Site icon Vistara News

BBK Season 10: ಸೋಲಿನ ಭೀತಿ ʻವಜ್ರಕಾಯʼ ತಂಡವನ್ನು ಕಾಡ್ತಿದ್ಯಾ? ಸಂಗೀತಾ-ವಿನಯ್‌ ಜಿದ್ದಾಜಿದ್ದಿ!

Vajrakaya team bbk 10

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10ರಲ್ಲಿ (BBK Season 10) ಈಗಾಗಲೇ ಎರಡು ಟೀಂ ಇದೆ. ವಜ್ರಕಾಯ ಹಾಗೂ ಗಂಧದ ಗುಡಿ. ವಜ್ರಕಾಯದಲ್ಲಿ ಸಿರಿ ಕ್ಯಾಪ್ಟನ್‌ ಆದರೆ, ಗಂಧದ ಗುಡಿಗೆ ಪ್ರತಾಪ್‌ ಕ್ಯಾಪ್ಟನ್‌. ಇಷ್ಟರವರೆಗೂ ಪ್ರತಾಪ್‌ ಟೀಂ ಗೆದ್ದು ಬೀಗಿದೆ. ಈಗ ವಜ್ರಕಾಯ ಟೀಂ ಎದೆಯಲ್ಲಿ ಢವ ಢವ ಶುರುವಾಗಿದೆ. ಜಿಯೋ ಸಿನಿಮಾ ಹೊಸ ಪ್ರೋಮೊ ಹಂಚಿಕೊಂಡಿದ್ದು, ವಿನಯ್‌ ಟೀಂ ಸಖತ್‌ ಟೆನ್ಷನ್‌ನಲ್ಲಿ ಇರುವಂತಿದೆ.

ಪ್ರೋಮೊದಲ್ಲಿ ತುಕಾಲಿ ಸಂತೋಷ್‌ ಅವರ ಹಾಸ್ಯದ ಹೊನಲಿನ ಝಲಕ್‌ ಕೊಟ್ಟಿದ್ದ ಜಿಯೋ ಸಿನಿಮಾ ಮಧ್ಯಾಹ್ನದ ಪ್ರೋಮೊದಲ್ಲಿ ಮನೆಯೊಳಗಿನ ಟಾಸ್ಕ್‌ ಕ್ಲ್ಯಾಶ್‌ ಕಾಣಿಸಿದೆ. ನಿನ್ನೆ ಎದುರಾಳಿ ತಂಡದ ಸ್ಫರ್ಧಿಗಳ ಮುಖದ ಮೇಲೆ ವಿವಿಧ ಭಾವಗಳನ್ನು ಮೂಡಿಸುವ ಟಾಸ್ಕ್‌ ಅನ್ನು ಬಿಗ್‌ಬಾಸ್ ನೀಡಿದ್ದರು. ಹಾಗೆ ನೋಡಿದರೆ ಕೃತಕವಾಗಿ ಪ್ರಯತ್ನಿಸಿ ಆಯಾ ಭಾವವನ್ನು ಮೂಡಿಸಲು ಯಾರೂ ಯಶಸ್ವಿಯಾಗಿರಲಿಲ್ಲ. ಆದರೆ ಇಂದಿನ ಟಾಸ್ಕ್‌ನಲ್ಲಿ ತುಂಬ ಸಹಜವಾಗಿಯೇ ಎಲ್ಲ ಭಾವಗಳೂ ವ್ಯಕ್ತವಾಗುತ್ತಿರುವ ಹಾಗಿದೆ.

ಒಂದು ಪ್ಲ್ಯಾಸ್ಟಿಕ್‌ ಬಾಕ್ಸ್‌ನ ಎರಡೂ ಬದಿಯಲ್ಲಿ ಹಗ್ಗಗಳಿಂದ ಕಟ್ಟಲಾಗಿದೆ. ಅದನ್ನು ಎರಡು ಸ್ಪರ್ಧಿಗಳ ಸೊಂಟಕ್ಕೆ ಬಿಗಿಯಲಾಗಿದೆ. ಅದನ್ನು ಇಟ್ಟುಕೊಂಡು ಓಡುವ ಟಾಸ್ಕ್‌ ಅನ್ನು ಬಿಗ್‌ಬಾಸ್‌ ಮನೆಯ ಸ್ಪರ್ಧಿಗಳಿಗೆ ನೀಡಿರುವಂತಿದೆ. ಈ ಟಾಸ್ಕ್‌ನಲ್ಲಿಯೇ ಪರಸ್ಪರ ತಳ್ಳಿಕೊಳ್ಳುವ, ಕಿರುಚಾಡಿಕೊಳ್ಳುವ ಸನ್ನಿವೇಶಗಳು ಸೃಷ್ಟಿಯಾಗಿವೆ.
ವಿನಯ್-ಕಾರ್ತಿಕ್‌ ನಡುವೆ ತಳ್ಳಾಡುವಿಕೆಗಳು ನಡೆದಿದ್ದರೆ, ಸಂಗೀತಾ ಅವರನ್ನು ಪರೋಕ್ಷವಾಗಿ ಅಣಕಿಸುವ ಮೂಲಕ ವಿನಯ್‌ ಇನ್ನಷ್ಟು ಕೆಣಕಿದ್ದಾರೆ.

ಕಳೆದ ವಾರ ನಡೆದ ಟಾಸ್ಕ್​ನಲ್ಲಿ ವಿನಯ್ ಹಾಗೂ ಸಂಗೀತಾ ಜೋರು ಧ್ವನಿಯಲ್ಲಿ ಮಾತನಾಡಿದ್ದರು. ತಂಡದ ನಾಯಕ ಪ್ರತಾಪ್ ಅವರು ಮೊದಲೇ ಎಲ್ಲರಿಗೂ ಸೂಚನೆ ಕೊಟ್ಟಿದ್ದರು. ಪರಿಸ್ಥಿತಿ ಯಾವುದೇ ಹಂತಕ್ಕೆ ಹೋದರೂ ಕಿತ್ತಾಡಿಕೊಳ್ಳಬಾರದು ಎಂದು ಹೇಳಿದ್ದರು. ಮೊದಲ ಮೂರು ಆಟದಲ್ಲಿ ಇದು ಫಾಲೋ ಆಯಿತು. ಆದರೆ, ನಾಲ್ಕನೇ ಆಟದಲ್ಲಿ ಪರಿಸ್ಥಿತಿ ಕೈಮೀರಿದೆ.

ಇದನ್ನೂ ಓದಿ: BBK Season 10: ಸಂಗೀತಾ ಭಾರಿ ಒಳ್ಳೆಯ ಜನ, ವಿನಯ್‌ಗೆ ಕನಿಕರ ಇಲ್ಲ ಎಂದ ತುಕಾಲಿ!

ಮತ್ತದೇ ‘ಫೇರ್‍ ಗೇಮ್‌’ ಚರ್ಚೆ ಏರುದನಿಯಲ್ಲಿಯೇ ಮುನ್ನೆಲೆಗೆ ಬಂದಿದೆ. ಅಷ್ಟಕ್ಕೂ ಈ ಟಾಸ್ಕ್‌ನ ಸ್ವರೂಪವೇನು? ಸ್ಪರ್ಧಿಗಳು ಜಿದ್ದಾಜಿದ್ದಿಗೆ ಬಿದ್ದು ಜಗಳವಾಡಲು ಕಾರಣವೇನು? ಇಂದಿನ ಸಂಚಿಕೆಯಲ್ಲಿ ಏನು ಎಂಬುದು ಗೊತ್ತಾಗಲಿದೆ.

Exit mobile version