Site icon Vistara News

BBK SEASON 10: ಎಲ್ಲೇ ಹೋದರೂ ನನ್ನ ಗುರುತಿಸುತ್ತಾರೆ, ಸೆಲ್ಫಿ ಕೇಳ್ತಾರೆ ಎಂದ ಪ್ರತಾಪ್ ತಂದೆ

Drone Prathap with parents

ಬೆಂಗಳೂರು: ಈ ವಾರ ಡ್ರೋನ್‌ ಪ್ರತಾಪ್‌ (BBK SEASON 10) ಅವರ ತಂದೆ ಮರಿಮಾದಯ್ಯ, ತಾಯಿ ಸವಿತಾ ಅವರು ‘ಬಿಗ್ ಬಾಸ್ ಕನ್ನಡ 10’ ಮನೆಗೆ ಬಂದಿದ್ದು, ಗೊತ್ತೇ ಇದೆ. ಮಗನಿಗೆ ಬುದ್ಧಿ ಹೇಳಿ ಮನೆಗೆ ಬಾ ಅಂತ ಕರೆದು ಮನದಲ್ಲಿರುವ ಮಾತನ್ನು ಹೊರಗಡೆ ಹಾಕಿದರು. ಸೋಷಿಯಲ್ ಮೀಡಿಯಾದಲ್ಲಿ ಕೂಡ ಈ ಬಗ್ಗೆ ಪ್ರಶಂಸೆ ವ್ಯಕ್ತವಾಗುತ್ತಿದೆ. ʻಇದೀಗ ಬಿಗ್ ಬಾಸ್​ ನಮ್ಮನ್ನು ಒಂದು ಮಾಡಿದೆʼ ಎಂದು ಪ್ರತಾಪ್ ಅವರ ತಂದೆ ಮರಿ ಮಾದಯ್ಯ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಬಿಗ್‌ ಬಾಸ್‌ಗೆ ಧನ್ಯವಾದ ಸೂಚಿಸಿದ್ದಾರೆ.

ಮರಿಮಾದಯ್ಯ ಮಾತನಾಡಿ ʻʻಬಿಗ್‌ ಬಾಸ್‌ ಅವರಿಂದ ನಾವೆಲ್ಲರೂ ಒಂದು ಆದೆವು. ಈ ಜಗತ್ತಿನಲ್ಲಿ ಏನೋ ಒಂದು ಕಳೆದುಕೊಂಡಂತೆ ಆಗಿತ್ತು. ಆದರೆ ಈಗ ಬಿಗ್‌ ಬಾಸ್‌ ನಮಗೆ ಮತ್ತೆ ಮಗ ಸಿಗುವ ಹಾಗೆ ಮಾಡಿದರು. ತಂದೆ ತಾಯಿಯಾಗಿ ನಾವು ಕೂಡ ನೋವು ಅನುಭವಿಸುತ್ತಿದ್ದೆವು. ಇದೀಗ ಇಲ್ಲಿ ನಮ್ಮ ಮಗನನ್ನು ನೋಡಿ ಸ್ವರ್ಗವೇ ಸಿಕ್ಕಿದಂತಾಯ್ತು. ಇದೀಗ ಪ್ರತಾಪ್‌ನಿಂದಾಗಿ ನಮ್ಮನ್ನು ಎಲ್ಲೇ ಹೋದರು ಗುರುತಿಸುತ್ತಾರೆ. ಯಾವುದೇ ಬಸ್‌ ಅಲ್ಲಿ ಹೋಗಲಿ, ಅಥವಾ ಯಾವುದೇ ಕಾರ್ಯಕ್ರಮಕ್ಕೆ ಹೋಗಲಿ, ನನ್ನ ಗುರುತಿಸುತ್ತಾರೆ. ನೀವು ಪ್ರತಾಪ್ ತಂದೆ ಅಲ್ಲವೇ ಎಂದು ಕೇಳುತ್ತಾರೆ. ಆಗ ಖುಷಿ ಹಾಗೂ ಹೆಮ್ಮೆ ಆಗುತ್ತದೆ. ನನ್ನ ಜತೆ ಸೆಲ್ಫಿ ತೆಗೆದುಕೊಳ್ಳುತ್ತಾರೆ.’ ಎಂದಿದ್ದಾರೆ ಮರಿ ಮಾದಯ್ಯ.

ಈ ಹಿಂದೆ ಪ್ರತಾಪ್‌ ಅವರು ತನ್ನ ಅಂತರಂಗದಲ್ಲಿ ಇದ್ದ ನೋವನ್ನು ತಾರಾ ಅವರ ಮುಂದೆ ತೆರೆದಿಟ್ಟು ಬಿಕ್ಕಿ ಬಿಕ್ಕಿ ಅತ್ತಿದ್ದರು. ʻʻನಿನ್ನ ಮಗನನ್ನು ಏಕೆ ಉಳಿಸಿದ್ದೀಯಾ. ಊಟಕ್ಕೆ ಏನಾದರೂ ಹಾಕಿ ಸಾಯಿಸಿಬಿಡು. ಏನೋ ನಾನು ದುಡ್ಡು ಮಾಡಿದ್ದೀನಿ ಎಂತೆಲ್ಲ ನನ್ನ ಸಂಬಂಧಿಕರು ಮಾತನಾಡಿದ್ರು, ನನ್ನ ಅಮ್ಮ ಎಲ್ಲಿಯೂ ಹೋಗಲ್ಲ. ಸಂಬಂಧಿಕರ ಮನೆಗೂ ಹೋಗಲ್ಲ. ಈ ಊರಲ್ಲಿ ಮನೆ ಕಟ್ಟಿದ್ದಾರೆ. ಗೃಹ ಪ್ರವೇಶಕ್ಕೆ ಕರೆದರು. ಆದರೆ, ನಾನು ಹೋಗಿಲ್ಲ. ನನ್ನ ಅಪ್ಪ, ಅಮ್ಮ, ತಂಗಿ ನಂಬರ್ ಬ್ಲಾಕ್ ಮಾಡಿದೀನಿ’ ಎಂದಿದ್ದರು.

ಇದನ್ನೂ ಓದಿ: BBK SEASON 10: ʻಕ್ಯಾಪ್ಟನ್‌ʼ ಆದ ತನಿಷಾ; ʻಜೈಲುʼ ಸೇರಿದ ವರ್ತೂರ್‌ ಸಂತೋಷ್‌!

ʻನನಗೊಬ್ಬ ತಂಗಿ ಇದ್ದಾಳೆ. ಅವಳು ಇನ್ನೂ ಮುದುವೆ ಆಗಬೇಕು. ಅದಕ್ಕಾಗಿ ನಾನು ಕಂಪನಿ ಮಾಡಿದೀನಿ. ಕಂಪನಿಯನ್ನು ಬೆಳೆಸಬೇಕಿದೆ. ಡ್ರೋನ್‌ ಮಾಡುತ್ತ ಇದ್ದೀಯಾ ಅದನ್ನೇ ಮಾಡಿಕೊಂಡು ಇರು. ಬಿಗ್‌ ಬಾಸ್‌ ಬೇಡ ಎಂದು ಮಾವನ ಮೂಲಕ ಹೇಳಿಸಿದರು. ಆದರೆ ನಾನು ಕೇಳಲಿಲ್ಲ. ಅಪ್ಪನ ಜತೆ ಮಾತನಾಡಿ ವರ್ಷಗಳೇ ಆಗಿವೆ. ಅಪ್ಪನ್ನನು ನೋಡಬೇಕು ಎನ್ನಿಸುತ್ತಿದೆʼʼಎಂದಿದ್ದರು. ಇದೀಗ ಪ್ರತಾಪ್‌ ಅವರ ತಂದೆ ತಾಯಿ ಮಗನ ಬಗ್ಗೆ ಹಮ್ಮೆಯ ಮಾತುಗಳನ್ನಾಡಿದ್ದಾರೆ.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version