Site icon Vistara News

BBK SEASON 10: ಪ್ರತಾಪ್‌ಗೆ ಸೋಲು; ಕರ್ಮ ಅಂದ್ರೆ ಇದೇನಾ? ಎಂದ ಸಂಗೀತಾ; ಕಾರ್ತಿಕ್‌ಗೆ ಕ್ಯಾಪ್ಟನ್ಸಿ!

Drone Prathap Team Looses Badly karthik in captain race

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10 (BBK SEASON 10:) ಎಂಟನೇ ವಾರಕ್ಕೆ ಕಾಲಿಟ್ಟಿದೆ. ʻಮಣ್ಣಿನ ಮಗʼ ಹಾಗೂ ʻವಿಕ್ರಾಂತ್‌ʼ ಎಂಬ ಎರಡು ತಂಡ ರಚೆಯಾಗಿತ್ತು. ಮಣ್ಣಿನ ಮಗ ತಂಡದಲ್ಲಿ ಪ್ರತಾಪ್‌ ಕ್ಯಾಪ್ಟನ್‌ ಆಗಿದ್ದರು. ಆದರೆ ಈ ವಾರದ ಎಲ್ಲಾ ಟಾಸ್ಕ್‌ಗಳಲ್ಲಿ ಹೀನಾಯವಾಗಿ ಸೋಲು ಉಂಡರು ಪ್ರತಾಪ್‌. ಎರಡನೇ ಬಾರಿ ಕ್ಯಾಪ್ಟನ್ ಆದ ಸಂದರ್ಭದಲ್ಲಿಯೇ ಕಾರ್ತಿಕ್ ಅವರನ್ನು ಹೊರಗಿಟ್ಟು ದೊಡ್ಡ ತಪ್ಪು ಮಾಡಿದ್ದ ಪ್ರತಾಪ್, ತಮ್ಮ ತಂಡವನ್ನು ತಾವೇ ದುರ್ಬಲ ಮಾಡಿಕೊಂಡರು. ಕಾರ್ತಿಕ್‌ ಈ ವಾರದ ಉಸ್ತುವಾರಿ ವಹಿಸಿಕೊಂಡು ಸೈ ಎನೆಸಿಕೊಂಡಿ ಕ್ಯಾಪ್ಟನ್ಸಿ ಟಾಸ್ಕ್‌ಗೆ ಅರ್ಹರಾಗಿದ್ದಾರೆ.

ನಿನ್ನೆಯ ಎಪಿಸೋಡ್​ನಲ್ಲಿ ನಡೆದ ಟಾಸ್ಕ್​ಗಳಲ್ಲಿಯೂ ಸೋಲು ಕಂಡಿದ್ದ ಪ್ರತಾಪ್ ತಂಡಕ್ಕೆ ಎರಡು ಟಾಸ್ಕ್​ಗಳು ಎದುರಾಯ್ತು. ಮೊದಲನೇಯದಾಗಿ ರಸಪ್ರಶ್ನೆ ಟಾಸ್ಕ್​ ಒಂದನ್ನು ಬಿಗ್​ಬಾಸ್ ನೀಡಿದ್ದರು. ತಟ್ಟೆಯಲ್ಲಿರುವ ಕೇಕ್​ ಅನ್ನು ಪೂರ್ಣವಾಗಿ ತಿಂದು ಆ ತಟ್ಟೆಯೊಳಗೆ ಇರುವ ಪ್ರಶ್ನೆಯನ್ನು ತಮ್ಮ ತಂಡಕ್ಕೆ ಅಥವಾ ಎದುರಾಳಿ ತಂಡಕ್ಕೆ ಕೇಳಿ ಉತ್ತರ ಪಡೆಯಬೇಕಾಗಿತ್ತು. ಕೇಕ್ ತಿಂದು ಪ್ರಶ್ನೆ ಕೇಳಲು ಮೈಕಲ್ ಹಾಗೂ ತುಕಾಲಿ ಹೋದರು. ಇದರಲ್ಲಿ ಮೈಕಲ್ ಬಹಳ ಬೇಗ ಪ್ಲೇಟ್ ಖಾಲಿ ಮಾಡಿ ಹೆಚ್ಚು ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದು ಟಾಸ್ಕ್ ಗೆದ್ದರು.

ಎರಡನೇ ಟಾಸ್ಕ್‌ನಲ್ಲಿ ಎರಡೂ ಗುಂಪಿನ ಎಲ್ಲ ಸದಸ್ಯರು ಕಾಲಿಗೆ ಹಗ್ಗವನ್ನು ಕಟ್ಟಿಕೊಳ್ಳಬೇಕು. ಎದುರಿಗೆ ನಂಬರ್ ಹಾಕಿದ ಜಾಗದಲ್ಲಿ ಒಂದಿಷ್ಟು ಬಾಲ್‌ಗಳನ್ನು ಇಡಲಾಗಿದೆ. ಬಿಗ್‌ಬಾಸ್ ಸೂಚಿಸಿದ ನಂಬರ್ ಇರುವ ಜಾಗಕ್ಕೆ ಎರಡೂ ಗುಂಪಿನ ಸದಸ್ಯರು ಜಿಗಿಯುತ್ತ ಓಡಿಹೋಗಿ ಬಾಲ್‌ ಎತ್ತಿಕೊಂಡು ಬಂದು ತಮ್ಮ ತಂಡದ ಜಾಲರಿಯಲ್ಲಿ ಹಾಕಬೇಕು. ಯಾವ ತಂಡದವರು ಹೆಚ್ಚು ಬಾಲ್‌ಗಳನ್ನು ಎತ್ತಿಕೊಂಡು ಬಂದು ಜಾಲರಿಯಲ್ಲಿ ಹಾಕುತ್ತಾರೋ ಅವರು ಗೆದ್ದಂತೆ.
ಈ ಟಾಸ್ಕ್‌ನಲ್ಲಿ ಬಾಲ್‌ ಎತ್ತುವಾಗ ಎರಡೂ ತಂಡದ ನಡುವೆ ಜಿದ್ದಾಜಿದ್ದಿಯಾಗಿದೆ. ಸ್ನೇಹಿತ್‌ ತಳ್ಳಿದ್ದರಿಂದ ಬಿದ್ದಿರುವ ಸಿರಿ, ‘ಇಷ್ಟೊಂದು ಫಿಜಿಕಲ್ ಆಗುವುದು ಬೇಕಾ?’ ಎಂದು ಪ್ರಶ್ನಿಸಿದ್ದಾರೆ. ಉಸ್ತುವಾರಿ ನೋಡಿಕೊಳ್ಳುತ್ತಿರುವ ಕಾರ್ತಿಕ್, ಎರಡೂ ತಂಡದ ಸದಸ್ಯರನ್ನು ನಿಯಂತ್ರಿಸಲು ಪ್ರಯತ್ನಿಸಿದ್ದರು. ಇದರಲ್ಲಿಯೂ ವಿಕ್ರಾಂತ್‌ ಟೀಂ ವಿನ್‌ ಆಯ್ತು.

ಇದನ್ನೂ ಓದಿ: BBK SEASON 10: ಸ್ಪರ್ಧಿಗಳ ಕಾಲಿಗೆ ಹಗ್ಗ; ಕಣ್ಣೀರಿಟ್ಟ ಸಿರಿ

’ಉಸ್ತುವಾರಿ’ ಕೆಲಸವನ್ನು ಕಾರ್ತಿಕ್‌ ಉತ್ತಮ’ವಾಗಿ ನಿಭಾಯಿಸಿದರು ಎಂದು ಇತರೆ ಸ್ಪರ್ಧಿಗಳಿಂದ ವೋಟ್‌ ಬಹುತೇಖ ಬಿದ್ದ ಕಾರಣ, ಈ ವಾರದ ಕ್ಯಾಪ್ಟನ್ಸಿ ಟಾಸ್ಕ್‌ ಕಾರ್ತಿಕ್‌ ಪಡೆದರು. ಯಾವ ಕೈಯಲ್ಲಿ ಕಾರ್ತಿಕ್‌ ಫೋಟೊಗೆ ಡ್ರೋನ್ ಪ್ರತಾಪ್ ʻXʼ ಚಿಹ್ನೆ ಹಾಕಿದ್ರೋ, ಅದೇ ಕೈಯಲ್ಲಿ ಕಾರ್ತಿಕ್‌ ಫೋಟೊದಿಂದ X ಚಿಹ್ನೆಯನ್ನು ಬಿಗ್ ಬಾಸ್‌ ವಾಪಸ್ ತೆಗೆಸಿದ್ದಾರೆ. ಇದನ್ನು ಕಂಡ ಸಂಗೀತಾ ‘’ಕರ್ಮ ಅನ್ನೋದು ಇದಕ್ಕೇನಾ?’’ ಎಂದು ತಿರುಗೇಟು ಕೂಡ ಕೊಟ್ಟಿದ್ದಾರೆ.

ಬಹುತೇಕ ಎಲ್ಲ ಸದಸ್ಯರು ಕಾರ್ತಿಕ್‌ ಅವರ ಉಸ್ತುವಾರಿ ಸರಿ ಉತ್ತಮ ಎಂದರೆ, ತುಕಾಲಿ ಸಂತು ಅವರು ʻʻಉತ್ತಮವಾಗಿರಲಿಲ್ಲ. ಕ್ವಿಜ್‌ನಲ್ಲಿ ಆರಂಭಿಸಿ ವಿಚಾರವಾಗಿ ಒಂದು ಪ್ರಶ್ನೆಯನ್ನೇ ರದ್ದು ಮಾಡಿದರು. ಅದನ್ನ ಮಾಡಲಿಲ್ಲ ಎಂದಿದ್ದರೆ ನಮಗೆ 1 ಪಾಯಿಂಟ್ ಬರುತ್ತಿತ್ತುʼʼಎಂದಿದ್ದಾರೆ. ವರ್ತೂರ್‌ ಕೂಡ ‘ಹನಿ ಹನಿ ಕಹಾನಿʼ ಟಾಸ್ಕ್‌ನಲ್ಲಿ ವಿನಯ್‌ ಅವರನ್ನ ಹೊರಗಡೆ ಕಳುಹಿಸಿದ್ದರು. ಬಳಿಕ ಒಳಗೆ ಕರೆದರು. ಅದು ಸರಿ ಎನಿಸಲಿಲ್ಲʼʼ ಎಂದಿದ್ದಾರೆ.

ಅದೇನೇ ಆದರೂ ತಮ್ಮ ಮೂಗಿನ ನೇರಕ್ಕೆ ಪ್ರತಾಪ್‌ ತೆಗೆದುಕೊಂಡ ನಿರ್ಧಾರದಿಂದ ಅವರೇ ಸ್ವತಃ ಕ್ಯಾಪ್ಟನ್ಸಿ ರೇಸ್‌ನಲ್ಲಿ ಇಳಿಯಲಿಲ್ಲ. ಕಾರ್ತಿಕ್‌ ಕ್ಯಾಪ್ಸನ್ಸಿ ಓಟದಲ್ಲಿ ಈ ವಾರ ಇದ್ದಾರೆ.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version