Site icon Vistara News

BBK Season 10: ಡಿಪ್ರೆಶನ್‌ಗೂ ಜಾರಿದ್ದ ಇಶಾನಿ: ಹೇಗಿತ್ತು ಕನ್ನಡ ರ‍್ಯಾಪ್‌ ಸಾಂಗ್‌?

Eshani bigg boss kannada work put Kannada Rap song

ಬೆಂಗಳೂರು: ರ‍್ಯಾಪ್‌ ಸಂಗೀತದ ಮೂಲಕವೇ ಗುರುತಿಸಿಕೊಂಡಿದ್ದರೂ ಇಶಾನಿ ಬಿಗ್‌ಬಾಸ್‌ (BBK Season 10) ಮನೆಯೊಳಗೆ ಬಂದ ಮೇಲೆ ಅವರ ರ‍್ಯಾಪ್‌ ಪ್ರೇಮ ವ್ಯಕ್ತಗೊಂಡಿದ್ದು ವಿರಳವೇ. ಮನೆಯೊಳಗಿನ ವಾತಾವರಣಕ್ಕೆ ಹೊಂದಿಕೊಳ್ಳುವ ಭರದಲ್ಲಿ ಮೈಕೆಲ್‌ ಜತೆಗಿನ ಸ್ಪೆಷಲ್ ಫ್ರೆಂಡ್‌ಷಿಪ್‌, ಟಾಸ್ಕ್‌ಗಳ ಕಾವು, ಜಗಳ ಈಎಲ್ಲದರಿಂದ ಅವರೊಳಗಿನ ರ‍್ಯಾಪ್‌ ಗರ್ಲ್‌ ಬಚ್ಚಿಟ್ಟುಕೊಂಡಂತಿದ್ದಳು. ಆದರೆ ಒಳಗೆ ಬಚ್ಚಿಟ್ಟುಕೊಂಡಿದ್ದನ್ನು ಹೊರತೆಗೆದು ಅಸಲಿ ಮುಖ ತೋರಿಸುವುದೇ ಬಿಗ್‌ಬಾಸ್‌ ರಿಯಾಲಿಟಿ ಷೋನ ಸ್ಪೆಷಾಲಿಟಿ ಅಲ್ಲವೇ? ಅದು ಈ ಸೀಸನ್‌ನಲ್ಲಿ ಕೂಡ ಪ್ರತಿದಿನ ಸಾಬೀತಾಗುತ್ತಿದೆ. ಮನೆಯೊಳಗೆ ಪ್ರವೇಶಿಸುವಾಗ ಇದ್ದ ಹಾಗೆ ಯಾರೂ ಈಗ ಇಲ್ಲ. ದಿನಕ್ಕೊಂದು ಹೊಸ ಹೊಸ ರೂಪಗಳು ಅವರೊಳಗಿಂದ ಹೊರಬೀಳುತ್ತಿವೆ. ಹಾಗೆಯೇ ಇಶಾನಿ ಅವರ ಮನಸೊಳಗೆ ಬಚ್ಚಿಟ್ಟುಕೊಂಡಿದ್ದ ರ‍್ಯಾಪ್‌ ಗರ್ಲ್‌ ನಿಧಾನಕ್ಕೆ ಹೊರಬೀಳುತ್ತಿದ್ದಾಳೆ.

ಇಶಾನಿ ಅವರೊಳಗಿನ ರ‍್ಯಾಪ್‌ ಗರ್ಲ್‌ ಮಾತಾಡತೊಡಗಿದ್ದಕ್ಕೆ ಸಾಕ್ಷಿಯಾಗಿದ್ದು, ಬುಲೆಟ್‌ ರಕ್ಷಕ್‌. ಬರೀ ಸಾಕ್ಷಿಯಾಗಿದ್ದಷ್ಟೇ ಅಲ್ಲ, ಅವರ ಸಹಾಯಕ್ಕೂ ನಿಂತಿದ್ದಾರೆ. ಕಳೆದ ಸಂಚಿಕೆಯಲ್ಲಿ ಇಶಾನಿ ಮ್ಯೂಸಿಕ್ ಮೂಡ್‌ನಲ್ಲಿಯೇ ಇದ್ದಂತಿತ್ತು. ನಡೆದಾಡುತ್ತಿರುವಾಗ, ಹರಟೆಗೆಂದು ಕೂತಿದ್ದಾಗಲೆಲ್ಲ ಗುನುಗುತ್ತಿದ್ದರು.

ಡಿಪ್ರೆಶನ್‌ಗೂ ಜಾರಿದ್ದ ಇಶಾನಿ

ಕೆಲವು ವರ್ಷಗಳ ಹಿಂದೆ ಇಶಾನಿ ಡಿಪ್ರೆಶನ್‌ಗೆ ಹೋಗಿದ್ದರಂತೆ. ಇದರ ಕುರಿತೂ ಬಿಗ್‌ಬಾಸ್‌ ಮನೆಯಲ್ಲಿ ಅವರು ಅನುಭವಗಳನ್ನು ಹಂಚಿಕೊಂಡಿದ್ದಾರೆ. ವಿನಯ್, ಇಶಾನಿ, ನಮ್ರತಾ, ಮೈಕಲ್ ಎಲ್ಲರೂ ಕೂತು ಡಿಪ್ರೆಶನ್‌ ಕುರಿತು ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಮೈಕಲ್ ಮತ್ತು ನಮ್ರತಾ ಕೂಡ ಹಿಂದೊಮ್ಮೆ ಡಿಪ್ರೆಶನ್‌ಗೆ ಜಾರಿದ್ದರಂತೆ. ಮೈಕಲ್‌ ಅವರಿಗೆ ಡಿಪ್ರೆಶನ್‌ನಿಂದ ಹೊರಬರಲು ವರ್ಕೌಟ್‌ ತುಂಬ ಸಹಾಯ ಮಾಡಿದೆ. ನಮ್ರತಾಗೆ ಡಾನ್ಸ್‌ ಕೂಡ ಸಹಾಯ ಮಾಡಿತ್ತಂತೆ.

‘ನಾನು ಡಿಪ್ರೆಶನ್‌ನಿಂದ ಹೊರಗೆ ಬರಲು ಸಾಕಷ್ಟು ಪ್ರಯತ್ನಪಟ್ಟೆ. ಆದರೆ ಆಗುತ್ತಿರಲಿಲ್ಲ. ಸಂಗೀತ ಕ್ಲಾಸ್‌, ಡಾನ್ಸ್‌ ಕ್ಲಾಸ್‌ ಎಲ್ಲದಕ್ಕೂ ಹೋಗುತ್ತಿದ್ದೆ. ಆದರೆ ಮನಸ್ಸನ್ನು ಆವರಿಸಿದ ಖಿನ್ನತೆಯಿಂದ ಹೊರಬರುವುದು ಸುಲಭವಾಗಿರಲಿಲ್ಲ. ಸುಮಾರು ಎರಡು ವರ್ಷಗಳ ಕಾಲ ನನಗೆ ಯಾವ ಅವಕಾಶಗಳೂ ಸಿಗಲಿಲ್ಲ. ಇದೂ ನಾನು ಖಿನ್ನತೆಗೆ ಜಾರಲು ಕಾರಣವಾಗಿತ್ತು’ ಎಂದು ಅವರು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: BBK Season 10: ಕಾರ್ತಿಕ್‌ಗೆ ರಾಖಿ ಕಟ್ಟಿದ ಸಂಗೀತಾ; ಎಲ್ಲ ಸೇರಿ ಸ್ನೇಹಿತ್‍‍ನ ಹೆಂಗ್ ಗೋಳಾಡಿಸ್ತಿದಾರೆ ಪಾಪ!  

ಹಾಡು ಹುಟ್ಟಿದ ಬಗೆ

ಕೊನೆಗೂ ತಮ್ಮನ್ನು ಖಿನ್ನತೆಯಿಂದ ಪಾರುಮಾಡಿದ ಸಂಗೀತದ ಶಕ್ತಿಯನ್ನು ಮನೆಯ ಸದಸ್ಯರಿಗೂ ತೋರಿಸಬೇಕು ಎಂದು ಅವರುನ ನಿರ್ಧರಿಸಿರಬೇಕು. ಇಶಾನಿ ಹಾಡು ಕಟ್ಟಲು ನಿರ್ಧರಿಸಿದ್ದರು. ಎಲ್ಲರೂ ಮಾತಾಡುತ್ತಿರುವಾಗ ಇಶಾನಿ ಹಾಳೆ ಪೆನ್ನು ಹಿಡಿದುಕೊಂಡು ಬಾಯಲ್ಲಿ ಏನೋ ಗುನುಗುತ್ತ ಮನಸ್ಸಿನೊಳಗೆ ಹುಟ್ಟುತ್ತಿರುವ ಹಾಡಿಗೆ ಅಕ್ಷರರೂಪ ನೀಡುತ್ತಿದ್ದರು.
ನಾನು ಕ್ವಿನ್‌ ಇಶಾನಿ
ನಾನು ರ‍್ಯಾಪರ್‌ ರಾಣಿ
ನಾನು ಏನ್ ಅಂತ ನನಗೆ ಗೊತ್ತು

ಇದು ಬಿಗ್ ಬಾಸ್
ಐ ಆಮ್‌ ಲೇಡಿ ಬಾಸ್
ನಾನು ಫೈಟರ್ ಲೇಡಿ
ಡೊಂಟ್ ಗಿವ್ ಅ
ಆಚೆ ನನ್ನ ಫ್ಯಾನ್ಸು
ಕೊಡ್ರೀ ಒಂದು ಚಾನ್ಸು
ಆಗ್ರೀನ್ ನಾನು ಬೌನ್ಸ್
ಇದೇ ನನ್ನ ರೂಲ್ಸು
ಹೀಗೆ ಲಿರಿಕ್ಸ್‌ ಮತ್ತೆ ಮತ್ತೆ ಹೇಳಿಕೊಳ್ಳುತ್ತ, ಅದನ್ನು ತಿದ್ದಿಕೊಳ್ಳುತ್ತ ಬರೆದುಕೊಳ್ಳುತ್ತಿದ್ದಾರೆ. ನಂತರ ಮನೆಯೊಳಗೆ ಬಂದು ಕೂತ ಮೇಲೆ ರಕ್ಷಕ್ ಕೂಡ ಅವರ ಲಿರಿಕ್ಸ್‌ಗೆ ತಮ್ಮೆರಡು ಸಾಲು ಸೇರಿಸಿದ್ದಾರೆ. ‘ಕೇಳ್ರೋ ನನ್ನ ಫ್ಯಾನ್ಸು
ನಾನೇ ಇಲ್ಲಿ ಬಾಸು’ -ಇದು ರಕ್ಷಕ್ ಸೇರಿಸಿದ ಸಾಲುಗಳು. ಹಾಡು ಇನ್ನೂ ಮುಂದುವರಿಯುತ್ತಲೇ ಇತ್ತು.

ಬಿಗ್​ಬಾಸ್ ಕನ್ನಡ ಕಲರ್ಸ್ ವಾಹಿನಿಯಲ್ಲಿ ಪ್ರತಿರಾತ್ರಿ 9:30ಕ್ಕೆ ಹಾಗೂ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

Exit mobile version