Site icon Vistara News

BBK Season 10: ಕಿಚ್ಚನ ಮೆಚ್ಚುಗೆಯ ಚಪ್ಪಾಳೆ ಗಿಟ್ಟಿಸಿಕೊಂಡ ಪ್ರತಾಪ್!

Drone Prathap

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10ರ (BBK Season 10) ಐದನೇ ವಾರ ಡ್ರೋನ್‌ ಪ್ರತಾಪ್‌ ಅವರು ವಾರವಿಡೀ ಪ್ರಮುಖ ಹೈಲೈಟ್‌ ಆಗಿದ್ದಾರೆ. ʻಗಂಧದ ಗುಡಿʼ ಹಾಗೂ ʻವಜ್ರಕಾಯ ಟೀಂʼ ಎಂದು ಎರಡು ಟೀಂ ಮಾಡಿತ್ತು ಬಿಗ್‌ ಬಾಸ್‌. ಗಂಧದ ಗುಡಿಗೆ ಪ್ರತಾಪ್‌ ಕ್ಯಾಪ್ಟನ್‌ ಆದರೆ, ವಜ್ರಕಾಯಕ್ಕೆ ಸಿರಿ ಕ್ಯಾಪ್ಟನ್‌. ಆದರೆ ಕೊನೆಗೆ ಎಲ್ಲ ಟಾಸ್ಕ್‌ನಲ್ಲಿ ಗೆದ್ದು ಬೀಗಿದ್ದು ಮಾತ್ರ ಪ್ರತಾಪ್‌ ತಂಡ. ಇದೀಗ ಟ್ರೋನ್‌ ಪ್ರತಾಪ್‌ ಅವರಿಗೆ ಕಿಚ್ಚನ ಚಪ್ಪಾಳೆ ಸಿಕ್ಕಿದೆ.

ಸುದೀಪ್‌ ಅವರು ವೇದಿಕೆಯಲ್ಲಿ ಡ್ರೋನ್‌ ಪ್ರತಾಪ್‌ ಅವರಿಗೆ ʻʻಇಡೀ ತಂಡ ನಿಮ್ಮ ವಿರುದ್ಧ ನಿಂತಿದ್ದರೂ, ಪ್ರಾಮಾಣಿಕತೆಯಿಂದ ನೀವು ನಿಂತಿದಕ್ಕೆ ಈ ವಾರದ ಕಿಚ್ಚನ ಚಪ್ಪಾಳೆ ನಿಮಗೆʼʼ ಎಂದರು. ಪ್ರತಾಪ್‌ ಭಾವುಕರಾಗಿ ಮಾತನಾಡಿ ʻʻಇದು ನನಗೆ ಬಿಗ್‌ ಮೂಮೆಂಟ್‌. ಹೊರಗಡೆ ಆದರೆ ಎರಡೂ ಕಡೆ ಏನು ತಪ್ಪಾಗುತ್ತೆ ಎನ್ನುವುದು ಕಾಣಿಸಲ್ಲ. ಹೌದು ನಾನು ಕೆಲವೊಂದು ತಪ್ಪುಗಳನ್ನು ಮಾಡಿದ್ದೇನೆ. ಅದನ್ನ ನಾನು ಹೇಳುವುದಕ್ಕೆ ಯಾವುದೇ ಮುಜುಗರವಿಲ್ಲ. ನನ್ನ ಕಳ್ಳ ಎಂದವರು, ಸುಳ್ಳ ಎಂದವರು, ಈಗ ನೆನಪಿಸಿಕೊಂಡರೆ, ಈಗ ಮನಸ್ಸು ಬಹಳ ಹಗುರುವೆನಿಸುತ್ತದೆʼʼಎಂದರು.

ಪ್ರೇಕ್ಷಕರು ಕೂಡ ಕಮೆಂಟ್‌ನಲ್ಲಿ ʻʻಪ್ರತಾಪ್ ಅವರಿಗೆ ಕಿಚ್ಚನ ಚಪ್ಪಾಳೆ ಸಿಕ್ಕಿದ್ದು ಖುಷಿ ತಂದಿದೆʼʼಎಂದು ಕಮೆಂಟ್‌ ಮಾಡಿದ್ದಾರೆ. ʻʻಈ ವೇದಿಕೆಯನ್ನು ಸರಿಯಾಗಿ ಉಪಯೋಗಿಸಿ ಕೊಂಡ ಪ್ರತಾಪ್ ʼʼಎಂದು ಇನ್ನೊಬ್ಬರು ಕಮೆಂಟ್‌ ಮಾಡಿದ್ದಾರೆ. ʻʻನಿಜಾ ನಂಗೆ ಅಳು ಬಂತುʼʼಎಂದು ಮತ್ತೊಬ್ಬರು ಕಮೆಂಟ್‌ ಮಾಡಿದ್ದಾರೆ.

ಇದನ್ನೂ ಓದಿ: BBK Season 10: ನಮ್ರತಾಗೆ ʻಚಮಚಾಗಿರಿʼ ಅಂದ್ರಾ ನೀತು? ʻಪಾಪರೆಡ್ಡಿಪಾಳ್ಯʼ ಪ್ಲ್ಯಾನ್‌ ಉಲ್ಟಾ ಆಗೋಯ್ತು!

ಈ ವಾರದ ʻಉತ್ತಮʼ ಪ್ರತಾಪ್

ಈ ವಾರ ಗೇಮ್‌ನಲ್ಲಿ ಸ್ಟ್ರಾಟೆಜಿ ಬಳಸಿಕೊಂಡು ಸದಸ್ಯರನ್ನು ಕನ್ವಿನ್ಸ್‌ ಮಾಡುವಲ್ಲಿ ಡ್ರೋನ್‌ ಗೆದ್ದಿದ್ದರು. ಅಷ್ಟೇ ಅಲ್ಲದೇ ತಂಡದ ಕ್ಯಾಪ್ಟನ್ ಸಹ ಆಗಿದ್ದರು. ಮಾತ್ರವಲ್ಲ ಬ್ಯಾಕ್‌ ಟು ಬ್ಯಾಕ್‌ ಗೇಮ್ಸ್‌ ಗೆದ್ದು ಬೀಗಿದ್ದರು. ಸಿರಿ ಟೀಮ್‌ ʻವಜ್ರಕಾಯʼ ಆದರೆ ಪ್ರತಾಪ್‌ ಅವರದ್ದು ʻಗಂಧದ ಗುಡಿ ಟೀಂʼ. ಪ್ರತಿ ಬಾರಿ ಟ್ರೋನ್‌ ಪ್ರತಾಪ್‌ ಟೀಂ ವಿನ್‌ ಆಯ್ತು. ಹೀಗಾಗಿ ಡ್ರೋನ್‌ ಪ್ರತಾಪ್‌ ತಮ್ಮ ಟೀಂ ಕನ್ವಿನ್ಸ್‌ ಮಾಡುವ ರೀತಿ, ಹಾಗೂ ಉಸ್ತುವಾರಿ ವೇಳೆ ಡ್ರೋನ್ ಪ್ರತಾಪ್‌ ಫೇರ್‌ ಆಗಿ ಆಟವಾಡಿದ ರೀತಿ ಇತರೆ ಸ್ಪರ್ಧಿಗಳಿಗೆ ಇಷ್ಟವಾಗಿದೆ. ಹೀಗಾಗಿ ಡ್ರೋನ್ ಪ್ರತಾಪ್ ಅವರಿಗೆ ‘ಬೆಸ್ಟ್ ಪರ್ಫಾಮೆನ್ಸ್’ ಮೆಡಲ್ ಲಭಿಸಿದೆ.

ಡ್ರೋನ್‌ ಪ್ರತಾಪ್‌ ಮೆಡಲ್‌ ಅನ್ನು ಅಪ್ಪ, ಅಮ್ಮ, ತಂಗಿ, ತಾತನಿಗೆ ಡೆಡಿಕೇಟ್ ಮಾಡುತ್ತೇನೆ ಎಂದರು. ಸುದೀಪ್‌ ಅರಿಗೂ ಧನ್ಯವಾದ ಸೂಚಿಸಿದರು. ಈ ವಾರ ನಮ್ರತಾ, ಸ್ನೇಹಿತ್, ತುಕಾಲಿ ಸಂತು, ವರ್ತೂರು ಸಂತೋಷ್, ನೀತು, ಇಶಾನಿ ಮತ್ತು ಕಾರ್ತಿಕ್ ನಾಮಿನೇಟ್ ಆಗಿದ್ದಾರೆ.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version