Site icon Vistara News

BBK SEASON 10: ಮನೆಗೆ ಮರಳುತ್ತಿದ್ದಂತೆ ದೇವರಿಗೆ ಊದಿನ ಕಡ್ಡಿ ಹಚ್ಚಿ ಪೂಜೆ ಮಾಡಿದ ಡ್ರೋನ್‌ ಪ್ರತಾಪ್‌!

Drone Prathap Came Back To Bigg Boss after discharge

ಆಸ್ಪತ್ರೆಗೆ ದಾಖಲಾಗಿದ್ದ ಡ್ರೋನ್‌ ಪ್ರತಾಪ್‌ ಇದೀಗ ಮತ್ತೆ ವಾಪಸ್‌ (BBK SEASON 10) ಆಗಿದ್ದಾರೆ. ಪ್ರತಾಪ್ ಅವರು ಕಳೆದ ಎರಡು ದಿನಗಳಿಂದ ಅವರು ಸರಿಯಾಗಿ ಆಹಾರ ಸೇವಿಸಿರಲಿಲ್ಲ ಎನ್ನಲಾಗಿತ್ತು. ಫುಡ್ ಪಾಯ್ಸನ್ ಆಗಿದೆ ಎನ್ನಲಾಗಿತ್ತು. ಇದಕ್ಕೆ ವೈದ್ಯರು ಸ್ಪಷ್ಟನೆ ನೀಡಿದ್ದರು.

ಮನೆಗೆ ಬಂದಿರುವ ಪ್ರೋಮೊವನ್ನು ಕಲರ್ಸ್‌ ಕನ್ನಡ ಶೇರ್‌ ಮಾಡಿಕೊಂಡಿದೆ. ಡ್ರೋನ್‌ ಪ್ರತಾಪ್‌ ಬರುತ್ತಲೇ ನಮ್ರತಾ, ಸಂಗೀತಾ ಅವರು ಅಪ್ಪಿಕೊಂಡು, ಮಾತನಾಡಿಸಿದ್ದಾರೆ.

ಸಂಗೀತಾ ಅವರು “ನಿನ್ನನ್ನು ತುಂಬ ಮಿಸ್ ಮಾಡಿಕೊಂಡೆ” ಎಂದಿದ್ದಾರೆ. ತುಕಾಲಿ ಸಂತು ಅವರು “ನೀನು ಆರಾಮಾಗಿದ್ರೆ ಅಷ್ಟೇ ಸಾಕು” ಎಂದು ಹೇಳಿದ್ದಾರೆ. ನಮ್ರತಾ ಕೂಡ ಖುಷಿ ಪಟ್ಟಿದ್ದಾರೆ.

ಪ್ರತಾಪ್‌ ಬರುತ್ತಿದ್ದಂತೆ ದೇವರಿಗೆ ಊದಿನ ಕಡ್ಡಿ ಹಚ್ಚಿ ಪೂಜೆ ಮಾಡಿದ್ದಾರೆ. ಮನೆಯವರು ಮಾತನಾಡಿಸಲು ಪ್ರಯತ್ನಿಸಿದರೂ ಪ್ರತಾಪ್ ಮಾತನಾಡಿಲ್ಲ.

ಇದನ್ನೂ ಓದಿ: BBK SEASON 10: ಈ ವಾರ ಐದು ಮಂದಿ ನಾಮಿನೇಟ್‌; ಮನೆಯಿಂದ ಹೋಗೋದು ಯಾರು?

ಪ್ರತಾಪ್ ಈ ವಾರ ನಾಮಿನೇಟ್ ಆಗಿದ್ದು, ಸೇವ್ ಆಗುತ್ತಾರಾ ಅಥವಾ ಎಲಿಮಿನೇಟ್ ಆಗುತ್ತಾರಾ ಎಂಬುದು ಈ ವಾರ ಗೊತ್ತಾಗಲಿದೆ.

Exit mobile version