ಬೆಂಗಳೂರು: ಬಿಗ್ ಬಾಸ್ ಸೀಸನ್ 10 (BBK Season 10) ಎರಡನೇ ವಾರ ಮನೆ ರಣರಂಗವಾಗಿತ್ತು. ಸ್ಪರ್ಧಿಗಳ ಮಧ್ಯೆ ಕಿರುಚಾಟ ಹೆಚ್ಚಾಗಿತ್ತು. ಎರಡನೇ ವಾರ ಒಟ್ಟು 6 ಮಂದಿ, ಭಾಗ್ಯಶ್ರೀ, ತುಕಾಲಿ ಸಂತು, ಗೌರೀಶ್ ಅಕ್ಕಿ, ಸಂಗೀತಾ ಶೃಂಗೇರಿ, ತನಿಷಾ ಕುಪ್ಪಂಡ ಹಾಗೂ ಕಾರ್ತಿಕ್ ಮಹೇಶ್ ನಾಮಿನೇಟ್ ಆಗಿದ್ದಾರೆ. ಟಾಸ್ಕ್ ವೇಳೆ ಸಂಗೀತಾ ಹಾಗೂ ವಿನಯ್ ನಡುವೆ ಭರ್ಜರಿ ಕಾಳಗವೇ ನಡೆದು ಹೋಯ್ತು.
ಈ ವಾರದ ಟಾಸ್ಕ್‌ಗಳಿಗೆ ತಲಾ 8 ಸದಸ್ಯರಿರುವ ಎರಡು ತಂಡಗಳ ಅಗತ್ಯವಿತ್ತು. ಅದಕ್ಕೂ ಮುನ್ನ, ಎಲ್ಲರೂ ಈ ತಂಡಗಳಿಗೆ ನಾಯಕರನ್ನು ಒಮ್ಮತದಿಂದ ಆರಿಸಬೇಕಿತ್ತು. ಎಲ್ಲರೂ ವಿನಯ್ ಗೌಡ ಹಾಗೂ ಕಾರ್ತಿಕ್ ಮಹೇಶ್ ಹೆಸರುಗಳನ್ನ ಹೇಳಿದರು. ಈ ಎರಡೂ ತಂಡ ಹೊಂದಾಣಿಕೆ, ಬುದ್ಧಿವಂತಿಕೆ ಹಾಗೂ ಕಾಲು ಶಕ್ತಿ ಬಳಸಿ, ಆಡುವ ಟಾಸ್ಕ್ ಬಿಗ್ ಬಾಸ್ ನೀಡಿದ್ದರು.
ಏನದು ಟಾಸ್ಕ್?
ʻಜೋಡಿ ಮೋಡಿʼ ಟಾಸ್ಕ್‌ನಲ್ಲಿ ಎರಡೂ ತಂಡದ ಸದಸ್ಯರು ಎರಡು ಜೋಡಿಗಳನ್ನು ನಿರ್ಧರಿಸಬೇಕು. ಈ ಟಾಸ್ಕ್ 12 ಸುತ್ತುಗಳಲ್ಲಿ ನಡೆಯಲಿದ್ದು, ಮೊದಲು ಆರು ಸುತ್ತುಗಳನ್ನು ಎರಡೂ ತಂಡದಿಂದ ಆಡುವ ಮೊದಲ ಜೋಡಿಗಳು ಹಾಗೂ ನಂತರದ ಆರು ಸುತ್ತುಗಳನ್ನು ಎರಡನೇ ಜೊಡಿ ಆಡಬೇಕು. ಜೋಡಿಗೆ ನಾಲ್ಕು ಭಾಗಗಳನ್ನಾಗಿ ಮಾಡಿದ್ದು ಬಕೆಟ್ ಕತ್ತರಿಸಿ ನೀಡಲಾಗಿತ್ತು. ಆಡುವ ಸದಸ್ಯರು ತಮ್ಮ ಅಂಗೈಗೆ ಬಕೆಟ್ ಸಿಕ್ಕಿಸಿಕೊಳ್ಳಬೇಕು. ಬಿಗ್ ಬಾಸ್ ಟಿವಿಯ ಮೂಲಕ ಕಾಲ ಕಾಲಕ್ಕೆ ವಸ್ತುಗಳನ್ನು ಹೇಳುತ್ತಾರೆ. ಕಾಲಿನಿಂದ ವಸ್ತುಗಳನ್ನು ಬಕೆಟ್ ಒಳಗೆ ಹಾಕಬೇಕು. ತಂಡಕ್ಕೆ ಮೀಸಲಿರುವ ಗಾರ್ಡ್‌ನಲ್ಲಿರುವ ಡಬ್ಬಕ್ಕೆ ಸುರಿಯಬೇಕು.
ಈ ಟಾಸ್ಕ್‌ನಲ್ಲಿ ಕಾರ್ತಿಕ್ ಮಹೇಶ್ ನೇತೃತ್ವದ ‘ಮಾಣಿಕ್ಯ’ ತಂಡ ಸೋಲು ಅನುಭವಿಸಿತು. ಹೀಗಾಗಿ ಒಬ್ಬರು ಶಿಕ್ಷೆ ಅನುಭವಿಸಬೇಕಿತ್ತು. ಶಿಕ್ಷೆಯಾಗಿ ಸಂಗೀತಾ ಶೃಂಗೇರಿ ಸಗಣಿ ಸ್ನಾನ ಮಾಡಬೇಕಿತ್ತು. ತಪ್ಪು ಮಾಡದೇ ಇದ್ದರೂ, ಶಿಕ್ಷೆ ಪಡೆದ ಕಾರಣಕ್ಕೆ ಸಂಗೀತಾ ಶೃಂಗೇರಿ ಬೇಸರಗೊಂಡರು. ‘’ಇದು ಅನ್‌ಫೇರ್. ಇಲ್ಲಿರುವುದಕ್ಕೆ ನನಗೆ ಇಷ್ಟವಾಗುತ್ತಿಲ್ಲ’’ ಎಂದು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
ಇದನ್ನೂ ಓದಿ: BBK Season 10: ಈ ಸಲ ಕಪ್ ʻಡ್ರೋನ್ʼದೆ; ಪ್ರತಾಪ್‌ಗೆ ಕರುನಾಡು ಸಾಥ್; ಗೌರೀಶ್ ಅಕ್ಕಿ ಊಸರವಳ್ಳಿ ಅಂತೆ!
ಟಾರ್ಗೆಟ್ ತಲುಪಲು ಹೋಗಿ ಟಾರ್ಗೆಟ್ ಆದ ಸದಸ್ಯರು
ಮೊದಲ ಜೋಡಿ ನಮೃತಾ ಹಾಗೂ ಸ್ನೇಹಿತ್ ಮತ್ತು ಪ್ರತಾಪ್ ಹಾಗೂ ತನಿಷಾ ಅಟವನ್ನು ಚೆನ್ನಾಗಿಯೇ ನಿಭಾಯಿಸಿದ್ದರು. ಈ ಮಧ್ಯೆ ವಿನಯ್ ಹಾಗೂ ತನಿಷಾ ನಡುವೆಯೂ ಮಾತಿನ ಚಕಿಮಕಿ ನಡೆಯಿತು. ಎರಡನೇ ಬಾರಿ ಮೈಕಲ್ ಹಾಗೂ ರಕ್ಷಕ್ ಮತ್ತು ಸಂಗೀತಾ ಹಾಗೀ ನೀತು ಜೋಡಿ ಮಧ್ಯೆ ಭರ್ಜರಿ ಕಾಳಗವೂ ನಡೆದಿತ್ತು. ಸಂಗೀತಾ ಹೆಚ್ಚಾಗಿ ಹೈಲೈಟ್ ಆದರು. ಹೆಚ್ಚಾಗಿ ನೀತು ಹಾಗೂ ಸಂಗೀತಾ ನಡುವೆ ಅಷ್ಟಾಗಿ ಕೋ-ಆರ್ಡಿನೇಷನ್ ಇರಲಿಲ್ಲ. ಇಬ್ಬರ ಮಧ್ಯೆ ಜಗಳವೇ ಹೆಚ್ಚಾಗಿ ಆಗುತ್ತಿತ್ತು. ಆದರೆ ಮೈಕಲ್ ಹಾಗೂ ರಕ್ಷಕ್ ಸಖತ್ ಆಗಿ ಆಟವನ್ನು ಪೂರ್ಣಗೊಳಿಸಿದರು.
‘ರಣಶಕ್ತಿ, ಮಾಣಿಕ್ಯ ತಂಡದ ಸದಸ್ಯರು!
‘ಕಾರ್ತಿಕ್ ಮಹೇಶ್ ನೇತೃತ್ವದ ‘ರಣಶಕ್ತಿ’ ತಂಡದಲ್ಲಿ ಸಂಗೀತಾ ಶೃಂಗೇರಿ, ತನಿಷಾ ಕುಪ್ಪಂಡ, ಡ್ರೋನ್ ಪ್ರತಾಪ್, ವರ್ತೂರು ಸಂತೋಷ್, ಸಿರಿ, ಭಾಗ್ಯಶ್ರೀ, ನೀತು ಇದ್ದರು. ವಿನಯ್ ಗೌಡ ತಂಡ ‘ಮಾಣಿಕ್ಯ’ ತಂಡಕ್ಕೆ ನಮ್ರತಾ ಗೌಡ, ಸ್ನೇಹಿತ್ ಗೌಡ, ಗೌರೀಶ್ ಅಕ್ಕಿ, ಮೈಕಲ್, ರಕ್ಷಕ್ ಬುಲೆಟ್, ತುಕಾಲಿ ಸಂತು ಮತ್ತು ಇಶಾನಿ ಇದ್ದರು.
ರಾಕೆಟ್ ಹಾಕುವಾಗ ಮಾತ್ರ ಅಂಕವನ್ನು ಯಾವ ತಂಡವೂ ಪಡೆಯಲಿಲ್ಲ. ಇದು ವಿನಯ್ ಹಾಗೂ ಕಾರ್ತಿಕ್ ತೆಗೆದುಕೊಂಡ ನಿರ್ಧರವಾಗಿತ್ತು. ಮಾಣಿಕ್ಯ ಹಾಗೂ ರಣಶಕ್ತಿ ಕೊನೆಗೆ 7-3 ಮೆಜಾರಿಟಿಯಲ್ಲಿ ಮಾಣಿಕ್ಯ ತಂಡ ಗೆದ್ದರು. ಇದರಿಂದ ಸಂಗೀತಾ ಬೇಸರಗೊಂಡರು. ಈ ವಿಚಾರಕ್ಕೆ ವಿನಯ್ ಮತ್ತು ಸಂಗೀತ ನಡುವೆ ಯುದ್ಧವೆ ನಡೆದು ಹೋಯ್ತು.
ಕೊನೆಗೆ ಸಗಣಿ ಸ್ನಾನದ ಶಿಕ್ಷೆ ಸಂಗೀತಾ ಅನುಭವಿಸಿದರು. ಮಾಣಿಕ್ಯ ತಂಡ ʻʻಸಂಗೀತಾ ಸ್ಪೋರ್ಟಿವ್ ಆಗಿ ಇರಲಿಲ್ಲ. ಇರಿಟೇಟ್ ಆಗುತ್ತಿದ್ದರುʼʼಎಂದು ಕಾರಣ ನೀಡಿ ಅವರಿಗೆ ಶಿಕ್ಷೆಯಾಗುವಂತೆ ವೋಟ್ ಮಾಡಿದರು. ಇದರಿಂದ ಬೇರಸಗೊಂಡ ಸಂಗೀತಾ ʻʻತನ್ನನ್ನೇ ಟಾರ್ಗೆಟ್ ಮಾಡುತ್ತಾರೆʼʼಎಂದು ಬಿಕ್ಕಿ ಬಿಕ್ಕಿ ಕಾರ್ತಿಕ್ ಮುಂದೆ ಅಳಲು ತೋಡಿಕೊಂಡರು.
ಇದನ್ನೂ ಓದಿ: BBK Season 10: ಮನೆಯ ಹೀರೊ, ವಿಲನ್, ಖಾಲಿ ಡಬ್ಬಾ ಯಾರ‍್ಯಾರು?
ಎರಡನೇ ಶಿಕ್ಷೆ
ಒಳಉಡುಪು ಹೊರತುಪಡಿಸಿ ಒಬ್ಬರ ಎಲ್ಲ ಬಟ್ಟೆಗಳನ್ನು ಸ್ವಿಮ್ಮಿಂಗ್ ಪೂಲ್‌ಗೆ ಹಾಕಬೇಕಿತ್ತು. ವಿನಯ್ ಗೌಡ ಹೇಳಿದಂತೆ ತಂಡ ಕೂಡ ಒಪ್ಪಿಗೆ ಸೂಚಿಸಿತು. ವಿನಯ್ ಗೌಡ ʻʻಮೊದಲನೇ ಆಟದಲ್ಲಿ ನರ್ವಸ್ ಆಗಿದ್ದು ಪ್ರತಾಪ್, ಎರಡನೇ ಆಟದಲ್ಲಿ ಕನ್‌ಫ್ಯೂಸ್ ಆಗಿದ್ದು ನೀತು. ಪ್ರತಾಪ್ ಬಟ್ಟೆಗಳನ್ನು ಸ್ವಿಮ್ಮಿಂಗ್ ಫೂಲ್‌ಗೆ ಹಾಕಬೇಕುʼʼಎಂದರು.
ಒಟ್ಟಾರೆಯಾಗಿ ಎರಡನೇ ದಿನ ಮನೆಯಲ್ಲಿ ವಿನಯ್ ಹಾಗೂ ಸಂಗೀತಾ ನಡುವೆ ಆದ ಜಗಳವೇ ಪ್ರಮುಖ ಹೈಲೈಟ್ ಆಗಿತ್ತು. ಬಿಗ್ ಬಾಸ್ ಕಲರ್ಸ್ ಕನ್ನಡದಲ್ಲಿ ಪ್ರತಿ ದಿನ ರಾತ್ರಿ 9.30ಕ್ಕೆ ಪ್ರಸಾರ ಕಾಣುತ್ತದೆ. ಜೀಯೋ ಸಿನಿಮಾದಲ್ಲಿ ಲೈವ್ ಆಗಿ ಪ್ರಸಾರವಾಗುತ್ತಿದೆ.