Site icon Vistara News

Drone Prathap: ಡ್ರೋನ್‌ ಪ್ರತಾಪ್‌ ಆರೋಗ್ಯ ಈಗ ಹೇಗಿದೆ? ಹೊರಬಿತ್ತು ಮಹತ್ವದ ಅಪ್‌ಡೇಟ್‌!

Drone Prathap Recovering From Food Poison

ಬೆಂಗಳೂರು: ʻಬಿಗ್‌ ಬಾಸ್‌ʼ ಲೈವ್‌ನಲ್ಲಿ ಡ್ರೋನ್‌ ಪ್ರತಾಪ್‌ (Drone Prathap) ಅವರು ಕಾಣಿಸಲಿಲ್ಲ. ಸಂಗೀತಾ ಅವರು ಕ್ಯಾಮೆರಾ ಎದುರು ಬಂದು ‘ಮಿಸ್ ಯೂ ಪ್ರತು’ ಎಂದು ಹೇಳಿದ್ದರು. ಪ್ರತಾಪ್ ಎಲ್ಲಿ ಹೋದರು ಎನ್ನುವ ಪ್ರಶ್ನೆ ಮೂಡಿತ್ತು. ಇದಾದ ಬಳಿಕ ಪ್ರತಾಪ್‌ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು ಎಂಬ ವದಂತಿ ಹಬ್ಬಿತ್ತು. ಸಂಜೀವಿನಿ ಆಸ್ಪತ್ರೆ ವೈದ್ಯರು ಇದೀಗ ಸ್ಪಷ್ಟನೆ ನೀಡಿದ್ದಾರೆ.

ʻʻಪ್ರತಾಪ್‌ ಅವರು ಅಡ್ಮಿಟ್ ಆಗಿದ್ದೂ ಹೌದು. ಅವರಿಗೆ ವಾಂತಿ ಭೇದಿಯಿಂದಾಗಿ ಬುಧವಾರ (ಜ.3)ರಂದು ಆಸ್ಪತ್ರೆಗೆ ದಾಖಲಾದರು. ಇಂದು ಮಧ್ಯಾಹ್ನ 1 ಗಂಟೆಗೆ ಡಿಸ್ಚಾರ್ಜ್‌ ಆಗಿದ್ದಾರೆ. ಫುಡ್ ಇನ್‌ಫೆಕ್ಷನ್‌ ನಿಂದ ಬಳಲುತ್ತಿದ್ದರು. ಊಟ ಮಾಡದೇ ಇರೋದು ಇದಕ್ಕೆ ಕಾರಣ. ಪ್ರತಾಪ್ ಆಸ್ಪತ್ರೆಗೆ ಬರುವಾಗ ಪ್ರಜ್ಞೆ ತಪ್ಪಿರಲಿಲ್ಲ. ಅವರು ಯಾವುದೇ ಟ್ಯಾಬ್ಲೆಟ್ ಸೇವನೆ ಮಾಡಿರಲಿಲ್ಲ. ʻಬಿಗ್ ಬಾಸ್ʼ ಮನೆಯ ಊಟ ಅವರಿಗೆ ಸೇವಿಸಲು ಕಷ್ಟವಾಗ್ತಿಯಂತೆ. ಆಸ್ಪತ್ರೆಗೆ ಬಂದಾಗ ಅವರಿಗೆ ಆಗುತ್ತಿರುವ ಸಮಸ್ಯೆ ಹೇಳಿಕೊಂಡಿದ್ದಾರೆ. ಪ್ರತಾಪ್ ಮಾನಸಿಕವಾಗಿ ತುಂಬಾ ಸ್ಟ್ರಾಂಗ್ ಆಗಿದ್ದಾರೆ. ಬಿಗ್ ಬಾಸ್ ಟ್ರೋಫಿ ಗೆದ್ದು ಬರ್ತೀನಿ ಎಂದು ಹೇಳಿದ್ದಾರೆʼʼಎಂದು ವೈದ್ಯರು ತಿಳಿಸಿದ್ದಾರೆ.

ಪ್ರತಾಪ್‌ ಅವರ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಈ ಬಗ್ಗೆ ಅಪ್​​ಡೇಟ್ ನೀಡಲಾಗಿದೆ. ಈ ವಿಚಾರ ಕೇಳಿ ಫ್ಯಾನ್ಸ್ ನಿಟ್ಟುಸಿರು ಬಿಟ್ಟಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಪ್ರತಾಪ್ (Prathap) ಅವರು ಆಗಾಗ ಸೈಲೆಂಟ್ ಆಗುತ್ತಾರೆ. ಕಷ್ಟದ ಸಂದರ್ಭದಲ್ಲಿ ಪ್ಯಾನಿಕ್ ಆಗುತ್ತಾರೆ ಎನ್ನುವ ಅಭಿಪ್ರಾಯವೂ ಅನೇಕರದ್ದು. ಇದೇ ವಿಚಾರ ಇಟ್ಟುಕೊಂಡು ಮನೆಯಲ್ಲಿ ಟಾಸ್ಕ್​​ನಿಂದ ಹೊರಗೆ ಇಡಲಾಗಿದೆ. ‘ನನಗೆ ಒಂದು ಚಾನ್ಸ್ ಕೊಟ್ಟರೆ ತಾನೇ ಗೊತ್ತಾಗೋದು. ಪದೇಪದೆ ಪ್ಯಾನಿಕ್ ಆಗ್ತೀಯಾ ಎಂದರೆ ಅದು ಎಷ್ಟು ಸರಿ’ ಎಂದು ಪ್ರತಾಪ್ ಅವರು ಸಂಗೀತಾ ಹಾಗೂ ನಮ್ರತಾನ ಪ್ರಶ್ನೆ ಮಾಡಿದ್ದಾರೆ. ಈ ಪ್ರೋಮೊ ಕೂಡ ಕಲರ್ಸ್‌ ಕನ್ನಡ ವಾಹಿನಿ ಹಂಚಿಕೊಂಡಿದೆ.

ಇದನ್ನೂ ಓದಿ: Drone Prathap: ಬಿಗ್‌ಬಾಸ್‌ ಮನೆಯಲ್ಲಿ ಡ್ರೋನ್‌ ಪ್ರತಾಪ್ ಆತ್ಮಹತ್ಯೆಗೆ ಯತ್ನ; ಆಗಿದ್ದೇನು?

ಡ್ರೋನ್​ ಪ್ರತಾಪ್​ಗೆ ಲೀಗಲ್​ ನೋಟಿಸ್​ ಕಳುಹಿಸಿದ ಡಾ. ಪ್ರಯಾಗ್!​​

ಬಿಗ್​ಬಾಸ್​ ಕನ್ನಡದ 10ನೇ ಆವೃತ್ತಿಯಲ್ಲಿರುವ ಪ್ರಬಲ ಸ್ಪರ್ಧಿ ಡ್ರೋನ್​ ಪ್ರತಾಪ್​ಗೆ (Drone Prathap) ಸಂಕಷ್ಟವೊಂದು ಎದುರಾಗಿತ್ತು. ಬಿಬಿಎಂಪಿ ಅಧಿಕಾರಿಯಾಗಿರುವ ಪಶುವೈದ್ಯ ಡಾ. ಪ್ರಯಾಗ್​ ಎಚ್​ ಎಸ್​ ಅವರು ಕಾನೂನು ನೋಟಿಸ್​ ಕಳುಹಿಸಿದ್ದರು. ತಮ್ಮ ಬಗ್ಗೆ ಅನಗತ್ಯ ಆರೋಪಗಳನ್ನು ಮಾಡಿರುವ ಡ್ರೋನ್ ಪ್ರತಾಪ್ ನೋಟಿಸ್​ ತಲುಪಿದ ಒಂದು ತಿಂಗಳ ಒಳಗೆ ಬಹಿರಂಗ ಹಾಗೂ ಲಿಖಿತ ಕ್ಷಮೆ ಕೋರದೆ ಹೋದರೆ ಮಾನನಷ್ಟ ಮೊಕದ್ದಮೆಯನ್ನು ಹೂಡುವುದಾಗಿ ಅವರು ವಕೀಲರ ಮೂಲಕ ನೋಟಿಸ್​ ಕಳುಹಿಸಿದ್ದರು.

ವಿವಾದಿತ ಕನ್ನಡ ರಿಯಾಲಿಟಿ ಶೋ ಬಿಗ್​ಬಾಸ್​​ನ ಸ್ಪರ್ಧಿಯಾಗಿರುವ ನೀವು, ಜನರ ಅನುಕಂಪ ಗಳಿಸುವ ಹಾಗೂ ಪ್ರಚಾರ ಪಡೆಯುವ ಉದ್ದೇಶದಿಂದ ನನ್ನ ಮೇಲೆ ಅನಗತ್ಯ ಆರೋಪಗಳನ್ನು ಮಾಡಿದ್ದೀರಿ. ಕೊರೊನಾ ಕಾಲದಲ್ಲಿ ನೋಡಲ್ ಅಧಿಕಾರಿಯಾಗಿ ಕೆಲಸ ಮಾಡಿದ್ದ ನನ್ನ ಮೇಲೆ, ಹಲ್ಲೆ ಮಾಡಿರುವ ಆರೋಪ ಮಾಡಿದ್ದೀರಿ. ಎಲ್ಲವೂ ಸತ್ಯಕ್ಕೆ ದೂರವಾಗಿರುವ ವಿಚಾರ. ವಾಸ್ತವದಲ್ಲಿ ಕ್ವಾರಂಟೈನ್​ ನಿಯಮಗಳನ್ನು ನೀವು ಉಲ್ಲಂಘಿಸಿರುವ ಬಗ್ಗೆ ನಮ್ಮ ಬಳಿಕ ಸೂಕ್ತ ದಾಖಲೆಗಳು ಇವೆ. ಇಂಥದ್ದರಲ್ಲಿ ನನ್ನ ಮೇಲೇಯೇ ಆರೋಪ ಮಾಡಿರುವ ನಿಮ್ಮ ಬಗ್ಗೆ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದ್ದೇನೆ. ಕ್ಷಮೆ ಕೋರದ ಹೊರತು ಮುಂದಿನ ಕ್ರಮ ಕೈಗೊಳ್ಳುತ್ತೇನೆ ಎಂದು ಡಾ. ಪ್ರಯಾಗ್ ಅವರು ನೋಟಿಸ್​ನಲ್ಲಿ ತಿಳಿದ್ದರು.

Exit mobile version