ಬೆಂಗಳೂರು: ಬಿಗ್ ಬಾಸ್ ಸೀಸನ್10ರಲ್ಲಿ (BBK SEASON 10) ವಿನಯ್ ಕಳೆದೆರಡು ವಾರಗಳಿಂದ ಸೈಲೆಂಟ್ ಆಗಿದ್ದಾರೆ. ಅಗ್ರೆಸ್ಸಿವ್ ಆಗಿ ಆಡುವುದನ್ನು ಬಿಟ್ಟು ತುಂಬ ಶಾಂತ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಆದರೆ ಶನಿವಾರದ ವೀಕೆಂಡ್ ಪಂಚಾಯಿತಿಯಲ್ಲಿ ಡ್ರೋನ್ ಪ್ರತಾಪ್ ಅವರು ವಿನಯ್ ಬಗ್ಗೆ ʻʻಯಾರೆಲ್ಲ ವಿನಯ್ ಅವರ ಜತೆಯಲ್ಲಿ ಇದ್ದರೋ ಅವರೆಲ್ಲ ಮನೆಗೆ ಹೋದರುʼʼಎಂಬ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ವಿನಯ್ ಅವರಿಗೆ ಕೋಪ ತರಿಸುವಂತೆ ಮಾಡಿದೆ.
ಡ್ರೋನ್ ಪ್ರತಾಪ್ ಹೀಗೆ ಹೇಳಿದ್ದೇಕೆ?
ʻಯಾರು ಯಾವ ಪುಸ್ತಕ ಬರೆದರೆ ಸೂಕ್ತ’ ಎಂಬ ಚಟುವಟಿಕೆಯನ್ನ ಕಿಚ್ಚ ಸುದೀಪ್ ನೀಡಿದ್ದರು. ಬೇರೆಯವರನ್ನ ತುಳಿದು ಬೆಳೆಯೋದು ಹೇಗೆ?’’ ಎಂಬ ಹೆಸರಿನ ಪುಸ್ತಕವನ್ನು ವಿನಯ್ ಅವರಿಗೆ ಪ್ರತಾಪ್ ನೀಡಿದ್ದರು. ಬಳಿಕ ಕಾರಣವನ್ನು ನೀಡಿ ʻʻಯಾರೆಲ್ಲ ವಿನಯ್ ಅವರ ಜತೆಯಲ್ಲಿ ಇದ್ದರೋ ಅವರೆಲ್ಲಾ ಮನೆಗೆ ಹೋದರು. ಮನೆಗೆ ಹೋದವರೆಲ್ಲರ ಬೆಡ್‌ಶೀಟ್ ವಿನಯ್ ಅವರ ಬೆಡ್‌ಗೆ ಸೇರುತ್ತಿದೆ. ಜತೆಯಲ್ಲಿದ್ದವರ ಸರಿ ತಪ್ಪುಗಳನ್ನ ವಿನಯ್ ಹೇಳಲಿಲ್ಲ’’ ಎಂದು ಡ್ರೋನ್ ಪ್ರತಾಪ್ ಹೇಳಿದ್ದರು. ಡ್ರೋನ್ ಪ್ರತಾಪ್ ಅವರ ಈ ಮಾತನ್ನ ಕೇಳಿ ವಿನಯ್ ಸುಮ್ಮನಾಗಿದ್ದರು.
ಆದರೆ ಶನಿವಾರದ ಎಪಿಸೋಡ್ ಬಳಿಕ ವಿನಯ್ ಈ ವಿಷಯದ ಬಗ್ಗೆ ಪ್ರತಾಪ್ ಅವರಿಗೆ ಪ್ರಶ್ನೆ ಮಾಡಿದರು. ಪ್ರತಾಪ್, ‘ನಾನು ಈ ಮನೆಯಲ್ಲಿ ಏನು ನೋಡಿದ್ದೇನೆಯೋ ಅದನ್ನು ಹೇಳಿದ್ದೇನೆ’ ಎಂದರು. ʻʻಪ್ರತಾಪ್ ಅವರನ್ನು ಚೀಪ್ ಸ್ಕ್ಯಾಮರ್ ಎಂದು ವಾಗ್ದಾಳಿ ಮಾಡಿದರು. ಈ ಜಗಳ ಆದ ನಂತರ ಸುದೀಪ್ ಈ ಬಗ್ಗೆ ಪ್ರಸ್ತಾವನೆ ಮಾಡಿದರು.
ಇದನ್ನೂ ಓದಿ: BBK SEASON 10 : ದೊಡ್ಮನೆಯಿಂದ ಮೈಕಲ್ ಎಲಿಮಿನೇಟ್, ಮುಳುವಾಯ್ತು ಧಿಮಾಕು
ʻʻಇವರ ಜತೆ ಇದ್ದು, ತುಳಿದು ನಾನು ಮುಂದೆ ಹೋದೆ ಎನ್ನುವ ಪ್ರತಾಪ್ ಮಾತು ಸರಿಯಿರಲಿಲ್ಲʼ ಎಂದು ಸುದೀಪ್ ಮುಂದೆ ವಿನಯ್ ಹೇಳಿದರು. ಅಷ್ಟೇ ಅಲ್ಲ ಈ ರೀತಿಯ ಮಾತುಗಳನ್ನು ಹೇಳಿದಾಗ ನೋವಾಗುತ್ತದೆ ಎಂದು ಭಾವುಕರಾದರು. ಆದರೆ ಪ್ರತಾಪ್ ಮಾತ್ರ ತಮ್ಮ ಮಾತುಗಳಿಂದ ಹಿಂದೆ ಸರಿಯಲಿಲ್ಲ, ವಿನಯ್ ಅವರ ಪದಬಳಕೆ, ಅವರು ಎದುರಿಗಿರುವವರನ್ನು ಮಾತನಾಡಿಸುವ ರೀತಿ ಅಹಂಕಾರದಿಂದ ಕೂಡಿರುತ್ತದೆ. ಅವರು ಸಾಕಷ್ಟು ಬಾರಿ ಸ್ಪರ್ಧಿಗಳ ಬಗ್ಗೆ ಏನೇನೋ ಮಾತನಾಡಿದ್ದಾರೆ ಎಂದಿದ್ದಾರೆ. ಈ ರೀತಿ ಮಾತಿನ ಚಕಮಕಿ ಆದ ಬಳಿಕ ಶಾಂತವಾಗಿದ್ದ ವಿನಯ್ ಮತ್ತೆ ಹಳೆ ಚಾಳಿ ಮುಂದುವರಿಸಿದ್ದಾರೆ.
ಬಿಗ್ಬಾಸ್ ಜಿಯೋ ಸಿನಿಮಾಸ್ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ