Site icon Vistara News

Munawar Faruqui: ʻಬಿಗ್‌ ಬಾಸ್‌ʼ ವಿನ್ನರ್‌ ಮುನಾವರ್ ಫಾರೂಖಿ ಅಭಿಮಾನಿ ವಿರುದ್ಧ ಎಫ್‌ಐಆರ್!

FIR against Munawar Faruqui fan for illegal drone

ಮುಂಬೈ: ಹಿಂದಿಯ ಬಿಗ್ ಬಾಸ್ 17ನೇ (Bigg Boss 17)ಆವೃತ್ತಿಯ ವಿನ್ನರ್ ಆಗಿ ಸ್ಟ್ಯಾಂಡ್‌ ಅಪ್‌ ಕಮೆಡಿಯನ್ ಮುನಾವರ್ ಫಾರೂಖಿ (Munawar Faruqui) ಅವರು ಹೊರ ಹೊಮ್ಮಿದ್ದಾರೆ. ಮುನಾವರ್ ಅವರ ಗೆಲುವನ್ನು ಆಚರಿಸಲು ಮುಂಬೈನ ಡೋಂಗ್ರಿಯಲ್ಲಿ ಹೆಚ್ಚಿನ ಜನರು ಜಮಾಯಿಸಿದ್ದರು. ಇದೀಗ ಮುನಾವರ್ ಫಾರೂಖಿ ವಿಜಯೋತ್ಸವವನ್ನು ರೆಕಾರ್ಡ್ ಮಾಡುತ್ತಿದ್ದ ಡ್ರೋನ್ ಕ್ಯಾಮೆರಾ ಆಪರೇಟರ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ ಎಂದು ವರದಿಯಾಗಿದೆ. ಮುನಾವರ್ ಅವರು ತಮ್ಮ ಕಾರಿನ ಸನ್‌ರೂಫ್ ಮೇಲೆ ನಿಂತು ಫ್ಯಾನ್ಸ್‌ ಜತೆ ಸೆಲ್ಫಿ ಕೂಡ ಕ್ಲಿಕ್ಕಿಸಿಕೊಂಡಿದ್ದಾರೆ. ಇದೀಗ ಈ ವಿಡಿಯೊಗಳು ವೈರಲ್‌ ಆಗಿದೆ.

ಮುನಾವರ್ ಫಾರೂಖಿ ಅಭಿಮಾನಿ ವಿರುದ್ಧ ಎಫ್‌ಐಆರ್

ವರದಿಯ ಪ್ರಕಾರ, ಮುನಾವರ್ ಫಾರೂಖಿ ಅವರ ಅಭಿಮಾನಿ ಅರ್ಬಾಜ್ ಯೂಸುಫ್ ಖಾನ್ (26) ಮುಂಬೈನ ಡೋಂಗ್ರಿಯಲ್ಲಿ ಆಚರಣೆಯ ಸಂದರ್ಭದಲ್ಲಿ ಡ್ರೋನ್‌ ಬಳಕೆ ಮಾಡಿದ್ದಾರೆ. ಡ್ರೋನ್ ಬಳಸಲು ಅನುಮತಿಯಿಲ್ಲದ ಕಾರಣ ಡ್ರೋನ್ ಕ್ಯಾಮೆರಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಡ್ರೋನ್ ಬಳಕೆಗೆ ಸಂಬಂಧಿಸಿದಂತೆ ಮುಂಬೈ ಪೊಲೀಸ್ ಆಯುಕ್ತರ ಆದೇಶವನ್ನು ಉಲ್ಲಂಘಿಸಿದ್ದಕ್ಕಾಗಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಸಾರ್ವಜನಿಕ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಡ್ರೋನ್ ಕ್ಯಾಮೆರಾಗಳು ಸೇರಿದಂತೆ ಇತರ ವಸ್ತುಗಳ ಮೇಲೆ ಪೊಲೀಸರು ನಿಷೇಧವನ್ನು ಹೊರಡಿಸಿದ್ದರು.

ಇದನ್ನೂ ಓದಿ: Munawar Faruqui: ʻಬಿಗ್‌ ಬಾಸ್‌ ವಿನ್ನರ್‌ʼ ಮುನಾವರ್‌ನನ್ನು ಮುತ್ತಿಕೊಂಡ ಫ್ಯಾನ್ಸ್‌; ನೆಲಕ್ಕೆ ಬೀಳೊದೊಂದು ಬಾಕಿ!

ಮುನಾವರ್ ಫಾರೂಖಿ ವಿಜೇತರಾದ ಕಾರಣ ಮುಂಬೈನ ಡೋಂಗ್ರಿಯಲ್ಲಿ ಅವರ ಫ್ಯಾನ್ಸ್‌ ಸಂಭ್ರಮಾಚರಣೆ ಮಾಡಿದ್ದರು. ವೀಡಿಯೊದಲ್ಲಿ ಸನ್‌ರೂಫ್ ತೆರೆದು ಮುನಾವರ್ ಫ್ಯಾನ್ಸ್‌ ಜತೆ ಫೋಟೊ ತೆಗೆಸಿಕೊಳ್ಳುತ್ತಿರುವುದು ನೀವು ಕಾಣಬಹುದು. ಅವರ ಕಾರಿನ ಸುತ್ತ ಜನಸಾಗರವೇ ನೆರೆದಿತ್ತು. ಅಭಿಮಾನಿಗಳು ಕೇಕೆ ಹಾಕಿ ಕುಣಿದು ಕುಪ್ಪಳಿಸಿದ್ದಾರೆ. ಚಿತ್ರಗಳನ್ನು ಕ್ಲಿಕ್ಕಿಸಿ ಶುಭಾಶಯ ಕೋರಿದ್ದಾರೆ. ಮುನಾವರ್ ಕೂಡ ಫ್ಯಾನ್ಸ್‌ಗೆ ಕೈಮುಗಿದು ಬೆಂಬಲಕ್ಕೆ ಕೃತಜ್ಞತೆ ತಿಳಿಸಿದ್ದಾರೆ.

ಇನ್ನು ಕೆಲವರು ಮುನಾವರ್‌ ಗೆದ್ದ ಬಳಿಕ ಇದು ಫಿಕ್ಸಿಂಗ್‌ ಎಂದು ಆರೋಪ ಕೂಡ ಮಾಡಿದ್ದರು. ಈ ಬಗ್ಗೆ ಮುನಾವರ್‌ ಕೂಡ ಸಂದರ್ಶನವೊಂದರಲ್ಲಿ ಮಾತನಾಡಿದ್ದರು. ʻನಾನು ಫಿಕ್ಸಿಂಗ್​ ವಿನ್ನರ್​ ಆಗಿದ್ದಿದ್ದರೆ ಇಷ್ಟೆಲ್ಲ ಕಷ್ಟ ಅನುಭವಿಸಬೇಕಿರಲಿಲ್ಲ. ಎಲ್ಲವೂ ನನಗೆ ಸುಲಭವಾಗಿ ಸಿಗುತ್ತಿತ್ತು. ಇಡೀ ಸೀಸನ್​ನಲ್ಲಿ ನಾನು ಕಷ್ಟಪಟ್ಟಿದ್ದೇನೆ. ನನ್ನನ್ನು ಫಿಕ್ಸ್ಡ್​ ವಿನ್ನರ್​ ಎಂದು ಕರೆಯುವವರು ಕುಳಿತುಕೊಂಡು ಪೂರ್ತಿ ಸೀಸನ್​ನ ಸಂಚಿಕೆಗಳನ್ನು ನೋಡಲಿ. ಫಿಕ್ಸಿಂಗ್​ ಅಲ್ಲ ಎಂಬುದು ಆಗ ಗೊತ್ತಾಗುತ್ತದೆʼʼಎಂದಿದ್ದರು.

ಬಿಗ್ ಬಾಸ್ 17 ಗೆದ್ದಿರುವ ಮುನಾವರ್ ಫರೂಖಿ ಅವರಿಗೆ ಟ್ರೋಫಿ ದೊರೆತಿದ್ದು, ಜತೆಗೆ 50 ಲಕ್ಷ ರೂ. ಬಹುಮಾನ ಕೊಡ ನೀಡಲಾಗಿದೆ. ಇಷ್ಟೇ ಅಲ್ಲದೇ, ಐಷಾರಾಮಿ ಕಾರ್ ಕೂಡ ಬಹುಮಾನ ರೂಪವಾಗಿ ಬಂದಿದೆ. ಅಭಿಷೇಕ್ ಕುಮಾರ್ ಮೊದಲ ರನ್ನರ್ ಅಪ್ ಆದರೆ ನಟಿ ಅಂಕಿತಾ ಲೋಖಂಡೆ ಮತ್ತು ಅರುಣ್ ಮಾಶೆಟ್ಟಿ ಅವರು ಕ್ರಮವಾಗಿ ಎರಡು ಮತ್ತು ಮೂರನೇ ರನ್ನರ್ ಅಪ್ ಆದರು. ಮೂರು ತಿಂಗಳ ಕಾಲ ನಡೆದ ಈ ಶೋ ಜನವರಿ 28, ಭಾನುವಾರ ರಾತ್ರಿ ಅಂತ್ಯಗೊಂಡಿತು.

Exit mobile version