Site icon Vistara News

BBK SEASON 10: ವಿನಯ್‌ ಜತೆ ಇದ್ದವರೆಲ್ಲ ಮನೆಗೆ ಸೆರ್‌ಕೊಂಡ್ರು; ಪ್ರತಾಪ್‌ ಮಾತಿಗೆ ʻಭೇಷ್‌ʼ ಅಂದ್ರು ಪ್ರೇಕ್ಷಕರು!

Drone Prathap Points Out About Vinay book task

ಬೆಂಗಳೂರು: ʻಬಿಗ್‌ ಬಾಸ್‌ ಸೀಸನ್‌ 10ರʼ (BBK SEASON 10) ಹದಿಮೂರನೇ ವಾರ ಕಿಚ್ಚ ಸ್ಪರ್ಧಿಗಳಿಗೆ ಖಡಕ್‌ ಕ್ಲಾಸ್‌ ತೆಗೆದುಕೊಂಡಿದ್ದಾರೆ. ಜತೆಗೆ ಡ್ರೋನ್‌ ಪ್ರತಾಪ್‌ ಅವರ ವಿನಯ್‌ ಕುರಿತಾದ ಮಾತುಗಳು ಭಾರಿ ಚರ್ಚೆಯಲ್ಲಿದೆ. ಅವರ ಮಾತಿಗೆ ಪ್ರೇಕ್ಷಕರು ʻಸೂಪರ್‌ ಪ್ರತಾಪ್‌ʼ ಎಂದು ಮೆಚ್ಚಿ ಕಮೆಂಟ್‌ ಮಾಡುತ್ತಿದ್ದಾರೆ. ʻಯಾರು ಯಾವ ಪುಸ್ತಕ ಬರೆದರೆ ಸೂಕ್ತ’ ಎಂಬ ಚಟುವಟಿಕೆಯನ್ನ ಕಿಚ್ಚ ಸುದೀಪ್‌ ನೀಡಿದರು. ಈ ವೇಳೆ ಡ್ರೋನ್‌ ಪ್ರತಾಪ್‌ ಅವರು ವಿನಯ್‌ ಅವರಿಗೆ ನೀಡಿದ ಪುಸ್ತಕ ಹಾಗೂ ಕಾರಣ ನೀಡಿದ್ದು ಹಲವರಿಗೆ ಇಷ್ಟವಾಗಿದೆ.

’ಬೇರೆಯವರನ್ನ ತುಳಿದು ಬೆಳೆಯೋದು ಹೇಗೆ?’’ ಎಂಬ ಹೆಸರಿನ ಪುಸ್ತಕವನ್ನು ವಿನಯ್‌ ಅವರಿಗೆ ಪ್ರತಾಪ್‌ ನೀಡಿದರು. ಬಳಿಕ ಕಾರಣವನ್ನು ನೀಡಿ ʻʻಯಾರೆಲ್ಲ ವಿನಯ್‌ ಅವರ ಜತೆಯಲ್ಲಿ ಇದ್ದರೋ ಅವರೆಲ್ಲಾ ಮನೆಗೆ ಹೋದರು. ಮನೆಗೆ ಹೋದವರೆಲ್ಲರ ಬೆಡ್‌ಶೀಟ್‌ ವಿನಯ್‌ ಅವರ ಬೆಡ್‌ಗೆ ಸೇರುತ್ತಿದೆ. ಜತೆಯಲ್ಲಿದ್ದವರ ಸರಿ ತಪ್ಪುಗಳನ್ನ ವಿನಯ್‌ ಹೇಳಲಿಲ್ಲ’’ ಎಂದು ಡ್ರೋನ್ ಪ್ರತಾಪ್‌ ಹೇಳಿದರು. ಡ್ರೋನ್ ಪ್ರತಾಪ್ ಅವರ ಈ ಮಾತನ್ನ ಕೇಳಿ ವಿನಯ್ ಸುಮ್ಮನಾಗಿದ್ದಾರೆ.

ಈ ವಾರ ಸುದೀಪ್‌ ಅವರು ನಿಮ್ಮ ಅಭಿಪ್ರಾಯಗಳ ಪ್ರಕಾರ ಯಾರು ಯಾವುದರ ಬಗ್ಗೆ ಪುಸ್ತಕ ಬರೆಯಬೇಕು?’’ ಎಂದು ಎಲ್ಲರಿಗೂ ಕಿಚ್ಚ ಸುದೀಪ್‌ ಪ್ರಶ್ನಿಸಿದರು. ಡಾಮಿನೇಟ್‌ ಮಾಡೋದು ಹೇಗೆ?’ ಪುಸ್ತಕವನ್ನು ಮೈಕಲ್‌ ಅವರು ತನಿಷಾಗೆ ನೀಡಿದರು. ʻಡಾಮಿನೇಟ್‌ ಮಾಡೋದ್ರಲ್ಲಿ ಅನುಭವ ತನಿಷಾಗೆ ತುಂಬಾ ಇದೆʼ ಎಂದು ಕಾರಣವನ್ನು ಕೊಟ್ಟರು. ‘ಮುಖವಾಡ ಹಾಕಿಕೊಂಡು ಮುಗುಳುನಗುವುದು ಹೇಗೆ?’ ಪುಸ್ತಕವನ್ನ ತುಕಾಲಿ ಅವರಿಗೆ ನಮ್ರತಾ ನೀಡಿದರು. ಯಾಕಂದ್ರೆ, ‘’ನಾನು ಹಾರ್ಟ್‌ನಲ್ಲಿ ಪ್ಯೂರ್‌ ಇಲ್ಲ ಅಂದುಕೊಂಡು ತುಕಾಲಿ ಸಂತು ನನ್ನ ಬಳಿ ನಗಾಡಿಕೊಂಡು, ಜೋಕ್ಸ್ ಮಾಡಿಕೊಂಡು ಇದ್ದರು. ನನ್ನ ಮೇಲೆ ಪ್ರಾಬ್ಲಂ ಇದ್ದರೂ, ಇಷ್ಟು ದಿನ ಮುಖವಾಡ ಹಾಕಿಕೊಂಡಿದ್ದರು’’ ಎಂದು ನಮ್ರತಾ ಹೇಳಿದರು.

ಇದನ್ನೂ ಓದಿ: BBK SEASON 10: ಈ ಬಾರಿಯೂ ಲಕ್ಷುರಿ ಬಜೆಟ್‌ ಹೊಗೆ; ವಿನಯ್‌ಗೆ ಹೆಚ್ಚಿತು ಆತಂಕ!

ಯಶಸ್ವಿ ಅವಕಾಶವಾದಿ ಆಗೋದು ಹೇಗೆ? ಪುಸ್ತಕವನ್ನು ಸಂಗೀತಾ ಅವರಿಗೆ ಕಾರ್ತಿಕ್‌ ನೀಡಿ, ಅವಕಾಶ ಸಿಕ್ಕರೂ, ಇದೆಯೋ ಇಲ್ಲವೋ ಅವಕಾಶ ತಗೊಂಡು ಸಂಗೀತಾ ಮಾತಾಡೋಕೆ ಬರ್ತಾರೆ ಎಂದರು. ‘ಸಿಂಪಥಿ ಬರಿಸೋದು ಹೇಗೆ?’ ಪುಸ್ತಕವನ್ನ ಡ್ರೋನ್ ಪ್ರತಾಪ್‌ಗೆ ವರ್ತೂರು ಸಂತೋಷ್‌ ಕೊಟ್ಟರು. ‘ಅಹಂಕಾರದಿಂದ ಮೆರೆಯೋದು ಹೇಗೆ?’ ಪುಸ್ತಕವನ್ನ ಕಾರ್ತಿಕ್‌ಗೆ ಸಂಗೀತಾ ಕೊಟ್ಟರು. ಕಾರಣ ನೀಡಿ ʻಅಹಂಕಾರದಿಂದ ಕಾರ್ತಿಕ್ ಮಾತಾಡ್ತಾರೆ ಎಂದರು.

ವಿವೇಚನೆ ಇಲ್ಲದೆ ಮಾತಾಡೋದು ಹೇಗೆ?’ ಪುಸ್ತಕವನ್ನ ವರ್ತೂರು ಸಂತೋಷ್‌ಗೆ ಡ್ರೋನ್ ಪ್ರತಾಪ್ ಕೊಟ್ಟರು. ಸ್ವಾರ್ಥಿಯಾಗಿ ಆಡೋದು ಹೇಗೆ?’ ಪುಸ್ತಕವನ್ನ ವಿನಯ್‌ಗೆ ತನಿಷಾ ಕೊಟ್ಟರು. ‘ಸುಳ್ಳಿನ ಅರಮನೆ ಕಟ್ಟೋದು ಹೇಗೆ?’ ಪುಸ್ತಕವನ್ನ ಡ್ರೋನ್ ಪ್ರತಾಪ್‌ಗೆ ತುಕಾಲಿ ಸಂತು ಕೊಟ್ಟರು. ‘ಕುತಂತ್ರಿ ಆಗೋದು ಹೇಗೆ?’ ಪುಸ್ತಕವನ್ನ ತುಕಾಲಿ ಸಂತುಗೆ ವರ್ತೂರು ಸಂತೋಷ್ ನೀಡಿದರು. ‘ಗುಂಪುಗಾರಿಕೆ ಮಾಡೋದು ಹೇಗೆ?’ ಪುಸ್ತಕವನ್ನ ವಿನಯ್‌ಗೆ ಕಾರ್ತಿಕ್‌ ನೀಡಿದರು. ‘ಬೆನ್ನಿಗೆ ಚೂರಿ ಹಾಕೋದು ಹೇಗೆ?’ ಪುಸ್ತಕವನ್ನ ಕಾರ್ತಿಕ್‌ ಅವರಿಗೆ ವಿನಯ್‌ ಕೊಟ್ಟರು.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version