ಬೆಂಗಳೂರು: ಬಿಗ್ ಬಾಸ್ ಸೀಸನ್ 10ಕ್ಕೆ (BBK SEASON 10) ಡ್ರೋನ್ ಪ್ರತಾಪ್ ಕಾಲಿಡಲು ಅವರ ಅಪ್ಪಾಜಿ ಇಷ್ಟವಿರಲಿಲ್ಲ. ಹಾಗೇ ಮೂರು ವರ್ಷದಿಂದ ವಿವಾದದಲ್ಲಿ ಸಿಲುಕಿದ ನಂತರ ಕುಟುಂಬಸ್ಥರಿಂದ ದೂರ ಉಳಿದರು ಪ್ರತಾಪ್. ತಂದೆಯ ಫೋನ್ ನಂಬರ್‌ನ ಬ್ಲಾಕ್ ಮಾಡಿದ್ದರು. ಅಪ್ಪನ ಜತೆಗೆ ಕಳೆದ ಮೂರು ವರ್ಷಗಳಿಂದ ಮಾತನಾಡಿರಲಿಲ್ಲ. ಇದಾದ ಬಳಿಕ ಕಿಚ್ಚ ಸುದೀಪ್ ಮುಂದೆಯೇ ತಂದೆ ಜತೆಗೆ ಡ್ರೋನ್ ಪ್ರತಾಪ್ ಫೋನ್ ಮಾತುಕತೆ ನಡೆಸಿದ್ದರು. ಇದೀಗ ಮತ್ತೆ ತನಿಷಾ ಮುಂದೆ ತಮ್ಮ ಹೊಸ ಆಸೆಯನ್ನು ವ್ಯಕ್ತಪಡಿಸಿದ್ದಾರೆ.
ಡ್ರೋನ್ ಪ್ರತಾಪ್ ತನಿಷಾ ಮುಂದೆ ಮಾತನಾಡಿ ʻʻಎದುರುಗಡೆ ಇದ್ದಾಗ, ನಾನು ಒಮ್ಮೆ ನನ್ನ ಅಪ್ಪನನ್ನು ಮುಟ್ಟಿ ಮಾತನಾಡಿಸಬೇಕು ಅನ್ನಿಸುತ್ತಿದೆ. ನನ್ನ ಅಮ್ಮನಿಗೆ ಎರಡು ಬಳೆ ಮಾಡಿಸ್ತೀನಿ. ತಂಗಿ ಮದುವೆಗೆ ರೆಡಿ ಇದ್ದಾಳೆ. ಒಳ್ಳೆ ಹುಡುಗನನ್ನ ನೋಡ್ತೀನಿ. ಮದುವೆ ಮಾಡಿಸ್ತೀನಿ. ಅಪ್ಪನಿಗೆ ತೋಟಕ್ಕೆ ನನ್ನ ಕಡೆಯಿಂದ ಮಷೀನ್ ಏನಾದರೂ ಮಾಡಿ ಕೊಡಬೇಕು ಅಂದ್ರೆ ಮಾಡ್ತೀನಿ. ಹೇಗಿದ್ದರೂ ಡ್ರೋನ್ ಇದೆ. ನಮ್ಮ ತೋಟದಲ್ಲೇ ಅದನ್ನ ಬಳಸಿಲ್ಲ. ನನ್ನ ತಂದೆಗೂ ಅದನ್ನ ತೋರಿಸ್ತೀನಿ. ಬಳಕೆ ಮಾಡೋದು ಹೇಗೆ ಅಂತ ತೋರಿಸಿಕೊಡ್ತೀನಿ. ನನ್ನ ತಂದೆ ಕೈಗೆ ಡ್ರೋನ್ ಕೊಟ್ಟು, ಹಾರಿಸಿ ತೋರಿಸ್ತೀನಿʼʼಎಂದು ಹೇಳಿಕೊಂಡಿದ್ದಾರೆ.
ಇದೀಗ ಡ್ರೋನ್ ಪ್ರತಾಪ್ ಈ ಮಾತುಗಳನ್ನು ಕೇಳಿ ಪ್ರೇಕ್ಷಕರು ಕಮೆಂಟ್ ಮೂಲಕ ʻʻಡ್ರೋನ್ ಪ್ರತಾಪ್‌ಗೆ ನಮ್ ಫುಲ್ ಸಪೋರ್ಟ್ʼʼಎಂದು ಬರೆದುಕೊಂಡಿದ್ದಾರೆ. ʻವ್ಹಾವ್ ಸೂಪರ್ ಪ್ರತಾಪ್ʼʼಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.
ಈ ಹಿಂದೆ ಪ್ರತಾಪ್ ಕುಟುಂಬದ ಬಗ್ಗೆ ಸುದೀಪ್ ಜತೆ ಹಲವಾರು ವಿಚಾರಗಳನ್ನು ಹಂಚಿಕೊಂಡಿದ್ದರು. ನನ್ನ ಅಮ್ಮನ ಹೆಸರು ಸವಿತಾ.. ಅವರು ನಿಮ್ಮ ದೊಡ್ಡ ಅಭಿಮಾನಿ. ಸಣ್ಣ ವಯಸ್ಸಿನಿಂದಲೂ ನಿಮ್ಮ ಸಿನಿಮಾ ನೋಡುತ್ತಿದ್ದಾರೆ ಎಂದು ಹೇದ್ದರು ಡ್ರೋನ್ ಪ್ರತಾಪ್. ಆಗ ನಕ್ಕ ಸುದೀಪ್ ʻʻಹಾಗಿದ್ದರೆ ನಂಗೇನು 80 ವರ್ಷ ಆಗಿದೆಯಾʼ ಎಂದು ಕೇಳಿದ್ದರು. ಆಗ ಪ್ರತಾಪ್ ʻನಾವು ಸಣ್ಣ ಇರುವಾಗಿನಿಂದ ಸರ್ʼ ಎಂದು ತಿದ್ದಿದರು!
ಇದನ್ನೂ ಓದಿ: BBK SEASON 10: ಕಾರ್ತಿಕ್‌ನಂತಹ ಬಾಯ್‌ಫ್ರೆಂಡ್ ಬೇಡ, ವಿನಯ್ ಸ್ವೀಟ್ ಎಂದ ಸಂಗೀತಾ!
ಮೊದಲು ಅಮ್ಮ ಸವಿತಾ ಅವರಿಗೆ ಒಂದು ಹಲೋ ಹೇಳಿ ಎಂದು ಪ್ರತಾಪ್ ರಿಕ್ವೆಸ್ಟ್ ಮಾಡಿದರು. ಸುದೀಪ್ ಅವರು ವೇದಿಕೆಯ ಮೂಲಕ ʻಸವಿತಾ ಅವರೇ.. ನಿಮ್ಮ ಸುಪುತ್ರನ ಜತೆ ನಮ್ಮನ್ನೂ ನೋಡುತ್ತಿದ್ದೀರಾ. ನಿಮ್ಮ ಪತಿ ಕರೆ ಮಾಡಿದ್ದಕ್ಕೆ ಧನ್ಯವಾದಗಳು. ನಿಮ್ಮ ಮಧ್ಯೆ ಏನು ನಡೆದಿದೆ ಅಂತ ನನಗೆ ಗೊತ್ತಿಲ್ಲ. ಆದರೆ, ಪ್ರೀತಿಸುವ ವಸ್ತುವನ್ನ ಕಳೆದುಕೊಳ್ಳದ ಹಾಗೆ ಆದಷ್ಟು ನೋಡಿಕೊಳ್ಳಿ.. ಥ್ಯಾಂಕ್ಯು’’ ಎಂದಿದ್ದರು. ಬಳಿಕ ಇನ್ನೇನಾದರೂ ಹೇಳಬೇಕಾಗಿತ್ತಾ ಎಂದು ಪ್ರತಾಪ್ ಅವರನ್ನು ಕೇಳಿದ್ದರು.
ಆಗ ಡ್ರೋನ್ ಪ್ರತಾಪ್, ನನ್ನ ಅಮ್ಮನಿಗೊಂದು ಲವ್ ಯೂ ಅಂತ ಹೇಳಿಬಿಡಿ ಎಂದು ಹೇಳಿದರು! ಡ್ರೋನ್ ಪ್ರತಾಪ್ ಆಸೆಯಂತೆ ಸುದೀಪ್ ಅವರು ʻಲವ್ ಯೂ ಆಲ್ʼ ಎಂದು ಸಂದೇಶ ರವಾನಿಸಿದ್ದರು.
ಬಿಗ್ಬಾಸ್ ಜಿಯೋ ಸಿನಿಮಾಸ್ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ
.