ಡ್ರೋನ್ ಪ್ರತಾಪ್ ಅವರು ಬಿಗ್ ಬಾಸ್ ಸೀಸನ್ 10ರ (Gicchi Gili Gili season 3) ಮೊದಲನೇ ರನ್ನರ್ ಅಪ್ ಆಗಿದ್ದರು. ಇದೀಗ ಕಲರ್ಸ್ ಕನ್ನಡದ ʻಗಿಚ್ಚಿ ಗಿಲಿಗಿಲಿʼ ಕಾರ್ಯಕ್ರಮದಲ್ಲಿ ಡ್ರೋನ್ ಪ್ರತಾಪ್ ಕಂಟೆಸ್ಟೆಂಟ್ ಆಗಿ ಆಯ್ಕೆಯಾಗಿದ್ದಾರೆ. ಇಂದಿನಿಂದ ರಿಯಾಲಿಟಿ ಶೋದ ಚಿತ್ರೀಕರಣ ಕೂಡ ನಡೆಯುತ್ತಿದೆ ಎಂದು ವರದಿಯಾಗಿದೆ.
ಡ್ರೋನ್ ಪ್ರತಾಪ್ ಮಾತ್ರವಲ್ಲ, ತುಕಾಲಿ ಸಂತೋಷ್, ಮೈಕಲ್ ಮತ್ತು ಇಶಾನಿ ಕೂಡ ಈ ಬಾರಿ ಗಿಚ್ಚಿಗಿಲಿಗಿಲಿಯಲ್ಲಿ ಪ್ರೇಕ್ಷಕರನ್ನು ನಕ್ಕು ನಗಿಸಲಿದ್ದಾರೆ. ಮೂವರು ಕೂಡ ಇಂದಿನಿಂದ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ.
ಇದನ್ನೂ ಓದಿ: Gicchi Gili Gili season 3: ಶುರುವಾಗಲಿದೆ ಗಿಚ್ಚಿ-ಗಿಲಿಗಿಲಿ ಸೀಸನ್ 3 ; ನಟ ಕೋಮಲ್ ಭರ್ಜರಿ ಎಂಟ್ರಿ!
ಕಾಮಿಡಿ ಟಿವಿ ಶೋ ‘ಗಿಚ್ಚಿ ಗಿಲಿಗಿಲಿ’ ಮೂರನೇ ಸೀಸನ್‌ಗೆ (Gicchi Gili Gili season 3) ಸಿದ್ಧವಾಗಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಕಾಮಿಡಿ ಶೋ ‘ಗಿಚ್ಚಿ ಗಿಲಿಗಿಲಿ’ಯ ಮೂರನೇ ಸೀಸನ್ ಫೆಬ್ರವರಿ 3ರಿಂದ ಆರಂಭವಾಗಲಿದ್ದು, ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 9ಕ್ಕೆ ವೀಕ್ಷಕರು ಕಾರ್ಯಕ್ರಮವನ್ನು ನೋಡಿ ಆನಂದಿಸಬಹುದು.
ಮೊದಲನೆ ಸೀಸನ್‌ನ ಮೂಲಕ ಇದು ಜನರ ಮೆಚ್ಚುಗೆಗೆ ಪಾತ್ರವಾಗಿತ್ತು. ʻಗಿಚ್ಚಿ ಗಿಲಿಗಿಲಿ’ಯ ಮೊದಲ ಸೀಸನ್‌ನಲ್ಲಿ ನಿವೇದಿತಾ ಗೌಡ, ಜಗ್ಗಪ್ಪ, ಪ್ರಶಾಂತ್, ಚಂದ್ರಪ್ರಭಾ ಮುಂತಾದವರು ಇದ್ದರು. ಮೊದಲನೇ ಸೀಸನ್‌ನಲ್ಲಿ ವಂಶಿಕಾ ಅಂಜನಿ ಕಶ್ಯಪ ಹಾಗೂ ಶಿವು ಈ ಶೋನ ವಿಜೇತರಾಗಿ ಹೊರಹೊಮ್ಮಿದ್ದರು. ವಿನೋದ್ ಗೊಬ್ರಗಾಲ್, ನಿವೇದಿತಾ ಗೌಡ ಈ ಶೋನ ರನ್ನರ್ ಅಪ್ ಆಗಿದ್ದರು. ಗಿಚ್ಚಿ ಗಿಲಿಗಿಲಿ ಸೀಸನ್ 2 ವಿನ್ನರ್ ಪಟ್ಟವನ್ನು ಚಂದ್ರಪ್ರಭಾ ಅಲಂಕರಿಸಿದ್ದರು.
ಇದೀಗ ಕಲರ್ಸ್ ವಾಹಿನಿ ಹೊಸ ಪ್ರೋಮೊ ಹಂಚಿಕೊಂಡಿದೆ. ಮೂರನೇ ಸೀಸನ್ನು ಬರ್ತಾ ಇದೆ. ಹಾಗೆಯೇ ಮೂರನೇ ಪರ್ಸನ್ನು! ನೋಟ್ ಮಾಡ್ಕೊಳಿ, ಫೆಬ್ರವರಿ 3ಕ್ಕೆ ಎಂದು ಶೀರ್ಷಿಕೆ ನೀಡಿದೆ.
ಈ ಬಾರಿ ಸಾಧು ಕೋಕಿಲ, ಶ್ರುತಿ ಹಾಗೂ ನಟ ಕೋಮಲ್ ಜಡ್ಜ್ ಸ್ಥಾನದಲ್ಲಿದ್ದಾರೆ. ನಿರಂಜನ್ ದೇಶಪಾಂಡೆ ನಿರೂಪಕರಾಗಿದ್ದಾರೆ.