Site icon Vistara News

BBK Season 10: ಈ ವಾರದ ʻಉತ್ತಮʼ ಪ್ರತಾಪ್; ಜೈಲು ಸೇರಿದ ಇಶಾನಿ, ನೀತು!

drone prathap Eshani and neethu bbk 10

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10ರ (BBK Season 10) ಐದನೇ ವಾರ ಡ್ರೋನ್‌ ಪ್ರತಾಪ್‌ ಅತ್ಯುತ್ತಮ ಪಾಲಾದರೆ ಇಶಾನಿ ಹಾಗೂ ನೀತು ಕಳಪೆ ಪಟ್ಟವನ್ನು ಅಲಂಕರಿಸಿ ಜೈಲು ಪಾಲಾದರು. ಈ ಬಾರಿ ಇಬ್ಬರು ಒಂದೇ ಬಾರಿಗೆ ಜೈಲು ಸೇರಿದ್ದಾರೆ. ಪ್ರತಾಪ್‌ ಅವರ ಈ ವಾರದ ಒಟ್ಟೂ ಟೀಂ ಕ್ಯಾಪ್ಟನ್ಸಿ ಬಗ್ಗೆ ಸ್ಪರ್ಧಿಗಳು ಹಾಡಿ ಹೊಗಳಿದ್ದಾರೆ. ನೀತು ಅವರು ಪಕ್ಷಪಾತ, ಹಾಗೂ ಇಶಾನಿ ಅವರು ಉಸ್ತುವಾರಿ ವಹಿಸಿಕೊಂಡಾಗ ಸರಿಯಾದ ನಿರ್ಧಾರ ತೆಗೆದುಕೊಳ್ಳದೇ ಇರುವುದಕ್ಕೆ ಸ್ಪರ್ಧಿಗಳು ಅಸಮಾಧಾನ ಹೊರಹಾಕಿದರು.

ʻಪ್ರತಾಪʼ ತೋರಿಸಿದ ಡ್ರೋನ್‌

ಈ ವಾರ ಗೇಮ್‌ನಲ್ಲಿ ಸ್ಟ್ರಾಟೆಜಿ ಬಳಸಿಕೊಂಡು ಸದಸ್ಯರನ್ನು ಕನ್ವಿನ್ಸ್‌ ಮಾಡುವಲ್ಲಿ ಡ್ರೋನ್‌ ಗೆದ್ದಿದ್ದರು. ಅಷ್ಟೇ ಅಲ್ಲದೇ ತಂಡದ ಕ್ಯಾಪ್ಟನ್ ಸಹ ಆಗಿದ್ದರು. ಮಾತ್ರವಲ್ಲ ಬ್ಯಾಕ್‌ ಟು ಬ್ಯಾಕ್‌ ಗೇಮ್ಸ್‌ ಗೆದ್ದು ಬೀಗಿದ್ದರು. ಸಿರಿ ಟೀಮ್‌ ʻವಜ್ರಕಾಯʼ ಆದರೆ ಪ್ರತಾಪ್‌ ಅವರದ್ದು ʻಗಂಧದ ಗುಡಿ ಟೀಂʼ. ಪ್ರತೀ ಬಾರಿ ಟ್ರೋನ್‌ ಪ್ರತಾಪ್‌ ಟೀಂ ವಿನ್‌ ಆಯ್ತು. ಹೀಗಾಗಿ ಡ್ರೋನ್‌ ಪ್ರತಾಪ್‌ ತಮ್ಮ ಟೀಂ ಕನ್ವಿನ್ಸ್‌ ಮಾಡುವ ರೀತಿ, ಹಾಗೂ ಉಸ್ತುವಾರಿ ವೇಳೆ ಡ್ರೋನ್ ಪ್ರತಾಪ್‌ ಫೇರ್‌ ಆಗಿ ಆಟವಾಡಿದ ರೀತಿ ಇತರೆ ಸ್ಪರ್ಧಿಗಳಿಗೆ ಇಷ್ಟವಾಗಿದೆ. ಹೀಗಾಗಿ ಡ್ರೋನ್ ಪ್ರತಾಪ್ ಅವರಿಗೆ ‘ಬೆಸ್ಟ್ ಪರ್ಫಾಮೆನ್ಸ್’ ಮೆಡಲ್ ಲಭಿಸಿದೆ.

ಡ್ರೋನ್ ಪ್ರತಾಪ್‌ಗೆ ಸ್ನೇಹಿತ್, ಕಾರ್ತಿಕ್, ವರ್ತೂರು ಸಂತೋಷ್, ನೀತು, ಮೈಕಲ್ ವೋಟ್‌ ಹಾಕಿದರು. ಅತಿ ಹೆಚ್ಚು ಮತಗಳನ್ನ ಪಡೆದ ಡ್ರೋನ್ ಪ್ರತಾಪ್ ‘ಉತ್ತಮ’ ಪಟ್ಟ ಪಡೆದರು. ವರ್ತೂರ್‌ ಸಂತೋಷ್‌ ಕೂಡ ತುಕಾಲಿ ಜತೆ ಡ್ರೋನ್‌ ಬಗ್ಗೆ ಎಷ್ಟೇ ಕೆಟ್ಟ ಅಭಿಪ್ರಾಯ ಹಂಚಿಕೊಂಡಿದ್ದರೂ ಉತ್ತಮ ನೀಡಿದರು, ಹಾಗೇ ಡ್ರೋನ್‌ ಕೂಡ ವರ್ತೂರ್‌ಗೆ ಉತ್ತಮ ಎಂದು ವೋಟ್‌ ಮಾಡಿದರು.

ವಿನಯ್‌ ಅವರು ಮೈಕಲ್‌ಗೆ ಉತ್ತಮ ನೀಡಿದರೆ, ಸಿರಿಗೆ ನಮ್ರತಾ, ಇಶಾನಿ ಉತ್ತಮ ವೋಟ್‌ ಕೊಟ್ಟರು. ಭಾಗ್ಯಶ್ರೀಗೆ ಸಂಗೀತಾ ಉತ್ತಮ ಪಟ್ಟ ಕೊಟ್ಟರು.ವರ್ತೂರು ಸಂತೋಷ್ ಅವರಿಗೆ ತುಕಾಲಿ ಸಂತು, ಡ್ರೋನ್ ಪ್ರತಾಪ್ ವೋಟ್‌ ಹಾಕಿದರು. ಈ ವಾರ ಕಾರ್ತಿಕ್ ಉತ್ತಮ ಎಂದರು ತನಿಷಾ.

ಇದನ್ನೂ ಓದಿ: BBK Season 10: ಕ್ಯಾಪ್ಟನ್‌ ಆದ ಮೈಕಲ್‌; ಬಿಕ್ಕಿ ಬಿಕ್ಕಿ ಅತ್ತ ಸಂಗೀತಾ!

ಜೈಲಿಗೆ ಸೇರಿದ ಇಶಾನಿ, ನೀತು

ನೀತು ಬಗ್ಗೆ ಇಡೀ ವಿನಯ್‌ ತಂಡ ಕಳಪೆ ನೀಡಿತು. ವಿನಯ್, ನಮ್ರತಾ, ಸ್ನೇಹಿತ್, ಇಶಾನಿ, ತುಕಾಲಿ ಸಂತು, ಸಿರಿ, ಮೈಕಲ್ ‘ಕಳಪೆ’ ಪಟ್ಟ ಕೊಟ್ಟರು. ಇದಾದ ಬಳಿಕ ನಮ್ರತಾ ಜತೆ ನೀತು ವಾಗ್ವಾದ ಕೂಡ ಮಾಡಿದರು. ಇಶಾನಿಗೂ ಕೆಲವರು ಕಳಪೆ ನೀಡಿದರು. ಬಲೂನ್‌ ಟಾಸ್ಕ್‌ನಲ್ಲಿ ಉಸ್ತುವಾರಿ ವಹಿಸುವಾಗ ನಿರ್ಧಾರಗಳನ್ನು ಸರಿಯಾಗಿ ತೆಗೆದುಕೊಳ್ಳದೇ ಇದ್ದ ಕಾರಣ ಇಶಾನಿಗೆ ಕಳಪೆ ವೋಟ್‌ ಮಾಡಿದರು.

ಇದನ್ನೂ ಓದಿ: BBK Season 10: ಕ್ಯಾಪ್ಟನ್‌ ಆದ ಮೈಕಲ್‌; ಬಿಕ್ಕಿ ಬಿಕ್ಕಿ ಅತ್ತ ಸಂಗೀತಾ!

ಡ್ರೋನ್‌ ಪ್ರತಾಪ್‌ ಮೆಡಲ್‌ ಅನ್ನು ಅಪ್ಪ, ಅಮ್ಮ, ತಂಗಿ, ತಾತನಿಗೆ ಡೆಡಿಕೇಟ್ ಮಾಡುತ್ತೇನೆ ಎಂದರು. ಸುದೀಪ್‌ ಅರಿಗೂ ಧನ್ಯವಾದ ಸೂಚಿಸಿದರು. ಈ ವಾರ ನಮ್ರತಾ, ಸ್ನೇಹಿತ್, ತುಕಾಲಿ ಸಂತು, ವರ್ತೂರು ಸಂತೋಷ್, ನೀತು, ಇಶಾನಿ ಮತ್ತು ಕಾರ್ತಿಕ್ ನಾಮಿನೇಟ್ ಆಗಿದ್ದಾರೆ.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version