Site icon Vistara News

Varthur Santhosh: ವೇದಿಕೆಯಲ್ಲಿ ವರ್ತೂರ್‌ ಸಂತೋಷ್‌ ʻಸೀಕ್ರೆಟ್‌ʼ ರೀವಿಲ್‌ ಮಾಡಿ ಹೊಗಳಿದ ಕಿಚ್ಚ!

Grand Finale Kiccha Sudeep Reveals Secret About Varthur Santhosh Huli Uguru

ಬೆಂಗಳೂರು: ಹುಲಿ ಉಗುರು ಪ್ರಕರಣಕ್ಕೆ ಸಂಬಂಧಿಸದಂತೆ ವರ್ತೂರ್‌ ಸಂತೋಷ್‌ (Varthur Santhosh) ಅವರು ಸಾಕಷ್ಟು ವಿವಾದಕ್ಕೆ ಗುರಿಯಾಗಿದ್ದರು. ಆ ಬಳಕ ಮತ್ತೆ ಬಿಗ್‌ ಬಾಸ್‌ ಮನೆಗೆ ಬಂದು ಇದೀಗ ಫಿನಾಲೆ ಹಂತದಲ್ಲಿ ಇದ್ದಾರೆ. ಆದರೆ ವರ್ತೂರ್‌ ಸಂತೋಷ್‌ ಪ್ರಕರಣ ಬಿಗ್‌ ಬಾಸ್‌ ಸ್ಪರ್ಧಿಗಳಿಗೆ ಗೊತ್ತಿರಲಿಲ್ಲ. ಗ್ರ್ಯಾಂಡ್‌ ಫಿನಾಲೆ ವೇದಿಕೆಯಲ್ಲಿ ಈ ಬಗ್ಗೆ ಸುದೀಪ್‌ ಅವರು ಬಾಯ್ಬಿಟ್ಟಿದ್ದಾರೆ. ಮಾತ್ರವಲ್ಲ ಸುದೀಪ್‌ ಅವರು ವರ್ತೂರ್‌ ಬಗ್ಗೆ ಹೊಗಳಿ ʻʻವರ್ತೂರ್‌ ಎಷ್ಟೇ ಕಷ್ಟ ಬಂದರೂ ಕುಗ್ಗಲಿಲ್ಲ. ನಾನು ನೋಡಿದ್ದು ವರ್ತೂರು ಸಂತೋಷ್ ಅವರ ಸ್ಟ್ರೆಂಥ್ ಮತ್ತು ಮುಗ್ಧತೆʼʼಎಂದರು.

ವರ್ತೂರ್‌ ಅವರು ಹುಲಿ ಉಗುರು ಪ್ರಕರಣಕ್ಕೆ ಸಂಬಂಧಿಸದಂತೆ ಜೈಲಿಗೆ ಹೋಗಿ ಬಂದಿದ್ದರು. ಅಲ್ಲಿಂದ ಇಲ್ಲಿಯವರೆಗೂ ಮನೆಯಲ್ಲಿ ಈ ಬಗ್ಗೆ ಬಾಯ್ಬಿಟ್ಟಿರಲಿಲ್ಲ. ಈ ಬಗ್ಗೆ ಸುದೀಪ್‌ ಅವರು ಮಾತನಾಡಿದ್ದಾರೆ. ಘಟನೆಯ ಬಗ್ಗೆ ಕೇಳಿ ಸ್ಪರ್ಧಿಗಳು ಶಾಕ್‌ ಆದರು. ಈ ಬಗ್ಗೆ ಸುದೀಪ್‌ ಮಾತನಾಡಿ ʻʻಇಲ್ಲಿ ಒಂದು ಓಪನ್‌ ಸೀಕ್ರೆಟ್‌ ಇದೆ. 6 ಮಂದಿಗೆ ತಿಳಿದಿಲ್ಲ. ವರ್ತೂರ್‌ ಅವರಿಗೆ ಸಣ್ಣ ಹಿಂಟ್‌ ಇರಬಹುದುʼʼಎಂದು ಮಾತು ಆರಂಭಿಸಿದರು.ಈ ಬಗ್ಗೆ ವರ್ತೂರ್‌ ಅವರಿಗೆ ಪ್ರಸ್ತಾಪಿಸಲು ಸುದೀಪ್‌ ಅವರು ಹೇಳಿದರು. ಆದರೆ ವರ್ತೂರ್‌ ಅವರು ಸುದೀಪ್‌ ಅವರಿಗೆ ನೀವೆ ಹೇಳಿ ಎಂದರು.

ಇದನ್ನೂ ಓದಿ: BBK SEASON 10: ಮಗನನ್ನು ವಾಪಸ್ ಕೊಟ್ಟಿದ್ದೀರಾ, ʻಬಿಗ್‌ ಬಾಸ್‌ʼಗೆ ಋಣಿ ಎಂದು ಕಣ್ಣೀರಿಟ್ಟ ಡ್ರೋನ್‌ ಪ್ರತಾಪ್‌ ತಂದೆ-ತಾಯಿ!

ವೇದಿಕೆಯಲ್ಲಿ ಸುದೀಪ್‌ ಮಾತನಾಡಿ ʻʻವರ್ತೂರು ಸಂತೋಷ್‌ ನೋವು, ಅವಮಾನ ಅನುಭವಿಸಿದ್ದಾರೆ. ವರ್ತೂರು ಸಂತೋಷ್‌ಗೆ ನಾವು ಹ್ಯಾಟ್ಸ್ ಆಫ್ ಹೇಳಬೇಕು. ನಾವು ಯಾಕೆ ಅವರಿಗೆ ಸಪೋರ್ಟ್ ಮಾಡಿದ್ವಿ, ಹಾಗೇ ವರ್ತೂರ್‌ ಯಾಕೆ ಮನೆಯಲ್ಲಿ ಇರಬೇಕು ಎಂದು ನಾವು ಯಾಕೆ ಹೇಳಿದ್ವಿ ಅಂದರೆ, ಹೊರಗಡೆ ಅವರು ಅನುಭವಿಸಿದ ನೋವು. ಅದನ್ನ ಈಗ ಒಳಗಿರುವ ಉಳಿದ 5 ಸ್ಪರ್ಧಿಗಳಿಗೆ ಹೇಳಲಿಲ್ಲ ಅಂದರೆ ತಪ್ಪಾಗುತ್ತದೆ. ವರ್ತೂರ್‌ ತುಂಬ ಮುಗ್ಧರು. ಅವರು ಮನೆಗೆ ಬಂದಾಗ ಪೆಂಡೆಂಟ್‌ ಹಾಕಿಕೊಂಡು ಬರುತ್ತಾರೆ. ಆದರೆ ಅದು ʻಅಕ್ರಮʼ ಎಂದು ಗೊತ್ತಾದ ಮೇಲೆ ಅರೆಸ್ಟ್‌ ಆಗುತ್ತಾರೆ. ಜೈಲಿಗೆ ಹೋಗುತ್ತಾರೆ. ಅವರ ಜಾಗದಲ್ಲಿ ಬೇರೆ ಯಾರಾದ್ರೂ ಇದ್ದಿದ್ದರೆ ಯಾರು ಒಳಗಡೆ ಇರುತ್ತಿರಲಿಲ್ಲ,. ಹೊರಗಡೆ ಬರಲು ಅವರಿಗೆ ಸಮಯ ಕೂಡ ಇರಲಿಲ್ಲ. ತುಂಬಾ ಸ್ಟ್ರೆಂಥ್ ಬೇಕು ಅದಕ್ಕೆ. ಆಗ ಅಲ್ಲಿ ನಾನು ನೋಡಿದ್ದು ವರ್ತೂರು ಸಂತೋಷ್ ಅವರ ಸ್ಟ್ರೆಂಥ್ ಮತ್ತು ಮುಗ್ಧತೆʼʼಎಂದು ಹೇಳಿದರು.

ಸುದೀಪ್ ಅವರ ಮಾತುಗಳನ್ನು ಕೇಳಿ ವರ್ತೂರು ಸಂತೋಷ್ ಕಣ್ಣೀರು ಹಾಕಿದರು. ಹೊರಗೆ ಕೂತಿದ್ದ ಅವರ ತಾಯಿಯೂ ಸಹ ಕಣ್ಣೀರು ಹಾಕಿದರು. ಇದೀಗ ವರ್ತೂರ್‌ ಅವರು ಫಿನಾಲೆವರೆಗೆ ಬಂದು ನಿಂತಿದ್ದಾರೆ. ವರ್ತೂರ್‌ ಕೂಡ ನಾಡಿನ ಜನತೆಗೆ ಧನ್ಯವಾದ ತಿಳಿಸಿದರು.

Exit mobile version