Site icon Vistara News

BBK SEASON 10: ಪ್ರತಾಪ್‌ಗೆ ಸ್ವಂತ ಪರ್ಸನಾಲಿಟಿ ಇಲ್ಲ, ಸಿಂಪಥಿಯಲ್ಲಿ ಬದುಕೋನು ಎಂದ ಮೈಕಲ್‌!

Drone Prathap and Michael says

ಬೆಂಗಳೂರು: ಬಿಗ್‌ಬಾಸ್‌ (BBK SEASON 10) ಪಾಠಶಾಲೆ ತರಗತಿಯಿಂದ ತರಗತಿಗೆ ಸೀರಿಯಸ್ ಆಗುತ್ತ ನಡೆದಿದೆ. ಮೊದಲ ದಿನಕ್ಕೆ ಹೋಲಿಸಿದರೆ ನಿನ್ನೆಯ ತರಗತಿಗಳು ಸಾಕಷ್ಟು ಸೀರಿಯಸ್ ಆಗಿದ್ದವು. ನಮ್ರತಾ ಕ್ಲಾಸಿನಲ್ಲಿ ಎಲ್ಲರೂ ಡಾನ್ಸ್‌ ಮಾಡಿ ಖುಷಿಪಟ್ಟರೆ, ಸಂಗೀತಾ ಬಹುಗಂಭೀರವಾಗಿ ಅಧ್ಯಾತ್ಮದ ಪಾಠವನ್ನು ಹೇಳಿಕೊಟ್ಟಿದ್ದರು. ತುಂಬ ಗಹನವಾಗಿಯೂ ಇದ್ದ ಅವರ ತರಗತಿ ಪ್ರೀತಿಯನ್ನು ಹರಡುವ ಸಂದೇಶದೊಂದಿಗೆ ಕೊನೆಗೊಂಡಿತ್ತು. ಸಿರಿ ಅವರ ತರಗತಿಯಲ್ಲಿ ಕಾರ್ತಿಕ್‌ ಮತ್ತು ವಿನಯ್‌ ಪರಸ್ಪರ ಹಾರ್ಟ್‌ ಕ್ರಾಫ್ಟ್ ಹಂಚಿಕೊಂಡು ಖುಷಿಗೊಂಡಿದ್ದರು.

ಹಾಗಾದರೆ ಇಂದಿನ ತರಗತಿಗಳು ಹೇಗೆ ನಡೆಯುತ್ತಿವೆ? ಕಾರ್ತಿಕ್ ಪೊಲಿಟಿಕ್ಸ್‌ ತರಗತಿಯ ಝಲಕ್‌ನ ನಂತರ ಜಿಯೋ ಸಿನಿಮಾ ಬಿಡುಗಡೆ ಮಾಡಿರುವ ಪ್ರೋಮೊದ ಈಗ ವರ್ತೂರು ಸಂತೋಷ್ ಅವರ ಕ್ಲಾಸಿನ ಖದರ್ ಹೇಗಿದೆ ಎನ್ನುವುದರ ಸುಳಿವು ನೀಡಿದೆ.

ವರ್ತೂರು ಸಂತೋಷ್‌ ಮೇಷ್ಟ್ರಾಗಿರುವ ತರಗತಿಯಲ್ಲಿ ಒಬ್ಬರನ್ನೊಬ್ಬರು ಎಲಿಮಿನೇಟ್ ಮಾಡುವ ಚಟುವಟಿಕೆಯೂ ನಡೆದಿದೆ. ಸಂಗೀತಾ ಮತ್ತು ಪ್ರತಾಪ್‌ ಇಬ್ಬರೂ ಮೈಕಲ್‌ ಅವರನ್ನು ಎಲಿಮಿನೇಟ್ ಮಾಡಬೇಕು ಎಂದು ಹೇಳಿದ್ದಾರೆ. ‘ಮೈಕಲ್‌ ಸಣ್ಣ ಸಣ್ಣ ವಿಷಯಕ್ಕೂ ನನಗೆ ಚುಚ್ಚಿ ಮಾತಾಡುತ್ತಿದ್ದಾರೆ’ ಎಂದು ಸಂಗೀತಾ ಆರೋಪಿಸಿದ್ದರೆ, “ನನ್ನ ವಿರುದ್ಧ ಎಲ್ಲರ ಮನಸ್ಸಿನಲ್ಲಿಯೂ ತಪ್ಪು ಭಾವನೆ ಮೂಡಿಸುತ್ತಿದ್ದಾರೆ’ ಎಂದು ಪ್ರತಾಪ್ ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಮೈಕಲ್, ‘ಐ ಡೋಂಟ್ ಲೈಕ್ ಯು’ ಎಂದು ನೇರವಾಗಿ ಹೇಳಿದ್ದಾರೆ. ‘ಪ್ರತಾಪ್‌ ಅವರಿಗೆ ಸ್ವಂತ ಪರ್ಸನಾಲಿಟಿ ಇಲ್ಲ. ಸಿಂಪಥಿಯಲ್ಲಿದ್ದು ಬದುಕುವವನ ಬಳಿ ಮಾತಾಡಲು ನನಗೆ ಏನೂ ಇಲ್ಲ’ ಎಂದೂ ಉತ್ತರಿಸಿದ್ದಾರೆ. ಹಾಗಾದರೆ ವರ್ತೂರ್‌ ಕ್ಲಾಸ್‌ನಲ್ಲಿ ನಡೆದಿದ್ದು ರಿಯಲ್ ಎಲಿಮಿನೇಶನ್ನಾ? ಅಥವಾ ಟಾಸ್ಕ್‌ ಭಾಗವಾ? ಎಂಬುದು ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.

ಇದನ್ನೂ ಓದಿ: BBK SEASON 10: ʻಬಿಗ್‌ಬಾಸ್‌ʼ ಮನೆಯಲ್ಲಿ ಕಾರ್ತಿಕ್‌ ರಾಜಕೀಯ; ಬಕೆಟ್ ಹಿಡಿತಿದಾರೆ ಅಂದ್ರು ಸಂಗೀತಾ!

 ಒಟ್ಟು ಈ ವಾರ ಆರು ಸ್ಪರ್ಧಿಗಳು ನಾಮಿನೇಟ್‌ ಆದರು. ಈ ವಾರ ಪವಿ ಪೂವಪ್ಪ, ಸಿರಿ, ವಿನಯ್, ಸಂಗೀತಾ, ಮೈಕಲ್ ಹಾಗೂ ಡ್ರೋನ್ ಪ್ರತಾಪ್ ನಾಮಿನೇಟ್‌ ಆಗಿದ್ದಾರೆ. ಈ ಆರು ಮಂದಿಯ ಪೈಕಿ ‘ಪಾಪರೆಡ್ಡಿಪಾಳ್ಯ’ ಗ್ಯಾಂಗ್‌ನ ಹೊಸ ಮೆಂಬರ್‌ ಪವಿ ಪೂವಪ್ಪ ರ ‘ಬಿಗ್ ಬಾಸ್‌’ ಮನೆಯಿಂದ ಹೊರ ಹೋಗುವ ಸಾಧ್ಯತೆ ಹೆಚ್ಚಿದೆ. 

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version