Site icon Vistara News

BBK SEASON 10: ಬೆಡ್‌ಶೀಟ್‌ ವಿಚಾರ; ರಕ್ಷಕ್‌ಗೆ ಮಕ್ಕಳ ತರ ಆಡಬೇಡಿ ಎಂದ ಪ್ರತಾಪ್‌!

Drone Prathap Bullet Rakshak clash In Bigg Boss House

ಬೆಂಗಳೂರು: ಬಿಗ್‌ಬಾಸ್‌ (BBK SEASON 10) ಮನೆಯಿಂದ ಹೊರಹೋದ ಸ್ಪರ್ಧಿಗಳೆಲ್ಲ ಮತ್ತೆ ಮನೆಯೊಳಗೆ ಎಂಟ್ರಿ ಕೊಟ್ಟಿದ್ದಾರೆ. ಕೆಲವು ಮಾಜಿ ಸ್ಪರ್ಧಿಗಳು ಉಳಿದ ಸದಸ್ಯರಿಗೆ ಹೊರಗಡೆ ನಡೆಯುತ್ತಿರುವ ವಿಚಾರಗಳನ್ನು ತಿಳಿಸುತ್ತಿದ್ದರೆ, ಇನ್ನು ಕೆಲವು ಸ್ಪರ್ಧಿಗಳು ಟಾರ್ಗೆಟ್‌ ಕೂಡ ಮಾಡುತ್ತಿದ್ದಾರೆ. ರಕ್ಷಕ್‌ ಬುಲೆಟ್‌ ಮುಂಚಿನಿಂದಲೂ ಪ್ರತಾಪ್‌ ಅವರನ್ನು ಟಾರ್ಗೆಟ್‌ ಮಾಡುತ್ತಲೇ ಇದ್ದರು. ಇದೀಗ ಮನೆಯೊಳಗೆ ಬಂದ ಕೂಡಲೇ ಪ್ರತಾಪ್‌ ಅವರಿಗೆ ಟಾರ್ಚರ್‌ ಕೊಟ್ಟಿದ್ದಾರೆ.

ಪ್ರತಾಪ್‌ ಹೇಳಿಕೆ

ಈ ಮುಂಚೆ ಡ್ರೋನ್‌ ಪ್ರತಾಪ್‌ ಅವರು ವಿನಯ್‌ ಬಗ್ಗೆ ʻʻʻಯಾರೆಲ್ಲ ವಿನಯ್‌ ಅವರ ಜತೆಯಲ್ಲಿ ಇದ್ದರೋ ಅವರೆಲ್ಲಾ ಮನೆಗೆ ಹೋದರು. ಮನೆಗೆ ಹೋದವರೆಲ್ಲರ ಬೆಡ್‌ಶೀಟ್‌ ವಿನಯ್‌ ಅವರ ಬೆಡ್‌ಗೆ ಸೇರುತ್ತಿದೆ. ಜತೆಯಲ್ಲಿದ್ದವರ ಸರಿ ತಪ್ಪುಗಳನ್ನ ವಿನಯ್‌ ಹೇಳಲಿಲ್ಲ. ಸರಿ ಎಂದುಕೊಂಡೇ ಜತೆಯಲ್ಲಿ ಇದ್ದವರೆಲ್ಲಾ ಮನೆಗೆ ಹೋದರು’’ ಎಂದು ಡ್ರೋನ್ ಪ್ರತಾಪ್‌ ಹೇಳಿದ್ದರು. ಇದಾದ ಬಳಿಕ ರಕ್ಷಕ್‌ ಅವರು ತಮ್ಮ ಇನ್‌ಸ್ಟಾದಲ್ಲಿ ಈ ಬಗ್ಗೆ ʻʻಎಲ್ಲರಿಗೂ ಸಮಸ್ಕಾರ. ಯಾವುದೇ ಗುಂಪುಗಾರಿಕೆ ಮಾಡೋಕೆ ಅಥವಾ ತಂಡ ಕಟ್ಟೋಕೆ ಬಿಗ್​ ಬಾಸ್ ಮನೆ ಒಳಗೆ ಹೋದೋನಲ್ಲ. ಜನರ ಪ್ರೀತಿ ಮತ್ತೆ ಜನರ ವಿಶ್ವಾಸ ಗಳಿಸೋಕೆ ಅಂತ ಹೋಗಿದ್ದು. ನನ್ನ ಬೆಡ್​ಶೀಟ್ ನನ್ನ ಹತ್ರ ಜೋಪಾನವಾಗಿ ಇದೆ. ನಿಮ್ಮ ಬೆಡ್​ ಶೀಟ್ ಜೋಪಾನ ಮಾಡಿಕೊಳ್ಳಿʼʼ ಎಚ್ಚರ ಎಂದು ಬರೆದುಕೊಂಡಿದ್ದರು.

ರಕ್ಷಕ್‌ ಕ್ಯಾತೆ

ಇದೀಗ ಮನೆಗೆ ಬರ ಬರುತ್ತಲೇ ಈ ಬಗ್ಗೆ ರಕ್ಷಕ್‌ ಕ್ಯಾತೆ ತೆಗೆದಿದ್ದಾರೆ. ರಾತ್ರಿ ಎಲ್ಲರೂ ಮಲಗುವರಿದ್ದರು. ಈ ವೇಳೆ ಪ್ರತಾಪ್ ಅವರ ಬಳಿ ಬಂದ ರಕ್ಷಕ್, ‘ನನ್ನ ಬೆಡ್​ಶೀಟ್ ನೀಡಿ, ನನ್ನ ಬೆಡ್​ಶೀಟ್ ನೀಡಿ’ ಎಂದು ಕಾಡಿಸೋಕೆ ಶುರು ಮಾಡಿದರು. ಆಗ ಪ್ರತಾಪ್ ಅವರು ಕೂಲ್ ಆಗಿಯೇ ‘ಯಾವ ಬೆಡ್​ಶೀಟ್’ ಎಂದು ಪ್ರತಾಪ್ ಪ್ರಶ್ನೆ ಮಾಡಿದರು. ‘ಹೇಳಿಕೆ ನೀಡೋ ಮೊದಲು ಯೋಚನೆ ಮಾಡಬೇಕು’ ಎಂದು ರಕ್ಷಕ್ ಕೂಗಿದ್ದಾರೆ. ಆಗ ಪ್ರತಾಪ್‌ ಕೂಡ ರಕ್ಷಕ್‌ಗೆ ʻಮಕ್ಕಳ ತರ ಆಡಬೇಡಿ. ಹೋಗಿ ಸುಮ್ಮನೆ ಮಲಗಿಕೊಳ್ಳಿʼ ಎಂದು ಹೇಳಿದ್ದಾರೆ. ಇದಾದ ಮರುದಿನ ಸ್ನೇಹಿತ್ ಅವರು ಈ ವಿಚಾರವನ್ನು ಮೈಕಲ್ ಬಳಿ ಚರ್ಚಿಸಿದ್ದಾರೆ. ‘ರಕ್ಷಕ್ ಹೋಗಿ ಪ್ರತಾಪ್​ಗೆ ಟಾರ್ಚರ್ ಮಾಡಿದ್ದು ನನಗೆ ಸರಿ ಎನಿಸಲಿಲ್ಲ’ ಎಂದಿದ್ದಾರೆ.

ಇದನ್ನೂ ಓದಿ: BBK SEASON 10:  ಕಾರ್ತಿಕ್​ಗೆ ಹೊರಗೆ ಹುಡುಗಿ ಇದ್ದಾಳೆ; ಸ್ನೇಹಿತ್ ಮುಂದೆ ಕಣ್ಣೀರು ಸುರಿಸಿದ ನಮ್ರತಾ!

ರಕ್ಷಕ್ ಬುಲೆಟ್ ಬಿಗ್​ಬಾಸ್ ಮನೆಯಿಂದ ಹೊರಗೆ ಬಂದಿದ್ದರೂ ಅವರು ಬಿಗ್ ಬಾಸ್ ಶೋ ನೋಡುತ್ತಾ ಪ್ರತಾಪ್ ಮಾತುಗಳಿಗೆ ತಿರುಗೇಟು ಕೊಡುತ್ತಲೇ ಇದ್ದರು. ಇದೀಗ ಮನೆಯಲ್ಲಿ ಕೂಡ ಪ್ರತಾಪ್‌ ಅವರಿಗೆ ಕ್ಲಾಸ್‌ ತೆಗೆದುಕೊಂಡಿದ್ದಾರೆ.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version