Site icon Vistara News

BBK SEASON 10: ಮನೆಯವರಿಗೆಲ್ಲ ನಮ್ರತಾ ಇಷ್ಟ, ನನ್ನ ಯಾಕೆ ಇಷ್ಟಪಡಲ್ಲ? ಅತ್ತಿಗೆಗೆ ಸಂಗೀತಾ ಪ್ರಶ್ನೆ!

sangeetha question for sister-in-law

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10ರ (BBK SEASON 10) 12ನೇ ವಾರ ಸ್ಪರ್ಧಿಗಳ ಕುಟುಂಬವರು ಎಂಟ್ರಿ ಕೊಟ್ಟಿದ್ದರು. ಈ ವಾರ ಹ್ಯಾಪಿ ಬಿಗ್‌ ಬಾಸ್‌ ತರವೇ ಇತ್ತು ಮನೆ. ಸಂಗೀತಾ ಅವರ ತಂದೆ ಶಿವಕುಮಾರ್, ತಾಯಿ ಭವಾನಿ, ಅತ್ತಿಗೆ ಸುಚಿತ್ರಾ, ಅಣ್ಣ ಕೂಡ ದೊಡ್ಮನೆಗೆ ಬಂದಿದ್ದಾರೆ. ಇಲ್ಲಿಯವರೆಗೆ ಪ್ರತಿ ಸ್ಪರ್ಧಿ ಮನೆಯಿಂದ ಒಬ್ಬರು, ಇಬ್ಬರು ಬಂದಿದ್ದರೆ, ಸಂಗೀತಾ ಮನೆಯಿಂದ ನಾಲ್ವರು ಬಂದಿದ್ದು ವಿಶೇಷವಾಗಿತ್ತು. ಕಾರ್ತಿಕ್‌ ಅವರ ಅಮ್ಮ ಕೂಡ ಬಂದಿದ್ದರು. ಸಂಗೀತಾ ಅವರು ಮನೆಯವರೊಂದಿಗೆ ತಮ್ಮ ಆಟದ ಬಗ್ಗೆ ಹಲವು ವಿಚಾರಗಳ ಬಗ್ಗೆ ಚರ್ಚಿಸಿದರು.

ನಮ್ರತಾ ಇಷ್ಟ ಪಡುವ ಹಾಗೇ ನನ್ನ ಯಾಕೆ ಇಷ್ಟಪಡಲ್ಲ?

ಅತ್ತಿಗೆ ಸುಚಿತ್ರಾ ಜತೆ ಸಂಗೀತಾ ತುಂಬ ಕ್ಲೋಸ್‌. ಸುಚಿತ್ರಾ ಅವರು ಕೂಡ ಆಗಾಗ ಸಂಗೀತಾ ಅವರ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದೂ ಇದೆ. ಸುಚಿತ್ರ ಜತೆಗೆ ಸಂಗೀತಾ ಮಾತನಾಡಿ ʻʻನಾನು ಎಷ್ಟೇ ಕ್ಲೋಸ್‌ ಆಗಲು ಟ್ರೈ ಮಾಡಿದ್ರೂ ವಿರೋಧಿಸುತ್ತಾರೆ. ಅದಕ್ಕೆ ನನಗೆ ಅಳು ಬರುತ್ತದೆ. ನಾನು ನಾನು ನೆಗೆಟಿವ್ ಆಗಿ ಕಾಣ್ತಿದೀನಾ? ಏನಾದರೂ ಮಾಡಿದ್ನಾ? ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಕೂಡ ಹಾಗೇ ಆಯ್ತು. ನಮ್ರತಾಗೆ ವೋಟ್‌ ಹಾಕಿದ್ರು. ಅವಳನ್ನು ಇಷ್ಟ ಪಡುವ ಹಾಗೇ ನನ್ನ ಯಾಕೆ ಇಷ್ಟಪಡಲ್ಲ? ನನಗೆ ಪ್ರತಿ ಸಲ ಕಳಪೆ ಕೊಡ್ತಾರೆ, ನನಗೆ ಉತ್ತಮ ಸಿಗಲ್ಲ. ನಾನು ಕಳೆದ ಬಾರಿ ಚೆನ್ನಾಗಿ ಆಡಿದ್ರೂ ಕಳಪೆ ಕೊಟ್ಟರು, ಮುಂದಿನ ವಾರವೂ ಅದೇ ಕಥೆ ಆಗತ್ತೆ” ಎಂದು ಬೇಸರ ಹೊರ ಹಾಕಿದರು.

ಇದನ್ನೂ ಓದಿ: BBK SEASON 10: ಮಿಂಚಿನಂತೆ ಬಂದು ಹೋದ ಅಮ್ಮ; ಬಿಕ್ಕಿ ಬಿಕ್ಕಿ ಅತ್ತ ಕಾರ್ತಿಕ್!

ನೀನು ತುಂಬ ಸ್ಟ್ರಾಂಗ್‌ ಸ್ಪರ್ಧಿ

ಅತ್ತಿಗೆ ಕೂಡ ಈ ಮಾತಿಗೆ ʻʻಪ್ರತಿ ವಾರ ನಿನಗೆ ಕಳಪೆ ಕೊಟ್ಟರು ಪರವಾಗಿಲ್ಲ. ಚೆನ್ನಾಗಿ ಆಡುತ್ತಿದ್ದೀಯಾ. ಹಾಗೇ ಆಡು. ನೀನು ತುಂಬ ಸ್ಟ್ರಾಂಗ್‌ ಸ್ಪರ್ಧಿ.  ನೀನು ನೆಗೆಟಿವ್ ಆಗಿ ಖಂಡಿತ ಕಾಣಿಸ್ತಿಲ್ಲ.  ನೀನು ಅತ್ತರೆ ನಮಗೆಲ್ಲ ಬೇಸರ ಆಗುತ್ತೆ. ಈ ಸೀಸನ್‌ ತುಂಬ ಚೆನ್ನಾಗಿ ಬರುತ್ತಿದೆ. ಇದು ಹೈಲೈಟ್‌ ಆಗುತ್ತಿದೆ. ನೀನು ನಿನ್ನ ಆಟ ಆಡ್ತಿದೀಯಾ. ನಿನ್ನನ್ನು ಯಾರೇ ವಿರೋಧಿಸಲಿ, ಏನೇ ಆಗಲಿ, ಎಷ್ಟೇ ಕಳಪೆ ಬರಲಿ, ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳಬೇಡʼʼಎಂದಿದ್ದಾರೆ.

ಅಮ್ಮನ ಜತೆ ಸಂಗೀತಾ ಅವರು ಮಾತನಾಡುವ ಕಾರ್ತಿಕ್‌ ಬಗ್ಗೆ ಪರೋಕ್ಷವಾಗಿ ಮಾತನಾಡಿದರು. ʻʻನಾನು ಯಾರ ಜತೆಗಾದ್ರೂ ಇರಬೇಕಾದರೆ ನಿಮಗೆ ಲವ್‌ ಥರ ಅನ್ನಿಸ್ತಾ ಇತ್ತಾ?ನಿಮಗೆ ತಲೆ ತಗ್ಗಿಸುವ ಥರ ಮಾಡಿದ್ನಾ? ಎಂದು ಕೇಳದ್ದಾರೆ. ಸಂಗೀತಾ ಅವರ ಅಮ್ಮ ಕೂಡ ಈ ಮಾತಿಗೆ ʻʻಲವ್ ಮಾಡೋ ಥರ ಸ್ವಲ್ಪ ಅನಿಸ್ತು. ಆದರೆ ಅದು ಲವ್ ಅಲ್ಲ. ಫ್ರೆಂಡ್‌ಶಿಪ್‌ ದೃಷ್ಟಿಯಲ್ಲೇ ನಾನು ನೋಡಿದೆ. ನೀನು ತಲೆ ತಗ್ಗಿಸುವ ಥರ ನಡೆದುಕೊಂಡಿಲ್ಲ” ಎಂದು ಹೇಳಿದ್ದಾರೆ. ವಿನಯ್‌ ಗೌಡ ಅವರ ಆಟಕ್ಕೂ ಸಂಗೀತಾ ಅವರ ಅಣ್ಣ ಸಖತ್‌ ಖುಷ್‌ ಆದರು. ನಿಮ್ಮ ತಂತ್ರಗಾರಿಕೆ ಇಷ್ಟ ಎಂದರು.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version