Site icon Vistara News

BBK Season 10: ಅಪ್ಪನ ಧ್ವನಿ ಕೇಳಿ ಬಿಕ್ಕಿ ಬಿಕ್ಕಿ ಅತ್ತ ಡ್ರೋನ್‌ ಪ್ರತಾಪ್‌; ಜಗಳದಾಚೆ ಭಾವುಕ ಜಗತ್ತು

Drone Prathap heard his father voice cryed in house Bigg Boss emotional world

ಬೆಂಗಳೂರು: ದೀಪಾವಳಿ ಹಬ್ಬದ ಖುಷಿಗಾಗಿ ಬಿಗ್‌ಬಾಸ್‌ (BBK Season 10) ಸ್ಪರ್ಧಿಗಳಿಗೆ ಮನೆಯಡುಗೆ ಕೊಟ್ಟು ಕಳಿಸಿದ್ದರು. ಮನೆಯವರಿಂದ ಬಂದ ಪತ್ರಗಳನ್ನೂ ಕೊಟ್ಟಿದ್ದರು. ಆದರೆ ಮನೆಯಡುಗೆ ತಿಂದಷ್ಟು ಸುಲಭವಾಗಿ ಪತ್ರಗಳು ಸ್ಪರ್ಧಿಗಳ ಕೈಗೆ ಸಿಕಿಲ್ಲ. ಒಂದೊಂದು ಪತ್ರಕ್ಕೂ ಒಂದಿಷ್ಟು ಟಾಸ್ಕ್‌ಗಳನ್ನು ಕೊಟ್ಟು ಅದರಲ್ಲಿ ಗೆದ್ದವರಿಗೆ ಮಾತ್ರವೇ ಪತ್ರ ಕೊಡುವುದಾಗಿ ಹೇಳಿದ್ದರು. ಅದರಲ್ಲಿ ವಿನಯ್‌, ನಮ್ರತಾ, ತುಕಾಲಿಗೆ ಪತ್ರ ಸಿಕ್ಕಿದ್ದಾಗಿದೆ. ಆದರೆ ಡ್ರೋನ್‌ ಪ್ರತಾಪ್‌ ಪತ್ರವನ್ನು ಪಡೆಯಲು ಸಾಕಷ್ಟು ಪ್ರಯತ್ನ ಮಾಡಿದರು. ಮಾತ್ರವಲ್ಲ ಪ್ರತಾಪ್‌ ಅವರು ತಮಗೆ ಪತ್ರ ಬೇಕು ಎಂದಾಗ ಕಾರ್ತಿಕ್‌ ಕ್ಯಾತೆ ತೆಗೆದಿದ್ದೂ ಇದೆ. ಇದೀಗ ಡ್ರೋನ್‌ಗೆ ಪತ್ರ ಸಿಕ್ಕಿಲ್ಲ ಆದರೆ ತಂದೆಯ ಜತೆ ಮಾತನಾಡುವ ಅವಕಾಶ ಸಿಕ್ಕಿದೆ.

ಈಗಾಗಲೇ ವಿನಯ್ ಗೌಡ ಮತ್ತು ನಮ್ರತಾ ಮನೆಯಿಂದ ಬಂದ ಪತ್ರಗಳನ್ನು ಪಡದುಕೊಳ್ಳಲು ಯಶಸ್ವಿಯಾಗಿದ್ದಾರೆ. ಕೆಲವು ಸದಸ್ಯರು ಪತ್ರಗಳನ್ನು ಪಡೆದುಕೊಳ್ಳಲು ವಿಫಲರಾಗಿದ್ದಾರೆ. ಇನ್ನುಳಿದ ಸದಸ್ಯರ ಅದೃಷ್ಟಪರೀಕ್ಷೆ ಕೂಡ ನಡದೇ ಹೋಯಿತು. ಆದರೆ ಕೊನೆಗೂ ಡ್ರೋನ್‌ಗೆ ಮಾತ್ರ ಪತ್ರ ಸಿಕ್ಕೇ ಇಲ್ಲ. ʻʻಮಾತ್ರವಲ್ಲ ಕ್ಯಾಮೆರಾ ಮುಂದೆ ಡ್ರೋನ್‌ ಪ್ರತಾಪ್‌ ಅವರು ನನಗೆ ಪತ್ರ ಬಂದಿದ್ಯಾ? ಅಷ್ಟು ಹೇಳಿ ಬಿಗ್‌ ಬಾಸ್‌. ನಾನು ಯಾರಿಗೂ ಹೇಳಲ್ಲ ಹೇಳಿʼʼಎಂದು ಕೇಳಿದ್ದರು. ಆದರೀಗ ಕಿಚ್ಚ ಸುದೀಪ್‌ ಅವರು ಪ್ರತಾಪ್‌ ಅವರಿಗೆ ಒಂದು ವೇಳೆ ಪತ್ರ ಬಂದರೆ ಅವರಿಂದ ನೀವು ಏನು ನಿರೀಕ್ಷೆ ಮಾಡುತ್ತೀರಿ?ಎಂದು ವೇದಿಕೆಯಲ್ಲಿ ಕೇಳಿದ್ದಾರೆ.

ಪ್ರತಾಪ್‌ ಕೇಳುತ್ತಲೇ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ʻʻಅಪ್ಪ ತಪ್ಪಾಯ್ತಪ್ಪ. ನಿಮಗೆಲ್ಲ ಬಹಳ ನೋವು ಕೊಟ್ಟಿದ್ದೀನಿʼʼಎನ್ನುತ್ತಲೇ ಪ್ರತಾಪ್‌ ಅವರ ಅಪ್ಪನ ಧ್ವನಿ ಮನೆಯಲ್ಲಿ ಕೇಳಿದೆ. ಪ್ರತಾಪ್‌ ಕೇಳುತ್ತಲೇ ನನ್ನನ್ನು ಕ್ಷಮಿಸಿ ಎಂದು ಕಣ್ಣೀರಿಟ್ಟಿದ್ದಾರೆ. \

ಇದನ್ನೂ ಓದಿ: BBK Season 10: ಇಂದು ಎಲಿಮಿನೇಶನ್‌ ಬಳಿಕ ಕಿಚ್ಚನ ಪಂಚಾಯ್ತಿ! ಯಾರು ಹೊರಗೆ?

ದಿನದಿಂದ ದಿನಕ್ಕೆ ಬಿಗ್‌ಬಾಸ್‌ ಮನೆಯಲ್ಲಿ ಸ್ಪರ್ಧಿಗಳ ಸ್ವಭಾವ, ವರ್ತನೆಗಳು ಬದಲಾಗುತ್ತಲೇ ಇವೆ. ಅದರಲ್ಲಿಯೂ ಡ್ರೋಣ್ ಪ್ರತಾಪ್ ಅವರು ಮೊದಲ ವಾರದಲ್ಲಿದ್ದ ರೀತಿಗೂ ಇಂದಿನ ರೀತಿಗೂ ಅಜ-ಗಜ ಎನ್ನುವಷ್ಟು ವ್ಯತ್ಯಾಸ!
ಒಬ್ಬೊಬ್ಬರೇ ಇರುತ್ತಿದ್ದ, ಯಾರೊಂದಿಗೂ ಬೆರೆಯದ ಅವರು ನಂತರ ನಿಧಾನಕ್ಕೆ ಬೆರೆಯತೊಡಗಿದ್ದರು. ಆಗ ಅವರು ಸಾಕಷ್ಟು ವಿರೋಧವನ್ನೂ ಎದುರಿಸಬೇಕಾಯ್ತು. ಅದನ್ನು ಎದುರಿಸಿ ಅವರು ತಮ್ಮನ್ನು ತಾವು ಸ್ಥಾಪಿಸಿಕೊಂಡ ರೀತಿ ನಿಜಕ್ಕೂ ಪ್ರಶಂಸನೀಯ.

ಮೊದಲಿನಿಂದಲೂ ಪ್ರತಾಪ್, ತಮ್ಮ ಕುಟುಂಬದವರ ಬಗ್ಗೆ ಮಾತಾಡಿದ್ದು ಕಡಿಮೆಯೇ. ಆದರೆ ಅವರು ಎಷ್ಟೋ ವರ್ಷಗಳಿಂದ ಕುಟುಂಬದಿಂದ ದೂರವಿದ್ದಾರೆ ಎಂಬುದನ್ನು ಹೇಳಿದ್ದರು. ಅಲ್ಲದೇ ತಂದೆ ತಾಯಿ ಜತೆಗೆ ತಂಗಿಯ ಜತೆಗೆ ಮಾತಾಡಬೇಕು ಅನಿಸುತ್ತಿದೆ ಎಂದೂ ಹೇಳಿದ್ದರು. ಕಳೆದ ವಾರ ಸ್ಪರ್ಧಿಗಳಿಗೆ ತಮ್ಮ ಕುಟುಂಬದವರು ಬರೆದ ಪತ್ರಗಳನ್ನು ಪಡೆದುಕೊಳ್ಳುವ ಅವಕಾಶ ಸಿಕ್ಕಿತ್ತು. ಆದರೆ ಅದರಲ್ಲಿ ಪ್ರತಾಪ್ ವಿಫಲರಾದರು. ಹಾಗಾಗಿ ಅವರು ನಿರಾಸೆಗೊಂಡಿದ್ದರು.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version