Site icon Vistara News

BBK SEASON 10: ಪ್ರತಾಪ್‌ಗೆ ಹೆಚ್ಚು ವೋಟ್‌; ವಿನಯ್‌ಗೆ ಮುಖಭಂಗ! ಯಾರಿಗೆ ಹೆಚ್ಚು ಮತ?

Highest vote for drone Pratap and Vinay is upset Who got the most votes of the week

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10ರಲ್ಲಿ (BBK SEASON 10) ಈಗಾಗಲೇ ಮನೆಯಲ್ಲಿ ಅವರದ್ದೇ ಆದ ಗುಂಪುಗಳು ಆಗಿವೆ. ಆಟ ಹಂಚಿಕೆ ವಿಚಾರದಲ್ಲಿ, ಕಳಪೆ, ಉತ್ತಮ ನೀಡುವ ವಿಚಾರದಲ್ಲಿ ಚರ್ಚೆಗಳು ನಡೆದು ಆಟವಾಡುತ್ತಿದ್ದಾರೆ ಸ್ಪರ್ಧಿಗಳು. ಇದೀಗ ಮೊಟ್ಟ ಮೊದಲ ಬಾರಿಗೆ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಗಳಿಗೆ ಬಂದಿರುವ ಮತಗಳ ಆಧಾರದಲ್ಲಿ ನಾಮಿನೇಟ್ ಆದವರನ್ನು ಸೇವ್ ಮಾಡಿದ್ದಾರೆ. ಆ ಮೂಲಕ ಮನೆಯ ಸದಸ್ಯರಲ್ಲಿ ಯಾರನ್ನು ಜನ ಹೆಚ್ಚು ಇಷ್ಟಪಟ್ಟಿದ್ದಾರೆ ಎಂಬುದು ಮನೆಯವರಿಗೂ ತಿಳಿದು ಬಂದಿದೆ. ಅತಿ ಹೆಚ್ಚು ವೋಟ್‌ ಬಂದು ಮೊದಲಿಗೆ ಸೇವ್‌ ಆಗಿದ್ದು ಪ್ರತಾಪ್‌.

ಈ ವಾರ ಸಂಗೀತಾ, ತನಿಷಾ, ವಿನಯ್, ನಮ್ರತಾ, ಸ್ನೇಹಿತ್, ನೀತು, ಡ್ರೋನ್ ಪ್ರತಾಪ್, ಸಿರಿ, ತುಕಾಲಿ ಅವರು ನಾಮಿನೇಟ್ ಆಗಿದ್ದರು. ಸುದೀಪ್‌ ಮೊದಲಿಗೆ ಅತಿ ಹೆಚ್ಚು ವೋಟ್‌ ಯಾರಿಗೆ ಬಂದಿದೆಯೋ ಅವರು ಸೇವ್‌ ಆಗಿದ್ದಾರೆ ಎಂದು ಹೇಳುತ್ತಾ ಹೋದರು. ಮೊದಲಿಗೆ ಪ್ರತಾಪ್‌ ಸೇವ್‌ ಆದರು. ಡ್ರೋನ್ ಪ್ರತಾಪ್ ಆದ ಮೇಲೆ ಅತಿ ಹೆಚ್ಚು ಮತ ಗಳಿಸಿರುವುದು ತನಿಷಾ. ಮೂರನೇ ಸ್ಥಾನದಲ್ಲಿರುವುದು ಸಂಗೀತಾ, ಮನೆಯಲ್ಲಿ ನಾಲ್ಕನೇ ಸ್ಥಾನ ಸಿಕ್ಕಿದ್ದು ವಿನಯ್​ಗೆ.

ತನಿಷಾಕ್ಕಿಂತ ಕಡಿಮೆ ವೋಟ್‌ ಬಂದದ್ದು ಸಂಗೀತಾ. ಸಂಗೀತಾ ಅವರು ಮೊದ ಮೊದಲು ಕಾರ್ತಿಕ್‌ ಹಾಗೂ ತನಿಷಾ ಜತೆ ಸ್ನೇಹ ಬೆಳೆಸಿದರು. ವರ್ತೂರ್‌ ಸಂತೋಷ್‌ಗೆ ಯಾವಾಗ ಅತ್ಯಧಿಕ ವೋಟ್‌ ಬಂತು ಎಂದು ತಿಳಿಯಿತೋ ಮತ್ತೆ ಅವರ ಸಹವಾಸ ಮಾಡಿದರು. ಇದೀಗ ವಿನಯ್‌ ತಂಡದಲ್ಲಿ ಇದ್ದಾರೆ. ತನಿಷಾ ಕೂಡ ಮನೆಯವರ ಕಣ್ಣಲ್ಲಿ ಕೆಟ್ಟದ್ದೇ ಆಗಿದ್ದರು, ಸಂಗೀತಾ ಅವರಿಗಿಂತ ಜನರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಕಾರ್ತಿಕ್ ತಲೆ ಬೋಳಿಸಿಕೊಳ್ಳುವಂತೆ ಮಾಡಿರುವ ಕಾರಣಗಳಿಂದ 12 ಸಾವಿರ ಫಾಲೋವರ್ಸ್‌ ಕೂಡ ಕಳೆದುಕೊಂಡರು ಸಂಗೀತಾ. ಇದೆಲ್ಲ ವೋಟ್‌ಗೆ ಕಾರಣವಾಗಿದೆ.

ಇದನ್ನೂ ಓದಿ: BBK SEASON 10: ನಾನೂ ತಲೆ ಬೋಳಿಸಿದ ಮೇಲೆಯೇ ಪಾಪ್ಯುಲರ್ ಆಗಿದ್ದು ಎಂದ ಕಿಚ್ಚ ಸುದೀಪ್‌!

ಮನೆಯಲ್ಲಿ ನಾಲ್ಕನೇ ಸ್ಥಾನ ಸಿಕ್ಕಿದ್ದು ವಿನಯ್​ಗೆ. ಆನೆ ಎಂದೆನಿಸಿಕೊಂಡಿದ್ದ ವಿನಯ್‌ ಏಕಾಏಕಿ ನಾಲ್ಕನೇ ಸ್ಥಾನಲ್ಲಿದ್ದಾರೆ. ಇದು ಸ್ವತಃ ವಿನಯ್​ಗೂ ಇಷ್ಟವಾಗಿಲ್ಲ. ತಾನು ಶೋ ಬಿಟ್ಟು ಹೊರಹೋಗುವ ಮಾತನ್ನೂ ವಿನಯ್ ಆಡಿದ್ದರು. ಆದರೆ ಸುದೀಪ್ ಅವರಿಗೆ ಧೈರ್ಯ ತುಂಬಿದರು. ಬ್ರೆಕ್‌ ವೇಳೆ ವಿನಯ್‌ ಪ್ರತಾಪ್‌ ಬಗ್ಗೆಯೂ ಉಳಿದ ಸದಸ್ಯರ ಮುಂದೆ ಮಾತನಾಡಿದರು. ʻʻಪ್ರತಾಪ್‌ ಹಾಗೂ ತನಿಷಾ ಏನು ಎಂದು ಆಡಿದ್ದಾರೆ ಗೊತ್ತಾಗ್ತಿಲ್ಲ. ನನ್ನ ಫ್ಯಾನ್ಸ್‌ಗೆ ನಾನು ತುಂಬಾ ಅಸಮಾಧಾನ ತಂದೆ. ಇಲ್ಲಿ ನಾನು ಇರುವುದೇ ಸರಿಯಲ್ಲ ಎಂದು ಅನ್ನಿಸುತ್ತಿದೆʼ ʼಎಂದು ಬೆಸರ ಹೊರಹಾಕಿದರು.

ಉಳಿದವರು ಸಿರಿ, ಸ್ನೇಹಿತ್, ನಮ್ರತಾ, ನೀತು ಹಾಗೂ ತುಕಾಲಿ ಅವರು ಇದ್ದಾರೆ. ಇವರುಗಳಲ್ಲಿ ಯಾರಿಗೆ ಹೆಚ್ಚು ವೋಟ್‌ ಬಂದಿದೆ, ಯಾವ ಸ್ಪರ್ಧಿ ಮನೆಯಿಂದ ಹೊರಗೆ ಹೋಗಲಿದ್ದಾರೆ ಎಂದು ಇಂದಿನ ಸಂಚಿಕೆಯಲ್ಲಿ ತಿಳಿಯಲಿದೆ.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version