರೆಂಡ್ ಆಗೋದಾದರೂ.. ಇದೊಂದು ಫೇಸ್‌ನ ನೋಡಿಕೊಂಡು ನಾನು ಅವರಿಂದ ದೂರ ಹೋಗ್ತೀನಿ ಅನ್ಸುತ್ತೆʼʼಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: BBK SEASON 10: ಪ್ರೀತ್ಸೇ ನನ್ನ ಪ್ರೀತ್ಸೇ ಎಂದು ಕಾಡಿದ ಸ್ನೇಹಿತ್‌; ನಮ್ರತಾಗೆ ಪ್ರಾಣ ಸಂಕಟ!

ಇಷ್ಟೆಲ್ಲ ಆದ ಸಂಗೀತಾ ಅವರು ನಮ್ರತಾ ಜತೆ ಕ್ಲೋಸ್ ಆಗಿದ್ದಾರೆ. ಅಷ್ಟೇ ಅಲ್ಲ, ವಿನಯ್ ಜತೆ ಫ್ರೆಂಡ್​ಶಿಪ್ ಬೆಳೆಸಿಕೊಂಡಿದ್ದಾರೆ. ವಿನಯ್ ಅವರು ಸಂಗೀತಾಗೆ ಊಟ ಮಾಡಿಸಿದ್ದಾರೆ. ಅವರು ದುಃಖ ತೋಡಿಕೊಂಡಾಗ ಅದನ್ನು ಆಲಿಸಿದ್ದಾರೆ. ಹೀಗಾಗಿ, ವಿನಯ್ ಸ್ವೀಟ್ ಆಗಿ ಕಂಡಿದ್ದಾರೆ. ವಿನಯ್ ಅವರಿಗೆ ಈ ಮುಖ ಇದೆ ಎಂದು ಗೊತ್ತೇ ಇರಲಿಲ್ಲ. ಇಷ್ಟು ಸ್ವೀಟ್ ಆಗಿರುವ ವ್ಯಕ್ತಿಯನ್ನು ಬಿಗ್ ಬಾಸ್ ಮನೆಯಲ್ಲಿ ನೋಡಿರಲೇ ಇಲ್ಲ’ ಎಂದು ಸಂಗೀತಾ ನಮ್ರತಾ ಬಳಿ ಹೇಳಿದರು. ‘ನಾನು ಮೊದಲಿನಿಂದಲೂ ಅವರ ಈ ಮುಖವನ್ನು ಮಾತ್ರ ನೋಡುತ್ತಿರುವುದು’ ಎಂದರು ನಮ್ರತಾ.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version