ಬೆಂಗಳೂರು: ಬಿಗ್ ಬಾಸ್ ಸೀಸನ್ 10ರ ರನ್ನರ್ ಅಪ್ ಡ್ರೋನ್ ಪ್ರತಾಪ್ (Drone Prathap) ಅವರಿಗೆ ಬಿಗ್ ಬಾಸ್ ಕಡೆಯಿಂದ 10 ಲಕ್ಷ ರೂಪಾಯಿ ಹಾಗೂ ಒಂದು ಬೌನ್ಸ್ ಬೈಕ್ ಸಿಕ್ಕಿದೆ. ಪ್ರತಾಪ್‌ಗೆ ಬಿದ್ದ ವೋಟ್ಗಳ ಸಂಖ್ಯೆ ಕೋಟಿಗಳಲ್ಲಿದೆ. ಅವರ ಫ್ಯಾನ್ಸ್ ಕ್ರೇಜ್ ಕಮ್ಮಿ ಏನಿಲ್ಲ. ಮನೆಯಿಂದ ಹೊರ ಹೋದ ಬಳಿಕ ಡ್ರೋನ್ ಪ್ರತಾಪ್ ಹೋದಲೆಲ್ಲಾ ಫ್ಯಾನ್ಸ್ ಅವರನ್ನು ಮುತ್ತಿಕೊಳ್ಳುತ್ತಿದ್ದಾರೆ. ಚಾಮರಾಜನಗರ ಜಿಲ್ಲೆಯಲ್ಲಿರುವ ಮಲೆ ಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಅಭಿಮಾನಿಗಳು ಡ್ರೋನ್ ಪ್ರತಾಪ್ ಸುತ್ತ ಸುತ್ತುವರಿದಿದ್ದರು. ಈ ವಿಡಿಯೊ ಇದೀಗ ವೈರಲ್ ಆಗಿದೆ.
ಪ್ರತಾಪ್ ಮನೆಗೆ ಬರುವ ಮುಂಚೆ ನೆಗೆಟಿವ್ ಇಮೇಜ್ ಇದ್ದಿತ್ತು. ಇದೀಗ ಡ್ರೋನ್ ಪ್ರತಾಪ್ ಬಗ್ಗೆ ಈಗ ಜನರಲ್ಲಿ ಪಾಸಿಟಿವ್ ಇಮೇಜ್ ಮೂಡಿದೆ. ಲೈವ್ ಆಡಿಯನ್ಸ್‌ನಿಂದ ಕಡಿಮೆ ವೋಟ್ ಪಡೆದು ‘ಅಸಮರ್ಥರು’ ಎಂಬ ಹಣೆಪಟ್ಟಿಯೊಂದಿಗೆ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದರು ಪ್ರತಾಪ್. ಆರಂಭದ ದಿನಗಳಲ್ಲಿ ಪ್ರತಿ ವಿಷಯಕ್ಕೂ ಕಣ್ಣೀರಿಡುತ್ತಿದ್ದರು ಪ್ರತಾಪ್. ಇದೀಗ ರನ್ನರ್ ಅಪ್ ಆಗಿ ಜನರ ಮುಂದೆ ನಿಂತಿದ್ದಾರೆ.
ಪ್ರತಾಪ್ ಅವರಿಗೆ ಒಂದೇ ಕೊರಗು ಇತ್ತು. ತನ್ನ ಕುಟುಂಬದಿಂದ ತುಂಬ ದೂರವಿದ್ದೆ ಎಂದು. ಅದೆಷ್ಟೋ ಬಾರಿ ಸುದೀಪ್ ಅವರ ಮುಂದೆ ಕೂಡ ಪ್ರತಾಪ್ ಅವರು ತಂದೆ ತಾಯಿ ಜತೆ ಮಾತನಾಡಬೇಕು ಎಂದು ಹೇಳಿದ್ದುಂಟು. ಕಣ್ಣೀರು ಕೂಡ ಸುರಿದ್ದರು. ಆ ಬಳಿಕ ಅಪ್ಪ, ಅಮ್ಮನನ್ನ ಅಪ್ಪಿಕೊಂಡು ಡ್ರೋನ್ ಪ್ರತಾಪ್ ಮುದ್ದಾಡಿದ್ದರು. ಕರ್ನಾಟಕದ ಜನತೆಗೆ ಡ್ರೋನ್ ಪ್ರತಾಪ್ ತಂದೆ ಕೂಡ ಕ್ಷಮೆ ಕೇಳಿದ್ದರು. ಇತ್ತೀಚೆಗೆ ಅವರು ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿ ದೇವರ ದರ್ಶನ ಮಾಡಿದ್ದಾರೆ. ಈ ಸಂದರ್ಭದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಜನರು ಸೇರಿದ್ದರು. ಎಲ್ಲರೂ ಪ್ರತಾಪ್ ಬಳಿ ಸೆಲ್ಫಿ ಕೇಳಿದ್ದಾರೆ. ಮೈಸೂರಿನಿಂದ 130 ಕಿ.ಮೀ ಹಾಗೂ ಬೆಂಗಳೂರಿನಿಂದ 210 ಕಿ.ಮೀ ದೂರವಿದೆ ಈ ಮಹದೇಶ್ವರ ಬೆಟ್ಟ.
ಇದನ್ನೂ ಓದಿ: Drone Prathap: ಡ್ರೋನ್ ಪ್ರತಾಪ್ ವಿರುದ್ಧ ಸಾಲು ಸಾಲು ದೂರುಗಳು: ದಾಖಲಾಗಿಲ್ಲ ಎಫ್‌ಐಆರ್!
ಅಪ್ಪನ ಜತೆ ಸೇರಿ ಮುದ್ದೆ ಮಾಡಿದ್ದ ಡ್ರೋನ್ ಪ್ರತಾಪ್
ಕುಟುಂಬದಿಂದ ಹಲವು ವರ್ಷಗಳು ದೂರವಿದ್ದ ಪ್ರತಾಪ್, ಬಿಗ್ ಬಾಸ್ ಶೋನಿಂದ ತಂದೆ-ತಾಯಿಯನ್ನು ಭೇಟಿಯಾಗುವಂತಾಗಿತ್ತು. ಈ ಹಿಂದೆ ದೊಡ್ಮನೆಯಲ್ಲಿ ಸ್ಪರ್ಧಿಗಳಿಗೆ ರಾಗಿ ಮುದ್ದೆ ಮಾಡಿಟ್ಟು ಗಮನ ಸೆಳೆದಿದ್ದ ಪ್ರತಾಪ್ ಅಪ್ಪನ ಜತೆ ಮುದ್ದೆ ಮಾಡಿ ಮನೆ ಮಂದಿಗೆ ಬಡಿಸಿರುವುದು ಕಂಡುಬಂದಿತ್ತು. ಪ್ರ ತಾಪ್, ತಂದೆ ಜತೆ ಮುದ್ದೆ ಮಾಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಬಿಗ್ ಬಾಸ್ ನಂತರ ರಿಯಾಲಿಟಿ ಶೋ ಗಿಚ್ಚಿ ಗಿಲಿಗಿಲಿಯಲ್ಲಿ ಬ್ಯುಸಿಯಾಗಿರುವ ಪ್ರತಾಪ್, ಕುಟುಂಬಸ್ಥರ ಜತೆ ಕೂತು ಊಟ ಮಾಡಿದ್ದರು. ಡ್ರೋನ್ ಪ್ರತಾಪ್‌ಗೆ ಮುದ್ದೆ ಅಂದ್ರೆ ಬಹಳ ಇಷ್ಟ, ಹೀಗಾಗಿ ಅಪ್ಪನ ಜತೆ ಸೇರಿ ಮುದ್ದೆ ಮಾಡಿ, ಮನೆಯವರಿಗೆಲ್ಲ ಬಡಿಸಿದ್ದರು.