ಬೆಂಗಳೂರು: ಬಿಗ್ ಬಾಸ್ ಹತ್ತನೇ (Bigg Boss Kannada 10) ಸೀಸನ್ ಗ್ರ್ಯಾಂಡ್ ಪ್ರೀಮಿಯರ್ ಅಕ್ಟೋಬರ್ 8ರ ಸಂಜೆ 6ಕ್ಕೆ ನಡೆಯಲಿದೆ. ಅ.9ರಿಂದ ಪ್ರತಿ ರಾತ್ರಿ 9:30ಕ್ಕೆ ನಡೆಯಲಿದೆ. ಇದೀಗ ಸ್ಪರ್ಧಿಗಳು ಯಾರೆಲ್ಲ ಬರಬಹುದು ಎಂಬ ಚರ್ಚೆಗಳು ಶುರುವಾಗಿದೆ. ಈಗಾಗಲೇ ಚಾರ್ಲಿ ಮನೆಗೆ ಎಂಟ್ರಿ ಕೊಡುತ್ತಿರುವುದಂತೂ ಪಕ್ಕಾ ಆಗಿದೆ. ಇದರ ಜತೆಗೆ ದೊಡ್ಮನೆಗೆ ಹಳೇಯ ಸ್ಪರ್ಧಿಗಳು ಮತ್ತೆ ಸ್ಪರ್ಧಿಸಲಿದ್ದಾರಂತೆ ಎಂಬ ಮಾತುಗಳು ಜೋರಾಗಿದೆ. ಆ ಮೂಲಕ ಈ ಹಿಂದೆ ‘ಬಿಗ್ ಬಾಸ್’ ಕಾರ್ಯಕ್ರಮದಲ್ಲಿ ಸ್ಪರ್ಧಿಸಿದ್ದವರಿಗೆ ಸೆಕೆಂಡ್ ಚಾನ್ಸ್ ಸಿಗುತ್ತಿದೆ ಎಂದು ವರದಿಯಾಗಿದೆ.
ಈ ಚರ್ಚೆ ಹುಟ್ಟಿದ್ದೇಕೆ?
ಬಿಗ್ ಬಾಸ್ ಸೀಸನ್ 10ಕ್ಕೆ ಮೊದಲು ಆದದ್ದು ಬಿಗ್ ಬಾಸ್ ಸೀಸನ್ 9 ಮತ್ತು ಬಿಗ್ ಬಾಸ್ ಒಟಿಟಿ. ಇದರಲ್ಲಿ ಫಿನಾಲೆ ವಾರದಲ್ಲಿ ಟಾಪ್ 4 ಹಂತ ತಲುಪಿದ ನಾಲ್ವರು ಹಾಗೂ ಹಿಂದಿನ ಟಿವಿ ಸೀಸನ್‌ಗಳಲ್ಲಿ ಸ್ಪರ್ಧಿಸಿದ್ದ ಐವರು ಸೀನಿಯರ್‌ಗಳಾಗಿ ಸ್ಪರ್ಧಿಸಿದ್ದರು. ಬಿಗ್ ಬಾಸ್ ಕನ್ನಡ ಒಟಿಟಿ ಕಾರ್ಯಕ್ರಮದಲ್ಲಿ ಟಾಪರ್ ಆಗಿದ್ದ ರೂಪೇಶ್ ಶೆಟ್ಟಿ ಬಿಗ್ ಬಾಸ್ ಕನ್ನಡ 9 ಕಾರ್ಯಕ್ರಮದಲ್ಲಿ ವಿಜೇತರಾದರು. ಆದರೆ ಈ ಸೀಸನ್ ಆಗುವಾಗ ಕೆಲವು ಕಾರಣಗಳಿಂದ ಹಾಸ್ಯನಟ ಲೋಕೇಶ್ ಹಾಗೂ ನಟ ಅರ್ಜುನ್ ರಮೇಶ್ ಅರ್ಧಕ್ಕೆ ಬಿಗ್ ಬಾಸ್ ಮನೆಯಿಂದ ಹೊರನಡೆದರು. ನಟ ಅರ್ಜುನ್ ರಮೇಶ್ ಅವರಿಗೆ ಟಾಸ್ಕ್ ವೇಳೆ ಭುಜಕ್ಕೆ ಪೆಟ್ಟು ಬಿತ್ತು. ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಲೋಕೇಶ್ ಅವರಿಗೂ ಸಹ ಕಾಲಿಗೆ ಪೆಟ್ಟು ಬಿದ್ದ ಪರಿಣಾಮ ಮನೆಯಿಂದ ಹೊರನಡೆದರು. ಇದೀಗ ಮತ್ತೆ ಬಿಗ್ ಬಾಸ್ 10ಗೆ ಇವರಿಬ್ಬರೂ ಚಾನ್ಸ್ ಪಡೆದುಕೊಳ್ಳುತ್ತಾರೆ ಎಂಬುದು ಹಲವರ ವಾದ.
ಸೋಮಣ್ಣ ಮಾಚಿಮಾಡ ಪತ್ರಕರ್ತರು ಆಗಿರುವ ಇವರು ಬಿಗ್ ಬಾಸ್ ಒಟಿಟಿಯಲ್ಲಿ ಸ್ಪರ್ಧಿಸಿ, ಕ್ಯಾಪ್ಟನ್ ಕೂಡ ಆಗಿದ್ದರು. ಟಿವಿ ಸೀಸನ್‌ನಲ್ಲಿ ಆಯ್ಕೆಯಾಗಿರಲಿಲ್ಲ. ಇದೀಗ ಈ ಸೀಸನ್‌ಗೆ ಆಯ್ಕೆಯಾಗಬಹುದು ಎಂಬ ಮಾತುಗಳು ಇವೆ. ಸೋಷಿಯಲ್ ಮೀಡಿಯಾ ಪ್ರಕಾರ ಕಿಶನ್ ಬೆಳಗಲಿ, ಶೀತಲ್ ಶೆಟ್ಟಿ, ನಂದಿನಿ ಅವರಿಗೆ ಎರಡನೇ ಬಾರಿ ಅವಕಾಶ ಸಿಗಬೇಕು ಎಂದು ಪ್ರೇಕ್ಷಕರ ಅಭಿಲಾಷೆ.
ಇದನ್ನೂ ಓದಿ: BBK Season 10: 3 ದಿನಗಳಲ್ಲಿ ಬಿಗ್ ಬಾಸ್ ಶುರು; ಸಂಭಾವ್ಯ ಸ್ಪರ್ಧಿಗಳ ಪಟ್ಟಿ ಔಟ್!
ಸಂಭಾವ್ಯ ಪಟ್ಟಿ
ನಟ ಸುನೀಲ್ ರಾವ್, ಭವ್ಯಾ ಗೌಡ(Bhavya Gowda), ರಘು ಮುಖರ್ಜಿ, ಪ್ರಕಾಶ್ ತುಮಿನಾಡು, ರಂಜನಿ ರಾಘವನ್, ಹುಲಿ ಕಾರ್ತಿಕ್, ನಮ್ರತಾ ಗೌಡ, ಚಂದ್ರಪ್ರಭ, ಅಗ್ನಿಸಾಕ್ಷಿ ಖ್ಯಾತಿಯ ರಾಜೇಶ್ ಧ್ರುವ (Rajesh Dhruva), ‘ಕೆಜಿಎಫ್’ ನಟಿ ರೂಪಾ ರಾಯಪ್ಪ, ಮಿಮಿಕ್ರಿ ಗೋಪಿ, ಕ್ರಿಕೆಟರ್ ವಿನಯ್ ಕುಮಾರ್, ಪೋಷಕ ನಟಿ ಸ್ವಾತಿ, ರಕ್ಷಕ್ ಬುಲೆಟ್ ಪ್ರಕಾಶ್, ರ‍್ಯಾಪರ್ ಇಶಾನಿ ಸೇರಿದಂತೆ ಹಲವರು ಬಿಗ್ ಬಾಸ್ ಸ್ಪರ್ಧಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.