ಬೆಂಗಳೂರು: ಬಿಗ್ ಬಾಸ್ ಸೀಸನ್ 10ರ ರನ್ನರ್ ಅಪ್ ಡ್ರೋನ್ ಪ್ರತಾಪ್ (Drone Prathap) ಅವರಿಗೆ ಬಿಗ್ ಬಾಸ್ ಕಡೆಯಿಂದ 10 ಲಕ್ಷ ರೂಪಾಯಿ ಹಾಗೂ ಒಂದು ಬೌನ್ಸ್ ಬೈಕ್ ಸಿಕ್ಕಿದೆ. ಪ್ರತಾಪ್‌ಗೆ ಬಿದ್ದ ವೋಟ್ಗಳ ಸಂಖ್ಯೆ ಕೋಟಿಗಳಲ್ಲಿದೆ. ಅವರ ಫ್ಯಾನ್ಸ್ ಕ್ರೇಜ್ ಕಮ್ಮಿ ಏನಿಲ್ಲ. ಮನೆಯಿಂದ ಹೊರ ಹೋದ ಬಳಿಕ ಡ್ರೋನ್ ಪ್ರತಾಪ್ ಹೋದಲೆಲ್ಲಾ ಫ್ಯಾನ್ಸ್ ಅವರನ್ನು ಮುತ್ತಿಕೊಳ್ಳುತ್ತಿದ್ದಾರೆ. ಚಾಮರಾಜನಗರ ಜಿಲ್ಲೆಯಲ್ಲಿರುವ ಮಲೆ ಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿದ್ದರು ಪ್ರತಾಪ್. ಚಾಮರಾಜನಗರದ ಹನೂರು ತಾಲೂಕಿನಲ್ಲಿರುವ ಮಹದೇಶ್ವರ ಬೆಟ್ಟಕ್ಕೆ ಪ್ರತಾಪ್ ತೆರಳಿ ಆಶೀರ್ವಾದ ಪಡೆದಿದ್ದರು. ಈ ಸಂದರ್ಭದಲ್ಲಿ ಅವರು, ಅನ್ನ ಪ್ರಸಾದವನ್ನು ಬರಿಯ ನೆಲದ ಮೇಲೆ ತಿಂದು ಹರಕೆ ತೀರಿಸಿದ್ದಾರೆ.
ಇದರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಅವರ ಫ್ಯಾನ್ಸ್ ಪೇಜ್ನಿಂದ ಈ ವಿಡಿಯೊ ಶೇರ್ ಆಗಿದ್ದು, ಅಭಿಮಾನಿಗಳು ಪ್ರತಾಪ್‌ಗೆ ಜೈಕಾರ ಹಾಕುತ್ತಿದ್ದಾರೆ. ಹಲವರು ಕಮೆಂಟ್ ಮಾಡಿದ್ದು, ಪ್ರತಾಪ್ ಅವರಿಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಇದೀಗ ಡ್ರೋನ್ ಪ್ರತಾಪ್ ಫ್ಯಾನ್ಸ್ ʻʻಎಲ್ಲರೂ ಎಣ್ಣೆ ಪಾರ್ಟಿ ಮೋಜು ಮಸ್ತಿ ಮಾಡುತ್ತಿದ್ದರೆ, ದೇವಸ್ಥಾನದಲ್ಲಿ ಇಷ್ಟು ಭಕ್ತಿ ಇಂದ ಪೂಜೆ ಮಾಡ್ತಾ ಇದ್ದಾರೆ ನಮ್ಮ ಪ್ರತುʼʼಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ʻಮಣ್ಣಿನ ಮಗʼ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ.
ಮಲೆ ಮಹದೇಶ್ವರ ಬೆಟ್ಟದಲ್ಲಿ ಡ್ರೋನ್ ಪ್ರತಾಪ್ ನೋಡಲು ಮುಗಿಬಿದ್ದ ಫ್ಯಾನ್ಸ್!
ಪ್ರತಾಪ್ ಮನೆಗೆ ಬರುವ ಮುಂಚೆ ನೆಗೆಟಿವ್ ಇಮೇಜ್ ಇದ್ದಿತ್ತು. ಇದೀಗ ಡ್ರೋನ್ ಪ್ರತಾಪ್ ಬಗ್ಗೆ ಈಗ ಜನರಲ್ಲಿ ಪಾಸಿಟಿವ್ ಇಮೇಜ್ ಮೂಡಿದೆ. ಲೈವ್ ಆಡಿಯನ್ಸ್‌ನಿಂದ ಕಡಿಮೆ ವೋಟ್ ಪಡೆದು ‘ಅಸಮರ್ಥರು’ ಎಂಬ ಹಣೆಪಟ್ಟಿಯೊಂದಿಗೆ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದರು ಪ್ರತಾಪ್. ಆರಂಭದ ದಿನಗಳಲ್ಲಿ ಪ್ರತಿ ವಿಷಯಕ್ಕೂ ಕಣ್ಣೀರಿಡುತ್ತಿದ್ದರು ಪ್ರತಾಪ್. ಇದೀಗ ರನ್ನರ್ ಅಪ್ ಆಗಿ ಜನರ ಮುಂದೆ ನಿಂತಿದ್ದಾರೆ.
ಇದನ್ನೂ ಓದಿ: Drone Prathap: ಡ್ರೋನ್ ಪ್ರತಾಪ್‌ಗೆ ಎದುರಾಗುತ್ತಾ ಸಂಕಷ್ಟ? ತನಿಖೆ ಕೈಗೆತ್ತಿಕೊಂಡ ಪೊಲೀಸರು
ಪ್ರತಾಪ್ ಅವರಿಗೆ ಒಂದೇ ಕೊರಗು ಇತ್ತು. ತನ್ನ ಕುಟುಂಬದಿಂದ ತುಂಬ ದೂರವಿದ್ದೆ ಎಂದು. ಅದೆಷ್ಟೋ ಬಾರಿ ಸುದೀಪ್ ಅವರ ಮುಂದೆ ಕೂಡ ಪ್ರತಾಪ್ ಅವರು ತಂದೆ ತಾಯಿ ಜತೆ ಮಾತನಾಡಬೇಕು ಎಂದು ಹೇಳಿದ್ದುಂಟು. ಕಣ್ಣೀರು ಕೂಡ ಸುರಿದ್ದರು. ಆ ಬಳಿಕ ಅಪ್ಪ, ಅಮ್ಮನನ್ನ ಅಪ್ಪಿಕೊಂಡು ಡ್ರೋನ್ ಪ್ರತಾಪ್ ಮುದ್ದಾಡಿದ್ದರು. ಕರ್ನಾಟಕದ ಜನತೆಗೆ ಡ್ರೋನ್ ಪ್ರತಾಪ್ ತಂದೆ ಕೂಡ ಕ್ಷಮೆ ಕೇಳಿದ್ದರು. ಇತ್ತೀಚೆಗೆ ಅವರು ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿ ದೇವರ ದರ್ಶನ ಮಾಡಿದ್ದರು. ಈ ಸಂದರ್ಭದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಜನರು ಸೇರಿದ್ದರು. ಎಲ್ಲರೂ ಪ್ರತಾಪ್ ಬಳಿ ಸೆಲ್ಫಿ ಕೇಳಿದ್ದಾರೆ. ಮೈಸೂರಿನಿಂದ 130 ಕಿ.ಮೀ ಹಾಗೂ ಬೆಂಗಳೂರಿನಿಂದ 210 ಕಿ.ಮೀ ದೂರವಿದೆ ಈ ಮಹದೇಶ್ವರ ಬೆಟ್ಟ.