Site icon Vistara News

BBK Season 10: ಇಶಾನಿ, ಮೈಕಲ್‌ ಅಸಭ್ಯ ವರ್ತನೆ; ಫ್ಯಾಮಿಲಿ ಶೋ ಗುರು ಇದು ಅಂದ್ರು ನೆಟ್ಟಿಗರು!

eshani michael ajay

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10ರ (BBK Season 10) ಐದನೇ ವಾರದ ಕಿಚ್ಚನ ಪಂಚಾಯಿತಿಯಲ್ಲಿ ಇಶಾನಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಮಾತ್ರವಲ್ಲ ಸದ್ಯ ಮನೆಯಲ್ಲಿ ಮೈಕಲ್‌ ಹಾಗೂ ಇಶಾನಿ ಪರಸ್ಪರ ಸಲುಗೆಯಿಂದ ಇದ್ದಿದ್ದು, ಅಸಭ್ಯವಾಗಿ ವರ್ತಿಸುತ್ತಿದ್ದಾರೆ ಎಂದು ಪ್ರೇಕ್ಷಕರು ಕಮೆಂಟ್‌ ಮಾಡಿದ್ದಾರೆ. ಈಗಾಗಲೇ ಮೈಕಲ್‌ ಇಶಾನಿ ಅವರು ತನ್ನ ಗರ್ಲ್‌ ಫ್ರೆಂಡ್‌ ಎಂದು ಮನೆಯಲ್ಲಿ ಅನೌನ್ಸ್‌ ಮಾಡಿದ್ದಾರೆ. ಶನಿವಾರದ (ನ.11) ಸಂಚಿಕೆಯಲ್ಲಿ ಒಬ್ಬರ ಮೈಮೇಲೆ ಮತ್ತೊಬ್ಬರು ಬೀಳುವುದು, ಇದೆಲ್ಲ ಗಮನಿಸಿ ಪ್ರೇಕ್ಷಕರು ಇವರಿಬ್ಬರದ್ದೂ ಅತಿಯಾಯ್ತು. ಫ್ಯಾಮಿಲಿ ಶೋ ಇದು ಎಂದು ಕಮೆಂಟ್‌ ಮಾಡಿದ್ದಾರೆ.

ತುಕಾಲಿ ಕಣ್ಣಿಗೂ ಬಿದ್ದೇ ಬಿಡ್ತು

ಗಾರ್ಡನ್ ಏರಿಯಾದಲ್ಲಿ ಮೈಕಲ್‌ ಹಾಗೂ ಇಶಾನಿ ಸಖತ್‌ ಸಲುಗೆಯಿಂದ ಇದ್ದರು. ತುಕಾಲಿ ಸಂತು ಕಣ್ಣಿಗೂ ಕೂಡ ಬಿದ್ದಿದ್ದು, ಅವರು ಈ ಜೋಡಿಯನ್ನು ರೇಗಿಸಿದ್ದಾರೆ. ಮೈಕಲ್ ತೊಡೆಯ ಮೇಲೆ ಈಶಾನಿ ಕಾಲಿಟ್ಟಿದ್ದು ಇವರಿಬ್ಬರು ಸಲುಗೆಯಿಂದ ನಡೆದುಕೊಂಡಿದ್ದಾರೆ.

ಮೋಸದ ಆಟ ಆಡಿದ ಮೈಕಲ್‌

ಬಲೂನ್‌ ಟಾಸ್ಕ್‌ನಲ್ಲಿ ಮೈಕಲ್‌ ಅವರಿ ಇಶಾನಿಗೋಸ್ಕರ ಮೋಸದ ಆಟ ಆಡಿದ್ದು ಗೊತ್ತೇ ಇದೆ. ಈ ಬಗ್ಗೆ ಸುದೀಪ್‌ ಅವರು ಮೈಕಲ್‌ ಬೆವರು ಇಳಿಸಿದ್ದಾರೆ. ʻʻನೀನು ನನಗೆ ಸಪೋರ್ಟ್ ಮಾಡಲ್ಲ, ನೀನು ಮಾಡಿದ್ದು ಸರಿ ಇಲ್ಲ. ನೀನು ನನಗೆ ಇಮೋಶನಲ್ ಸಪೋರ್ಟ್ ಕೊಡಲ್ಲʼʼ ಎಂದು ಇಶಾನಿ ಅವರು ಮೈಕಲ್‌ಗೆ ಹೇಳಿದರು. ಇದಾದ ಬಳಿಕ ಮೈಕಲ್‌ ‘ಗಂಧದ ಗುಡಿ’ ಟೀಂಗೆ ಸುಳ್ಳು ನಿರ್ಣಯ ಕೂಡ ನೀಡಿದ್ದರು.

ಇದನ್ನೂ ಓದಿ: BBK Season 10: ಕಿಚ್ಚನ ಮೆಚ್ಚುಗೆಯ ಚಪ್ಪಾಳೆ ಗಿಟ್ಟಿಸಿಕೊಂಡ ಪ್ರತಾಪ್!

ಟೈಮ್‌ ಪಾಸ್‌ ಪ್ರೀತಿನಾ?

ಹಿಂದೊಮ್ಮೆ ಸ್ನೇಹಿತ್ ಅವರು ಇಶಾನಿ ಮೇಲೆ ಕ್ರಶ್ ಇತ್ತು, ಮೈಕಲ್ ಬಂದಿದ್ದಕ್ಕೆ ದೂರ ಸರಿದೆ ಎಂದು ಹೇಳಿದ್ದರು.ಆಗ ಇಶಾನಿ ಅವರು “ಮೈಕಲ್ ನನ್ನ ಬಾಯ್‌ಫ್ರೆಂಡ್ ಎಂದು ಮಾತಾಡೋದನ್ನು ನಿಲ್ಲಿಸಬೇಡ, ಆ ತರ ಏನಿಲ್ಲ, ನೀನು ನನ್ನ ಜತೆ ಮಾತಾಡು” ಎಂದು ಹೇಳಿದ್ದರು. ಇದನ್ನು ನೋಡಿದರೆ ಬಿಗ್ ಬಾಸ್ ಮನೆಯ ಆಟಕ್ಕೋಸ್ಕರ ಇಶಾನಿ ಈ ರೀತಿ ವರ್ತನೆ ಮಾಡುತ್ತಿದ್ದಾರೆ ಎನ್ನುತ್ತಿದ್ದಾರೆ ಪ್ರೇಕ್ಷಕರು.

ಪ್ರೇಯಸಿಗೋಸ್ಕರ ತಪ್ಪು ಮಾಡಿದ ಮೈಕಲ್, ಅತ್ತ ಇಶಾನಿ!

ಟಾಸ್ಕ್‌ನಲ್ಲಿ ಮೈಕಲ್‌ ಅವರು ಇಶಾನಿಗೆ ಸಪೋರ್ಟ್‌ ಮಾಡಿರುವುದು ಗೊತ್ತೇ ಇದೆ. ಕಿಚ್ಚನ ಪಂಚಾಯಿತಿಯಲ್ಲಿ ಕೂಡ ಈ ಬಗ್ಗೆ ಮೈಕಲ್‌ ಕ್ಷಮೆ ಕೇಳಿದರು. ಇಶಾನಿ ಉಳಿಯಬೇಕು ಎಂದು ಮೈಕಲ್‌ ತಮ್ಮ ಟೀಂ ಬಿಟ್ಟು, ಇಶಾನಿ ಟೀಟೀಂಗೆ ಹೇಗೆ ಆಟ ಆಡಬೇಕು, ತಂತ್ರ ಮಾಡಬೇಕು ಅಂತ ಸಲಹೆ ನೀಡಿದ್ದರು. ಅಷ್ಟೇ ಅಲ್ಲದೇ ಇಶಾನಿಗೂ ಕೂಡ ಮೈಕಲ್‌ ʻʻನೀನು ಮಾಡಿರುವು ತಪ್ಪು. ನಾವಿಬ್ಬರೂ ಭೇಟಿ ಆಗಿ 1 ತಿಂಗಳು ಆಗಿದೆ ಅಷ್ಟೇʼʼಎಂತಲೂ ಹೇಳಿದರು. ಇಶಾನಿ ಬಳಿಕ ಮೈಕಲ್‌ ಈ ರೀತಿ ಹೇಳಿದ್ದಕ್ಕೆ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ನಮ್ರತಾ ಹಾಗೂ ಸ್ನೇಹಿತ್‌ ಮುಂದೆ ʻʻನನ್ನದೇ ತಪ್ಪು ಎಂದ ಮೈಕಲ್‌. ನಾನು ಮನೆಯಿಂದ ಆಚೆ ಹೋಗುತ್ತೇನೆʼʼಎಂದರು. ಇದು ಸುದೀಪ್‌ ಅವರ ಮುಂದೆಯೇ ಚರ್ಚೆಯಾಯಿತು. ಬಳಿಕ ಸುದೀಪ್‌ ಅವರು ಇಶಾನಿ ಅವರನ್ನು ಸಮಾಧಾನ ಮಾಡಿದರು.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version