Site icon Vistara News

BBK season 10: ಬಿಗ್ ಬಾಸ್ ಮನೆಯಲ್ಲಿ ಫೈರ್ ಕ್ಯಾಂಪ್: ತಮ್ಮವರಲ್ಲಿ ಮನಬಿಚ್ಚಿ ಕ್ಷಮೆ ಬೇಡಿದ ಮನೆಮಂದಿ!

apologized to each other bbk 10

ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ (BBK season 10) ತಣ್ಣನೆಯ ರಾತ್ರಿ. ಆದರೆ ಎಲ್ಲರ ಕಣ್ಣಲ್ಲೂ ಕೋಡಿಯಾಗಿ ಹರಿಯುತ್ತಿದೆ ಬಿಸಿಯಾದ ಕಂಬನಿ! ಎದುರಲ್ಲಿ ಅಗ್ಗಷ್ಟಿಗೆ ಧಗಧಗ ಉರಿಯುತ್ತಿದ್ದರೆ, ಸ್ಪರ್ಧಿಗಳೆಲ್ಲ ಕುಟುಂಬದವರ ನೆನಪಲ್ಲಿ ಕರಗಿ ಕಣ್ಣೀರಾಗಿ ಹರಿಯುತ್ತಿದ್ದಾರೆ. ಅಪ್ಪ-ಅಮ್ಮನಿಗೆ ಕೊಟ್ಟ ಮಾತು, ಸಂಗಾತಿಯ ನೆನಪು, ಈಡೇರದೆ ಉಳಿದುಬಿಟ್ಟ ಭಾಷೆ, ಕೊನೆಗೂ ಒಪ್ಪಿಕೊಳ್ಳದೇ ತಮ್ಮೊಳಗೆ ಒಂದಾಗಿಸಿಕೊಂಡು ಅಪ್ಪಿಕೊಳ್ಳದೇ ಹೋದ ಕುಟುಂಬ, ಹೆತ್ತವರ ಬೆಂಬಲಕ್ಕೆ ಪ್ರತಿಫಲ ನೀಡಲಾಗದ ಅಸಹಾಯಕತೆ… ಅಬ್ಬಬ್ಬಾ! ಒಬ್ಬೊಬ್ಬರ ಹೃದಯದಲ್ಲಿಯೂ ಹೇಳಿಕೊಳ್ಳದೇ ಉಳಿದಿವೆಯಲ್ಲ ಎಷ್ಟೊಂದು ಕತೆ!!

ಮನುಷ್ಯ ಮನುಷ್ಯರ ನಡುವಿನ ಗೋಡೆ ಒಡೆಯಲು ನೋವಿಗಿಂತ ಬೇರೆ ಆಯುಧ ಬೇಕೆ? ಅಗ್ಗಿಷ್ಟಿಕೆಯ ಬೆಳಕಲ್ಲಿ, ನೆನಪುಗಳ ಕಾವಿನಲ್ಲಿ ನೋವಿನ ನೆಪದಲ್ಲಿ ಮನೆಯ ಸ್ಪರ್ಧಿಗಳೆಲ್ಲ ಒಂದಾಗಿದ್ದಾರೆ. ಒಬ್ಬರ ಕಣ್ಣೀರನ್ನು ಇನ್ನೊಬ್ಬರು ವರೆಸಿದ್ದಾರೆ. ಒಬ್ಬರ ದುಃಖಕ್ಕೆ ಇನ್ನೊಬ್ಬರು ಹೆಗಲಾಗಿದ್ದಾರೆ. ಒಬ್ಬರಿಗೊಬ್ಬರು ಒದಗಿಬರುತ್ತ ಎಲ್ಲರೂ ಒಂದೇ ಆಗಿದ್ದಾರೆ.

ತಮ್ಮವರಲ್ಲಿ ಮನಬಿಚ್ಚಿ ಕ್ಷಮೆ ಬೇಡಿದ ಮನೆಮಂದಿ

ಪ್ರತಾಪ್‌ ತನ್ನ ತಂದೆ ತಾಯಿಗೆ ಸಾರಿ ಹೇಳಲು ಇಷ್ಟ ಪಡುತ್ತೇನೆ ಎಂದರು. ಭಾಗ್ಯಶ್ರೀ ಅವರು ಅವರ ಪತಿಯ ಬಗ್ಗೆ ʻʻನನ್ನಿಂದ ನೀವು ಎಷ್ಟೊಂದು ಕಳೆದುಕೊಂಡಿದ್ದೀರಾʼʼಎಂದು ಕಣ್ಣೀರಿಟ್ಟರು. ಸಂಗೀತಾ ಅವರು ʻʻನಾನು ನನ್ನ ಅಪ್ಪ ಅಮ್ಮನಿಂದ ತುಂಬಾ ದೂರವಾದೆ. ತುಂಬಾ ದಿನ ನಾವು ಮಾತು ಕೂಡ ಬಿಟ್ಟಿದ್ವಿʼʼಎಂದು ಅತ್ತರು. ನಮ್ರತಾ ಮಾತನಾಡಿ ʻʻಹೆಣ್ಣು ಮಗುವಾಗಿ ಹುಟ್ಟಿದೆ ಎಂದು ಇವತ್ತಿನವರೆಗೂ ನನ್ನನ್ನು ಒಪ್ಪಿಕೊಂಡಿಲ್ಲ ನನ್ನ ಕುಂಟುಂಬ. ದರಿದ್ರ ಮಗು ಎಂದು ʼʼಎಂದರು ಅತ್ತರು. ಕಾರ್ತಿಕ್‌ ಮಾತನಾಡಿ ʻʻಅಪ್ಪನನ್ನು ಉಳಿಸಿಕೊಂಡು ಬರುತ್ತೇನೆ ಎಂದು ಅಮ್ಮನಿಗೆ ಪ್ರಾಮಿಸ್‌ ಮಾಡಿದ್ದೆ. ಆದರೆ ಅವರನ್ನು ಉಳಿಸಿಕೊಳ್ಳುವುದಕ್ಕೆ ಆಗಿಲ್ಲʼʼಎಂದು ಕಣ್ಣೀರಿಟ್ಟರು.

ಇದನ್ನೂ ಓದಿ: BBK season 10: ಟಾರ್ಗೆಟ್‌ ಆದ ಡ್ರೋನ್‌; ವಿನಯ್‌ ಸೇಫ್‌, ಪ್ರತಾಪ್‌ಗೇ ವೋಟ್‌ ಅಂದ್ರು ಫ್ಯಾನ್ಸ್‌!

ಸರಿ… ಆದರೆ ಎಷ್ಟು ಕಾಲ? ಎಲ್ಲಿಯವರೆಗೆ? ಬಿಗ್ ಬಾಸ್ ಮನೆಯೊಳಗಿನ ಪ್ರತಿ ಗಳಿಗೆಯೂ ವ್ಯಕ್ತಿತ್ವ ಪರೀಕ್ಷೆಯ ಅಗ್ನಿದಿವ್ಯವೇ… ಈ ಆಟದಲ್ಲಿ ಒಂದಾಗಿರುವವರು ಮತ್ತೆ ಬೇರಾಗುತ್ತಾರಾ? ಪರಸ್ಪರ ಹೆಗಲುಕೊಟ್ಟವರು ತೊಡೆ ತಟ್ಟಿ ನಿಲ್ಲುತ್ತಾರಾ? ಎಂಬುದು ಕಾದು ನೋಡಬೇಕಿದೆ.

ಬಿಗ್​ಬಾಸ್ ಕನ್ನಡ ಕಲರ್ಸ್ ವಾಹಿನಿಯಲ್ಲಿ ಪ್ರತಿರಾತ್ರಿ 9:30ಕ್ಕೆ ಹಾಗೂ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

Exit mobile version