ʻಬಿಗ್‌ಬಾಸ್ ಕನ್ನಡʼ ಸೀಸನ್ 10 (BBK Season 10)ರ ಫಿನಾಲೆಗೆ ಕ್ಷಣಗಣನೆ ಆರಂಭವಾಗಿದೆ. ಚಾಂಪಿಯನ್ ಯಾರಾಗುತ್ತಾರೆ, ಯಾರಾಗಬೇಕು ಎನ್ನುವ ಬಗ್ಗೆಯೇ ಚರ್ಚೆ ನಡೆಯುತ್ತಿದೆ. ಬಿಗ್‌ಬಾಸ್ ಮನೆಗೆ ಈ ಸೀಸನ್‌ನ ಹಳೆಯ ಸ್ಪರ್ಧಿಗಳು ಭೇಟಿ ನೀಡಿ ತಮ್ಮ ಸ್ನೇಹಿತರಿಗೆ ಧೈರ್ಯ ತುಂಬಿದ್ದಾರೆ. ಭಾಗ್ಯಶ್ರೀ, ಸ್ನೇಹಿತ್, ರಕ್ಷಕ್, ಮೈಕಲ್, ಸಿರಿ, ಇಶಾನಿ, ನೀತು ಮತ್ತಿತರರು ಬಿಗ್‌ಬಾಸ್ ಮನೆಯೊಳಗೆ ಎಂಟ್ರಿಯಾಗಿ ಅಚ್ಚರಿ ಮೂಡಿಸಿದ್ದಾರೆ. ತಮ್ಮ ಸ್ನೇಹಿತರಿಗೆ ಸ್ಫೂರ್ತಿ ತುಂಬಿದ್ದಾರೆ. ಆದರೆ ಇಶಾನಿ ಮಾತಿಗೆ ಇದೀಗ ಡ್ರೋನ್ ಫ್ಯಾನ್ಸ್ ಸೋಷಿಯಲ್ ಮೀಡಿಯಾ ಮೂಲಕ ಆಕ್ರೋಶ ಹೊರ ಹಾಕುತ್ತಿದ್ದಾರೆ.
ಇಶಾನಿ ಮಾತ್ರ ಮನೆಯಲ್ಲಿ ವೈಲೆಂಟ್ ಆಗಿ ವರ್ತಿಸಿದ್ದಾರೆ. ಡ್ರೋನ್ ಪ್ರತಾಪ್ ಮಾತನಾಡುತ್ತಿದ್ದಾಗ, ‘’ಕಾಗೆ ಕಾ.. ಕಾ.. ಅಂತಿದೆ’’ ಎಂದು ಚುಚ್ಚು ಮಾತನ್ನಾಡಿದ್ದಾರೆ ಇಶಾನಿ. ಇನ್ನೂ ಕಾರ್ತಿಕ್ ಬಂದಾಗಲೂ ಒರಟಾಗಿ ಮಾತನಾಡಿದ್ದಾರೆ. ಸಂಗೀತಾ ಹಾಗೂ ವಿನಯ್ ಜತೆಗೆ ಇಶಾನಿ ಮಾತನಾಡುವಾಗ, ‘’ಕಾಗೆ ಗೊತ್ತಿಲ್ವಾ? ಕಾಗೆ ಕಕ್ಕಾ ಮಾಡಿಬಿಟ್ಟು.. ಎಲ್ಲಾ ಕಡೆ ಹೋಗ್ತಾನೇ ಇದೆ. ಸಿಂಪಥಿ ಕಾರ್ಡ್ ಯೂಸ್ ಮಾಡಿ.. ಉಳ್ಕೊಂಡಿದ್ದಾರೆ ಅದರಿಂದ. ಅಲ್ವಾ?’’ ಎಂದಿದ್ದಾರೆ ಇಶಾನಿ. ಈ ಮಧ್ಯೆ ಡ್ರೋನ್ ಪ್ರತಾಪ್ ಮಾತನಾಡಿದಾಗ, ‘’ಕಾಗೆ ಕಾ.. ಕಾ.. ಅಂತಿದೆ’’ ಎಂದು ಇಶಾನಿ ಹೇಳಿದರು.
ಇದನ್ನೂ ಓದಿ: BBK SEASON 10: ಈ ಬಾರಿಯ ʻಬಿಗ್ ಬಾಸ್ʼನ ಬೆಸ್ಟ್ ಗೆಸ್ಟ್ ಮೊಮೆಂಟ್‌ಗಳಿವು!
ಇತ್ತೀಚೆಗೆ ಡ್ರೋನ್ ಪ್ರತಾಪ್ ಅವರು ‘ವಿನಯ್ ಗೌಡ ಅವರು ಗ್ರೂಪಿಸಂ ಮಾಡಿದರು. ಅವರ ಗುಂಪಿನ ಎಲ್ಲರೂ ಹೊರ ಹೋದರು. ಈಗ ಅವರ ಬೆಡ್ಶೀಟ್ ವಿನಯ್ ಅವರ ಬೆಡ್ ಸೇರಿದೆ. ಅವರು ಒಬ್ಬರನ್ನು ತುಳಿದು ಮೇಲೆ ಬಂದಿದ್ದಾರೆ’ ಎಂದಿದ್ದರು. ಆ ಬಳಿಕ ವಿನಯ್ ಕೂಡ ಪ್ರತಾಪ್ ಮೇಲೆ ಸಿಟ್ಟಾದರು. ಇದೀಗ ಇಶಾನಿ ಕೂಡ ಪ್ರತಾಪ್ ಬಗ್ಗೆ ಕೀಳಾಗಿ ಮಾತನಾಡಿದ್ದಾರೆ. ಇಶಾನಿ ಅವರು ಈ ರೀತಿ ಮಾತನಾಡಬಾರದಿತ್ತು ಎಂದು ಅನೇಕರು ಟ್ವೀಟ್ ಮೂಲಕ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.
ಇಶಾನಿ ಪ್ರತಾಪ್ ಬಗ್ಗೆ ಈ ತರ ಮಾತಾಡುವುದು ಸರಿ ಅಲ್ಲ..!!
— GL MEDIA NEWS KANNADA (@GLMediaNewsKa) January 16, 2024
ಒಬ್ಬ ವ್ಯಕ್ತಿಗೆ ಈ ತರ ಅವಮಾನ ಮಾಡುವುದು ಸರಿನಾ ನೀವೇ ಹೇಳಿ..??#biggboss#biggbosskannada#DronePrathap#ishani#trendingnow#biggbossseason10#glmedianewskannada pic.twitter.com/nUac8XrTls
ಇಶಾನಿ ಅವರು ಪ್ರತಾಪ್ ಅವರಿಗೆ ಈ ರೀತಿ ಕೀಳಾಗಿ ಮಾತನಾಡಿದ್ದಕ್ಕೆ ಪ್ರತಾಪ್‌ಗೆ ಕ್ಷಮೆ ಕೇಳಬೇಕು ಎಂದು ಪ್ರೇಕ್ಷಕರು ಪೋಸ್ಟ್ ಮಾಡಲು ಶುರು ಮಾಡಿದ್ದಾರೆ. ಎಲ್ಲೆಂದರಲ್ಲಿ ಇಶಾನಿ ಟ್ರೋಲ್‌ಗೆ ಗುರಿಯಾಗುತ್ತಿದ್ದಾರೆ.
ಹಾಗೇ ನೀತು ಕೂಡ ಡ್ರೋನ್ ಪ್ರತಾಪ್‌ಗೆ ‘’ನಿನಗೆ ಸಂಗೀತಾದು ಸಪೋರ್ಟ್ ಇತ್ತು. ಅದು ಬ್ರೇಕ್ ಆಗಿಬಿಟ್ಟರೆ ನೀನು ಒಂಟಿಯಾಗಿಬಿಡ್ತೀಯಾ’’ ಎಂದು ತಿಳಿಸಿದರು. ಫಿನಾಲೆಗೆ ಇನ್ನು ಉಳಿದಿರೋದು ಕೆಲವೇ ದಿನಗಳು ಮಾತ್ರ. ಹೀಗೀರುವಾಗ ಡ್ರೋನ್ ಪ್ರತಾಪ್ ಅವರಿಗೆ ಫ್ಯಾನ್ಸ್ ʻನೀವು ಇನ್ನಷ್ಟು ಸ್ಟ್ರಾಂಗ್ ಆಗಿ ಜತೆಗೆ ನಾವಿದ್ದೇವೆʼ ಎಂದು ಹಾರೈಸುತ್ತಿದ್ದಾರೆ.