Site icon Vistara News

BBK Season 10: ತುಕಾಲಿ ಫುಲ್‌ ರೋಸ್ಟ್‌; ಅಲ್ನೋಡಿ ಪ್ರತಾಪನ ಹೊಸ ʻಪ್ರತಾಪʼ!

drone prathapPromo Out

ಬೆಂಗಳೂರು: ಅ.14ರಂದು ಸುದೀಪ್‌ (BBK Season 10) ಅವರು ಡ್ರೋನ್‌ ಪ್ರತಾಪ್‌ ಅವರ ವಿಚಾರವಾಗಿ ತುಕಾಲಿ ಸಂತೋಷ್‌ ಹಾಗೂ ಕೆಲ ಸ್ಪರ್ಧಿಗಳಿಗೆ ಬೆವರು ಇಳಿಸಿದ್ದಾರೆ. ಡ್ರೋನ್‌ ಪ್ರತಾಪ್‌ ಅವರಿಗೂ ಸುದೀಪ್‌ ಕಿವಿಮಾತು ಹೇಳಿದ್ದಾರೆ. ಕಲರ್ಸ್‌ ಕನ್ನಡ ಹೊಸ ಪ್ರೋಮೊ ಹಂಚಿಕೊಂಡಿದ್ದು, ʻʻತುಕಾಲಿ ಅವರೇ ಓಪನ್‌ಅಪ್‌ ಆಗಬೇಕು ಎಂದು ತಾವು ಹೇಳ್ತಾ ಇದ್ರಿ. ಈಗ ನೋಡಿʼʼಎಂದು ಸುದೀಪ್‌ ಖಡಕ್‌ ಮಾತುಗಳನ್ನು ಕೊಟ್ಟಿದ್ದಾರೆ.

ಪ್ರೋಮೊದಲ್ಲಿ ಏನಿದೆ?

ಡ್ರೋನ್‌ ಪ್ರತಾಪ್‌ ಅವರು ಸಂಗೀತಾ ಶೃಂಗೇರಿ ಹಾಗೂ ತನಿಷಾ ಜತೆ ಸಖತ್‌ ಸ್ಟೆಪ್ಸ್‌ ಹಾಕಿದ್ದಾರೆ. ಸುದೀಪ್‌ ಅವರು ಮಾತನಾಡಿ ʻʻತುಕಾಲಿ ಅವರೇ ಓಪನ್‌ಅಪ್‌ ಆಗಬೇಕು ಎಂದು ತಾವು ಹೇಳ್ತಾ ಇದ್ರಿ. ಓಪನ್‌ಅಪ್‌ ಮಾಡ್ಸೋದು ಅಂದ್ರೆ ಹೀಗೆ ಸರ್‌!. ನಮ್ಮದು ವರ್ತೂರು ಟೊಮ್ಯಾಟೊ ಅಲ್ಲ. ನಾಟಿ ಟೊಮ್ಯಾಟೊ. ವೆರಿ ನಾಟಿ (naughty) ಟೊಮ್ಯಾಟೊʼʼ ಎಂದು ಸಂತೋಷ್‌ ಅವರ ಕಾಲೆಳಿದ್ದಾರೆ.

ಇದೀಗ ನೆಟ್ಟಿಗರು ʻʻಕಳೆದ ಸಂಚಿಕೆಯಲ್ಲಿ ತುಕಾಲಿ ಸಂತೋಷ್‌ ಅವರನ್ನು ರೋಸ್ಟ್ ಮಾಡಿದ್ದು ನೋಡಿ ಇಡೀ ಕರ್ನಾಟಕ ಜನತೆ ಖುಷಿ ಪಟ್ಟಿದೆ. ಇದೆ ಅಲ್ವಾ ನ್ಯಾಯ ಅಂದ್ರೆ! ಒಬ್ಬ ಒಳ್ಳೆಯ ವ್ಯಕ್ತಿ ಬದಲಾಗುತ್ತಾನೆ ಅಂದರೆ ಬಿಡಬೇಕು ಇದೇ ಖುಷಿಗೆ ಪ್ರತಾಪ್ ಅವರಿಗೆ ಕಿಚ್ಚನ ಚಪ್ಪಾಳೆ ಸಿಗಲಿʼʼಎಂದು ಕಮೆಂಟ್‌ ಮಾಡಿದ್ದಾರೆ. ʻʻನಮ್ರತಾ ತನಿಷಾ, ಸಂಗೀತಾ ಅವರು ಪ್ರತಾಪ್‌ ಅವರ ಮೇಲೆ ಪ್ರೀತಿ ವಿಶ್ವಾಸ ನಂಬಿಕೆ ಇಟ್ಟುಕೊಂಡಿದ್ದಾರೆ. ಈ ಮನೆಯಲ್ಲಿ ಪ್ರತಾಪ್ ಈ ಮೂವರ ನಂಬಿಕೆ ಉಳ್ಳಿಸಿಕೊಳ್ಳಬೇಕುʼʼಎಂದು ಕಮೆಂಟ್‌ ಮಾಡಿದ್ದಾರೆ. ʻʻತುಂಬಾ ಚೆನ್ನಾಗಿದೆ ನೋಡೋಕೆ. ತುಕಾಲಿ ನೋಡಿ ಕಲಿತುಕೊʼʼಎಂದು ಇನ್ನೊಬ್ಬರು ಕಮೆಂಟ್‌ ಮಾಡಿದ್ದಾರೆ. ʻʻಕಿಚ್ಚನ ಪ್ರತಾಪ ಅಂದರೆ ಇದು. ಕಿಚ್ಚ ಬಂದ ಮೇಲೆ ಅಳೋರು, ಅಳಿಸೋರು ಇಬ್ಬರು ಸಂತೋಷವಾಗಿರಬೇಕುʼʼಎಂದು ಕಮೆಂಟ್‌ ಮಾಡಿದ್ದಾರೆ.

ಇದನ್ನೂ ಓದಿ: BBK Season 10: ಸ್ನೇಕ್‌ ಶ್ಯಾಮ್‌ ಮನೆಯಿಂದ ಹೊರಗೆ? ಈ ವಾರ ಸೇಫ್‌ ಆದ ಸ್ಪರ್ಧಿಗಳು ಯಾರು?

ಈ ವಾರ ಸೇಫ್‌ ಆದ ಸ್ಪರ್ಧಿಗಳು ಯಾರು?

ಸಮರ್ಥರು-ಅಸಮರ್ಥರ ಗುಂಪಿನಿಂದ ಇನ್ನೂ ನಾಮಿನೇಷನ್‌ ಪಟ್ಟಿಯಲ್ಲಿ ಇದ್ದವರು ಮೈಕಲ್, ಕಾರ್ತಿಕ್ ಸಿರಿ, ನೀತು, ಪ್ರತಾಪ್ ಮತ್ತು ಶ್ಯಾಮ್ ಇವರಿಷ್ಟು ಸ್ಪರ್ಧಿಗಳು. ಇವರಲ್ಲಿ ಯಾರು ಮೊದಲು ಸೇಫ್‌ ಆಗಬೇಕು ಎಂಬ ಕಿಚ್ಚನ ಪ್ರಶ್ನೆಗೆ ಸ್ಪರ್ಧಿಗಳು ಉತ್ತರಿಸಿದರು. ಹಲವರು ಪ್ರತಾಪ್ ಸೇಫ್ ಆಗಬೇಕು ಎಂದು ಆಶಿಸಿದರು. ಆದರೆ ಜನರ ನಿರ್ಧಾರ ಬೇರೆಯೇ ಆಗಿತ್ತು. ಸೇವ್ ಆಗುತ್ತಿರುವ ಇನ್ನೊಬ್ಬ ಸ್ಪರ್ಧಿಯನ್ನೂ ಘೋಷಿಸಿದರು. ಅವರು ಸೇಫ್ ಮಾಡಿದ್ದು ಕಾರ್ತಿಕ್ ಅವರನ್ನು.“ಮೈಕಲ್, ಸಿರಿ, ನೀತು, ಪ್ರತಾಪ್ ಮತ್ತು ಶ್ಯಾಮ್ ಇವರಲ್ಲಿ ಯಾರೆಲ್ಲ ಸೇಫ್‌? ಯಾರು ಮನೆಯಿಂದ ಹೊರಬೀಳುತ್ತಾರೆ? ಎಂಬುದು ಇಂದು ಗೊತ್ತಾಗಲಿದೆ.

ಜಿಯೋ ಸಿನಿಮಾದಲ್ಲಿ ಬಿಗ್ ಬಾಸ್ ಕನ್ನಡ 10 ಕಾರ್ಯಕ್ರಮವನ್ನು 24 ಗಂಟೆ ಲೈವ್ ವೀಕ್ಷಿಸಬಹುದು. ಕಲರ್ಸ್‌ ಕನ್ನಡದಲ್ಲಿ ಪ್ರತಿನಿತ್ಯ 9.30ಕ್ಕೆ ಪ್ರಸಾರ ಕಾಣುತ್ತಿದೆ.

Exit mobile version