ಬೆಂಗಳೂರು; ಕಳೆದ ವಾರ ವಿನಯ್ (BBK Season 10) ಪ್ರತಾಪ್ ಮನೆಯಲ್ಲಿ ಹೆಣ್ಣುಮಕ್ಕಳನ್ನು ನೋಡೋ ದೃಷ್ಟಿ ಸರಿ ಇಲ್ಲ ಎಂಬ ಮಾತನ್ನು ಹೇಳಿದ್ದರು. ಅದಕ್ಕೆ ಇಶಾನಿ ಕೂಡ ‘ಹೌದು. ನಂಗೂ ಗೊತ್ತು ಅದು’ ಎಂದು ಅನುಮೋದಿಸಿದ್ದರು. ತುಕಾಲಿ, ನಮ್ರತಾ ಕೂಡ ಆ ಮಾತನ್ನು ಒಪ್ಪಿಗೊಂಡರು. ಈಗ ವೀಕೆಂಡ್ ಎಪಿಸೋಡಿನಲ್ಲಿ ಈ ವಿಷಯ ಚರ್ಚೆಗೆ ಬಂದಿದೆ.
ಕಲರ್ಸ್ ಕನ್ನಡ ವಾಹಿನಿ ಪ್ರೋಮೊ ಹಂಚಿಕೊಂಡಿದೆ. ಪ್ರೋಮೊದಲ್ಲಿ ತುಕಾಲಿ ಸಂತು ಈ ಬಗ್ಗೆ ಮಾತನಾಡಿ ʻʻ ಪ್ರತಾಪ್ ಅವರಲ್ಲಿ ಒಬ್ಬ ಒಳ್ಳೆಯ ರೊಮ್ಯಾಂಟಿಕ್ ಹೀರೊ ಇದ್ದಾನೆʼ ಎಂದರು. ಕಿಚ್ಚ ಸುದೀಪ್ ಪ್ರತಿಕ್ರಿಯಿಸಿ ʻʻಇಲ್ಲಿ ರೊಮ್ಯಾಂಟಿಕ್ ಬಗ್ಗೆ ಮಾತಾಡ್ತಾ ಇಲ್ಲ ತುಕಾಲಿʼʼಎಂದರು. ವಿನಯ್ ಕೂಡ ʻʻಪ್ರತಾಪ್ ಏನು ಯೋಚನೆ ಮಾಡ್ಕೊಂಡು ಮಾತಾಡ್ತಾ ಇದ್ದಾನೆ ಎನ್ನುವುದೇ ನನಗೆ ಅರ್ಥವಾಗಲ್ಲʼʼಎಂದರು. ಕಿಚ್ಚ ಮತ್ತೆ ಈ ಬಗ್ಗೆ ಪ್ರತಿಕ್ರಿಯೆ ನೀಡಿʻʻ ನಿಮ್ಮ ಮಾತು ತಪ್ಪು ವಿನಯ್. ಯಾರಾದರೂ ಕೆಟ್ಟ ದೃಷ್ಟಿಯಲ್ಲಿ ನೋಡೋದಾಗ್ಲಿ, ಮಾತಾಡೋದು ಆಗ್ಲಿ, ಸ್ಪರ್ಶಿಸುವುದೇ ಆದರೆ, ಆ ಸ್ಪರ್ಶದಲ್ಲಿಯೇ ಅರ್ಥ ಆಗತ್ತೆ ಇದು ಸರಿಯಲಿಲ್ಲ ಎಂದು. ಅದರ ಮೇಲೆ ನೀವು ನಂಬಬೇಕು ಹೊರತು, ಇನ್‌ಫ್ಲುಯೆನ್ಸ್ ಮೇಲೆ ಅಲ್ಲʼʼಎಂದರು. ಪ್ರತಾಪ್ ಅವರ ವ್ಯಕ್ತಿತ್ವಕ್ಕೆ ಕಳಂಕ ತರುವಂತಹ ಮಾತುಗಳನ್ನಾಡಿದ ವಿನಯ್, ಇಶಾನಿ ಏನು ಹೇಳುತ್ತಾರೆ? ಸ್ವತಃ ಪ್ರತಾಪ್‌ಗೆ ಇವೆಲ್ಲದರ ಅರಿವಿದೆಯೇ? ಈ ಬಗ್ಗೆ ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.
ಡ್ರೋನ್ ಪ್ರತಾಪ್ ಅವರು ಮಹಿಳಾ ಸ್ಪರ್ಧಿಗಳಿಗೆ ʻದೀದಿʼ ಎಂತಲೇ ಮುಂಚಿನಿಂದಲೂ ಕರೆದುಕೊಂಡು ಬಂದಿದ್ದಾರೆ. ಇನ್ನು ನಾಮಿನೇಶನ್ ಟಾಸ್ಕ್‌ನಲ್ಲಿಯೂ ಪಾಸ್ ಸಿಕ್ಕಾಗ ಎಲ್ಲಾ ಮಹಿಳಾ ಮಣಿಯರಿಗೆ ಅವರು ನೀಡಿದರು. ಪುರುಷ ಸ್ಪರ್ಧಿಗಳನ್ನು ‘ಅಣ್ಣ’ ಎಂದೇ ಕರೆದಿದ್ದಾರೆ. ಹೀಗಿರುವಾಗ ವಿನಯ್ ಈ ರೀತಿ ಮಾತನಾಡಿರುವುದು ಪ್ರೇಕ್ಷಕರಿಗೆ ಅಚ್ಚರಿ ಮೂಡಿಸಿತ್ತು.
ಇದನ್ನೂ ಓದಿ: BBK Season 10: ರಕ್ಷಕ್ ಬುಲೆಟ್ ದೊಡ್ಮನೆಯಿಂದ ಔಟ್?
ಈ ಹಿಂದೆ ವಿನಯ್ ಆರೋಪ ಮಾಡಿದ್ದೇನು?
ತುಕಾಲಿ ಸಂತು, ಸ್ನೇಹಿತ್ ಗೌಡ, ಇಶಾನಿ ಹಾಗೂ ನಮ್ರತಾ ಜತೆಗೆ ವಿನಯ್ ಗೌಡ ಮಾತನಾಡುತ್ತಿದ್ದರು. ತುಕಾಲಿ ಸಂತು ಅವರು ʻʻಈಗ ಎಲ್ಲರೂ ಸೀರೆ ಹಾಕಿಕೊಂಡು ಓಡಾಡಿದರೆ, ಹೈಕ್ಳು ಯಾರನ್ನು ನೋಡ್ತಾರೆ?ʼʼ ಎಂದು ಮಾತು ಶುರು ಮಾಡಿದ್ದರು.
ವಿನಯ್ ಗೌಡ ಅಲ್ಲಿಂದ ಡ್ರೋನ್ ಬಗ್ಗೆ ಮಾತನಾಡಲು ಶುರು ಮಾಡಿದರು ʻʻಯಾರು ಏನಾದರೂ ಹಾಕಲಿ.. ಒಬ್ಬನದ್ದು ಮಾತ್ರ ಒಂದೇ ರಿಯಾಕ್ಷನ್, ಹೆಂಗ್ ನೋಡ್ತಾನೆ ಅಂದ್ರೆ.. ತುಂಬಾ ಕೆಟ್ಟದಾಗಿ ನೋಡ್ತಾನೆʼʼ ಎಂದು ಸನ್ನೆ ಮೂಲಕ ಹೇಳಿದ್ದರು.
ನಮ್ರತಾ ಗೌಡ ಈ ಬಗ್ಗೆ ಕೇಳುತ್ತಿದ್ದಂತೆ ಶಾಕ್ ಆದರು. ಅಷ್ಟೇ ಅಲ್ಲದೇ ಇಶಾನಿ ಕೂಡ ʻʻನಾನು ನೋಡಿದ್ದೀನಿʼʼ ಎಂತಲೇ ಹೇಳಿದರು. ವಿನಯ್ ಗೌಡ ಮಾತನಾಡಿ, ʻʻತುಂಬಾ ಕೆಟ್ಟದಾಗಿ ನೋಡ್ತಾನೆ ಅವನು. ಆ ರಿಯಾಕ್ಷನ್ ಇದ್ದದ್ದು ನೀವು ಡ್ಯಾನ್ಸ್ ಆಡುವಾಗ.. ಅದೊಂದು ಕೆಟ್ಟ ಲುಕ್ ಇದೆ. ಮೊನ್ನೆ ಇಲ್ಲೇ ಒಂದ್ ಸೀನ್ ಆಯ್ತು. ನನ್ನ ಮುಂದೆ ಯಾರೋ ಏನೋ ಸರಿ ಮಾಡಿಕೊಳ್ಳುತ್ತಿದ್ದರು. ನಾನು ನೋಡಿ ತಿರುಗಿದೆ. ಅವನು ಅಲ್ಲೇ ನೋಡ್ತಾ ಇದ್ದʼʼ ಎಂದು ಹೇಳಿದರು. ಬೆಂಕಿಗೆ ತುಪ್ಪ ಸುರಿದ ಹಾಗೇ ಸ್ನೇಹಿತ್ ಗೌಡ ಕೂಡ ʻಇದಕ್ಕೆ ದೀದಿ ಅಂತ ಕರೆಯಬೇಕಾ?ʼʼ ಎಂದು ಮಾತು ಸೇರಿಸಿದ್ದರು. ಇದೀಗ ಈ ವಿಚಾರ ವೀಕೆಂಡ್ ಪಂಚಾಯಿತಿಯಲ್ಲಿ ಚರ್ಚೆಯಾಗಿದೆ.
ಬಿಗ್ಬಾಸ್ ಕನ್ನಡ ಕಲರ್ಸ್ ವಾಹಿನಿಯಲ್ಲಿ ಪ್ರತಿರಾತ್ರಿ 9:30ಕ್ಕೆ ಹಾಗೂ ಜಿಯೋ ಸಿನಿಮಾಸ್ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.