Site icon Vistara News

BBK season 10: ಟಾರ್ಗೆಟ್‌ ಆದ ಡ್ರೋನ್‌; ವಿನಯ್‌ ಸೇಫ್‌, ಪ್ರತಾಪ್‌ಗೇ ವೋಟ್‌ ಅಂದ್ರು ಫ್ಯಾನ್ಸ್‌!

drone prathap and Vinay Gowda BBK 10

ಬೆಂಗಳೂರು: ಈ ವಾರ ಬಿಗ್‌ ಬಾಸ್‌ ಮನೆಯಲ್ಲಿ (BBK season 10) ನಾಮಿನೇಶನ್‌ ಪ್ರಕ್ರಿಯೆ ಮುಗಿದಿದೆ. ಭಾಗ್ಯಶ್ರೀ, ಡ್ರೋನ್ ಪ್ರತಾಪ್, ಕಾರ್ತಿಕ್, ತನಿಷಾ, ಮೈಖಲ್, ಸ್ನೆಹಿತ್, ವಿನಯ್ ಅವರುಗಳೂ ಎಲಿಮಿನೇಶನ್​ಗೆ ನಾಮಿನೇಟ್ ಆಗಿದ್ದಾರೆ. ನೀತು ಹಾಗೂ ಇಶಾನಿ ಅವರುಗಳು ನೇರವಾಗಿ ನಾಮಿನೇಟ್ ಆಗಿದ್ದಾರೆ. ಅದರಲ್ಲಿ ವಿನಯ್ ಮತ್ತು ಪ್ರತಾಪ್‌ಗೆ ಎಲಿಮಿನೇಷನ್‌ನಿಂದ ಪಾರಾಗುವುದಕ್ಕೆ ಬಿಗ್‌ ಬಾಸ್ ಅವಕಾಶ ನೀಡಿದ್ದರು. ಈ ಪ್ರಕ್ರಿಯೆ ಆಗುವಾಗ ಸದಸ್ಯರು ಡ್ರೋನ್‌ ಅವರನ್ನೇ ಟಾರ್ಗೆಟ್‌ ಮಾಡಿದ್ದಾರೆ.

ಇಶಾನಿ ಹಾಗೀ ನೀತು ನೇರವಾಗಿ ನಾಮಿನೇಟ್‌ ಆಗಿದ್ದರು. ಉಳಿದ ಸದಸ್ಯರಿಗೆ ಒಬ್ಬ ಅದೃಷ್ಟಶಾಲಿಯನ್ನು ನಾಮಿನೇಷನ್​ನಿಂದ ಪಾರು ಮಾಡುವ ಟಾಸ್ಕ್ ಒಂದನ್ನು ಬಿಗ್​ಬಾಸ್ ನೀಡಿದ್ದರು. ನಾಮಿನೇಟ್ ಆಗಿರುವ ಸದಸ್ಯರು, ತಮ್ಮನ್ನು ನಾಮಿನೇಟ್ ಮಾಡಿರಬಹುದಾದ ಸದಸ್ಯರ ಹೆಸರುಗಳನ್ನು ಸರಿಯಾಗಿ ಅಂದಾಜು ಮಾಡಿ ಹೇಳಿದರೆ ಅವರಿಗೆ ನಾಮಿನೇಷನ್​ ಇಂದ ಹೊರಗೆ ಉಳಿಯುವಂತೆ ಟಾಸ್ಕ್‌ ನೀಡಿದ್ದರು ಬಿಗ್‌ ಬಾಸ್‌. ಈ ಟಾಸ್ಕ್​ನಲ್ಲಿ ಡ್ರೋನ್ ಪ್ರತಾಪ್ ಹಾಗೂ ವಿನಯ್ ಅವರು ತಮ್ಮನ್ನು ನಾಮಿನೇಟ್ ಮಾಡಿದವರ ಹೆಸರನ್ನು ಬಹುತೇಕ ಸರಿಯಾಗಿ ಹೇಳಿದರು. ವಿನಯ್‌ ಹಾಗೂ ಪ್ರತಾಪ್‌ ಸಂವಾದ ಮಾಡಬೇಕಿತ್ತು.

ವಿನಯ್ ಗೌಡ ಹೇಳಿದ್ದೇನು?

ಏನೇ ಇದ್ದರೂ ನಾನು ಎಲ್ಲವನ್ನೂ ನೇರವಾಗಿಯೇ ಹೇಳುತ್ತೇನೆ. ಮನೆಯ ಸದಸ್ಯರಿಗೆ ಸಹಾಯ ಮಾಡುತ್ತೇನೆ. ನಾನು ಗೊಂದಲ ಮಾಡಿಕೊಳ್ಳುವುದಿಲ್ಲ. ನನ್ನ ನಿರ್ಧಾರಗಳು ಸರಿಯಾಗಿ ಇರುತ್ತವೆʼʼ ಎಂದರು. ಅಷ್ಟೇ ಅಲ್ಲದೇ ಡ್ರೋನ್‌ ಪ್ರತಾಪ್‌ ಅವರು ಬಗ್ಗೆಯೂ ಕೆಲವು ಆರೋಪಗಳನ್ನು ಮಾಡಿದರು. ʻʻಸದಾ ಗೊಂದಲದಲ್ಲಿರುತ್ತಾನೆ, ಡ್ಯಾನ್ಸ್ ಮಾಡುತ್ತ ಹೀರೋ ಆಗಲು ನೋಡುತ್ತಾನೆʼʼ ಎಂಬ ಕೆಲವು ಆರೋಪಗಳನ್ನು ಮಾಡಿದರು.

ಪ್ರತಾಪ್‌ ಹೇಳಿದ್ದೇನು

ʻʻನಾನು ಸಿಟ್ಟು ಮಾಡಿಕೊಳ್ಳಲ್ಲ. ನಾನು ಎಲ್ಲರನ್ನೂ ಸಮಾನವಾಗಿ ಕಾಣುತ್ತೇನೆ. ಯಾರ ಮೇಲೂ ದ್ವೇಷ ಮಾಡಿಕೊಳ್ಳವುದಿಲ್ಲ. ಎಲ್ಲರನ್ನೂ ಒಂದೇ ದೃಷ್ಟಿಯಿಂದ ನೋಡುತ್ತೇನೆ. ತಾರತಮ್ಯ ಮಾಡುವುದಿಲ್ಲ. ಟಾಸ್ಕ್‌ ಎಂದು ಬಂದಾಗ ನಾನು ಚೆನ್ನಾಗಿ ಆಡಿದ್ದೇನೆʼʼ ಎಂದರು ಪ್ರತಾಪ್‌.

ಹೀಗೆ ಇಬ್ಬರೂ ತಮ್ಮ ಬಗ್ಗೆ ಹೇಳಿಕೊಂಡರು. ಅಷ್ಟೇ ಅಲ್ಲದೇ ಇದರ ಜತೆ ಜಗಳವೂ ಆಯಿತು. ಇದಾದ ಬಳಿಕ ಕೆಲವು ಸದಸ್ಯರು ಪ್ರತಾಪ್‌ ಅವರ ಮೇಲೆ ಹಲವು ಪ್ರಶ್ನಗೆಳನ್ನು ಕೇಳಿದರು. ಇನ್ನೊಂದಿಷ್ಟು ಮಂದಿ ಪ್ರತಾಪ್ ಮೇಲೆ ಇದ್ದ ಅಸಮಾಧಾನವನ್ನು ಹೊರಹಾಕಿದರು. ನಮ್ರತಾ ಕೂಡ ʻʻನನಗೆ ಪ್ರತಾಪ್‌ ಅವರಿಂದ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲʼ ಎಂದರು. ಸ್ನೇಹಿತ್‌ ಅವರು `ಪ್ರತಾಪ್‌ ಅವರು ಅಡ್ಡ ಗೋಡೆ ಮೇಲೆ ದೀಪ ಇಟ್ಟಂಗೆ ಮಾತಾಡಿದ್ರು’ ಎಂದು ಅಸಮಾಧಾನ ಹೊರಹಾಕಿದ್ರು. ತುಕಾಲಿ ಸಂತು ಕೂಡ ಸಿಟ್ಟಿನಿಂದಲೇ ಪ್ರತಾಪ್‌ಗೆ ಪ್ರಶ್ನೆಗಳನ್ನು ಕೇಳಿದರು.ವಿನಯ್​ಗೆ ಯಾರೂ ಹೆಚ್ಚಿನ ಪ್ರಶ್ನೆಗಳನ್ನು ಕೇಳಲಿಲ್ಲ.

ಇದನ್ನೂ ಓದಿ: BBK season 10: ಮಗನ ಸಾಯಿಸಿಬಿಡು ಎಂದು ಅಮ್ಮನ ಬಳಿ ಹೇಳಿದ್ರು; ಅಳಬೇಡ ಪ್ರತಾಪ್‌ ಕರುಳು ಕಿತ್ತು ಬರುತ್ತೆ ಅಂದ್ರು ಜನ!

ಇದಾದ ಬಳಿಕ ಮನೆಯ 12 ಮಂದಿಯೂ ವಿನಯ್‌ಗೆ ವೋಟ್ ಹಾಕಿದರು. ವಿನಯ್‌ ಕೂಡ ಮನೆಯ ಸದಸ್ಯರಿಗೆ ಧನ್ಯವಾದ ಸೂಚಿಸಿದರು. ಇದಾದ ಬಳಿಕ ಪ್ರತಾಪ್‌ ಅವರ ಮನೆಯ ಸದಸ್ಯರಲ್ಲಿ ʻʻನೀವು ನನಗೆ ಮತಹಾಕಲಿಲ್ಲ ಎಂಬ ಬೇಸರ ನನಗಿಲ್ಲ. ನಾನು ಏನಾದರೂ ತಪ್ಪು ಮಾಡಿದ್ದರೆ ಅದನ್ನು ತಿದ್ದಿಕೊಳ್ಳುವ ಪ್ರಯತ್ನ ಮಾಡುತ್ತೇನೆʼʼ ಎಂದರು.

ಇದೀಗ ಪ್ರತಾಪ್‌ ಫ್ಯಾನ್ಸ್‌ ʻʻವಿನಯ್ ಉಳಿಸೋಕೆ ವೋಟ್ ಮಾಡಿದ್ರೆ, ಪ್ರತಾಪ್ ಉಳಿಸೋಕೆ ಇಲ್ಲಿ ಲಕ್ಷಾಂತರ ಜನ ವೋಟ್ ಮಾಡ್ತಿದ್ದಾರೆʼʼ ಎಂದು ಕಮೆಂಟ್‌ ಮಾಡಿದ್ದಾರೆ. ಮತ್ತೊಬ್ಬರು ʻʻನಾನು ಬಿಗ್ ಬಾಸ್ ನೋಡ್ತಿರೋದು ಪ್ರತಾಪ್ ಗೋಸ್ಕರ. ಪ್ರತಾಪ್ ಏನಾದ್ರೂ ಆಚೆ ಬಂದರೆ ಬಿಗ್ ಬಾಸ್ ನೋಡದೆ ಇಲ್ಲ. ಹಿಂದೆ ನಡೆದಿರೋ ಬಿಗ್ ಬಾಸ್ ಸೀಸನ್ ಯಾವುದು ನಾನು ನೋಡೇ ಇಲ್ಲ. ಫಸ್ಟ್ ಟೈಮ್ ಸೀಸನ್ 10 ನೋಡ್ತಿರೋದುʼʼಎಂದು ಮತ್ತೊಬ್ಬರು ಕಮೆಂಟ್‌ ಮಾಡಿದ್ದಾರೆ.

ಇದನ್ನೂ ಓದಿ: BBK Season 10: ಗಾದೆಗೆ ತಕ್ಕ ವ್ಯಕ್ತಿತ್ವ; ಸಂಗೀತಾ ಗರಂ!

ಹೀಗಾಗಿ ಈ ವಾರ ಭಾಗ್ಯಶ್ರೀ, ಪ್ರತಾಪ್, ಕಾರ್ತಿಕ್, ತನಿಷಾ, ಮೈಖಲ್, ಸ್ನೆಹಿತ್, ನೀತು, ಇಶಾನಿ ನಾಮಿನೇಟ್‌ ಆಗಿದ್ದಾರೆ. ಬಿಗ್​ಬಾಸ್ ಕನ್ನಡ ಕಲರ್ಸ್ ವಾಹಿನಿಯಲ್ಲಿ ಪ್ರತಿರಾತ್ರಿ 9:30ಕ್ಕೆ ಹಾಗೂ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

Exit mobile version