Site icon Vistara News

Elvish Yadav: ಹಲ್ಲೆ ನಡೆಯುತ್ತಿದ್ದಂತೆ ಅಲ್ಲಿಂದ ಕಾಲ್ಕಿತ್ತ ಬಾಸ್‌ ಒಟಿಟಿ 2 ವಿನ್ನರ್‌!

Elvish Yadav In Jammu

ಬೆಂಗಳೂರು: ಸದಾ ಒಂದಲ್ಲ ಒಂದು ವಿವಾದದಲ್ಲಿ ಇರುವ ಬಿಗ್ ಬಾಸ್ OTT 2 ವಿನ್ನರ್ ಎಲ್ವಿಶ್ ಯಾದವ್ (Elvish Yadav) ಇದೀಗ ಮತ್ತೆ ಸುದ್ದಿಯಾಗಿದ್ದಾರೆ. ಎಲ್ವಿಶ್ ಯಾದವ್ ಮತ್ತು ನಿರ್ಮಾಪಕ ರಾಘವ್ ಶರ್ಮಾ ಅವರನ್ನು ಇತ್ತೀಚೆಗೆ ಜಮ್ಮುವಿನ ಕತ್ರಾದಲ್ಲಿ ಕೆಲವರು ಗುಂಪುಗೂಡಿ ಹಲ್ಲೆ ಮಾಡಲು ಬಂದಿರುವ ವಿಡಿಯೊ ವೈರಲ್‌ ಆಗಿದೆ.

ವರದಿಗಳ ಪ್ರಕಾರ, ಕತ್ರಾ ಮಾರುಕಟ್ಟೆಯಲ್ಲಿ ವ್ಯಕ್ತಿಯೊಬ್ಬರು ಎಲ್ವಿಶ್ ಯಾದವ್ ಹಾಗೂ ರಾಘವ್ ಶರ್ಮಾ ಅವರನ್ನು ಥಳಿಸಿದ್ದಾರೆ ಎನ್ನಲಾಗಿದೆ. ಎಲ್ವಿಶ್ ಮತ್ತು ರಾಘವ್ ವೈಷ್ಣೋದೇವಿ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದರು. ಒಬ್ಬ ವ್ಯಕ್ತಿ ಎಲ್ವಿಶ್ ಮತ್ತು ರಾಘವ್ ಅವರೊಂದಿಗೆ ಫೋಟೊವನ್ನು ಕ್ಲಿಕ್ಕಿಸಲು ಕೇಳಿಕೊಂಡಿದ್ದಾನೆ. ರಾಘವ್‌ ಹಾಗೂ ಎಲ್ವಿಶ್‌ ಇಬ್ಬರೂ ಫೋಟೊ ನೀಡಲು ನಿರಾಕರಿಸಿದ್ದಾರೆ. ಇದರಿಂದ ಕೋಪಗೊಂಡ ವ್ಯಕ್ತಿ ರಾಘವ್ ಶರ್ಮಾ ಅವರ ಕಾಲರ್ ಹಿಡಿದಿದ್ದಾನೆ. ಈ ವೇಳೆ ಯುಟ್ಯೂಬರ್‌ ಎಲ್ವಿಶ್ ಯಾದವ್ ಅಲ್ಲಿಂದ ಓಡಿ ಹೋಗಿದ್ದಾರೆ.

ಸದ್ಯ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಎಲ್ವಿಶ್ ಯಾದವ್ ತನ್ನ ಸ್ನೇಹಿತನನ್ನು ಒಬ್ಬಂಟಿಯಾಗಿ ಬಿಟ್ಟು ಸ್ಥಳದಿಂದ ಓಡಿಹೋಗಿದ್ದಕ್ಕಾಗಿ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಎಲ್ವಿಶ್ ಯಾದವ್ ಅತ್ಯಂತ ಜನಪ್ರಿಯ ಯೂಟ್ಯೂಬರ್‌ಗಳಲ್ಲಿ ಒಬ್ಬರು. ಬಿಗ್ ಬಾಸ್ ಗೆದ್ದ ಮೊದಲ ವೈಲ್ಡ್ ಕಾರ್ಡ್ ಸ್ಪರ್ಧಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅದರ ನಂತರ, ಅವರು ಹಲವಾರು ಸಂಗೀತ ವೀಡಿಯೊಗಳಲ್ಲಿ ಕಾಣಿಸಿಕೊಂಡರು.

ಇದನ್ನೂ ಓದಿ: Elvish Yadav: ಹಾವಿನ ವಿಷ ಬಳಕೆ; ಬಿಗ್‌ ಬಾಸ್‌ ಒಟಿಟಿ 2 ವಿಜೇತ ಎಲ್ವಿಶ್ ಯಾದವ್ ವಿರುದ್ಧ ಕೇಸ್‌!

ವೈರಲ್‌ ವಿಡಿಯೊ

ಹಾವಿನ ವಿಷ ಬಳಕೆ; ಎಲ್ವಿಶ್ ಯಾದವ್ ವಿರುದ್ಧ ಕೇಸ್‌!

ರೇವ್ ಪಾರ್ಟಿಯಲ್ಲಿ ಹಾವಿನ ವಿಷ ಬಳಸಿದ ಆರೋಪದ ಮೇಲೆ ಯೂಟ್ಯೂಬರ್, ಬಿಗ್ ಬಾಸ್ OTT2 ವಿಜೇತ ಎಲ್ವಿಶ್ ಯಾದವ್ (Elvish Yadav) ವಿರುದ್ಧ ಕೇಸ್ ದಾಖಲಿಸಲಾಗಿತ್ತು. ಎಲ್ವಿಶ್ ಯಾದವ್ ಅವರು ಯೂಟ್ಯೂಬ್ ಮತ್ತು ಇನ್‌ಸ್ಟಾಗ್ರಾಮ್‌ಗಾಗಿ ವಿಡಿಯೊಗಳನ್ನು ಶೂಟ್ ಮಾಡಲು ಹಾವುಗಳನ್ನು ಬಳಸಿದ್ದಾರೆ ಎಂದು ಅವರು ಹೇಳಿಕೆ ನೀಡಿದ್ದಾರೆ ಎಂದು ವರದಿಯಾಗಿತ್ತು. ಎಫ್‌ಐಆರ್‌ನಲ್ಲಿ ಎಲ್ವಿಶ್ ಯಾದವ್ ಸೇರಿದಂತೆ ಆರು ಮಂದಿಯ ಹೆಸರುಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದರು.

ವಿವಿಧ ಸ್ಥಳಗಳಿಂದ ಹಾವುಗಳನ್ನು ಹಿಡಿದು ಅವುಗಳ ವಿಷವನ್ನು ಹೊರತೆಗೆಯುತ್ತಿದ್ದರು, ಎಲ್ವಿಶ್ ಯಾದವ್‌ ಅವರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿದ್ದರು.. ಪಾರ್ಟಿಗಳಲ್ಲಿ ವಿಷವನ್ನು ಪೂರೈಸಲು ಅವರು ಭಾರಿ ಮೊತ್ತದ ಹಣವನ್ನು ಸಂಗ್ರಹಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದರು.

Exit mobile version