ಬೆಂಗಳೂರು: ‘ಮನೆಯೇ ಮೊದಲ ಪಾಠಶಾಲೆ’ ಎಂಬ ಮಾತು ಬಿಗ್‌ಬಾಸ್ ಮನೆಯಲ್ಲಿ ಅಕ್ಷರಶಃ ಸತ್ಯವಾಗುತ್ತಿದೆ. ಬಿಗ್‌ಬಾಸ್ ಮನೆಯಲ್ಲಿ ‘ಪ್ರಾಥಮಿಕ ಶಾಲೆ’ ಪ್ರಾರಂಭವಾಗಿದೆ. ಮೊದಲ ತರಗತಿಯಲ್ಲಿ ‘ವ್ಯಕ್ತಿತ್ವ ವಿಕಸನ’ದ ಬಗ್ಗೆ ಪಾಠ ಮಾಡಲು ಬಂದವರು, ತನಿಷಾ ಟೀಚರ್! ಅಷ್ಟು ಸುಂದರ ಟೀಚರ್ ಪಾಠ ಮಾಡಲು ಬಂದರೆ ಹಾಜರಿಗೇನು ಕಮ್ಮಿ? ಅದರಲ್ಲಿಯೂ ಲಾಸ್ಟ್ ಬೆಂಚ್ ಹುಡುಗ ವರ್ತೂರು ಸಂತೋಷ್ ಅಂತೂ, ‘ನೀವ್ ಚೆನ್ನಾಗ್ ಕಾಣಿಸ್ತಾ ಇದೀರಾ ಮಿಸ್’ ಎಂದು ನಿಂತಲ್ಲೇ ಕೈ ಬೀಸಿದ್ದಾರೆ. ಜತೆಗೆ ವಿನಯ್ ಅವರು ಕೂಡ ʻʻಊಟ ತಂದಿದ್ದೀನಿ ಮಿಸ್. ಕೇಕ್ ತಂದಿದ್ದೀನಿ ಮಿಸ್. ನಾನು ಗುಡ್ ಬಾಯ್. ನಂಗೆ ಒಂದು ಮುತ್ತು ಕೊಡಲ್ವ’ ಎಂದು ಚಿಕ್ಕ ಮಕ್ಕಳಂತೆ ಕೇಳಿದ್ದಾರೆ.
ವಿನಯ್, ಕಾರ್ತಿಕ್, ತುಕಾಲಿ ಸಂತೋಷ್, ನಮ್ರತಾ ಮೊದಲಾದವರು ವಿದ್ಯಾರ್ಥಿಗಳಾದರೆ, ತನಿಷಾ, ಮೈಕಲ್ ಮೊದಲಾದವರು ಟೀಚರ್ ಆಗಿದ್ದಾರೆ. ಒಬ್ಬರ ಕೈಗೆ ಇನ್ನೊಬ್ಬರು ಕಚ್ಚುತ್ತ, ಒಬ್ಬರ ಬಗ್ಗೆ ಇನ್ನೊಬ್ಬರು ದೂರು ಹೇಳುತ್ತ, ಎಲ್ಲರ ಸೇರಿ ಒಟ್ಟಿಗೆ ಪ್ರಾರ್ಥನೆ ಮಾಡುತ್ತ ಕೋಲಾಹಲವೆದ್ದಿದ್ದ ಮನೆಯಲ್ಲಿ ಕಲರವ ಉಂಟುಮಾಡುತ್ತಿದ್ದಾರೆ. ಕ್ರೌರ್ಯ ಮೆರೆದಾಡಿದ್ದ ಜಾಗದಲ್ಲಿ ಕೌಮಾರ್ಯದ ಮುಗ್ಧತೆ ಅರಳುತ್ತಿದೆ.
ಈ ವಾರದ ಟಾಸ್ಕ್‌ನಲ್ಲಿ ಬಿಗ್‌ಬಾಸ್ ಮನೆಯ ಎಲ್ಲ ಸದಸ್ಯರನ್ನು ಬಾಲ್ಯಕ್ಕೆ ಕರೆದೊಯ್ಯುತ್ತಿದ್ದಾರೆ. ಎಲ್ಲ ಸ್ಪರ್ಧಿಗಳೂ ಪ್ರಾಥಮಿಕ ಶಾಲೆಯ ಸಮವಸ್ತ್ರ ತೊಟ್ಟು ಅಕ್ಷರಶಃ ಮಕ್ಕಳೇ ಆಗಿಬಿಟ್ಟಿದ್ದಾರೆ. ಒಬ್ಬೊಬ್ಬರೂ ಇನ್ನೊಬ್ಬರ ಚೇಷ್ಟೆಗಳನ್ನು ನೋಡಿ ಹೊಟ್ಟೆ ಹುಣ್ಣಾಗುವಂತೆ ನಗುತ್ತಿದ್ದಾರೆ.
ಇದನ್ನೂ ಓದಿ: BBK SEASON 10: ಬಿಗ್‌ಬಾಸ್ ಮನೆಯಿಂದ ಹೊರಬಂದ ಸ್ನೇಹಿತ್ ತಂದೆ-ತಾಯಿ ಬಳಿ ಕ್ಷಮೆ ಕೋರಿದ್ದೇಕೆ?
ವಿನಯ್ ಅವರು ಕೂಡ ಸಮವಸ್ತ್ರ ಧರಿಸಿದ ಟಫೀನ್ ಬಾಕ್ಸ್ ಹಿಡಿದು ತನಿಷಾ ಅವರಿಗೆ ಮುತ್ತು ಕೊಡಿ ಎಂದಿದ್ದಾರೆ. ‘ಊಟ ತಂದಿದ್ದೀನಿ ಮಿಸ್. ಕೇಕ್ ತಂದಿದ್ದೀನಿ ಮಿಸ್. ನಾನು ಗುಡ್ ಬಾಯ್. ನಂಗೆ ಒಂದು ಮುತ್ತಾ ಕೊಡಲ್ವ’ ಎಂದು ವಿನಯ್ ಕೇಳಿದರು. ‘ನೀವು ಸ್ಟಾರ್ ಕೇಳ್ತೀರಿ ಅಂದ್ಕೊಂಡಿದ್ದೆ’ ಎಂದರು ತನಿಷಾ. ‘ಆ ಸ್ಟಾರ್ನ ಕಾರ್ತಿಕ್‌ಗೆ ಕೊಡಿ. ನಂಗೆ ಮುತ್ತು ಬೇಕು’ ಎಂದರು ವಿನಯ್. ‘ಯಾರೋ ಅಡ್ವಾಂಟೇಜ್ ತೆಗೆದುಕೊಳ್ಳುವಂತೆ ಕಾಣುತ್ತಿದೆಯಲ್ಲ’ ಎಂದು ನಗುತ್ತಲೇ ಹೇಳಿದರು ತನಿಷಾ. ಆ ಬಳಿಕ ವಿನಯ್ ಅವರು ಪತ್ನಿಯನ್ನು ನೆನಪು ಮಾಡಿಕೊಂಡರು. ‘ನಮ್ಮವ್ವ ಮನೆಯಲ್ಲಿ ನೋಡ್ತಾ ಇರ್ತಾರೆ. ಮನೆಗೆ ಹೋದ ತಕ್ಷಣ ಕೆರ ತೆಗೆದುಕೊಂಡು ಹೊಡೀತಾರೆ’ ಎಂದು ವಿನಯ್ ಅಲ್ಲಿಂದ ತೆರಳಿದರು.
ವಿದೇಶದಿಂದ ಬಂದಿರುವ ಮೈಕಲ್ ಕೂಡ, ಕೋಟು ತೊಟ್ಟು ‘ಕನ್ನಡ ತರಗತಿ’ ಮಾಡಲು ಸಜ್ಜಾಗಿದ್ದಾರೆ.
‘ವಿದೇಶದಿಂದ ಬಂದಿದೀನಿ. ಕನ್ನಡ ಭಾಷೆಯ ಮೇಲೆ ನನಗೆ ಪ್ರೀತಿ ಆಯ್ತು. ಈಗ ಪಂಡಿತ ಆಗಲು ಯತ್ನಿಸುತ್ತಿದ್ದೇನೆ’ ಎಂದಿದ್ದಾರೆ ಮೈಕಲ್ ಮೇಷ್ಟ್ರು. ಅಷ್ಟೇ ಅಲ್ಲ, ಪುಂಡ ಹುಡುಗ ಕಾರ್ತಿಕ್‌ಗೆ, ‘ಆಂಗ್ಲ ಭಾಷೆ ಬಳಕೆ ಮಾಡಿದರೆ ಶಿಕ್ಷೆ ಕೊಡ್ತೀನಿ’ ಎಂದು ಎಚ್ಚರಿಕೆ ಬೇರೆ ನೀಡಿದ್ದಾರೆ. ʻಎಲ್ಲಾದರೂ ಇರು ಎಂತಾದರೂ ಇರು
ಎಂದೆಂದಿಗೂ ನೀ ಕನ್ನಡವಾಗಿರು’ ಎಂದು ಮೈಕಲ್ ಹೇಳುತ್ತಿದ್ದರೆ ವಿದ್ಯಾರ್ಥಿಗಳ ಬಾಯಲ್ಲಿ ‘ಕನ್ನಡ… ರೋಮಾಂಚನವೀ ಕನ್ನಡ’ ಎಂಬ ಹಾಡು ತಂತಾನೆಯೇ ಹೊಮ್ಮಿದೆ.
ಬಿಗ್‌ಬಾಸ್ ಜಿಯೋ ಸಿನಿಮಾಸ್ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ