Site icon Vistara News

BBK SEASON 10: ಗುಂಪುಗಾರಿಕೆಯ ವಿರುದ್ಧ ಸಿಡಿದೆದ್ದ ಪ್ರತಾಪ್‌; ಸ್ನೇಹಿತ್‌ಗೆ ಸಂಗೀತಾ, ನಮ್ರತಾ, ವಿನಯ್‌ ಸಾಥ್‌!

Drone Prathap

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10ರಲ್ಲಿ (BBK SEASON 10) ಸ್ನೇಹಿತ್‌ ಅವರ ನಡವಳಿಕೆ ಪ್ರೇಕ್ಷಕರಿಗೆ ಈ ನಡುವೆ ಇಷ್ಟವಾಗುತ್ತಿಲ್ಲ. ಕಳೆದ ಸಂಚಿಕೆಯಲ್ಲಿ ಡ್ರೋನ್‌ ಪ್ರತಾಪ್‌ ಜತೆ ವಾದಕ್ಕೆ ಇಳಿದ ಸ್ನೇಹಿತ್‌ ಅವರ ಮಾತಿಗೆ ಕಮೆಂಟ್‌ ಮೂಲಕ ನೆಟ್ಟಿಗರು ಸ್ನೇಹಿತ್‌ಗೆ ಬೈಯುತ್ತಿದ್ದಾರೆ. ಗ್ರೂಪಿಸಮ್‌ ಎಂಬ ಹೆಸರಲ್ಲಿ ತಮ್ಮದೇ ರಾಜ್ಯಭಾರ ಎನ್ನುವಂತಿತ್ತು ಮನೆ. ಸ್ನೇಹಿತ್‌ ಹಾಗೂ ಡ್ರೋನ್‌ ಬಾತ್‌ರೂಮ್‌ ಗಲಾಟೆ ತಾರಕಕೇರಿತ್ತು.

ಸ್ನೇಹಿತ್‌ ಬಾತ್‌ರೂಮ್‌ನಲ್ಲಿ ಇದ್ದಾಗ ಡ್ರೋನ್‌ ಪ್ರತಾಪ್‌ ಹೊರಗಡೆ ಕಾಯುತ್ತಿದ್ದರು. ಸ್ವಲ್ಪ ಸಮಯ ಬೇಕು ಎಂದು ಸ್ನೇಹಿತ್‌ , ಬಾತ್‌ರೂಮ್ ಲಾಕ್ ಮಾಡಿಕೊಂಡು ಪ್ರತಾಪ್‌ರನ್ನು ಕಾಯಿಸಿದರು. ಬಾತ್‌ರೂಮ್ ಏರಿಯಾಕ್ಕೆ ಬಂದು ವಿನಯ್ ಗೌಡ ಧ್ವನಿ ಕೇಳುತ್ತಿದ್ದಂತೆ ಸ್ನೇಹಿತ್ ಅವರು ಬಾತ್‌ರೂಮ್ ಲಾಕ್ ಒಪನ್ ಮಾಡಿದರು, ವಿನಯ್ ಒಳಗಡೆ ಹೋದರು. ಪ್ರತಾಪ್‌ಗೆ ಇದು ಸಹಿಸಲು ಆಗಲಿಲ್ಲ.

ಡ್ರೋನ್‌ ಪ್ರತಾಪ್‌ ಈ ಬಗ್ಗೆ ಧ್ವನಿ ಎತ್ತಿ ಇಲ್ಲಿ ʻʻಎಲ್ಲರೂ ಸಮಾನರೇ. ನಾವೆಲ್ಲ ಸ್ಪರ್ಧಿಗಳು. ವಿನಯ್ ಅವರ ವಾಯ್ಸ್ ಮುಗಿದ ಕೂಡಲೇ ಶೇವ್ ಮುಗಿದು ಹೋಯ್ತಾ? ನೀವು ಮಾಡಿರೋದು ತಪ್ಪು ಅಂತ ಒಪ್ಪಿಕೊಳ್ತಿದ್ದೀರಾ? ಕೆಲಸ ಮುಗಿದ ಮೇಲೆ ನೀವು ಹೊರಗಡೆ ಬರಬೇಕುʼʼ ಎಂದಿದ್ದಾರೆ. ಸ್ನೇಹಿತ್‌ ಕೂಡ ಈ ಮಾತಿಗೆ ʻʻ”ಶೇವ್ ಮಾಡಿದ್ದೆ, ಲೇಟ್ ಆಯ್ತು, ನೀನು ಏನ್ ಮಾಡ್ಕೋತಿಯಾ? ಬೆಳ್ ಬೆಳಗ್ಗೆ ತಲೆ ತಿನ್ನಬೇಡʼʼ ಎಂದು ತಿರುಗೇಟು ಕೊಟ್ಟರು.

ಈ ವಿಚಾರ ಸ್ನೇಹಿತ್‌, ವಿನಯ್‌ ಮತ್ತು ಸಂಗೀತಾ ಚರ್ಚೆ ಮಾಡಿದ್ದಾರೆ. ವಿನಯ್ ಗೌಡ ಅವರು ನಗುತ್ತಲೇ, “ನೀನು ಉದ್ದೇಶಪೂರ್ವಕವಾಗಿಯೇ ಮಾಡಿದ್ದೀಯಾ ಅಂತ ಗೊತ್ತಾಗುತ್ತಿತ್ತು, ಗೊತ್ತಾಗದಿರುವ ರೀತಿ ಮಾಡಬೇಕಿತ್ತು” ಅಂತ ಸ್ನೇಹಿತ್ ತಪ್ಪನ್ನು ಸಪೋರ್ಟ್‌ ಮಾಡಿದರು. ನಮ್ರತಾ ಕೂಡ ಈ ಬಗ್ಗೆ ಮಾತನಾಡಿ ʻʻಪ್ರತಾಪ್‌ ಇನ್ನು ಫೈನಲ್‌ವರೆಗೂ ಇದೇ ವಿಷಯ ಮಾತಾಡ್ತಾನೆ” ಎಂದು ಹೇಳಿದರು. ಸಂಗೀತಾ ಅವರು ಕೂಡ ಪ್ರತಾಪ್‌ ವಿಚಾರವಾಗಿ ಈ ವಿಚಾರ ಅವನು ಬಿಡಲ್ಲ ಎನ್ನುವ ರೀತಿ ಮಾತಾಡಿದ್ದಾರೆ.

ಕಳಪೆ ಸಮಯದಲ್ಲಿ ಮನೆಯಲ್ಲಿ ಯಾರಿಗೆಲ್ಲ ಕೆಲಸ ವಹಿಸುವ ನಿರ್ಧಾರ ಎಂಬ ಮಾತು ಬಂತು. ಈ ಸಮಯದಲ್ಲಿ ಮತ್ತೆ ಡ್ರೋನ್‌ ಪ್ರತಾಪ್‌ ಈ ಬಗ್ಗೆ ಮಾತನಾಡಿದರು. ʻʻಯಾರೂ ಕೂಡ ಬಾತ್‌ರೂಮ್‌ ಲಾಕ್ ಮಾಡಿಕೊಂಡು ಬೇರೆಯವರನ್ನು ಕಾಯಿಸಬಾರದುʼʼ ಎಂದು ಹೇಳಿದ್ದರು. ಆ ವೇಳೆ ಪ್ರತಾಪ್, ಸ್ನೇಹಿತ್ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಆಗ ವಿನಯ್ ಅವರು ʻʻನಾನು, ಮೊದಲೇ ಸ್ನೇಹಿತ್ ಬಳಿ ಸ್ನಾನ ಮಾಡುವ ವಿಚಾರ ಮಾತಾಡಿದ್ದೆ, ಸ್ನೇಹಿತ್ ಹೊರಗಡೆ ಬರುತ್ತಿದ್ದಂತೆ ಒಳಗಡೆ ಹೋದೆʼʼ ಎಂದರು.

ಇದನ್ನೂ ಓದಿ: BBK SEASON 10: ಜೈಲಿನಿಂದ ತಪ್ಪಿಸಿಕೊಂಡ ವರ್ತೂರ್‌ ಸಂತೋಷ್‌!

ಪ್ರತಾಪ್‌ ವಿಚಾರವಾಗಿ ವಿನಯ್‌, ಸ್ನೇಹಿತ್‌, ನಮ್ರತಾ ಚರ್ಚೆ ಕೂಡ ಮಾಡಿದ್ದರು. ಪ್ರತಾಪ್‌ಗೆ ಪ್ರೇಕ್ಷಕರು ನೋಡುವ ರೀತಿ ಮಾಡುತ್ತಿರುವುದು ನಾವು ಎಂಬ ಅರ್ಥದಲ್ಲಿ ಸ್ನೇಹಿತ್‌ ಅವರು ವಿನಯ್‌ ಜತೆ ಚರ್ಚಿಸಿದರು. ಆದರೂ ಕೂಡ ನಮ್ರತಾ ಟೀಂ ಮಧ್ಯೆ ಚಮಚ ಹಿಡಿಯೋದು ಮಾತ್ರ ಬಿಡಲ್ಲ. ವಿನಯ್‌ ತಮ್ಮ ಗ್ರೂಪಿಸಮ್‌ ಬಿಟ್ಟು ಮುಂದೆ ಹೆಜ್ಜೆ ಇಡಲ್ಲ!

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version