Site icon Vistara News

BBK SEASON 10: ಗಂಧರ್ವರು-ರಾಕ್ಷಸರು ಅದಲು ಬದಲು; ಜೋರಾಯ್ತು ʻಆನೆʼಯ ಆರ್ಭಟ!

vinay gowda roaring in bbk 10

ಬೆಂಗಳೂರು: ಬಿಗ್‌ಬಾಸ್‌ ಮನೆಯ (BBK SEASON 10) ರಕ್ಕಸ-ಗಂಧರ್ವರ ಟಾಸ್ಕ್‌ ಎರಡನೇ ಮುಖ ಆರಂಭಗೊಂಡಿದೆ. ನಾಣ್ಯದ ಬದಿಗಳು ಅದಲುಬದಲಾಗಿವೆ. ರಕ್ಕಸರು ಗಂಧರ್ವರಾಗಿದ್ದಾರೆ. ಗಂಧರ್ವರು ರಕ್ಕಸರಾಗಿದ್ದಾರೆ. ಈ ಅದಲುಬದಲಿನ ಆಟದ ಪರಿಣಾಮ ಏನಾಗುತ್ತಿದೆ ಎಂಬುದು ಜಿಯೋ ಸಿನಿಮಾ ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಜಾಹೀರಾಗಿದೆ. ಪಾತ್ರದಿಂದ ಹೊರಗೆ ಬಂದ್ರೆ ಸಂಗೀತಾ ಟೀಮ್‌ಗೆ ʻಹುಚ್ಚೇಟುʼ ಕೊಡ್ತೀನಿ ಎಂದಿದ್ದ ವಿನಯ್‌ ಅವರಿಗೆ ಇದೀಗ ಸಖತ್‌ ಚಾನ್ಸ್‌!

ನಿನ್ನೆಯಿಂದ ಸಂಗೀತಾ ತಂಡದ ಸದಸ್ಯರು ರಕ್ಕಸರಾಗಿ ಇಡೀ ಮನೆಯಲ್ಲಿ ಮೆರೆದಾಡಿದ್ದರು. ವರ್ತೂರು ತಂಡದ ಗಂಧರ್ವರನ್ನು ಬಗೆಬಗೆಯಾಗಿ ಗೋಳು ಹೊಯ್ದುಕೊಂಡಿದ್ದರು. ನಂತರ ಬಾವುಟ ನೆಡುವ ಟಾಸ್ಕ್‌ನಲ್ಲಿ ಕೂಡ ಎರಡೂ ತಂಡಗಳ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿತ್ತು. ಇಂದು ವೇಷಗಳು ಹಾಗೆಯೇ ಇವೆ. ಅದರೊಳಗಿನ ವ್ಯಕ್ತಿಗಳು ಬದಲಾಗಿದ್ದಾರೆ. ರಕ್ಕಸರಾಗಿದ್ದವರು ಗಂಧರ್ವ ವೇಷ ತೊಟ್ಟು ನಸುನಗುತ್ತಿದ್ದಾರೆ. ಗಂಧರ್ವರಾಗಿದ್ದವರು ರಕ್ಕಸರಾಗಿ ಅಟ್ಟಹಾಸಗೈಯುತ್ತಿದ್ದಾರೆ.

ವರ್ತೂರು ತಂಡದ ಸದಸ್ಯರು ನಿನ್ನೆ ಅನುಭವಿಸಿದ ಅವಮಾನ-ನೋವುಗಳನ್ನೆಲ್ಲ ಬಡ್ಡಿಸಮೇತ ತೀರಿಸಲು ಹೊರಟಂತಿದೆ. ಕಾರ್ತಿಕ್‌ ಬಳಿ ವಿನಯ್, ಆನೆ ಬೀಳಿಸಿದ್ದಕ್ಕೆ ಕ್ಷಮೆ ಕೇಳಿಸಿಕೊಳ್ಳುತ್ತಿದ್ದಾರೆ. ರಕ್ಕಸರಾಗಿದ್ದಾಗ ಮೆರೆದಾಡಿದ್ದ ಕಾರ್ತಿಕ್ ಅವರನ್ನೇ ಗಂಧರ್ವ ತಂಡ ಟಾರ್ಗೆಟ್ ಮಾಡಿಕೊಂಡು ಬಗೆಬಗೆಯ ಶಿಕ್ಷೆಗಳನ್ನು ನೀಡುತ್ತಿರುವಂತಿದ. ಬದಲಾದ ಈ ಆಯಾಮದಲ್ಲಿ ಯಾರು ಗೆಲ್ಲುತ್ತಾರೆ? ಯಾರು ಸೋತು ಶರಣಾಗುತ್ತಾರೆ? ಎಂಬುದು ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.

ಇದನ್ನೂ ಓದಿ: BBK SEASON 10: ಪಾತ್ರದಿಂದ ಹೊರಗೆ ಬಂದ್ರೆ ಸಂಗೀತಾ ಟೀಮ್‌ಗೆ ʻಹುಚ್ಚೇಟುʼ ಕೊಡ್ತೀನಿ ಎಂದ ವಿನಯ್‌!

ಪಾತ್ರದಿಂದ ಹೊರಗೆ ಬಂದ್ರೆ ಸಂಗೀತಾ ಟೀಮ್‌ಗೆ ʻಹುಚ್ಚೇಟುʼ ಕೊಡ್ತೀನಿ ಎಂದಿದ್ದ ವಿನಯ್‌

ಈ ವಾರ ಬಿಗ್‌ ಬಾಸ್‌ ಮನೆಯಲ್ಲಿ (BBK SEASON 10) ಗಂಧರ್ವರು, ರಾಕ್ಷಸರು ಎಂಬ ಎರಡು ಗುಂಪುಗಳಾಗಿದ್ದು, ಮನರಂಜನೆಗಿಂತ ವಿವಾದಕ್ಕೆ ಗುರಿಯಾಗಲಿದೆಯಾ ಎಂಬ ಅನುಮಾನ ಪ್ರೇಕ್ಷಕರಲ್ಲಿ ಮೂಡಿದೆ. ಕಾರ್ತಿಕ್, ತನಿಷಾ, ಸಂಗೀತಾ, ಡ್ರೋನ್ ಪ್ರತಾಪ್, ಸಿರಿ, ಅವಿನಾಶ್ ಅವರು ರಾಕ್ಷಸರಾಗಿದ್ದರೆ, ವಿನಯ್ ಗೌಡ, ತುಕಾಲಿ ಸ್ಟಾರ್ ಸಂತು, ಪವಿ, ನಮ್ರತಾ ಗೌಡ, ವರ್ತೂರು ಸಂತೋಷ್ ಅವರು ಗಂಧರ್ವರಾಗಿದ್ದರು. ಸ್ನೇಹಿತ್ ಅವರು ಈ ಟಾಸ್ಕ್‌ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಸ್ನೇಹಿತ್‌ ಮನೆಯ ಕ್ಯಾಪ್ಟನ್ ಆಗಿ ಸರಿಯಾಗಿ ಟೀಂ ಮಾಡಿರಲಿಲ್ಲ. ಮಾತ್ರವಲ್ಲ ಹೆಚ್ಚಾಗಿ ವಿನಯ್‌ ಟೀಂ ಅವರ ಪರವಾಗಿಯೇ ನಿಂತಿದ್ದು, ರಾಕ್ಷಸರ ಟೀಂ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಒಟ್ಟಿನಲ್ಲಿ ಗಂಧರ್ವರಿಗೆ ಸಿಟ್ಟು ಬರುವಂತೆ ಅತಿಯಾಗಿ ಸಂಗೀತಾ ಟೀಂ ಮಾಡಿದ್ದು ವಿನಯ್‌ ಕೂಡ ಪಾತ್ರದಿಂದ ಹೊರಗಡೆ ಬಂದಮೇಲೆ ಇದೆ ಮಾರಿ ಹಬ್ಬ ಎಂದು ಗರ್ಜಿಸಿದ್ದರು. ಇದೀಗ ಆ ಅವಕಾಶ ಬಂದಿದೆ.

ವಿನಯ್ ಗೌಡ ಅವರು ʻʻನನ್ನ ಪಾತ್ರದಿಂದ ಹೊರಗೆ ಬಂದರೆ ಆ ವಿಷಯವೇ ಬೇರೆ. ಬರ್ತೀನಿ. ಹೇಗ್‌ ಬರ್ತೀನಿ ಅಂದರೆ, ಪಾಪ ಅವರು! ಬೇಜಾರಾಗ್ತಿದೆ ಅವರ ನೆನೆಸಿಕೊಂಡರೆ. ಬಿಗ್ ಬಾಸ್ ನಿಮ್ಮ ಪಾತ್ರಗಳು ಮುಗೀತು ಎಂದು ಹೇಳುವವರೆಗೂ ನೀವು ಏನೂ ಸುಳಿವು ಕೊಡಬೇಡಿ, ಆಮೇಲೆ ಇದೆ ಅವರಿಗೆ. ಹುಚ್ಚೇಟು ಹೊಡೆಯುತ್ತೇನೆ. ನಾನು ಒಮ್ಮೆ ಪಾತ್ರದಿಂದ ಹೊರಗಡೆ ಬರಲಿ, ಆಗ ಇದೆ” ಎಂದು ಹೇಳಿದ್ದರು. ಇದೀಗ ಆ ಸದಾವಕಾಶ ವಿನಯ್‌ ಅವರಿಗೆ ಲಭಿಸಿದೆ.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version