ಬೆಂಗಳೂರು: ಈ ಬಾರಿ ʻಬಿಗ್ ಬಾಸ್ ಸೀಸನ್ 10ʼರಲ್ಲಿ (BBK Season 10) ಆರು ಮಂದಿ ಫಿನಾಲೆಗೆ ತಲುಪಿದ್ದಾರೆ. ಈಗಾಗಲೇ ಈ ಆರು ಮಂದಿಯ ಹೆಸರುಗಳು ಸೋಷಿಯಲ್ ಮೀಡಿಯಾದಲ್ಲಿ ರಾರಾಜಿಸುತ್ತಿವೆ. ಜ.28ರ ರಾತ್ರಿ ವಿನ್ನರ್ ಘೋಷಣೆಯಾಗುತ್ತಿದೆ. ಸದ್ಯದ ಮಟ್ಟಿಗೆ ಡ್ರೋನ್ ಪ್ರತಾಪ್ ಅವರ ಹೆಸರು ಟ್ರೆಂಡ್ಯಾಗುತ್ತಿದೆ. ಪ್ರತಾಪ್ ಮನೆಗೆ ಬರುವ ಮುಂಚೆ ನೆಗೆಟಿವ್ ಇಮೇಜ್ ಇದ್ದಿತ್ತು. ಇದೀಗ ಡ್ರೋನ್ ಪ್ರತಾಪ್ ಬಗ್ಗೆ ಈಗ ಜನರಲ್ಲಿ ಪಾಸಿಟಿವ್ ಇಮೇಜ್ ಮೂಡಿದೆ. ಕಾರಣವಾದ್ರೂ ಏನು?ಮುಂದೆ ಓದಿ.
ʻಅಸಮರ್ಥʼ ಹಣೆಪಟ್ಟಿಯೊಂದಿಗೆ ಎಂಟ್ರಿ ಕೊಟ್ಟಿದ್ದ ಪ್ರತಾಪ್!(BBK Season 10)
ಲೈವ್ ಆಡಿಯನ್ಸ್ನಿಂದ ಕಡಿಮೆ ವೋಟ್ ಪಡೆದು ‘ಅಸಮರ್ಥರು’ ಎಂಬ ಹಣೆಪಟ್ಟಿಯೊಂದಿಗೆ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದರು ಪ್ರತಾಪ್. ಆರಂಭದ ದಿನಗಳಲ್ಲಿ ಪ್ರತಿ ವಿಷಯಕ್ಕೂ ಕಣ್ಣೀರಿಡುತ್ತಿದ್ದರು ಪ್ರತಾಪ್. ಆದರೀಗ ವಿನಯ್ ಮುಂದೆಯೇ ಎದೆ ತಟ್ಟಿ ನಿಂತು ಅದೆಷ್ಟೋ ಬಾರಿ ಅಬ್ಬರಿಸಿದ್ದೂ ಇದೆ.
ಫ್ಯಾಮಿಲಿ ಜತೆ ನೆಗೆಬೀರಿದ ಪ್ರತಾಪ್!(BBK Season 10)
ಪ್ರತಾಪ್ ಅವರಿಗೆ ಒಂದೇ ಕೊರಗು ಇತ್ತು. ತನ್ನ ಕುಟುಂಬದಿಂದ ತುಂಬ ದೂರವಿದ್ದೆ ಎಂದು. ಅದೆಷ್ಟೋ ಬಾರಿ ಸುದೀಪ್ ಅವರ ಮುಂದೆ ಕೂಡ ಪ್ರತಾಪ್ ಅವರು ತಂದೆ ತಾಯಿ ಜತೆ ಮಾತನಾಡಬೇಕು ಎಂದು ಹೇಳಿದ್ದುಂಟು. ಕಣ್ಣೀರು ಕೂಡ ಸುರಿದ್ದರು. ಆ ಬಳಿಕ ಅಪ್ಪ, ಅಮ್ಮನನ್ನ ಅಪ್ಪಿಕೊಂಡು ಡ್ರೋನ್ ಪ್ರತಾಪ್ ಮುದ್ದಾಡಿದ್ದರು. ಕರ್ನಾಟಕದ ಜನತೆಗೆ ಡ್ರೋನ್ ಪ್ರತಾಪ್ ತಂದೆ ಕೂಡ ಕ್ಷಮೆ ಕೇಳಿದ್ದರು.
ಇದನ್ನೂ ಓದಿ: BBK Season 10: ʻಬಿಗ್ ಬಾಸ್ʼ ಗೆದ್ದವರಿಗೆ 50 ಲಕ್ಷ ರೂ. ಜತೆ ಏನೆಲ್ಲ ಗಿಫ್ಟ್ ಸಿಗಲಿದೆ?
ಆಟದಲ್ಲಿ ಮಾಂತ್ರಿಕ
ಇನ್ನು ಪ್ರತಾಪ್ ಮೊದಲಿಗೆ ಆಟದಲ್ಲಿ ಭಾರಿ ಸ್ಲೋ ಆಗಿದ್ದರು. ಬರ ಬರುತ್ತ ವಿನಯ್ ಟೀಂಗೆ ಟಕ್ಕರ್ ಕೊಡುತ್ತ ಬಂದರು. ಮಹಿಳೆಯರಿಗೆ ಸಪೋರ್ಟ್ ಮಾಡಿ, ತಾವೊಬ್ಬರೆ ನುಗ್ಗಿ ಆಟದಲ್ಲಿ ಸೈ ಎನಿಸಿಕೊಂಡಿದ್ದರು ಇದೆ. ಯುಕ್ತಿಯಲ್ಲಿ ಕೂಡ ಪ್ರತಾಪ್ ಹಿಂದೆ ಬಿದ್ದಿಲ್ಲ. ತಮ್ಮನ್ನ ಟಾರ್ಗೆಟ್ ಮಾಡಿದವರಿಗೆ ಟೈಮ್ ನೋಡಿ ಡ್ರೋನ್ ಪ್ರತಾಪ್ ಹೊಡೆತ ನೀಡಿದ್ದರು. ವೀಕೆಂಡ್ ಬಂದರೆ ಸಾಕು ಕಿಚ್ಚ ಅವರ ಮುಂದೆಯೇ ನೇರವಾಗಿ ತಮ್ಮ ಅಭಿಪ್ರಾಯಗಳನ್ನು ಮಂಡಿಸುತ್ತಿದ್ದರು.
ಸಮಾಧಾನದ ವ್ಯಕ್ತಿತ್ವ
ಡ್ರೋನ್ ಪ್ರತಾಪ್ ಅವರು ವಿನಯ್ ಬಳಿ ಸಾಕಷ್ಟು ಬಾರು ಕೂಗಾಡಿದ್ದಾರೆ. ವಿನಯ್ ಅವರು ಎಷ್ಟೇ ಅಶ್ಲೀಲ ಭಾಷೆ ಉಪಯೋಗಿಸಿದರೂ ತಾವು ಮಾತ್ರ ಸಮಾಧಾನದಲ್ಲಿಯೇ ಮಾತಿಗೆ ತಿರುಗೇಟು ಕೊಡುತ್ತಿದ್ದರು ಡ್ರೋನ್ ಪ್ರತಾಪ್. ಮಂಡ್ಯದ ಭಾಷೆಯ ಬಳಿಕೆ, ಆಡಿಯೆನ್ಸ್ನ ಅಟ್ರ್ಯಾಕ್ಟ್ ಮಾಡುವ ಸ್ಟ್ರಾಟೆಜಿಗೆ ಸ್ವತಃ ವೀಕ್ಷಕರೇ ಫಿದಾ ಆಗಿ ಹೋಗಿದ್ದರು.
ಕಣ್ಣಿಗೆ ಪೆಟ್ಟಿ ಬಿದ್ರೂ ಹೆದರಲೇ ಇಲ್ಲ
ಆಡದಲ್ಲಿ ಕಣ್ಣಿಗೆ ಪೆಟ್ಟಾದಗಲೂ ಕೂಡ ಮನೆಗೆ ಮತ್ತೆ ಡ್ರೋನ್ ಪ್ರತಾಪ್ ಮರಳಿ ಆಟದಲ್ಲಿ ಸೈ ಎನಿಸಿಕೊಂಡರು. ಟಾಸ್ಕ್ಗಳಲ್ಲಿ ಇನ್ನೂ ಚೆನ್ನಾಗಿ ಪರ್ಫಾಮ್ ಮಾಡಲು ಆರಂಭಿಸಿದರು. ಈ ವರ್ಷದಾರಂಭದಲ್ಲಿ ಊಟ ಬಿಟ್ಟಿದ್ದ ಕಾರಣ ಆಸ್ಪತ್ರೆಗೆ ಮತ್ತೆ ಅಡ್ಮಿಟ್ ಆದರು.
ಮಹಿಳಾ ಸ್ಪರ್ಧಿಯ ಮೆಚ್ಚುಗೆಯ ತಮ್ಮ
ಎಂಟರ್ಟೈನ್ಮೆಂಟ್ಗೂ ಪ್ರತಾಪ್ ಏನು ಕಮ್ಮಿ ಇರಲಿಲ್ಲ, ಅಷ್ಟೇ ಅಲ್ಲ ಮನೆಯ ಎಲ್ಲ ಮಹಿಳಾ ಸ್ಪರ್ಧಿಗಳಿಗೆ ʻದೀದಿʼ ಎನ್ನುತ್ತಲೇ ಎಲ್ಲರ ವಿಶ್ವಾಸವನ್ನು ಗಳಿಸಿದ್ದರು. ಮಾತ್ರವಲ್ಲ ತಮಗೆ ಅವಕಾಶ ಸಿಕ್ಕಾಗ ದೀದಿಯರಿಗೆ ಸಪೋರ್ಟ್ ಕೂಡ ಮಾಡುತ್ತಿದ್ದರು. ಇಂದಿಗೂ ಸಂಗೀತಾ ಅವರ ಮೆಚ್ಚಿನ ತಮ್ಮ ಮನೆಯಲ್ಲಿ ಆಗಿದ್ದಾರೆ.
ಹೊರಗಿನ ಸಮಾಜದಲ್ಲಿ ಸುಳ್ಳ, ಡೋಂಗಿ ಎನಿಸಿಕೊಂಡಿದ್ದ ಡ್ರೋನ್ ಪ್ರತಾಪ್, ಬಿಗ್ಬಾಸ್ ಮನೆಯಲ್ಲಿ ಜನರ ಪ್ರೀತಿ ಗಳಿಸಿ ಫಿನಾಲೆ ವಾರಕ್ಕೆ ತಲುಪಿದ್ದಾರೆ. ಇದೀಗ ಹೊರಗೆ ತಾವು ಮಾಡಿದ ತಪ್ಪಿಗೆ ಬಿಗ್ಬಾಸ್ ಮನೆ ಮೂಲಕ ಕ್ಷಮೆ ಕೇಳಿದ್ದಾರೆ. ಈ ಸೀಸನ್ ವಿನ್ನರ್ ಆಗಲಿ ಎಂಬುದೇ ಅವರ ಫ್ಯಾನ್ಸ್ ಆಸೆ.