Site icon Vistara News

BBK SEASON 10: ಪ್ರತಾಪ್‌ ಈ ಮನೆಯ ನೆಗೆಟಿವ್; ತಿರುಗಿಬಿದ್ದ ಉಳಿದ ಸ್ಪರ್ಧಿಗಳು!

Drone Prathap vinay tanisha bigg boss Kannada

ಬೆಂಗಳೂರು: ಬಿಗ್‌ ಬಾಸ್‌ ಮನೆಯಲ್ಲಿ (BBK SEASON 10) ಸ್ಪರ್ಧಿಗಳ ಸಂಖ್ಯೆ ಬರಬರುತ್ತಾ ಕಡಿಮೆಯಾಗ ತೊಡಗಿದೆ. ಡ್ರೋನ್‌ ಪ್ರತಾಪ್‌ ಅವರು ಅತ್ಯಂತ ಪ್ರಬಲ ಸ್ಪರ್ಧಿಗಳಲ್ಲಿ ಒಬ್ಬರು. ಹೀಗಾಗಿ ಅವರನ್ನು ಉಳಿದ ಸದಸ್ಯರು ಟಾರ್ಗೆಟ್‌ ಮಾಡಲು ಆರಂಭಿಸಿದ್ದಾರೆ. ಬಿಗ್ ಬಾಸ್ (Bigg Boss) ಮನೆಯಲ್ಲಿ ಅತಿ ಹೆಚ್ಚು ನೆಗೆಟಿವ್ ವಿಚಾರ ಹರಡುವವರು ಯಾರು ಎನ್ನುವ ಪ್ರಶ್ನೆ ಕೇಳಿದರು. ಇದಕ್ಕೆ ಅನೇಕರು ಪ್ರತಾಪ್ ಹೆಸರು ತೆಗೆದುಕೊಂಡಿದ್ದಾರೆ. ಪ್ರತಾಪ್ ಜತೆ ಆಪ್ತವಾಗಿದ್ದ ವರ್ತೂರು ಸಂತೋಷ್ ಅವರು ಕೂಡ ತಿರುಗಿ ಬಿದ್ದಿದ್ದಾರೆ. ತುಕಾಲಿ, ವಿನಯ್‌ ಕೂಡ ಪ್ರತಾಪ್‌ ಅವರು ನೆಗೆಟಿವ್‌ ಎಂದಿದ್ದಾರೆ.

ವರ್ತೂರ್‌ ಸಂತೋಷ್‌ ಕಾರಣ ನೀಡಿ ʻʻಪ್ರತಾಪ್‌ ಅವರು ಬೇಕಾದಾಗ ಮಾತ್ರ ಎದುರುಗಡೆ ಇರುವ ವ್ಯಕ್ತಿಯನ್ನು ಪರಿಗಣಿಸುತ್ತಾರೆʼʼಎಂದರು. ತನಿಷಾ ಮಾತನಾಡಿ ʻʻಪ್ರತಾಪ್‌ ಅವರು ಬೇಕಾದ ಜಾಗದಲ್ಲಿ ವೈಸ್‌ ರೈಸ್‌ ಮಾಡುವುದು ಅವರಿಗೆ ಗೊತ್ತು. ಅವರ ಕಡೆಯಿಂದ ಉತ್ತರ ಬರಬೇಕು ಎನ್ನುವ ಹೊತ್ತಲ್ಲಿ ಸತ್ಯವನ್ನು ಮುಚ್ಚಿಡುತ್ತಾರೆ. ಅಥವಾ ಸುಳ್ಳು ಹೇಳುತ್ತಾರೆʼʼಎಂದರು. ಮನೆಯವರೆಲ್ಲರೂ ಪ್ರತಾಪ್‌ ವಿರುದ್ಧ ತಿರುಗಿ ಬಿದ್ದದ್ದನ್ನು ಪ್ರತಾಪ್ ಯಾವ ರೀತಿಯಲ್ಲಿ ಸಮರ್ಥಿಸಿಕೊಳ್ಳುತ್ತಾರೆ ಎಂಬುದು ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.

ಇಷ್ಟು ದಿನ ಮನೆಯಲ್ಲಿ ಸಂಗೀತಾ ಅವರು ಮನೆಯ ನೆಗೆಟಿವ್‌ ಎಂದು ಸ್ಪರ್ಧಿಗಳು ಧ್ವನಿ ಎತ್ತಿದ್ದರು. ಹೆಚ್ಚಾಗಿ ಮೈಕಲ್‌ ಅವರು ಸಂಗೀತಾ ಬಗ್ಗೆ ನೆಗೆಟಿವ್‌ ಹೇಳಿಕೆಯನ್ನು ನೀಡಿದ್ದರು. ಆದರೀಗ ಸ್ಪರ್ಧಿಗಳ ವರಸೆ ಬದಲಾದಂತಿದೆ. ವೀಕ್ಷಕರು ಕೂಡ ʻʻಈ ಮನೆಯವರಿಗೆ ಪ್ರತಾಪ್ ಮತ್ತು ಸಂಗೀತ ಹೆಸರು ಬಿಟ್ರೆ ಬೇರೆ ಹೆಸರೇ ಗೊತ್ತಿಲ್ಲ ಅನ್ಸುತ್ತೆʼʼಎಂದು ಸೋಷಿಯಲ್‌ ಮೀಡಿಯಾದಲ್ಲಿ ಕಮೆಂಟ್‌ ಮಾಡಿದ್ದಾರೆ. ಇನ್ನೊಬ್ಬರು ʻʻವರ್ತೂರು ಸಂತೋಷ್ ರವರು ಚೇಂಜ್ ಆಗಿದ್ದಾರೆʼʼ ಎಂದು ಕಮೆಂಟ್‌ ಮಾಡಿದ್ದಾರೆ.

ಇದನ್ನೂ ಓದಿ; BBK SEASON 10: ಮೈಕಲ್‌ ನಾಟ್​​ ಔಟ್‌ ; ʻಬಿಗ್‌ ಬಾಸ್‌ʼ ಯೂಟರ್ನ್​​!

ಸಂಗೀತಾ ವರ್ತನೆ ತುಂಬ ಕೀಳು ಎಂದಿದ್ದ ಮೈಕಲ್‌

ಈ ಹಿಂದೆ ಮೈಕಲ್‌ ಅವರು ಸಂಗೀತಾ ಅವರ ಟೀಂ ಆಗಿದ್ದರು. ಸಂಗೀತಾ ವಿರುದ್ಧ ಮೈಕಲ್ ತಿರುಗಿ ಬಿದ್ದು, ಸಂಗೀತಾ ಈ ಮನೆಯ ನೆಗೆಟಿವ್‌ ಎನರ್ಜಿ ಎಂದು ನೇರವಾಗಿ ಎಲ್ಲ ಸದಸ್ಯರ ಮುಂದೆ ಹೇಳಿದ್ದರು. ಸಂಗೀತಾ ಅವರ ಕೀಳು ಮಟ್ಟದ ವರ್ತನೆ ಎಲ್ಲರಿಗೂ ಗೊತ್ತಾಗಬೇಕು. ಸಂಗೀತಾ ಅವರು ಈ ಮನೆಯಲ್ಲಿ ದೊಡ್ಡ ನೆಗೆಟಿವ್‌ ಎನರ್ಜಿ. ನನಗೆ ಮಾತನಾಡುವ ಹಕ್ಕು ಇದೆ ಎಂದು ಕೂಗಿದ್ದರು ಮೈಕಲ್‌.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version