Site icon Vistara News

BBK Season 10: ಉಪ್ಪಿನಕಾಯಿ ಟೇಸ್ಟು ನಿಮಗೆ ಸಾಲ್ತಿಲ್ವಾ? ಪ್ರತಾಪ್‌ ನೀನಿರಲೇ ಬೇಕು ಎಂದ ಇಶಾನಿ!

Eshani Rapping Chronicles on Bigg Boss Kannada 10

ಬೆಂಗಳೂರು: ‘ಕವಿತೆ ಹುಟ್ಟಲು ಐಷಾರಾಮಿ (BBK Season 10) ಜಾಗವೇ ಬೇಕಿಲ್ಲ, ಒಂದು ಪೆನ್ನು, ಒಂದು ಚೂರು ಖಾಲಿ ಕಾಗದ ಸಾಕು’ ಎಂಬ ಮಾತಿದೆ. ಇದು ಹೊರಜಗತ್ತಿನಲ್ಲಿ ಎಷ್ಟರಮಟ್ಟಿಗೆ ಸತ್ಯವೋ ಗೊತ್ತಿಲ್ಲ. ಆದರೆ ಬಿಗ್‌ಬಾಸ್ ಮನೆಯಲ್ಲಿ ಮಾತ್ರ ಅಕ್ಷರಶಃ ಸತ್ಯವಾಗಿದೆ!

ಏನಿದು ಕವಿಸಮಯ?

ಬಿಗ್‌ಬಾಸ್‌ ಸ್ಪರ್ಧಿಗಳಲ್ಲಿ ಪದ್ಯ ಬರೆಯುವ ಕೌಶಲ ಇರುವವರು ಇಶಾನಿ ಮಾತ್ರ. ರ‍್ಯಾಪ್‌ ಹಾಡುಗಳನ್ನು ಕಟ್ಟಿ ಹಾಡುತ್ತಲೇ ಮುನ್ನಲೆಗೆ ಬಂದ ಇಶಾನಿ ಬಿಗ್ ಬಾಸ್‌ ಮನೆಯೊಳಗೆ ಸದ್ದುಮಡಿದ್ದು ಜೋರು ಧನಿಯ ಜಗಳ ಮತ್ತು ನಗುವಿನಿಂದಲೇ ಹೊರತು ರ‍್ಯಾಪ್‌ ಹಾಡುಗಳ ಮೂಲಕ ಅಲ್ಲ. ಹಿಂದೊಮ್ಮೆ ಅವರೊಂದು ಕನ್ನಡ ರ‍್ಯಾಪ್‌ ಸಾಂಗ್ ಕಟ್ಟಿದ್ದರಾದರೂ ಅದು ಅಷ್ಟೇನೂ ಸದ್ದು ಮಾಡಲಿಲ್ಲ. ಕಿಚನ್ ರೀಡಿಂಗ್‌ಗೇ ಮುಗಿದುಹೋಯಿತು. ಆದರೆ ಇಶಾನಿ ಪ್ರಯತ್ನವನ್ನು ಮಾತ್ರ ನಿಲ್ಲಿಸಿಲ್ಲ. ಮತ್ತೆ ಮತ್ತೆ ಕನ್ನಡದಲ್ಲಿ ರ‍್ಯಾಪ್‌ ಸಾಂಗ್ ಕಟ್ಟುವ ಪ್ರಯತ್ನ ನಡೆಸಿಯೇ ಇದ್ದಾರೆ. ಈ ಬಾರಿ ಅವರಿಗೆ ಸಿಕ್ಕಿದ್ದು ಟಿಶ್ಯೂ! ಟಿಶ್ಯೂ ಪೇಪರ್‍ ಮೇಲೆಯೇ ಇಂಗ್ಲಿಷ್‌ ಲಿಪಿಯಲ್ಲಿ ಕನ್ನಡದ ಸಾಲುಗಳನ್ನು ಬರೆಯುತ್ತ ಪದ್ಯ ಕಟ್ಟುತ್ತಿದ್ದಾರೆ ಇಶಾನಿ. ಪದ್ಯದ ಒಂದೊಂದು ಸಾಲೂ ಉಳಿದ ಸ್ಪರ್ಧಿಗಳನ್ನು ರೋಸ್ಟ್ ಮಾಡುವಂತಿದೆ. ಇಶಾನಿ ರಚಿಸಿದ ರ‍್ಯಾಪ್‌ ಸಂಗ್‌ ಹೀಗಿದೆ…

ರ‍್ಯಾಪ್‌ ಸಾಂಗ್ ಲಿರಿಕ್ಸ್ ಹೇಗಿದೆ ಗೊತ್ತಾ?
ನಾನ್ ಯಾರು ಅಂತ ನಿಮಗೆ ಗೊತ್ತಿಲ್ವಾ?
ಗೊತ್ತಿಲ್ಲ ಅಂತ ತಿಳಿಸೋಕೆ ಬಂದ್ನಲ್ವಾ?
ಉಪ್ಪಿನಕಾಯಿ ಟೇಸ್ಟು ನಿಮಗೆ ಸಾಲ್ತಿಲ್ವಾ?
ತಿಳ್ಕೊಳ್ರೋ ಇನ್ನು ನೀವಲ್ಲ
ಇನ್ಮುಂದೆ ನಿಮ್ದು ಏನು ನಡೆಯಲ್ಲ
ಈ ರಾಜ್ಯಕ್ಕೆ ರಾಣಿನೇ ನಾನಲ್ವಾ
ತಲೆಬಗ್ಸೀನೇ ನಡೀಬೇಕು ಈಗೆಲ್ಲ
ಸುಮ್ನಿದ್ರೆ ಮಾಡ್ತೀರಾ ಸೈಕು
ಹಿಡ್ದಿದ್ದೀನಿ ನಾನೀಗ ಮೈಕು
ಹೋಗ್ತೀನಿ ಒಂದೇ ಟೇಕು
ಮಾಡ್ತೀನಿ ನಿಮ್ ಈಗೊ ಬ್ರೇಕು
ತೋರಿಸ್ತೀನಿ ಯಾರೆಲ್ಲ ಫೇಕು
ತುಕಾಲಿಗೇ ಫಸ್ಟು ಸ್ಟ್ರೈಕು
ಮಾಡಿದ್ರೆ ತುಕಾಲಿ ಜೋಕು
ಪ್ರತಾಪ್‌ ನೀನಿರಲೇ ಬೇಕು
ಕ್ಯಾಮೆರಾ ಮುಂದೆ ನೀ ಬರೀ ಫೇಕು
ಇಲ್ದಿದ್ರೆ ನೀ ಸುಟ್ಟ ಕೇಕು– ಎಂದು ಹಾಡಿದರು.

ಬಿಗ್‌ ಬಾಸ್‌ ಸೀನ್‌ 10ರ (BBK Season 10) ಮೂರನೇ ವಾರ ʻವಾರದ ಕತೆ ಕಿಚ್ಚ ಜೊತೆʼ ವೀಕೆಂಡ್‌ ಪಂಚಾಯಿತಿಯಲ್ಲಿ ಊಹಿಸಲಾಗದೆ ಇರುವ ಟ್ವಿಸ್ಟ್ ಇತ್ತು. ವೀಕ್ಷಕರ ಅಭಿಪ್ರಾಯ ಸ್ಪರ್ಧಿಗಳ ಕಪಾಳಕ್ಕೆ ಹೊಡೆದಂತೆ ಬಿದ್ದಿದೆ. ಚಮಚ, ಎಲೆಕೋಸು, ಸೈಕಲ್, ಉಪ್ಪಿನಕಾಯಿ, ಖಡ್ಗ ಹೀಗೆ ಹಲವು ಉಡುಗೊರೆಗಳನ್ನು ಕೊಟ್ಟು ಖಡಕ್‌ ಸಂದೇಶವನ್ನು ಸ್ಪರ್ಧಿಗಳಿಗೆ ನೀಡಲಾಗಿತ್ತು.

ಇದನ್ನೂ ಓದಿ: BBK Season 10: ವರ್ತೂರ್ ಸಂತೋಷ್ ಬಂದ್ ಕೂಡ್ಲೇ ಗೆಟೌಟ್ ಅಂದ್ರು ಮನೆ ಮಂದಿ!

ಇಶಾನಿಗೆ ಉಪ್ಪಿನಕಾಯಿ

’ಊಟಕ್ಕೆ ಉಪ್ಪಿನಕಾಯಿ ಇರಬೇಕು ಅಂತಾರೆ. ಆದರೆ, ಇರಲೇಬೇಕು ಅಂತೇನಿಲ್ಲ. ಆದಷ್ಟು ಬೇಗ ಮೇನ್ ಡಿಶ್ ಆಗಿ’’ ಎಂದು ಬರೆಯಲಾಗಿತ್ತು. ಇದು ಮೊದಲಿಗೆ ಇಶಾನಿಗೆ ಅರ್ಥವಾಗಿರಲಿಲ್ಲ. ಕಿಚ್ಚ ಸುದೀಪ್‌ ಅವರು ಇದನ್ನು ಬಹುಬೇಗ ಅರ್ಥ ಮಾಡಿಸಿದ್ದರು. ʻʻನಿಮ್ಮ ಪೊಸಿಷನ್‌ ಉಪ್ಪಿನಕಾಯಿ ಅಷ್ಟೇ. ಪಲ್ಯಕ್ಕೂ ತೂಕ ಇರುತ್ತದೆʼʼಎಂದಿದ್ದರು.

ಇದೀಗ ಇಶಾನಿ ಹಾಡು ಬೆಳೆಯುತ್ತಲೇ ಇದೆ. ಅದು ಎಲ್ಲಿಗೆ ಹೋಗಿ ಮುಟ್ಟುತ್ತದೆ? ಯಾವಾಗ ಪ್ರೆಸೆಂಟ್ ಆಗುತ್ತದೆ? ಗೊತ್ತಿಲ್ಲ. ಆದರೆ ಮನೆಯೊಳಗಂತೂ ಹೊಸ ಸಂಚಲನ ಹುಟ್ಟು ಹಾಕುವುದು ಗ್ಯಾರಂಟಿ. ಎಲ್ಲ ಸ್ಪರ್ಧಿಗಳಿಗೂ ಹಾಡಿನ ಮೂಲಕವೇ ತಿರುಗೇಟು ಕೊಡಲು ಸಜ್ಜಾಗುತ್ತಿರುವ ಇಶಾನಿ ತಮ್ಮ ಯತ್ನದಲ್ಲಿ ಯಶಸ್ವಿಯಾಗ್ತಾರಾ? ಎಂಬುದು ಸಂಚಿಯಲ್ಲಿ ಗೊತ್ತಾಗಲಿದೆ.

ಬಿಗ್​ಬಾಸ್ ಕನ್ನಡ ಕಲರ್ಸ್ ವಾಹಿನಿಯಲ್ಲಿ ಪ್ರತಿರಾತ್ರಿ 9:30ಕ್ಕೆ ಹಾಗೂ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

Exit mobile version