Site icon Vistara News

BBK Season 10: ಡ್ರೋನ್‌ ಪ್ರತಾಪ್‌ಗೆ ಸತತ ಗೆಲುವು; ಸ್ಟ್ರಾಟಜಿಗೆ ಫ್ಯಾನ್ಸ್‌ ಫಿದಾ!

Drone Prathap bbk 10

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10ರಲ್ಲಿ (BBK Season 10) ಡ್ರೋನ್‌ ಪ್ರತಾಪ್‌ ಅವರು ಪ್ರಬಲ ಸ್ಪರ್ಧಿಯಾಗಿದ್ದಾರೆ. ಕಳೆದ ಸಂಚಿಕೆಯ ಗೇಮ್‌ನಲ್ಲಿ ಸ್ಟ್ರಾಟೆಜಿ ಬಳಸಿಕೊಂಡು ಸದಸ್ಯರನ್ನು ಕನ್ವಿನ್ಸ್‌ ಮಾಡುವಲ್ಲಿ ಗೆದಿದ್ದಾರೆ. ಅಷ್ಟೇ ಅಲ್ಲದೇ ಈಗ ತಂಡದ ಕ್ಯಾಪ್ಟನ್ ಸಹ ಆಗಿದ್ದಾರೆ. ಮಾತ್ರವಲ್ಲ ಬ್ಯಾಕ್‌ ಟು ಬ್ಯಾಕ್‌ ಗೇಮ್ಸ್‌ ಗೆದ್ದು ಬೀಗಿದ್ದಾರೆ.

ತಂಡಗಳ ಆಯ್ಕೆ, ಹೊಸ ಅವಕಾಶ

ಈ ವಾರ ಯಾವುದೇ ರೀತಿಯ ತಂಡಗಳನ್ನು ರಚಿಸುವ ಬಗ್ಗೆ ಚಟುವಟಿಕೆ ಇರುವುದಿಲ್ಲ. ಕಳೆದ ವಾರದ ತಂಡಗಳಲ್ಲೇ ಟಾಸ್ಕ್ ಆಡಲು ‘ಬಿಗ್ ಬಾಸ್’ ಅನುಮತಿ ನೀಡಿದ್ದರು. ಆದರೆ ಕ್ಯಾಪ್ಟನ್‌ ಬದಲಿಸಲು ಬಿಗ್‌ ಬಾಸ್‌ ಚಾನ್ಸ್‌ ಕೊಟ್ಟಿದ್ದರು. ಅದರಂತೆ, ವಿನಯ್ ತಂಡದಲ್ಲಿ ವೋಟಿಂಗ್ ಮುಖಾಂತರ ಸಿರಿ ಅವರನ್ನ ಕ್ಯಾಪ್ಟನ್ ಮಾಡಲಾಯಿತು.ಸಂಗೀತಾ ತಂಡದಲ್ಲೂ ವೋಟಿಂಗ್ ಮೂಲಕ ಡ್ರೋನ್ ಪ್ರತಾಪ್‌ನ ಕ್ಯಾಪ್ಟನ್‌ ಆಗಿ ಆಯ್ಕೆ ಮಾಡಲಾಯಿತು. ಇಷ್ಟಾದ ಬಳಿಕ ಬಿಗ್‌ ಬಾಸ್‌ ಇನ್ನೊಂದು ಹೊಸ ಅವಕಾಶವನ್ನೂ ನೀಡಿದರು. ಇರುವ ತಂಡ ಇಷ್ಟವಿಲ್ಲ ಎಂದು ಯಾರಿಗಾದರೂ ಅನ್ನಿಸಿದ್ದರೆ, ಅವರು ತಂಡದಿಂದ ಚೇಂಜ್ ಆಗಬಹುದು ಎಂದರು ಬಿಗ್‌ ಬಾಸ್‌.

ಗೆದ್ದು ಬೀಗಿದ ಪ್ರತಾಪ್‌ ಟೀಮ್‌

ಡ್ರೋನ್ ಪ್ರತಾಪ್ ಸ್ಟ್ರಾಟಜಿಯಂತೆ ಮೊದಲೆರಡು ಆಟಗಳಲ್ಲಿ ಗೆಲುವು ಸಾಧಿಸಿದರು. ತಂಡದಲ್ಲಿ ಒಗ್ಗಟು ಮೂಡಲಾರಂಭಿಸಿತು. ಭಿನ್ನಾಭಿಪ್ರಾಯ ಹೋಯಿತು.

ಪ್ರತಾಪ್‌ಗಿತ್ತು ಸವಾಲ್‌

ಸಂಗೀತಾ ಹಾಗೂ ಕಾರ್ತಿಕ್ ನಡುವೆ ಜಗಳ ಶುರುವಾಯ್ತು. ಸಂಗೀತಾ ತಾವು ಎದುರಾಳಿ ತಂಡಕ್ಕೆ ಹೋಗುವುದಾಗಿ ಹೇಳಿದರು. ಆ ಬಳಿಕ ಮೈಖಲ್ ಸಹ ತಾವು ಎದುರಾಳಿ ತಂಡಕ್ಕೆ ಹೋಗುವುದಾಗಿ ಹೇಳಿದರು. ತಂಡದಲ್ಲೇ ಉಳಿಯಲು ಭಾಗ್ಯಶ್ರೀ ಒಪ್ಪಿಗೆ ಸೂಚಿಸಿದರು. ತನಿಷಾ ಹಾಗೂ ವರ್ತೂರು ಸಂತೋಷ್ ಕೂಡ ಸಮ್ಮತಿ ನೀಡಿದರು. ‘’ನಾನು ವಿನಯ್‌ ಅವರ ಆ ಟೀಮ್‌ಗೆ ಹೋಗಬೇಕು’’ ಎಂದು ಸಂಗೀತಾ ಹೇಳಲು ಶುರು ಮಾಡಿದರು.

ಸಂಗೀತಾ ಮಾತನಾಡಿ ʻʻವರ್ತೂರು ಸಂತೋಷ್ ಅವರಿಗೆ ನಾನು ಜಗಳ ಮಾಡುವ ಹಾಗೆ ಅನಿಸುತ್ತೆ. ಅವರು ನನ್ನನ್ನ ಅರ್ಥ ಮಾಡಿಕೊಳ್ಳಲ್ಲ. ಕಾರ್ತಿಕ್ ಅವರಿಗೂ ನನ್ನ ಮೇಲೆ ಅದೇ ಸಮಸ್ಯೆ ಇದೆ. ಅದಕ್ಕೆ ನಾನು ಚೇಂಜ್ ಇರಲಿ ಅಂತ ಅಲ್ಲಿಗೆ ಹೋಗುತ್ತೇನೆ ಎನ್ನುತ್ತಿದ್ದೇನೆ’’ ಎಂದು ಕ್ಯಾಪ್ಟನ್ ಡ್ರೋನ್ ಪ್ರತಾಪ್ ಬಳಿ ಸಂಗೀತಾ ಹೇಳಿದರು. ಆದರೆ ಪ್ರತಾಪ್‌ ಈ ಸಮಸ್ಯೆಗಳನ್ನು ಚೆನ್ನಾಗಿ ನಿಭಾಯಿಸಿದರು.

ಇದನ್ನೂ ಓದಿ: BBK Season 10: ಕಾರ್ತಿಕ್‌-ಸಂಗೀತಾ ಆತ್ಮೀಯತೆ ಅಂತ್ಯ; ಇವನು ಟಿಶ್ಯೂ ಪೇಪರ್ ಅಷ್ಟೇ ಎಂದ ವರ್ತೂರ್‌!

ಡ್ರೋನ್ ಪ್ರತಾಪ್ ಸ್ಟ್ರಾಟೆಜಿ

ಸಂಗೀತಾ ಅವರಿಗೆ ಡ್ರೋನ್‌ ಪ್ರತಾಪ್‌ ಅವರು ʻʻತಂಡದಲ್ಲಿ ನಿಮಗೊಂದು ಸ್ಥಾನ ಸಿಗುತ್ತೆ. ಚೆನ್ನಾಗಿ ಆಡೋಕೆ ಅವಕಾಶಗಳನ್ನ ಕೊಡುತ್ತೇನೆ. ಫೇರ್‌ ಆಗಿ, ನೇರವಾಗಿ ಆಟ ಆಡ್ತೀನಿ. ನನಗೆ ಗೆಲುವು ಮುಖ್ಯʼʼಎಂದು ಕನ್ವಿನ್ಸ್‌ ಮಾಡಿದರು. ಹೀಗೆ ತಮ್ಮ ತಂಡದಲ್ಲಿ ಸದಸ್ಯರನ್ನು ಉಳಿಸುಕೊಳ್ಳುವಲ್ಲಿ ಯಶಸ್ವಿಯಾದರು. ಸಿರಿ ನೇತೃತ್ವದ ತಂಡದಲ್ಲಿ ಯಾರೂ ಚೇಂಜ್‌ ಆಗಲಿಲ್ಲ. ಪ್ರತಾಪ್‌ ತಮ್ಮ ತಂಡಕ್ಕೆ ʻʻಒಂದೇ ಒಂದು ಗೆಲುವು ಸಿಕ್ಕರೆ, ಟೀಮ್‌ನಲ್ಲಿ ಏನೇನು ನಡೆದಿತ್ತು, ಎಲ್ಲವನ್ನೂ ಮರೆಸುತ್ತೆ. ಟಾಸ್ಕ್ ಗೆದ್ದುಬಿಟ್ಟರೆ ಭಿನ್ನಾಭಿಪ್ರಾಯ ಶಮನ ಆಗುತ್ತೆ. ಮುಂದೆ ಲಕ್ಷುರಿ ಬಜೆಟ್‌ ಬಗ್ಗೆ ಗಮನ ಹೋಗುತ್ತೆ. ಈಗ ಗೆಲ್ಲುವ ಬಗ್ಗೆ ಕಾನ್ಸನ್‌ಟ್ರೇಟ್‌ ಮಾಡಬೇಕು’’ ಎಂದರು.

ಎರಡೂ ಟಾಸ್ಕ್‌ನಲ್ಲಿ ಗೆದ್ದು ಬೀಗಿದ ಪ್ರತಾಪ

ಸಿರಿ ಟೀಮ್‌ ʻವಜ್ರಕಾಯʼ ಆದರೆ ಪ್ರತಾಪ್‌ ಅವರದ್ದು ʻಗಂಧದ ಗುಡಿ ಟೀಂʼ. ಮೊದಲನೇ ಟಾಸ್ಕ್‌ ʻಪಜಲ್‌ ಗಜಲ್‌ʼ. ಈ ಆಟದಲ್ಲಿ ರಿಲೇ ಮಾದರಿಯಲ್ಲಿ ಸ್ಪರ್ಧಿಗಳು ಬಣ್ಣದ ತುಂಡನ್ನು ತೆಗೆದುಕೊಂಡು ಜೋಡಿಸಬೇಕು. ಗೆದ್ದ ತಂಡ ವಿಶೇಷ ಅಧಿಕಾರ ಪಡೆಯುತ್ತದೆ. ಅದೇ ರೀತಿ ನಾಮಿನೇಶನ್‌ಗೆ ಇದು ಪರಿಣಾಮ ಬೀರುತ್ತದೆ. ಈ ಟಾಸ್ಕ್‌ನಲ್ಲಿ ಡ್ರೋನ್‌ ಪ್ರತಾಪ್‌ ಟೀಮ್‌ ವಿನ್‌ ಆಯ್ತು. ಈ ವೇಳೆ ಒಂದು ವಿಶೇಷ ಅಧಿಕಾರ ಬಿಗ್‌ ಬಾಸ್‌ ನೀಡಿದರು. ಅದರಂತೆ ಭಾಗ್ಯಶ್ರೀ ಅವರನ್ನು ನಾಮಿನೇಶನ್‌ನಿಂದ ಪಾರು ಮಾಡಿದರು ಪ್ರತಾಪ್‌.

ಎರಡನೇ ಟಾಸ್ಕ್‌ನಲ್ಲಿ ಪ್ರತಿ ಬಾರಿ ಸ್ಪರ್ಧಿಗಳು ನಾಮಿನೇಟ್‌ ಮಾಡಿದ ನಂತರ ತಮ್ಮನ್ನು ಯಾತಕ್ಕೆ ನಾಮಿನೇಟ್‌ ಮಾಡಿರಬಹುದು, ಕಾರಣವೇನು ಎಂಬುದು ಬಿಗ್‌ ಬಾಸ್‌ ಹೇಳುತ್ತಾರೆ. ʻಗುಟ್ಟು ರಟ್ಟುʼ ಟಾಸ್ಕ್‌ನಲ್ಲಿ ಸದಸ್ಯರು ನಾಮಿನೇಟ್‌ ಮಾಡಿರುವ ಸದಸ್ಯರ ಒಂದು ಕಾರಣವನ್ನು ಬಿಗ್‌ ಬಾಸ್‌ ಹೇಳುತ್ತಾರೆ. ಆಗ ಸ್ಪರ್ಧಿಗಳು ಯಾರು ಕಾರಣ ನೀಡಿದ್ದಾರೆ ಎಂದು ಊಹೆ ಮಾಡಿ ಹೇಳಬೇಕು. ಇದರಲ್ಲಿ ಕೂಡ ಪ್ರತಾಪ್‌ ಟೀಂ ವಿನ್‌ ಆಯ್ತು. ಇದಾದ ಬಳಿಕ ಬಿಗ್‌ ಬಾಸ್‌ ವಿಶೇಷ ಅಧಿಕಾರವನ್ನು ಪ್ರತಾಪ್‌ ಟೀಂಗೆ ನೀಡಿತು. ಪ್ರತಾಪ್‌ ಅವರು ಸಂಗೀತಾ ಅವರನ್ನು ಈ ವಾರ ನಾಮಿನೇಶ್‌ನಿಂದ ಪಾರು ಮಾಡಿದರು. ಹಾಗೇ ಎದುರಾಳಿ ತಂಡದಿಂದ ಸ್ನೇಹಿತ್‌ ಅವರನ್ನು ನಿರ್ಬಂಧಿಸಿದರು. ಅಂದರೆ ಸ್ನೇಹಿತ್‌ ಅವರು ಈ ವಾರ ನಾಮಿನೇಶನ್‌ನಿಂದ ಪಾರಾಗುವ ಅವಕಾಶ ಕಳೆದುಕೊಂಡರು.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version