Site icon Vistara News

BBK Season 10: ಬಾತ್‌ ರೂಮ್‌ನಲ್ಲಿ ಬಿಕ್ಕಿ ಬಿಕ್ಕಿ ಅತ್ತ ಡ್ರೋನ್‌ ಪ್ರತಾಪ್‌; ಕ್ಷಮೆ ಕೇಳಿದ ಸ್ಪರ್ಧಿಗಳು!

drone pratap cried

ಬೆಂಗಳೂರು: ಡ್ರೋನ್‌ ಪ್ರತಾಪ್‌ ಈ ಬಾರಿ ಬಿಗ್‌ ಬಾಸ್‌ ಸೀಸನ್‌ 10ರಲ್ಲಿ (BBK Season 10) ಸ್ಪರ್ಧಿಯಾಗಿದ್ದಾರೆ. ಮನೆಗೆ ಬಂದಾಗಿನಿಂದಲೂ ಕೆಲವು ಸ್ಪರ್ಧಿಗಳು ಅವರನ್ನು ಆಡಿಕೊಂಡು ನಗುವುದು, ಅಪಹಾಸ್ಯ ಮಾಡುವುದು ಮಾಡುತ್ತಲೇ ಇದ್ದಾರೆ. ಪ್ರಥಮ್‌ ಕೂಡ ಈಗಾಗಲೇ ಮನೆಯಲ್ಲಿ ತುಕಾಲಿ ಸಂತೋಷ್‌ ಅವರಿಗೆ ಈ ರೀತಿ ಅವರನ್ನು ತೇಜೋವಧೆ ಮಾಡುವುದು ಸರಿಯಲ್ಲ ಎಂದು ವಾರ್ನಿಂಗ್‌ ಕೂಡ ಕೊಟ್ಟಿದ್ದಾರೆ. ಆದರೆ ಮನೆಯಲ್ಲಿ ಪದೇ ಪದೆ ಇಂತಹ ಸನ್ನಿವೇಶಗಳು ಮರುಕಳಿಸುತ್ತಿದ್ದು, ಡ್ರೋನ್‌ ಪ್ರತಾಪ್‌ ಬಾತ್‌ರೂಮ್‌ನಲ್ಲಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

ರೊಟ್ಟಿ ಗಲಾಟೆಯಲ್ಲಿ ವಿನಯ್‌ ಜತೆ ಜಗಳ!

ಅಡುಗೆ ಮನೆ ಸ್ವಚ್ಛತೆಯ ಬಗ್ಗೆ ಮಾತು ಬಂದಿದ್ದು, ವಿನಯ್‌ ಕೋಪದಲ್ಲಿ ʻʻನಿನ್ನ ಡ್ರೋನ್ ರೆಕ್ಕೆ ಪುಕ್ಕ ಕಿತ್ತಾಕ್ತೀನಿʼʼ ಎಂದು ಡ್ರೋನ್‌ ಪ್ರತಾಪ್‌ಗೆ ಹೇಳಿದ್ದಾರೆ. ಕಾರ್ತಿಕ್‌ ಗೌಡ ಅವರು ಮನೆಯ ಸದಸ್ಯರಿಗೆ ಅಡುಗೆ ಮನೆಯಲ್ಲಿ ಸ್ವಚ್ಛತೆ ಬಗ್ಗೆ ನಿಮಗೇನಾದರು ಸಮಸ್ಯೆನಾ? ಎಂದು ಕೇಳಿದ್ದಾರೆ. ಆಗ ಸಿರಿ ಅವರು ಯಾರು ಹೇಳಿದ್ದು? ಎಂದು ಕೇಳಿದ್ದಾರೆ. ಡ್ರೋನ್‌ ಪ್ರತಾಪ್‌ ಅವರು ವಿನಯ್‌ ಹೇಳಿರುವುದಾಗಿ ಅಂದರು. ಅಷ್ಟೇ ಅಲ್ಲದೇ ನೀವೇನು ಅಡುಗೆ ಮಾಡುತ್ತೀರಾ ಎಂಬುದು ನಮಗೆ ಗೊತ್ತು ಎಂದು ಅವರು ಹೇಳಿದರು ಎಂದರು. ವಿನಯ್‌ ಈ ಮಾತು ಕೇಳಿದ ಕೂಡಲೇ ಸಿಟ್ಟಗಿದ್ದಾರೆ. ವಿನಯ್‌ ಅವರು ಪ್ರತಾಪ್‌ಗೆ ʻʻನಾನು ಕಣ್ಣಲ್ಲಿ ಕಣ್ಣು ಇಟ್ಟು ಮುಖದ ಮೇಲೆ ಹೇಳುತ್ತೇನೆ. ಹಿಂದೆ ಮಾತನಾಡಲ್ಲ. ಗಲೀಜಾಗಿ ಮಾಡ್ತಾರೆ ಎನ್ನುವ ರೀತಿಯಲ್ಲಾದ್ರೂ ನಾನು ಹೇಳಿದ್ದೇನಾ? ನಿಮ್ಮದು ತಪ್ಪಿದೆ. ನಿನ್ನ ಡ್ರೋನ್ ರೆಕ್ಕೆ ಪುಕ್ಕ ಕಿತ್ತಾಕ್ತೀನಿʼʼ ಎಂದು ವಿನಯ್‌ ಅವರು ಪ್ರತಾಪ್‌ಗೆ ಖಡಕ್‌ ವಾರ್ನಿಂಗ್‌ ಮಾಡಿದ್ದಾರೆ.

ಹಿಂದಿನಿಂದ ನಕ್ಕ ತುಕಾಲಿ ಸಂತೋಷ್‌, ಗೌರವ ಕೊಡಿ ಎಂದ ಪ್ರತಾಪ್‌!

ಇವೆರಡರ ಮಧ್ಯೆ ತುಕಾಲಿ ಸಂತು.. ಡ್ರೋನ್ ಪ್ರತಾಪ್ ಬೆನ್ನ ಹಿಂದೆ ಆಡಿಕೊಂಡು ನಗುತ್ತಿದ್ದರು. ಪ್ರತಾಪ್‌ ಕೂಡ ತುಕಾಲಿ ಸಂತೋಷ್‌ಗೆ ʻʻನಾನು ಎಲ್ಲರಿಗೂ ಗೌರವ ಕೊಟ್ಟು ಮಾತುನಾಡುತ್ತೇನೆ. ನೀವು ಹೇಗೆ ಮಾತನಾಡುತ್ತೀರಾ ಎನ್ನುವುದು ನಿಮಗೆ ಬಿಟ್ಟಿದ್ದುʼʼ ಎಂದಿದ್ದಾರೆ.. ತುಕಾಲಿ ಸಂತೋಷ್‌ ಇದಾದ ಬಳಿಕವೂ ಮತ್ತೆ ವ್ಯಂಗ್ಯ ಮಾತುಗಳನ್ನು ಹೇಳಿದ್ದಾರೆ. ʻʻಪ್ರತಾಪ್‌ ಬಿಗ್‌ ಬಾಸ್‌ ಆದ ಮೇಲೆ ಮೆಜೆಸ್ಟಿಕ್, ಯಶವಂತಪುರ, ಹೆಬ್ಬಾಳ ಫ್ಲೈ ಓವರ್‌ನಲ್ಲಿ ಸಿಗ್ತಾನೆ. 100 ರೂಪಾಯಿಗೆ 3 ಡ್ರೋನ್ ಅಂತ ಮಾರುತ್ತಿರುತ್ತಾನೆʼʼ ಎಂದು ವರ್ತುರ್‌ ಸಂತೋಷ್‌ ಜತೆ ನಗುತ್ತಾರೆ ತುಕಾಲಿ ಸಂತೋಷ್‌.

ಇದನ್ನೂ ಓದಿ: BBK Season 10: ಇಶಾನಿ ಕಂಡು  ಮೈಕಲ್ ಕ್ಲೀನ್‌ ಬೋಲ್ಡ್‌; ಜೋಡಿ ಮಾತುಕತೆ ಏನಾಗಿತ್ತು?

ಇವೆಲ್ಲ ಆದ ಬಳಿಕ ಬಾತ್‌ರೂಮ್‌ನಲ್ಲಿ ಒಬ್ಬರೇ ಡ್ರೋನ್‌ ಪ್ರತಾಪ್‌ ಕೂತಿರುತ್ತಾರೆ. ಬಳಿಕ ಬಾತ್‌ರೂಮ್‌ನಲ್ಲಿ ಬಿಕ್ಕಿ ಬಿಕ್ಕಿ ಅಳುತ್ತಾರೆ. ಸಂಗೀತಾ ಶೃಂಗೇರಿ ಹಾಗೂ ನಮ್ರತಾ ಗೌಡ ಅವರನ್ನು ಸಮಾಧಾನ ಮಾಡುತ್ತಾರೆ. ಅಲ್ಲೇ ಇದ್ದ ರಕ್ಷಕ್‌ ಕೂಡ ಕ್ಯಾಪ್ಟನ್‌ ಸ್ನೇಹಿತ್‌ ಬಳಿ ʻʻನಮ್ಮಲ್ಲೂ ಕೆಲವು ತಪ್ಪಿದೆ. ಆಚೆಯಲ್ಲಿ ಆಗಿರುವುದನ್ನು ಮಾತನಾಡುವುದು ತಪ್ಪು. ಇಲ್ಲಿ ಒಳಗೆ ಬಂದ ಮೇಲೆ ನಾವೆಲ್ಲ ಒಂದೇʼʼ ಎಂದು ಹೇಳತ್ತಾರೆ. ಇದಾದ ಬಳಿಕ ಸ್ನೇಹಿತ್‌ ಕೂಡ ಪ್ರತಾಪ್‌ ಅವರಲ್ಲಿ ಕ್ಷಮೆ ಕೇಳುತ್ತಾರೆ.

ಸ್ನೇಹಿತ್‌ ಕೂಡ ಡ್ರೋನ್‌ ಅವರಿಗೆ ಡೋಂಗಿ ಎಂದಿದ್ದರು. ʻʻನಾನು ನಿಮ್ಮಲ್ಲಿ ಕ್ಷಮೆ ಕೇಳುತ್ತೇನೆ. Bully ಮಾಡ್ತಿದ್ದೀವಿ ಅಂತ. ನಾವೆಲ್ಲಾ ಸೇರಿಕೊಂಡು ನಿಮ್ಮನ್ನ ಕಾರ್ನರ್ ಮಾಡಿದ್ದೀವಿʼʼ ಎಂದು ಸ್ನೇಹಿತ್‌ ಕ್ಷಮೆ ಯಾಚಿಸಿದರು.

ಇದಾದ ಬಳಿಕ ನಮೃತಾ ಗೌಡ ಮನೆಯ ಉಳಿಸ ಸದಸ್ಯರಲ್ಲಿ ಈ ಬಗ್ಗೆ ಮನವಿ ಮಾಡಿದರು. ʻʻಇನ್ಮೇಲೆ ನಾವು ಡ್ರೋನ್‌ ಪ್ರತಾಪ್‌ ಅವರ ಕಾಲೆಳೆಯುವುದು ಬೇಡ. ನಾವೆಲ್ಲಾ ತುಂಬಾ ಟಾರ್ಗೆಟ್ ಮಾಡಿದ್ದೀವಿ. ಇನ್ನೂ ಡಿಪ್ರೆಶನ್‌ಗೆ ಹೋಗ್ತಿದ್ದಾರೆʼʼ ಎಂದು ಹೇಳಿದರು.

Exit mobile version