ಬೆಂಗಳೂರು: ಬಿಗ್ ಬಾಸ್ ಸೀಸನ್ 10ರ (BBK SEASON 10) ಈ ವಾರ ರಾಕ್ಷಸರು ಹಾಗೂ ಗಂಧರ್ವ ಲೋಕ ಆಗಿದೆ. ಮನೆಯ ಸದಸ್ಯರೆಲ್ಲ ರಿವೆಂಜ್ ತೆಗೆದುಕೊಳ್ಳಲು ನಿಂತಿದ್ದಾರೆ. ಅದರಲ್ಲಿಯೂ ವಿನಯ್ ಹಾಗೂ ಕಾರ್ತಿಕ್ ಮಾತಿನ ಚಕಮಕಿ ತಾರರಕ್ಕೇರಿದೆ. ವಿನಯ್ ಕೂಡ ಕಾರ್ತಿಕ್ ಅವರಿಗೆ ʻತಗಡುʼ ಎಂದಿದ್ದಾರೆ. ಹೆಣ್ಣು ಮಕ್ಕಳ ಮೇಲೆ ಕೆಟ್ಟದ್ದಾಗಿ ಕಾರ್ತಿಕ್ ಮಾತನಾಡಿದ್ದಾರೆ ಎಂದು ವಿನಯ್ ಅವರು ಗಂಭೀರವಾಗಿ ಆರೋಪ ಮಾಡಿದರು. ಕಾರ್ತಿಕ್ ಕೂಡ ಪದೇ ಪದೆ ತಮ್ಮ ಮೇಲೆ ಗಂಭೀರ ಆರೋಪ ಮಾಡುತ್ತಿರುವ ವಿನಯ್ ವಿರುದ್ಧ ಕಣ್ಣೀರು ಸುರಿಸಿದರು. ‘’ನಾನು ಅಂತಹ ಮಾತನ್ನು ಆಡಿದ್ದರೆ ಹೊರಗೆ ಹೋಗುತ್ತೇನೆ’’ ಎಂದು ಕಾರ್ತಿಕ್ ಮನೆಯಲ್ಲಿ ಹೇಳಿಕೊಂಡಿದ್ದಾರೆ. ಕಣ್ಣೀರಿಟ್ಟಿದ್ದಾರೆ ಕೂಡ.
ಜಗಳ ಆರಂಭವಾಗಿದ್ದು ಯಾವಾಗ?
‘ಚೇರ್ ಆಫ್ ಥಾರ್ನ್ಸ್’ ಎಂಬ ಚಟುವಟಿಕೆಯನ್ನು ‘ಬಿಗ್ ಬಾಸ್’ ನೀಡಿದರು. ಇದರಲ್ಲಿ ಕೂತಿರುವ ಗಂಧರ್ವರ ಪೈಕಿ ಇಬ್ಬರನ್ನು ರಾಕ್ಷಸರು ಎಬ್ಬಿಸಬೇಕಿತ್ತು. ಈ ಟಾಸ್ಕ್ನಲ್ಲಿ ಸಂಗೀತಾ ಹಾಗೂ ಕಾರ್ತಿಕ್ ಅವರು ವರ್ತೂರ್ ಮತ್ತು ಪವಿ ಅವರನ್ನು ಟಾರ್ಗೆಟ್ ಮಾಡಿದರು. ಈ ವೇಳೆ ಕಾರ್ತಿಕ್ ಮತ್ತು ವಿನಯ್ ನಡುವೆ ಮಾತಿನ ಜಕಮಕಿ ನಡೆದಿದೆ. ಸಂಗೀತಾ ಅವರು ಪವಿ ಮುಖಕ್ಕೆ ನೀರು ಎರಚುವ ಫೋರ್ಸ್ಗೆ ವಿನಯ್ ಅವರು ‘’ಕರೆಕ್ಟ್ ಆಗಿದೆ ಜೋಡಿ’’ (ಕಾರ್ತಿಕ್-ಸಂಗೀತಾ) ಎಂದು ವಿನಯ್ ಟಾಂಟ್ ಕೊಡುತ್ತಿದ್ದರು.
ವಿನಯ್ ಅವರು ಅಲ್ಲಿಂದಲೇ ಕೊಂಕು ಮಾತನಾಡಲು ಶುರು ಮಾಡಿದರು. ʻʻಅಯ್ಯೋ ಜೀವನ ಹೆಂಗೆ ಹಾಳು ಮಾಡಿಕೊಳ್ತಾವ್ರೆ ಅಂದ್ರೆ, ಜಾಸ್ತಿ ದಿನ ಇಲ್ಲ.. ತಡಿಯಮ್ಮಾ ʼʼ ಎಂದು ವಿನಯ್ ಅಂದರೆ ಕಾರ್ತಿಕ್ ಅವರು ʻʻನೋಡಿದ್ದೀನಿ ಬದನೆಕಾಯಿʼʼ ಎಂದಿದ್ದಾರೆ. ಆಗ ವಿನಯ್ ಅವರು ಕಾರ್ತಿಕ್ಗೆ ʼತಗಡುʼ ಎಂದರು, ಕಾರ್ತಿಕ್ ಕೂಡ ಅಲ್ಲಿಂದ ಜೋರಾಗಿಯೇ ಕೂಗಲಾರಂಭಿಸಿದರು.
ಇದನ್ನೂ ಓದಿ: BBK SEASON 10: ʻನಾನು ಲೂಸರ್ʼ ಎಂದ ಸಂಗೀತಾ, ಗುಲಾಮನಾದ ಕಾರ್ತಿಕ್; ʻಆನೆʼಯ ರಿವೆಂಜ್!
ಹುಡುಗಿಯನ್ನ ಕಳುಹಿಸಿಬಿಟ್ಟು ಅಲ್ಲಿ ಗಂಡಸು ಅಂತ ಚಪ್ಪಾಳೆ ತಟ್ಟಿಕೊಂಡು ಕೂತವ್ನೆ
ಅಲ್ಲಿಂದ ಹೆಣ್ಣು ಮಕ್ಕಳ ವಿಚಾರ ಬಂತು. ಪವಿ ಪೂವಪ್ಪ ಅವರಿಗೆ ಚೆನ್ನಾಗಿ ನೀರು ಎರಚುತ್ತಲೇ ಇದ್ದರು ಸಂಗೀತಾ. ಆಗ ವಿನಯ್ ಅವರು ʻʻಅಲ್ಲಿ ತುಕಾಲಿ ಸಂತು, ಮೈಕಲ್ ಕೂತಿದ್ದಾರೆ. ಅವರದ್ದೇನೂ ಮಾಡೋಕೆ ಆಗಲ್ಲ ಅಂತ ಅವಳಿಗೆ ಟಾರ್ಚರ್ ಕೊಡುತ್ತಿದ್ದೀರಾʼʼ ಎಂದರು. ಕಾರ್ತಿಕ್ ಕೂಡ ʻʻಹುಡುಗಿಯನ್ನ ಕಳುಹಿಸಿಬಿಟ್ಟು ಅಲ್ಲಿ ಗಂಡಸು ಅಂತ ಚಪ್ಪಾಳೆ ತಟ್ಟಿಕೊಂಡು ಕೂತವ್ನೆ ವಿನಯ್ – ಏಯ್ ತಗಡುʼʼ ಎಂದರು. ಆಗ ವಿನಯ್ ಕೂಡ ʻʻನಿಮ್ಮ ತರಹ ವುಮನ್ ಕಾರ್ಡ್ ಪ್ಲೇ ಮಾಡಲ್ಲ ನಾವುʼʼ ಎಂದಿದ್ದಾರೆ. ಹಾಗೇ ಸಂಗೀತಾ ಅವರನ್ನು ಇಟ್ಟುಕೊಂಡು ವಿನಯ್ ಮಾತನಾಡಿ ʻʻಯಾಕೆ? ಈಕ್ವಲ್ ರೈಟ್ಸ್ ಎಂದು ಬರ್ತಾಳೆ (ಸಂಗೀತಾ). ಹೆಣ್ಮಕ್ಕಳನ್ನ ಅಡೋಕೆ ಬಿಟ್ಟಿದ್ದೀಯಾ ಏನರ್ಥ?ʼʼ ಎಂದಿದ್ದಾರೆ. ʼʼಕೈಯಲ್ಲಾಗದೇ ಇರೋನು.. ತಗಡು ಅಂತ ಅರ್ಥʼʼ ಎಂದು ಕಾರ್ತಿಕ್ ಕೂಡ ಟಾಂಗ್ ಕೊಟ್ಟರು.
ಇತ್ತ ಸಂಗೀತಾ ಕೂಡ ಕಾರ್ತಿಕ್ ಅವರಿಗೆ ಹೆಣ್ಮಕ್ಕಳ ಕೈಯಲ್ಲಿ ಆಡೋಕೆ ಆಗಲ್ವಾ?ಎಂದು ಕೇಳಿದ್ದಾರೆ. ಕಾರ್ತಿಕ್ ಅವರು ನಾನು ಹೇಳಿಲ್ಲ ಎಂದರೂ, ನಮ್ರತಾ ಅವರು ʻಹೇಳಿದ್ರಿ ನೀವುʼ ಎಂದು ವಾದಿಸಿದರು.
ಚೇರ್ ಆಫ್ ಥಾರ್ನ್ಸ್ ಆಟದಲ್ಲಿ ಕಡೆಯವರೆಗೂ ಮೈಕಲ್, ತುಕಾಲಿ ಸಂತು, ಪವಿ ಪೂವಪ್ಪ ಕೂತಿದ್ದರು. ಹೀಗಾಗಿ, ಗಂಧರ್ವರು ಟಾಸ್ಕ್ ಗೆದ್ದರು. ಆಗ ‘’ನೋಡೋ ಹೆಣ್ಮಕ್ಕಳ ಪವರ್ ಇದು’’ ಎಂದು ಕಾರ್ತಿಕ್ ಅವರಿಗೆ ವಿನಯ್ ಹೇಳಿದರು. ʻಮೈಮ್ ಮಾಡಿಕೊಂಡು ಅಸಭ್ಯ ಬೈಗುಳ ಬಳಸಿದರೆ ಸುಮ್ಮನೆ ಇರಬೇಕಾ? ಅವನು ಕಿತ್ತೋದ್ ನನ್ಮಗ. ಅಮ್ಮ, ತಂಗಿ ಇದ್ದಾರೆ. ಅವನ ಯೋಗ್ಯತೆಗೆ ಹೆಣ್ಮಕ್ಕಳನ್ನ ಬಿಟ್ಟು ಮುಂದೆ ಆಡಿಸ್ತೀಯಾ ಎಂದು ಕೇಳ್ತಾನೆʼ ಎಂದು ವಿನಯ್ ಕೂಗಾಡಿದರು. ಇತ್ತ ಕಾರ್ತಿಕ್ ಕೂಡ ನಾನು ಆ ರೀತಿ ಮಾಡಿಲ್ಲ ಎಂದು ಭಾವುಕರಾದರು.
ಇದನ್ನೂ ಓದಿ: BBK SEASON 10: ಪಾತ್ರದಿಂದ ಹೊರಗೆ ಬಂದ್ರೆ ಸಂಗೀತಾ ಟೀಮ್ಗೆ ʻಹುಚ್ಚೇಟುʼ ಕೊಡ್ತೀನಿ ಎಂದ ವಿನಯ್!
ನಾನೇನಾದರೂ ಅಂದಿದ್ದರೆ ಈ ಕ್ಷಣವೇ ಹೊರಗೆ ಹೋಗೋಕೆ ರೆಡಿ. ತಂಗಿಗೆ ಇನ್ನೂ ಹೆರಿಗೆ ಆಗಿದ್ಯಾ ಅಂತ ಗೊತ್ತಿಲ್ಲ. ಇಂತಹ ಮಾತುಗಳನ್ನ ಕೇಳಿಸಿಕೊಂಡು ಹೇಗಿರಲಿ? ಪ್ರತಿ ಸಲಿ ಇದೇ ಆಯ್ತು ಎಂದು ಕಾರ್ತಿಕ್ ಅವರು ಕಣ್ಣೀರಿಟ್ಟರು. ಆದರೆ ವಿನಯ್, ತುಕಾಲಿ, ನಮ್ರತಾ ಇನ್ನಿತರರ ಮುಂದೆ ಕಾರ್ತಿಕ್ ಬಗ್ಗೆ ಬೋಡ ಇನ್ನಿತರೆ ಮಾತುಗಳನ್ನು ಬೈಯ್ಯುತ್ತಲೇ ಇದ್ದರು. ನಿಜವಾಗಿಯೂ ಕಾರ್ತಿಕ್, ವಿನಯ್ಗೆ ಕೆಟ್ಟ ಪದಗಳನ್ನು ಬಳಸಿದರೇ ಅಥವಾ ಇಲ್ಲವೇ ಎಂಬುದು ಪ್ರೇಕ್ಷಕರಿಗೆ ತಿಳಿಯಲಿಲ್ಲ. ವಾರಾಂತ್ಯದಲ್ಲಿ ಸುದೀಪ್ ಅವರು ಬಂದಾಗ ಈ ಈ ವಿಚಾರ ಮುನ್ನಲೆಗೆ ಬರಬಹುದು. ವಿನಯ್ ಬೇಕು ಎಂತಲೇ ಅಂದರೇ, ಇಲ್ಲವೇ ಎಂಬುದು ವೀಕೆಂಡ್ನಲ್ಲಿ ಗೊತ್ತಾಗಲಿದೆ.
ಬಿಗ್ಬಾಸ್ ಜಿಯೋ ಸಿನಿಮಾಸ್ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ